ಅಯೋಧ್ಯೆ ತೀರ್ಪು : ಮಾರುಕಟ್ಟೆಗೆ ಬೂಸ್ಟ್
Team Udayavani, Nov 10, 2019, 6:30 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದಾಗಿದ್ದ ಅಯೋಧ್ಯೆ ವಿವಾದವು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಸರ್ವಾನುಮತದಿಂದ ಇತ್ಯರ್ಥಗೊಂಡಿದೆ. ಈ ಬೆಳವಣಿಗೆ ದೇಶದ ಒಟ್ಟಾರೆ ಪರಿಸ್ಥಿತಿಯ ಮೇಲೆ ಸಕರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಾಗುತ್ತಿದೆ. ಈ ತೀರ್ಪಿನ ಬಳಿಕ ಶತಮಾನಗಳ ಹಳೆಯ ಅನಿಶ್ಚಿತತೆ ತಿಳಿಯಾಗಿದ್ದು, ದೇಶದ ಆರ್ಥಿಕತೆ ಮೇಲೆ ಜಾಗತಿಕ ಉದ್ಯಮಿಗಳಿಗೆ ವಿಶ್ವಾಸ ಬೆಳೆಯುವಲ್ಲಿ ಈ ತೀರ್ಪು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ತೀರ್ಪಿನ ಬಳಿಕ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದತ್ತ ಹೆಚ್ಚು ಹೂಡಿಕೆಗಳು ಹರಿದು ಬರುವ ನಿರೀಕ್ಷೆ ಇದೆ. ಮತ್ತು ಇದರಿಂದ ಮಾರುಕಟ್ಟೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸಕರಾತ್ಮಕವಾಗಿ ಸಾಗಲಿದೆ.
ದೇಶದ ನಾನಾ ರಾಜ್ಯಗಳು ಸೇರಿ ದೇಶ ವಿದೇಶಗಳಿಂದ ಅಯೋಧ್ಯೆಗೆ ಪ್ರತೀ ದಿನ 50 ಸಾವಿರದಿಂದ 1 ಲಕ್ಷ ಪ್ರವಾಸಿಗರು ಭೇಟಿ ನೀಡುವ ಅವಕಾಶ ಇದೆ. ವೈಷ್ಣೋದೇವಿ ಮತ್ತು ತಿರುಪತಿಗಿಂತಲೂ ಬೃಹತ್ ಪ್ರಮಾಣದಲ್ಲಿ ಅಯೋಧ್ಯೆಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಭರ್ಜರಿ ಅವಕಾಶಗಳಿವೆ ಎಂದು ಆರ್ಥಿಕ ಮತ್ತು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.