ಭಕ್ತರ ಹಸಿವು ತಣಿಸುವ ಗುರುದ್ವಾರದ ಲಂಗರ್‌

ಸ್ವಯಂ ಸೇವಕರೇ ಅಡುಗೆ ತಯಾರಿಸಿ ಬಡಿಸುವುದುನಾಂದೇಡ್‌-ಪಂಜಾಬ್‌ನ 400 ಜನ ಸನ್ನದ್ಧ

Team Udayavani, Nov 11, 2019, 11:57 AM IST

11-November-4

ಶಶಿಕಾಂತ ಬಂಬುಳಗೆ
ಬೀದರ:
ಹಸಿದ, ಬಡವರಿಗೆ ಅನ್ನ, ಆಶ್ರಯ ನೀಡಬೇಕು ಎನ್ನುವುದು ಸಿಖ್‌ ಧರ್ಮದ ತಿರುಳು. ಅದಕ್ಕಾಗಿಯೇ ಸಿಖ್ಖರ ಶ್ರದ್ಧಾ ಕೇಂದ್ರ ಬೀದರನ ಗುರುದ್ವಾರದಲ್ಲಿ “ಲಂಗರ್‌’ (ಅನ್ನ ದಾಸೋಹ) ಯಾವಾಗಲೂ ಪ್ರಧಾನವಾಗಿದೆ. ಕೇವಲ ದಾನಿಗಳ ಧನ ಸಹಾಯ ಮತ್ತು ಸ್ವಯಂ ಸೇವಕರ ಶ್ರಮದಿಂದಲೇ ಈ ದಾಸೋಹ ನಡೆಯುತ್ತಿರುವುದು ವಿಶೇಷ.

ಪವಿತ್ರ ತಾಣ ಗುರುದ್ವಾರದಲ್ಲಿ ಗುರುನಾನಕರ ಸ್ವರ್ಣ ಮಂದಿರ ಭಕ್ತರನ್ನು ಆಕರ್ಷಿಸಿದರೆ, ಪಕ್ಕದ “ಲಂಗರ್‌’ನ ವ್ಯವಸ್ಥೆ ಮೂಕ ವಿಸ್ಮಯವಾಗಿಸುತ್ತದೆ. ಅಡುಗೆ ತಯಾರಿ, ಊಟ ಬಡಿಸುವುದು, ತಟ್ಟೆ ತೊಳೆಯುವುದು ಸೇರಿ ಇತ್ಯಾದಿ ಎಲ್ಲಾ ಕೆಲಸಗಳನ್ನು ಸ್ವಯಂ ಸೇವಕರೇ ಮಾಡುವುದು ಲಂಗರ್‌ನ ವಿಶೇಷ. ಅಷ್ಟೇ ಅಲ್ಲ ಊಟ ಮಾಡಿದ ತಟ್ಟೆಯನ್ನು ಸ್ವತ್ಛ ಮಾಡಲು ಹತ್ತಾರು ಕೈಗಳು ಚಾಚುತ್ತವೆ. ಇಲ್ಲಿನ ಸ್ವಯಂ ಸೇವಕರೆಲ್ಲರೂ ಒಂದೇ. ಬಡವ, ಶ್ರೀಮಂತನೆಂಬ ಭೇದವಿಲ್ಲದೇ ಎಲ್ಲರೂ ನಿಷ್ಕಲ್ಮಶ ಮನಸ್ಸು, ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೆ.

ಲಂಗರ್‌ನ ಇನ್ನೊಂದು ವಿಶಿಷ್ಟತೆ ಎಂದರೆ ಶಿಸ್ತು. ಶುಚಿ ಮತ್ತು ರುಚಿಯಾದ ಭೋಜನಕ್ಕೆ ಆದ್ಯತೆ. ವೈಯಕ್ತಿಕ ಜೀವನದಲ್ಲಿ ದೊಡ್ಡ ಹುದ್ದೆಯಲ್ಲಿರಲಿ, ಬಡವನಿರಲಿ ಎಲ್ಲರೂ ಹಾಸಿದ್ದ ಚಾಪೆ ಮೇಲೆ ಸಾಲಾಗಿ ಕುಳಿತು ಊಟ ಸೇವಿಸಬೇಕು. ಪ್ರತಿಯೊಬ್ಬರು ತಲೆಯನ್ನು ಕರವಸ್ತ್ರ ಅಥವಾ ಸೆರಗಿನಿಂದ ಮುಚ್ಚಬೇಕು ಎಂಬ ನಿಯಮಗಳಿವೆ. ರೋಟಿ, ಅನ್ನ, ಬೇಳೆ ಸಾರು, ಪಲ್ಯ ಮತ್ತು ಸಿಹಿ ಪದಾರ್ಥ ನಿತ್ಯದ ಊಟ. ಪ್ರತಿ ನಿತ್ಯ 24 ಗಂಟೆಯೂ ಲಂಗರ್‌ ನಡೆಯುತ್ತದೆ. ಯಾವುದೇ ಜಾತಿ, ಮತದ ಬೇಧ ಭಾವ ಇಲ್ಲಿಲ್ಲ. ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನ ಪ್ರಸಾದ ಸೇವಿಸುತ್ತಾರೆ.

ಅಡುಗೆ ತಯಾರಿಕೆ ಹಾಲ್‌ನಲ್ಲಿ ಪ್ರಸಾದ ತಯಾರಿಸಲು ಸ್ವಯಂ ಸೇವಕರ ಪಡೆ ಸಜ್ಜಾಗಿರುತ್ತದೆ. ತರಕಾರಿ, ಬೇಳೆ ಸ್ವಚ್ಛ ಮಾಡುವುದು, ಗಿರಣಿಯಲ್ಲಿ ಹಿಟ್ಟು ಬೀಸುವುದು, ಅಡುಗೆ ಸಿದ್ಧಪಡಿಸುವ ಸೇವೆ ಮಾಡುವ ಮೂಲಕ ಆನಂದ ಪಡೆಯುತ್ತಾರೆ. ನಾನಕರ ಗುರುವಾಣಿಯನ್ನು ಹಾಡುತ್ತ ಆಹಾರ ತಯಾರಿಸುತ್ತಾರೆ. ಇದಕ್ಕಾಗಿ ಆಧುನಿಕ ಯಂತ್ರಗಳನ್ನು ಬಳಕೆ ಮಾಡುತ್ತಾರೆ. ಬೀದರನ ಗುರುದ್ವಾರದಲ್ಲಿ ಗುರು ನಾನಕ್‌ ಮಹಾರಾಜರ 550ನೇ ಜನ್ಮ ಶತಾಬ್ಧಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.

ಮೂರು ದಿನಗಳ ಕಾಲ ಲಕ್ಷಾಂತರ ಸಿಖ್‌ ಬಾಂಧವರು ದೇಶ- ವಿದೇಶಗಳಿಂದ ಆಗಮಿಸಲಿದ್ದಾರೆ. ಹಾಗಾಗಿ ನಿತ್ಯದ ಲಂಗರ್‌ ಜತೆಗೆ ಗುರುದ್ವಾರ ಪರಿಸರದಲ್ಲಿ ನಾಲ್ಕು ಕಡೆ ಪ್ರತ್ಯೇಕ ಲಂಗರ್‌ಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ಸಂಜೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರೋಟಿ, ತಂದೂರಿ, ವಿವಿಧ ಬಗೆಯ ತರಕಾರಿ ಪಲ್ಯ, ಸಿಹಿ ಪದಾರ್ಥ ಸೇರಿ ಸುಮಾರು 36 ಬಗೆ ಭೋಜನ ಸಿದ್ಧಪಡಿಸಲಾಗುತ್ತಿದೆ. ಅಡುಗೆ ತಯಾರಿಸಲು ಮತ್ತು ಬಡಿಸಲು ಸುಮಾರು 400 ಜನರು ನಾಂದೇಡ್‌, ಪಂಜಾಬ್‌ನ ಕರ ಸೇವಕರು ಸನ್ನದ್ಧರಿದ್ದಾರೆ.

ಹಸಿದ ಹೊಟ್ಟೆಗೆ ಅನ್ನ ನೀಡುವುದೇ ಗುರುನಾನಕರ ಪ್ರಧಾನ ಸಂದೇಶ. ಇಲ್ಲಿನ ಗುರುದ್ವಾರ ಲಂಗರ್‌ನಲ್ಲಿ ದಿನದ 24 ಗಂಟೆಯೂ ಪ್ರಸಾದ ವ್ಯವಸ್ಥೆ ಲಭ್ಯ ಇರುತ್ತದೆ. ನಿತ್ಯ 2 ಸಾವಿರಕ್ಕೂ ಹೆಚ್ಚು ಜನ ಊಟ ಸೇವಿಸುತ್ತಾರೆ. ಸಿಬ್ಬಂದಿಗಳಿಗಿಂತ ಸ್ವಯಂ ಸೇವಕರೇ ಹೆಚ್ಚು ಕೆಲಸ ಮಾಡುತ್ತಾರೆ. ನಾನಕರ ಜನ್ಮ ಶತಾಬ್ಧಿ ನಿಮಿತ್ತ ನಾಲ್ಕು ಹೆಚ್ಚುವರಿ ಲಂಗರ್‌ ಸ್ಥಾಪಿಸಲಾಗಿದ್ದು, ನಿತ್ಯ 50 ಸಾವಿರ ಜನ ಭೇಟಿ ನೀಡಲಿದ್ದಾರೆ.
ಜ್ಞಾನಿ ದರ್ಬಾರಸಿಂಗ್‌,
ವ್ಯವಸ್ಥಾಪಕರು, ಗುರುದ್ವಾರ ಬೀದರ 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.