ಸೈನಿಕರ ಪರಿಶ್ರಮವೇ ನಮ್ಮ ನೆಮ್ಮದಿಗೆ ಕಾರಣ: ಸಂಗಮೇಶ್
Team Udayavani, Nov 11, 2019, 12:35 PM IST
ಭದ್ರಾವತಿ: ಸೈನಿಕರ ಪರಿಶ್ರಮದಿಂದ ದೇಶವಾಸಿಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ ಹೇಳಿದರು.
ಭಾನುವಾರ ನ್ಯೂಟೌನ್ ಬಂಟರ ಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಾಜಿ ಸೈನಿಕರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರವೂ ಸಹ ಈ ರೀತಿ ಸಂಘ ಸ್ಥಾಪನೆ ಮಾಡಿಕೊಂಡು ಸಮಾಜದ ಒಳಿತಿಗಾಗಿ ಮಾಜಿ ಸೈನಿಕರು ಮುಂದಾಗಿರುವುದು ಸಂತಸದ ಸಂಗತಿ.
ಊರಿನ ಅಭಿವೃದ್ಧಿಗೆ ಅಗತ್ಯವಾದ ಸಲಹೆ- ಸೂಚನೆ ಜೊತೆಗೆ ವ್ಯವಸ್ಥೆಯಲ್ಲಿ ಕಂಡುಬರುವ ಅಂಕು- ಡೊಂಕು ಲೋಪ- ದೋಷಗಳನ್ನೂ ಸಹ ಸಂಘದ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿ. ಎಲ್ಲರ ಒಳಿತಿಗಾಗಿ ಕೆಲಸ ಮಾಡಲಿ ಎಂದರು.
ನಗರಸಭೆ ವತಿಯಿಂದ ನಿರ್ಮಿಸಲುದ್ದೇಶಿಸಿರುವ ವಸತಿ ಸಮುಚ್ಛಯದಲ್ಲಿ ನಿವೃತ್ತ ಸೈನಿಕರಿಗೆ 100 ಮನೆಗಳನ್ನು ಕೊಡಲಾಗುವುದು. ಅಗತ್ಯವಿರುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಮಾತನಾಡಿ, ಸೈನ್ಯದಲ್ಲಿ ಸಾಮಾನ್ಯ ಸಿಪಾಯಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದನಂತರ ಸಾಮಾನ್ಯ ನಾಗರಿಕನಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಅವರು ಅನುಭವಿಸಿಸುವ ಆರ್ಥಿಕ ಮುಗ್ಗಟ್ಟಿನ ಬವಣೆ ಅನುಭವಿಸಿದವರಿಗಷ್ಟೇ ಅದನ್ನು ಅರಿಯಲು ಸಾಧ್ಯ ಎಂದು ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ತಮಗಾದ ಅನುಭವವನ್ನು ಹಂಚಿಕೊಂಡು ಮಾತನಾಡಿದರು. ನಾನು ಸಹ ಸೈನ್ಯದಲ್ಲಿ 17 ವರ್ಷ ಸೇವೆ ಸಲ್ಲಿಸಿ ಬಂದು ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಈ ಹಂತಕ್ಕೆ ಬಂದಿದ್ದೇನೆ ಎಂದರು.
ಸಂಘದ ಗೌರವಾಧ್ಯಕ್ಷ, ನಿವೃತ್ತ ಎಡಿಸಿ ಡಾ| ಮೇಜರ್ ವಿಕ್ರಮ್ ಎಸ್. ಕೆದ್ಲಾಯ್ ಮಾತನಾಡಿ, ಸೇನೆಯಲ್ಲಿ ಸೈನಿಕರಿಗೆ ಭಾರತವೇ ಮನೆ. ಇಲ್ಲಿರುವವರೆಲ್ಲರೂ ಬಂಧುಗಳೇ. ಎಲ್ಲ ರಂಗಗಳಲ್ಲಿಯೂ ಜಾತಿ, ಮತ, ಪಂಥದ ಬೇಧ- ಭಾವ ಕಾಣಬಹುದು. ಆದರೆ ಸೇನೆಯಲ್ಲಿ ಮಾತ್ರ ಜಾತಿ, ಮತಗಳ ಬೇಧವಿಲ್ಲದೆ ಎಲ್ಲರೂ ಒಂದು ಎಂಬ ಭಾವನೆಯಿಂದ ಬಾಳುವ ಮನಸ್ಥಿತಿ ಬೆಳೆಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹುತಾತ್ಮ ಸೈನಿಕರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಿ ನಂತರ ಅವರ ಪರಿವಾರದವರಿಗೆ ಸನ್ಮಾನ ಮಾಡಲಾಯಿತು. ಉಚಿತ ರಕ್ತ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು. ಸಂಘದ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ದಿನೇಶ್ ಕುಮಾರ್, ನಗರಸಭಾ ಆಯುಕ್ತ ಮನೋಹರ್, ತಹಶೀಲ್ದಾರ್ ಸೋಮಶೇಖರ್, ನಿವೃತ್ತ ಎಎಂಸಿ ಡಾ| ಮೇಜರ್ ಯು.ಜೆ. ವೈದ್ಯ,ನಿವೃತ್ತ ಒಐಸಿ ಕಮಾಂಡರ್ ಬಿ. ಮಂಜುನಾಥ, ನಿವೃತ್ತ ಎಎಂಸಿ ಡಾ| ಲಕ್ಷ್ಮೀ ಪಿ.ಕೆ., ಹೇಮಾವತಿ ವಿಶ್ವನಾಥ್, ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಇದ್ದರು. ಮಹಿಳಾ ಸಮಾಜದವರು ಪ್ರಾರ್ಥಿಸಿ, ವೆಂಕಟೇಶ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.