ಮಹಾದೇವಿ ತಾಯಿ ರಥೋತ್ಸವ
ಗೋಟಖಂಡ್ಕಿಯಲ್ಲಿ ಸುಮಂಗಲೆಯರೇ ರಥ ಎಳೆಯುವುದು ವಿಶೇಷ ಪುರಾಣ ಮಂಗಲ
Team Udayavani, Nov 11, 2019, 4:17 PM IST
ತಾಳಿಕೋಟೆ: ಗೋಟಖಂಡ್ಕಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ರವಿವಾರ ಸಾಯಂಕಾಲ ಮಹಾದೇವಿ ತಾಯಿ ರಥೋತ್ಸವ ಸುಮಂಗಲೆಯರಿಂದ ಎಳೆಯಲ್ಪಡುವುದರೊಂದಿಗೆ ಜಾತ್ರಾ ಉತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ನಿಮಿತ್ತ ಏರ್ಪಡಿಸಿದ್ದ 156ನೇ ಮಹಾದೇವಿಯ ಮಹಾ ಪುರಾಣ ಮಂಗಲಗೊಂಡಿತು. ವಿಶೇಷವೆಂದರೆ ತಾಳಿಕೋಟೆ ಸಮೀಪದ ಗೋಟಖಂಡ್ಕಿ
ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಮಾತೆ ಮಹಾದೇವಿ ತಾಯಿ ಮಂದಿರಕ್ಕೆ ಅಲ್ಲಿ ವಿವಾಹವಾಗದ ಹೆಣ್ಣು ಮಕ್ಕಳು ಭೇಟಿ ನೀಡಿ ತಮಗೆ ಪತಿ ಭಾಗ್ಯವನ್ನು ಅಪೇಕ್ಷಿಸಿದಲ್ಲಿ ಮದುವೆಯಾಗುತ್ತದೆ ಎಂಬುದು ಈ ಭಾಗದಲ್ಲಿರುವ ಹಿರಿಯರ ಮಾತು.
ಮುಖ್ಯವಾಗಿ ಈ ಗ್ರಾಮದಲ್ಲಿ ವಾಸಿಸುವ ಪುರುಷರು ಹಾಗೂ ಮಹಿಳೆಯರು ಮಾತೆ ಮಹಾದೇವಿ ತಾಯಿ ಮಂದಿರಕ್ಕೆ ದಿನನಿತ್ಯ ಭೇಟಿ ನೀಡಿ ಮಹಾಪೂಜೆ ಸಲ್ಲಿಸುತ್ತ ತಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತ ಸಾಗುತ್ತಲಿದ್ದಾರೆ. ಸಚ್ಚಿದಾನಂದ ಮಠದಲ್ಲಿ ಚಿದಂಬರರಾವ್ ಕುಲಕರ್ಣಿ ಪರವಾಗಿ ಅವರ ಪುತ್ರ ಸುರೇಶರಾವ್ ಕುಲಕರ್ಣಿ ಅವರು ಶ್ರೀದೇವಿಯ ಮಹಾಪುರಾಣ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ.
ವಿಶೇಷವೆಂದರೆ ಮಹಾದೇವಿ ತಾಯಿ ಪುರಾಣ ಪ್ರತಿ ವರ್ಷ ಮಹಾನವಮಿಯ ಅಮಾವಾಸ್ಯೆಯ ಮರುದಿನ ಪ್ರಾರಂಭಗೊಂಡು ದೀಪಾವಳಿ ನಂತರದ ದ್ವಾದಶಿ, ತ್ರಯೋದಶಿಯವರೆಗೆ ಸಾಗುತ್ತ ಬಂದಿದೆ.
ಗೋಟಖಂಡ್ಕಿ ಗ್ರಾಮದಲ್ಲಿ ಜನ್ಮ ತಾಳಿದ ಮಹಿಳೆಯರು ಪತಿಯ ಭಾಗ್ಯವನ್ನು ಅಪೇಕ್ಷಿಸಿ ಮಹಾದೇವಿ ತಾಯಿಯ ವರವನ್ನು ಪಡೆದು ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡು ತಮ್ಮ ಸುಃಖ ಸಂಸಾರವನ್ನು ಪತಿಯೊಂದಿಗೆ ತಮ್ಮ ತಮ್ಮ ಗ್ರಾಮ ಪಟ್ಟಣದ ಮನೆಗಳಲ್ಲಿ ಜೀವನ ಸಾಗಿಸುತ್ತ ಬಂದಿದ್ದರೂ ಸಹ, ಪ್ರತಿ ವರ್ಷ ಈ ವರ ನೀಡಿದ ಮಹಾದೇವಿ ತಾಯಿಯನ್ನು ಮರೆಯದೇ ಆಕೆಯ ರಥೋತ್ಸವ ದಿನದಂದು ಆಗಮಿಸಿ ಎಲ್ಲ ಮುತ್ತದೆಯರು ಒಗ್ಗೂಡಿ ಪುರುಷರ ಆಸರೆ ಇಲ್ಲದೇ ರಥವನ್ನು ಎಳೆಯುವುದರೊಂದಿಗೆ ತಮ್ಮ ಭಕ್ತಿಯನ್ನು ಪ್ರತಿ ವರ್ಷ ಸಮರ್ಪಿಸಿ ಸಾಗುತ್ತಿದ್ದಂತೆ ಈ ವರ್ಷವೂ ಸಹ ತಮ್ಮ ಭಕ್ತಿಯನ್ನು ಸಮರ್ಪಿಸಿದ್ರು.
ಮಹಾದೇವಿ ತಾಯಿಯ ನೂತನ ಮಹಾ ಮೂರ್ತಿಯನ್ನು ಗ್ರಾಮದ ಮಹಾದಾನಿ ಮಡಿವಾಳಮ್ಮ ಹನುಮಂತ್ರಾಯ ಅಗಸರ ಎಂಬರು 70 ಸಾವಿರ ರೂ. ತಮ್ಮ ಖರ್ಚು ಹಾಗೂ ಸ್ವ ಇಚ್ಚೆಯಿಂದ ನಿರ್ಮಿಸಿ ಭಕ್ತಾದಿಗಳಿಗೆ ಭಕ್ತಿ ಸಮರ್ಪಿಸಲು ಅನುವು ಮಾಡಿಕೊಟ್ಟಿದ್ದಾರೆ. ಅದರಂತೆ ನೂತನ ರಥವನ್ನು ಕಳೆದ 13 ವರ್ಷಗಳ ಹಿಂದೆಯೇ ಈ ಗ್ರಾಮದಿಂದ ಮುತ್ತೈದೆ ತನದ ಭಾಗ್ಯವನ್ನು ಪಡೆದುಕೊಂಡ ಹೋದ ಸುಮಂಗಲಿಯರೆಲ್ಲರೂ ತಮ್ಮ ತಮ್ಮ ಪತಿಯ ಮನೆಯಿಂದಲೇ ದೇಣಿಗೆಯ ಹಣವನ್ನು ಸಂಗ್ರಹಿಸಿ ಎಲ್ಲರೂ ಒಗ್ಗೂಡಿ 2.75 ಲಕ್ಷ ರೂ. ವೆಚ್ಚ ಭರಿಸಿ ಮಹಾದೇವಿ ತಾಯಿಯ ನೂತನ ರಥವನ್ನು ನಿರ್ಮಿಸಿದ್ದಾರೆ.
ಈ ರಥವನ್ನು ಪ್ರತಿ ವರ್ಷ ಈ ಸುಮಂಗಲೆಯರೆ ಎಳೆದು ಭಕ್ತಿ ಸಮರ್ಪಿಸಿ ಸುಖಃ ಶಾಂತಿ ನೆಮ್ಮದಿಯನ್ನು ಅಪೇಕ್ಷಿಸಿ ವರ ಪಡೆದು ಸಾಗುತ್ತಿದಂತೆ ಈ ಸಲವೂ ಸಹ ಭಕ್ತಿ ಭಾವದಿಂದ ರಥವನ್ನು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಈ ರಥವು ಮಹಾದೇವಿ ತಾಯಿಯ ಮಂದಿರದಿಂದ ಸುಮಾರು 1 ಕಿ.ಮೀ. ಅಂತರದಲ್ಲಿರುವ ಬಸವೇಶ್ವರ ಪಾದಗಟ್ಟಿವರೆಗೆ ತಲುಪಿ ಮರಳಿ ಅದೇ ಮಾರ್ಗದಿಂದ ದೇವಿ ಮಂದಿರಕ್ಕೆ ತಲುಪಿ ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಜಾತ್ರಾ ಮಹೋತ್ಸವದಲ್ಲಿ ಮುಂಬೈ, ಪುಣೆ, ಸೊಲ್ಲಾಪುರ, ಕೊಲ್ಲಾಪುರ, ಹೈದ್ರಾಬಾದ್, ಕಲಬುರಗಿ, ಹುಬ್ಬಳ್ಳಿ-ದಾರವಾಡ, ವಿಜಯಪುರದಿಂದ ಭಕ್ತರು ಆಗಮಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Udupi: ರೈಲು ಬಡಿದು ವ್ಯಕ್ತಿ ಸಾವು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.