ಚೀನ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಉಳಿಸಿಕೊಂಡ ಮೊಮೊಟ, ಯುಫಿ
ಟೀನ್ ಚೆನ್, ಒಕುಹರಾ ಪರಾಭವ
Team Udayavani, Nov 11, 2019, 1:35 AM IST
ಫುಜು (ಚೀನ): ವಿಶ್ವದ ನಂ.1 ಶಟ್ಲರ್ ಜಪಾನಿನ ಕೆಂಟೊ ಮೊಮೊಟ ಮತ್ತು ಆತಿಥೇಯ ನಾಡಿನ ನೆಚ್ಚಿನ ಆಟಗಾರ್ತಿ ಚೆನ್ ಯುಫಿ “ಚೀನ ಓಪನ್ ಬ್ಯಾಡ್ಮಿಂಟನ್’ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ಪ್ರಶಸ್ತಿ ಕಾಳಗದಲ್ಲಿ ಕೆಂಟೊ ಮೊಮೊಟ ಥೈವಾನ್‌ನ ವರ್ಲ್ಡ್ ನಂ.2 ಆಟಗಾರ ಚೌ ಟೀನ್ ಚೆನ್ ವಿರುದ್ಧ ಭಾರೀ ಹೋರಾಟ ನಡೆಸಿ 21-15, 17-21, 21-18 ಅಂತರದಿಂದ ಗೆದ್ದು ಬಂದರು. ಕಳೆದ ವರ್ಷದ ಫೈನಲ್‌ನಲ್ಲೂ ಇವರಿಬ್ಬರೇ ಸೆಣಸಿದ್ದರು.
ಇದು ಕೆಂಟೊ ಮೊಮೊಟ ಪಾಲಾದ ಈ ವರ್ಷದ 10ನೇ ಬ್ಯಾಡ್ಮಿಂಟನ್ ಪ್ರಶಸ್ತಿ ಎಂಬುದೊಂದು ಹೆಗ್ಗಳಿಕೆ. ಇದರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಕೂಡ ಸೇರಿದೆ.
ಒಕುಹರಾ ಪರಾಭವ
ವನಿತಾ ಸಿಂಗಲ್ಸ್ ಫೈನಲ್‌ನಲ್ಲಿ ಚೀನದ ಚೆನ್ ಯುಫಿ ಎದುರು ಜಪಾನಿನ ನಜೊಮಿ ಒಕುಹರಾ ಆಟ ಸಾಗಲಿಲ್ಲ. ಯುಫಿ 21-12, 21-18 ನೇರ ಗೇಮ್‌ಗಳಿಂದ ಗೆದ್ದು ಬಂದರು. ಇದು ಒಕುಹರಾ ಆಡಿದ ಈ ವರ್ಷದ 6ನೇ ಫೈನಲ್ ಆಗಿದ್ದು, ಆರರಲ್ಲೂ ಅವರು ಸೋಲನುಭವಿಸಿದ್ದಾರೆ!
ಈ ಕೂಟದಲ್ಲಿ ಭಾರತದ ಆಟಗಾರರು ನಿರಾಶಾದಾಯಕ ಪ್ರದರ್ಶನ ನೀಡಿ ಬೇಗನೇ ಹೊರಬಿದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.