ಆನಂದ ಮಹಲ್‌ನಲ್ಲಿ ಕಿನ್ನರ ಲೋಕ
ಧ್ವನಿ-ಬೆಳಕು-ಸಂಗೀತ-ನೃತ್ಯದ ಸಾಂಸ್ಕೃತಿಕ ವೈಭವಮೊದಲ ದಿನವೇ ಉತ್ತಮ ಸ್ಪಂದನೆ
Team Udayavani, Nov 11, 2019, 12:09 PM IST
ವಿಜಯಪುರ: ಪಾಳು ಬಿದ್ದಿದ್ದ ಆದಿಲ್ ಶಾಹಿ ಅರಸರು ವಿದೇಶಿ ರಾಯಭಾರಿಗಳನ್ನು ಸ್ವಾಗತಿಸಲು ನಿರ್ಮಿಸಿದ್ದ ಆನಂದ ಮಹಲ್‌ನಲ್ಲಿ ಕೊನೆಗೂ ಸಾಂಸ್ಕೃತಿಕ ಲೋಕ ತೆರೆದುಕೊಂಡಿದೆ. ಮಿಣುಕಿನ ಹೊದಿಕೆಯೊಂದಿಗೆ ಬೆಳಕಿನ ಮೋಡಿ ಮಾಡುತ್ತಿದ್ದ ಆನಂದ ಮಹಲ್‌ನಲ್ಲಿ ಪಾರಂಪರಿಕ ಸಂಗೀತದಿಂದಲೇ ವಿಶ್ವದ ಗಮನ ಸೆಳೆದಿರುವ ವಿಜಯಪುರ ನಗರದಲ್ಲಿ ನಿರಂತರ ನವರಸಪುರ ಉತ್ಸವದ ವೈಭವ ಮೇಳೈಸಿತ್ತು.
ಜಿಲ್ಲೆಯಲ್ಲಿ ಜಿಲ್ಲಾಡಳಿತದ ಸುಪರ್ದಿಯಲ್ಲಿ ಜನ್ಮ ತಳೆದಿರುವ ವಿಜಯಪುರ ನಗರದ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಸಮಿತಿ ಸದ್ದು ಗದ್ದಲ ಇಲ್ಲದೇ ಅನಂದ ಮಹಲ್‌ನಲ್ಲಿ ಶನಿವಾರದಿಂದ ಆರಂಭಿಸಿದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೊದಲ ದಿನವೇ ನಗರದ ಜನತೆಯಿಂದ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿತ್ತು.
ಆಡಂಬರದ ಉದ್ಘಾಟನೆ ಇಲ್ಲದೇ ಕೇವಲ ಕಲಾವಿದರು ನೇರವಾಗಿ ಕಾರ್ಯಕ್ರಮ ನೀಡುವ ಮೂಲಕ ಸಂಗೀತ ಲೋಕಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಆಪರ ಜಿಲ್ಲಾಧಿಕಾರಿ ಪ್ರಸನ್ನ, ವೂಡಾ ಆಯುಕ್ತ ಡಾ| ಔದ್ರಾಮ್, ಸಹಾಯಕ ಆಯುಕ್ತ ಸೋಮಲಿಂಗ ಗೆಣ್ಣೂರ, ಪ್ರವಾಸೋದ್ಯಮ ಇಲಾಖೆ ನೂತನ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡದ ಪರಿಶ್ರಮದ ಫಲವಾಗಿ ಪ್ರತಿ ವಾರದ ಕೊನೆಯಲ್ಲಿ ಶನಿವಾರ-ರವಿವಾರ ಸಂಜೆ 7ರಿಂದ 9 ರವರೆಗೆ ಆನಂದ ಗಮನ ಸೆಳೆದ ಭಿಸೆ ಸಹೋದರಿಯರ ಭರತನಾಟ್ಯ ಸಂಗೀತ ಪ್ರಿಯರ ಮನ ಸೂರೆಗೊಳಿಸಿದ ಲತಾ ಜಹಗೀರದಾರ ಸಂಗೀತ ಈಶ್ವರ ಸ್ಯಾಕ್ಸೋಫೋನ್-ಕೃತಿಕಾ ಜಂಗಿನಮಠ ಕೊಳಲ ಜುಗಲ್ ಬಂದಿ ಡೋಲಕ್ ಝಲಕ್ ಮೂಡಿಸಿದ ಇಸ್ಮಾಯಿಲ್ ಖಾಜಿ ತಬಲಾ ಮೋಡಿ ಮಾಡಿದ ಕಾಶೀನಾಥ ಗಾಯಕವಾಡ ಮಹಲ್‌ನಲ್ಲಿ ಧ್ವನಿ-ಬೆಳಕಿನ ಹೊನಲಿನೊಂದಿಗೆ ಸಂಗೀತ-ನೃತ್ಯಗಳ ವೈಭವಕ್ಕೆ ಚಾಲನೆ ದೊರಕಿದೆ.
ಮೊದಲ ದಿನ ಪ್ರದರ್ಶನ ನೀಡಿದ ನಗರದ ಖ್ಯಾತ ವಿದೂಷಿ ಲತಾ ಜಹಗೀರದಾರ ಅವರ ಸಂಗೀತ ಕಚೇರಿ ಆನಂದ ಮಹಲ್ ಸ್ಮಾರಕದಲ್ಲಿ ಮಾರ್ಧನಿಸಿತ್ತು. ನಂತರ ವೇದಿಕೆ ಏರಿ ಭರತನಾಟ್ಯ ಪ್ರದರ್ಶನ ನೀಡಿದ ಭಿಸೆ ಸಹೋದರಿಯರಾದ ದೀಕ್ಷಾ ಹಾಗೂ ದಿವ್ಯಾ ಆವರು ನೆರೆದ ಕಲಾ ರಸಿಕರ ಮನಸೂರೆಗೊಂಡರು. ಸಂಗೀತಕ್ಕೆ ತಕ್ಕಂತೆ ಭರತ ನಾಟ್ಯಕ್ಕೆ ಹೆಜ್ಜೆ-ಗೆಜ್ಜೆ ನಾದದ ನಿನಾದ ಮೂಡಿಸಿ ಚಪ್ಪಾಳೆ ಗಿಟ್ಟಿಸಿದರು.
ಇದಾದ ಬಳಿಕ ಕೊಳಲು ಹಿಡಿದು ವೇದಿಕೆ ಬಂದ ಕೃತಿಕಾ ಜಂಗಿನಮಠ ನುಡಿಸಿದ ಹಿಂದಿ-ಕನ್ನಡ ಹಳೆ ಚಲನಚಿತ್ರಗಳ ಗೀತೆಗಳು ಸಂಗೀತ ಪ್ರೇಮಿಗಳ ಮನ ಮುದಗೊಳಿಸಿತ್ತು. ಆಂಧ ಕಲಾವಿದೆಯ ಮುಗ್ಧ ಉಸಿರಿನಿಂದ ಹೊರ ಹೊಮ್ಮುತ್ತಿದ್ದ ಕೊಳಲಿನ ನಿನಾದಕ್ಕೆ ನೆರೆದ ಸಂಗೀತ ಪ್ರೇಕ್ಷಕರು ಚಪ್ಪಾಳೆ ಹೊಡೆದದ್ದೇ ಹೊಡೆದದ್ದು. ಕೃತಿಕಾಳ ಕೊಳಲ ಗಾನಕ್ಕೆ ಸಾಥ್ ನೀಡಿದ್ದ ಈ ಯುವ ಪ್ರತಿಭೆಯ ಕೊಳಲಿನ ಗಾನಕ್ಕೆ ತಮ್ಮ ಸಾರವಾಡದ ಈಶ್ವರ ಭಜಂತ್ರಿ ಸ್ಯಾಕ್ಸೋಫೋನ್ ಮೂಲಕ ಗಮನ ಸೆಳೆದರು.
ಕೃತಿಕಾಳ ಕೊಳಲು ಹಾಗೂ ಈಶ್ವರ ಅವರ ಸ್ಯಾಕ್ಸೋಫೋನ್ ವ್ಯಕ್ತಿಗತ ವಾದನಗಳ ಪ್ರದರ್ಶನ ಬಳಿಕ ಈ ಇಬ್ಬರು ನುಡಿಸಿದ ದೇಶಿ ಕೊಳಲು-ವಿದೇಶ ಸ್ಯಾಕ್ಸೋಫೋನ್ ಜುಗಲ್ ಬಂದಿ ಮೋಡಿ ಮಾಡಿತು. ಕೃತಿಕಾ ಜಂಗಿನಮಠ ಕೊಳಲಿನಲ್ಲಿ ಸಂಗೀತದ ಮೋಡಿ ಮಾಡಿದರೆ, ಈಶ್ವರ ಭಜಂತ್ರಿ ಅವರ ಸ್ಯಾಕ್ಸೋಫೋನ್ ಎಂಬ ವಿದೇಶಿ ವಾದನದಲ್ಲಿ ತಾವು ಪಡೆದಿರುವ ವಿಶಿಷ್ಟ ಪ್ರತಿಭೆಯನ್ನು ಅನಾವರಣ ಮಾಡಿದರು.
ಇವರಿಬ್ಬರಿಗಿಂತ ಜುಗಲ್ ಬಂದಿ ನಂತರ ತಾವೇನು ಕಮ್ಮಿ ಇಲ್ಲ ಎಂಬಂತೆ ತಮ್ಮ ಬೆರಳಿಂದ ತಬಲಾ ನುಡಿಸಿ ವೈವಿಧ್ಯಮಯ ಪ್ರತಿಭೆ ಪ್ರದರ್ಶಿಸಿದ ಕಾಶೀನಾಥ ಗಾಯಕವಾಡ ಯುವ ಸಮೂಹದ ಸಿಳ್ಳೆಗಳ ಸುರಿಮಳೆ ಗಿಟ್ಟಿಸಿದರು.
ಈ ಯುವ ಕಲಾವಿದರೊಂದಿಗೆ ಡೋಲಕ್ ಝಲಕ್ ಮೂಡಿಸಿದ ಇಸ್ಮಾಯಿಲ್ ಗಮನ ಸೆಳೆದರು. ರಿದಮ್ ಪ್ಯಾಡ್ ರಮೇಶ ರತ್ನಾಕರ, ಪರಶುರಾಮ ಭಜಂತ್ರಿ ಕೀ ಬೋರ್ಡ್ ಮೂಲಕ ಉತ್ತಮ ಸಾಥ್ ನೀಡಿದ್ದರಿಂದ ಐತಿಹಾಸಿಕ ಆನಂದ ಮಹಲ್ ಸ್ಮಾರಕದ ಎದುರು ಮೊದಲ ಬಾರಿಗೆ ಕಿನ್ನರ ಲೋಕವೇ ಧರೆಗೆ ಇಳಿದಂತಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.