`ಕಪಟ ನಾಟಕ ಪಾತ್ರಧಾರಿ’ಯ ಗೆಲುವಿನ ಸವಾರಿ!
Team Udayavani, Nov 11, 2019, 7:26 PM IST
ಮತ್ತೆ ಕನ್ನಡದ ಪ್ರೇಕ್ಷಕರು ಹೊಸಾ ಅಲೆಯ ಸಿನಿಮಾವೊಂದನ್ನು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದಾರೆ. ಈ ಪ್ರೀತಿ ಪಡೆದುಕೊಂಡಿರೋ ಕಪಟ ನಾಟಕ ಪಾತ್ರಧಾರಿ ಚಿತ್ರವೀಗ ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಕ್ರಿಶ್ ನಿರ್ದೇಶನದ ಈ ಸಿನಿಮಾ ಚೆಂದದ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕ ಮೂಡಿಕೊಂಡಿದ್ದ ಅಗಾಧ ನಿರೀಕ್ಷೆಗಳನ್ನು ಮೀರಿಸುವಂಥಾ ಗಟ್ಟಿ ಕಂಟೆಂಟಿನ ಮೂಲಕ ಕಪಟ ನಾಟಕ ಪಾತ್ರಧಾರಿ ಗೆಲುವಿನ ಸವಾರಿ ಆರಂಭಿಸಿದೆ.
ಈ ಮೂಲಕ ಮತ್ತೊಂದು ಹೊಸಾ ಅಲೆಯ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿದಂತಾಗಿದೆ. ಇದು ಕ್ರಿಶ್ ನಿರ್ದೇಶನದ ಮೊದಲ ಚಿತ್ರ. ಆದರೆ ಈ ಮೊದಲ ಹೆಜ್ಜೆಯಲ್ಲಿಯೇ ಅವರು ಪ್ರೇಕ್ಷಕರ ಆಕಾಂಕ್ಷೆಯ ನಾಡಿ ಮಿಡಿತವನ್ನು ಸರಿಯಾಗಿ ಅರ್ಥೈಸಿಕೊಂಡೇ ಮುಂದಡಿ ಇಟ್ಟಿದ್ದಾರೆ. ಎಲ್ಲ ವಯೋಮಾನದ, ಎಲ್ಲ ವರ್ಗದ ಪ್ರೇಕ್ಷಕರನ್ನೂ ತಣಿಸುವಂಥಾ ಕಂಟೆಂಟಿನೊಂದಿಗೆ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಕಥೆ, ನಟನೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಮೂಡಿ ಬಂದಿರೋ ಈ ಸಿನಿಮಾವೀಗ ಪ್ರೇಕ್ಷಕರೆಲ್ಲರ ಪ್ರೀತಿಗೆ ಪಾತ್ರವಾಗಿದೆ. ಇದುವೇ ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕೈ ಹಿಡಿದು ಕರೆತರುತ್ತಿದೆ.
ಇಲ್ಲಿ ಪ್ರಧಾನವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿರೋದು ಹಲವಾರು ಕೊಂಬೆ, ಕೋವೆ, ಟ್ವಿಸ್ಟಗಳನ್ನು ಹೊಂದಿರೋ ಮಜವಾದ ಕಥೆ. ಮಧ್ಯಮವರ್ಗದ ಹುಡುಗರ ಆತ್ಮಕಥೆಯಂತಿರೋ ಈ ಚಿತ್ರ ಎಲ್ಲ ವಯೋಮಾನದವರನ್ನೂ ಕೂಡಾ ಒಂದೇ ಸಲಕ್ಕೆ ಆವರಿಸಿಕೊಳ್ಳುತ್ತದೆ. ಸಣ್ಣ ಸುಳಿವೂ ಬಿಟ್ಟು ಕೊಡದಂತೆ ರೋಚಕ ಯಾತ್ರೆ ಮಾಡಿಸೋ ಈ ಕಥೆ ಒಂದೇ ಸಲಕ್ಕೆ ಎಲ್ಲರಿಗೂ ಆಪ್ತವಾಗುವಂತಿದೆ. ಅದುವೇ ಈ ಸಿನಿಮಾದ ನಿಜವಾದ ಹೆಚ್ಚುಗಾರಿಕೆ. ಬಾಲು ನಾಗೇಂದ್ರರ ಅದ್ಭುತ ನಟನೆಗೆ ಸಂಗೀತಾ ಭಟ್ ಸೇರಿದಂತೆ ಇಡೀ ತಾರಾಗಣವೇ ಸಾಥ್ ಕೊಟ್ಟಿದೆ. ಇದೆಲ್ಲದರಾಚೆಗೆ ಭರ್ಜರಿ ಮನೋರಂಜನೆಯನ್ನಿಟ್ಟುಕ್ಕೊಂಡಿರೋ ಕಪಟ ನಾಟಕ ಪಾತ್ರಧಾರಿ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.