ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು: ಸುಧಾಕರ್ ಚವಾಣ್
Team Udayavani, Nov 11, 2019, 5:50 PM IST
ಪುಣೆ, ನ. 10: ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ವಿಜಯಪುರದ ಉದಯೋನ್ಮುಖ ಯುವ ಚಿತ್ರ ಕಲಾವಿದೆ ಕುಮಾರಿ ಸ್ವಪ್ನಾ ಕಲಾದಗಿಯವರ ಚಿತ್ರ ಕಲಾ ಪ್ರದರ್ಶನ ಪುಣೆಯ ನವಿ ಪೇಟೆಯಲ್ಲಿರುವ ಆರ್ಟ್ ಇಂಪ್ರಷನ್ ಸ್ಟುಡಿಯೋದಲ್ಲಿ ನ. 8 ರಂದು ನೆರವೇರಿತು.
ಚಿತ್ರಕಲಾ ಪ್ರದರ್ಶನವನ್ನು ಅಭಿನವ ಕಲಾ ವಿದ್ಯಾಲಯದ ಪ್ರೊ| ಸುಧಾಕರ್ ಚವಾಣ್, ಡಾ| ಡಿ. ಆರ್. ಬನ್ಕರ್, ರಾವ್ ಸಾಹೇಬ್ ಗುರವ್. ಪ್ರತಿಷ್ಠಾನದ ನಿರ್ದೇಶಕ ರಾವ್ ಸಾಹೇಬ್ ಗುರವ್, ಪುಣೆ ಕನ್ನಡ ಸಂಘದ ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ, ಅರ್ಥಶ್ರೀ ಪ್ರತಿಷ್ಠಾನದ ಮುರುಗೇಶ್ ಗಿರಿಸಾಗರ್ ಮತ್ತು ಮಹಾರಾಷ್ಟ್ರದ ಪ್ರಸಿದ್ಧ ಚಿತ್ರ ಕಲಾವಿದ ಡಾ| ಮುರಳಿ ಲಾಹೋಟಿ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುಧಾಕರ್ ಚವಾಣ್ ಅವರು ಮಾತನಾಡಿ, ಇಂತಹ ಚಿತ್ರಕಲೆಯು ಯುವ ಪೀಳಿಗೆಯಲ್ಲಿ ಸಾಮಾಜಿಕ
ಬದಲಾವಣೆಯ ಸಂದೇಶವನ್ನು ಮೂಡಿಸುತ್ತಿರುವುದಲ್ಲದೆ ಜಲ- ಪ್ರಕೃತಿಯ ಮಹತ್ವದ ಹಿನ್ನೆಲೆಯಲ್ಲಿ ಬಿಂಬಿಸಿದ ಶೈಲಿ ಅದ್ಭುತವಾಗಿದ್ದು ಪ್ರಶಂಸ ನೀಯವಾಗಿದೆ. ಯುವ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡಿದಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಾಮದಾಸ್ ಆಚಾರ್ಯ ಅವರು ಮಾತನಾಡಿ, ಕರ್ನಾಟಕದ ಅತ್ಯಂತ ಬರಗಾಲ ಮತ್ತು ಜಲಕ್ಷಾಮ ಪೀಡಿತ ವಿಜಯಪುರ ಜಿಲ್ಲೆಯ ಈ ಯುವ ಚಿತ್ರಗಾರ್ತಿ ಇಂದಿನ ಪೀಳಿಗೆಗೆ ಒಂದು ಮಾದರಿಯಾಗಿದ್ದು, ಇಂತಹ ಸುಪ್ತ ಚೇತನಗಳಿಗೆ ಸರಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳು ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಮುರುಗೇಶ್ ಗಿರಿಸಾಗರ್ ಅವರು ಮಾತನಾಡಿ, ಬೆಳೆಯುತ್ತಿರುವ ಮಹಾನಗರ ಪುಣೆಯಲ್ಲಿ ಕರ್ನಾಟಕದ ಕಲಾವಿದೆಯ ಪ್ರದರ್ಶನ ಎಲ್ಲರಿಗೂ ಹೆಮ್ಮೆಯ ವಿಷಯವೆಂದು ತಿಳಿಸಿದರು. ಡಾ| ಲಹೋಟಿಯವರು ಮಾತನಾಡಿ, ತಮ್ಮ ಈ ಆರ್ಟ್ ಗ್ಯಾಲರಿ ಇಂತಹ ಪ್ರದರ್ಶನಗಳಿಗೆ ಸದಾ ಮುಕ್ತವೆಂದು ತಿಳಿಸಿದರು.
ಕು| ಸಪ್ನಾ ಅವರು ಅಭಿಪ್ರಾಯ ವ್ಯಕ್ತಪಡಿಸಿ, ತಾನು ತನ್ನ ವಿದ್ಯಾಭ್ಯಾಸದ ಜೊತೆಗೆ ಕಲಾಭ್ಯಾಸ ಮಾಡಲು ತನ್ನ ಮಾತಾಪಿತರು, ಸ್ನೇಹಿತರು, ಶಿಕ್ಷಕರು ಮತ್ತು ಕರ್ನಾಟಕ ಸರಕಾರದ ಉತ್ತೇಜನವೇ ಕಾರಣವಾಗಿದೆ ಎಂದು ನುಡಿದು ಪುಣೆಯ ಜನತೆಗೆ ಇಂತಹ ಒಂದು ಪ್ರದರ್ಶನಕ್ಕೆ ಸಹಕಾರ ನೀಡಿದ ಬಗ್ಗೆ ಧನ್ಯವಾದ ಸಮರ್ಪಿಸಿದರು.
ಉದಯೋನ್ಮುಖ ಚಿತ್ರ ಕಲಾವಿದರಿಗೆ ಇದೊಂದು ಸ್ಫೂರ್ತಿದಾಯಕ ಪ್ರದರ್ಶನ ವಾಗಿದ್ದು ನ. 12 ರ ವರೆಗೆ ಪ್ರತಿದಿನ ಪೂರ್ವಾಹ್ನ 11.30 ರಿಂದ ಸಂಜೆ 7.30 ರವರೆಗೆ ನಡೆಯಲಿದೆ. ಪುಣೆಯ ಕನ್ನಡ ಮತ್ತು ಕನ್ನಡೇತರ ಭಾಷಿಕ ಕಲಾಭಿಮಾನಿಗಳು ಸಂದರ್ಶಿಸಿ ಉತ್ತೇಜನ ನೀಡುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.