ಕ್ರೇಜಿ ಕ್ರಷ್;ಇದು ಪ್ರೀತಿಯಲ್ಲ ಮೋಹ!
Team Udayavani, Nov 12, 2019, 5:50 AM IST
ಕ್ರಷ್ ಮತ್ತು ಲವ್, ಇವೆರಡೂ ಒಂದೇನಾ? ಇದು, ಇವತ್ತಿನ ಯುವ ಜನತೆಗಿರುವ ಗೊಂದಲ ಇದು. ಒಂದು ಸಲ ಕ್ರಷ್ ಶುರುವಾದರೆ ಮುಗೀತು. ಅದರ ಅಂಗೈಯಲ್ಲಿ ನಾವು. ಇಡೀ ಜಗತ್ತೇ ಕಲರಫುಲ್ ಆಗಿ ಕಾಣುವ ಈ ವಯಸ್ಸಲ್ಲಿ ಪ್ರೀತಿಯ ಮೊದಲ ರಂಗನ್ನು ತುಂಬಿ ಕಚಗುಳಿ ಇಡುವ ಈ ಕ್ರಷ್, ನಿಮ್ಮ ಬಾಳಲ್ಲಿ ಕಹಿಯಾಗದೆ ಒಂದು ಸವಿಯಾದ ಮುದ್ದು ನೆನಪಾಗಿ ಉಳಿಯಲಿ.
ಹೊಸದಾಗಿ ಬಂದ ಆ ಕೆಮಿಸ್ಟ್ರಿ ಲೆಕ್ಚರರ್ ಪಾಠ ಮಾಡೋಕ್ಕೂ ಮುಂಚೇನೇ ಅದೇ ಕ್ಲಾಸ್ ನಲ್ಲಿನ ಮೂಲೆ ಬೆಂಚಿನ 16 ವರ್ಷದ ಹುಡುಗಿಯ ಕೆಮಿಸ್ಟ್ರಿ ಮ್ಯಾಚ್ ಆಗಿ ಬ್ಲಿಶ್ ಆಗುತ್ತಾಳೆ. ಲೆಕ್ಚರರ್‌ಗೊ ಆ ಹುಡುಗಿ ಅಂದ್ರೆ ಇಷ್ಟ, ಆದರೂ ಅವ್ಳು ಬಂದ್ರೆ ಸಾಕು; ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಏನೋ ಒಂಥರಾ ನಡುಕ…ಅಂಗೈಯೆಲ್ಲಾ
ಬೆವರಿ ಬಾಯಿ ಪಸೆ ಆರುತ್ತೆ. ಯಾಕೆ ಹೀಗೆ? ಹೊಟ್ಟೆಯಲ್ಲಿ ಚಿಟ್ಟೆಯೊಂದು ಹಾರಾಡಿದಂತಾಗೋದು, ಜೊತೆಗೆ ಆಗಾಗ್ಗೆ ಹೃದಯ ತಾಳ ತಪ್ಪೋದು. ಏನಿದು? ಇದೇನು ಇಂಥ ನವ ಭಾವ?
ಪ್ರೀತೀನಾ, ಕ್ರಷಾ!
ಈ ಪದದಲ್ಲೇ ಏನೋ ಒಂದು ಮುಗ್ಧತೆ ಇದೆ ಅನಿಸುತ್ತೆ. ಪ್ರತಿಯೊಬ್ಬರ ಜೀವನದಲ್ಲಿಯೂ ಒಮ್ಮೆಯಾದರೂ ಮೂಡಿ, ಮಧುರಾನುಭೂತಿಯನ್ನು ಮೂಡಿಸುವ ಈ ಕ್ರಷ್, ಹೆಚ್ಚಾಗಿ ಕಾಡೋದು ಮಾತ್ರ ಶಾಲೆಗೇ ಹೋಗುವ, ಪ್ರಬುದ್ಧತೆಯೇ ಮೂಡದ, ಮುಗ್ಧ ಮನಸ್ಸಿನ ಹದಿಹರೆಯದವರನ್ನೇ.
ಲವ್ ಈಸ್ ಬ್ಲೆçಂಡ್ ಅನ್ನೋ ಹಾಗೆ ಕ್ರಷ್ ಈಸ್ ಕ್ರೇಜಿ’ ಅನ್ನಬಹುದೇನೋ. ಏಕೆಂದರೆ, ಇದು ಹೇಗಾಗುತ್ತೆ? ಯಾಕಾಗುತ್ತೆ? ಅಂತ ಗೊತ್ತಾಗುವಹೊತ್ತಿಗೆ, ಆ ಕ್ರಷ್ ಮಗ್ಗುಲು ಬದಲಿಸಿರುತ್ತದೆ. ಯಾರ¨ªೋ ಒಂದು ನಗು, ನಡೆಯುವ ಸ್ಟೈಲ್, ಆ್ಯಕ್ಟಿಂಗ್, ಆಟಿಟ್ಯೂಡ್- ಹೀಗೆ ನಮಗೆ ವಾವ್ ಎನ್ನಿಸುವ ಒಂದೇ ಒಂದು ಅಂಶ ಅವರಲ್ಲಿ ಕಂಡರೆ ಸಾಕು, ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ನಮಗಿಂತ ಎರಡರಷ್ಟು ವಯಸ್ಸಿನ ಮೇಷ್ಟ್ರು, ಸಿನಿಮಾ ನಟ, ಕ್ರಿಕೆಟಿಗ, ಇಲ್ಲ ಪಕ್ಕದಲ್ಲಿ ಕೂರೋ ಸರ್ವೇ ಸಾಧಾರಣವಾದ ಗೆಳೆಯ! ಹೀಗೆ ಯಾರ ಮೇಲಾದರೂ ಕ್ರಷ್ ಆಗಬಹುದು.
ಯಾರಿಗೆ ಶುರುವಾಗುತ್ತೆ?
ಹದಿ ಹರೆಯದಿಂದ ಯವ್ವನಕ್ಕೆ ಕಾಲಿಡುತ್ತಿರುವ ಮಕ್ಕಳು, ಕಿಶೋರಾವಸ್ಥೆಯನ್ನು ತಲುಪಿದಾಗ, ದೇಹದಲ್ಲಿ ಶಾರೀರಿಕ ಬದಲಾವಣೆಯಾಗುತ್ತದೆ. ಜೊತೆಗೇ, ಹಾರ್ಮೋನುಗಳ ಸ್ರವಿಸುವಿಕೆಯೂ. ಆಗ ಉಂಟಾಗುವ ಒಂದು ಸಹಜ, ಮಧುರ ಭಾವನೆಯೇ ಕ್ರಷ್.
ಈ ಭಾವನೆಯು ಮೂಡುತ್ತಿದ್ದ ಹಾಗೆ, ಡೋಪಮೈನ್ ಎನ್ನುವ ಮತ್ತೂಂದು ಹಾರ್ಮೋನ್ ಸ್ರವಿಸುತ್ತದೆ. ಈ ಹಾರ್ಮೋನ್ ಗೆ ಹ್ಯಾಪಿ ಹಾರ್ಮೋನ್ ಅಂತಾನೂ ಕರೀತಾರೆ. ಇದು ಮನಸ್ಸುನ್ನು ಹಗುರವಾಗಿಸಿ, ಸಂತಸವನ್ನುಂಟು ಮಾಡುವುದರಿಂದ, ಇಂತಹ ಅನುಭವಗಳಿಗೆ ಇನ್ನೂ ಹೆಚ್ಚುಹೆಚ್ಚಾಗಿ ಸ್ಪಂದಿಸುತ್ತಾರೆ. ಋತುಮತಿಯಾದೊಡನೆ ಹೆಣ್ಣಾದೆ, ತುಟಿಯ ಮೇಲೆ ಮೀಸೆ ಚಿಗುರಿದೊಡನೆ ಗಂಡಾದೆ ಎಂದು ಭ್ರಮಿಸುವ ಮಕ್ಕಳಲ್ಲಿ ಈ ಪ್ರೀತಿ-ಪ್ರೇಮಕ್ಕೆ ಬೀಳುವ ಹಪಾಹಪಿ ಹೆಚ್ಚು. ಜೊತೆಗೆ, ಸ್ಮಾರ್ಟ್ ಫೋನ್ ಹಾವಳಿಯಿಂದ ಸುಲಭವಾಗಿ ಸಿಗುವ ವಯಸ್ಕರ ಸೈಟ್‌ಗಳು ಇನ್ನಿಲ್ಲದಂತೆ ಮಕ್ಕಳನ್ನು ಪ್ರಚೋದಿಸಿ, ವಯಸ್ಸಿಗೂ ಮೊದಲೇ ಲವ್ವು-ಗಿವ್ವು ಅಂತೆಲ್ಲ ತಲೆಕೆಡಿಸಿಕೊಂಡು, ಲವ್ ಪ್ಲೆಷರ್’ ಅನ್ನೋ ಪ್ರಷರ್’ ಗೆ ಬೀಳುವಂತಾಗುತ್ತಿದೆ.
ಅಸಲಿಗೆ, ಇದನ್ನೇ ಲವ್ ಎಂದು ಕರೆಯುವ ಈ ಟೀನ್ ಏಜ್ ಮಕ್ಕಳಿಗೆ ಮತ್ತು ಅದರ ಫೇಲ್ಯೂರ್‌ನಿಂದ ಅನಾಹುತ ಮಾಡಿಕೊಳ್ಳುವ ಅವರ ಮುಗ್ಧ ಮನಸ್ಸಿಗೆ ಲವ್‌ಗೂ, ಕ್ರಷ್ ಗೂ ಇರುವ ವ್ಯತ್ಯಾಸವನ್ನು ಹೇಳಬೇಕಿದೆ. ಆರು ತಿಂಗಳಿಗೋ.. ವರ್ಷಕ್ಕೋ ಒಬ್ಬೊಬ್ಬರೊಂದಿಗೆ ಬದಲಾಗೋ ಭಾವನೆ ಪ್ರೀತಿಯಲ್ಲ. ಅದು ಜಸ್ಟ್ ಮೋಹ! ಹದಿ ಹರೆಯದ ವಯಸ್ಸಿನ ವ್ಯಾಮೋಹ! ಇನ್ನೂ ಸರಳವಾಗಿ ಹೇಳ್ಳೋದಾದ್ರೆ,
1. ಪ್ರೀತಿಯು ದೀರ್ಘಕಾಲೀನವಾಗಿರುತ್ತದೆ; ಇದು ಜೀವಿತಾವಧಿಯಲ್ಲಿ ಇಬ್ಬರನ್ನು ಒಟ್ಟಿಗೆ ಇಡಬಹುದು. ಮೋಹವು ಬಹಳ ಕಡಿಮೆ ಅವಧಿಯದ್ದಾಗಿದೆ; ಇದರಲ್ಲಿ ಒಟ್ಟಿಗೆ ಇರುವ ಅಗತ್ಯವಿರುವುದಿಲ್ಲ.
2. ಪ್ರೀತಿಯಲ್ಲಿ ಇಬ್ಬರ ನಡುವಿನ ಸಂಬಂಧವನ್ನು ಅವಲಂಬಿಸಿ ಆ ವ್ಯಕ್ತಿಯ ಬಗೆಗಿನ ಒಂದು ಒಟ್ಟಾರೆ ಭಾವನೆ ಎಂದು ವಿವರಿಸಬಹುದು. ಅದು ಮಕ್ಕಳು, ಪೋಷಕರು, ಸಂಗಾತಿ ಅಥವಾ ದೇವರ ಮೇಲಿನ ಪ್ರೀತಿಯೂ ಆಗಿರಬಹುದು. ಮೋಹವೆಂದರೆ ಇದೊಂಥರಾ ಅಡಿಕ್ಷನ್. ಇದು ವ್ಯಕ್ತಿಯ ಮೇಲೆ ದೈಹಿಕವಾಗಿ ಆಕರ್ಷಿತವಾಗುವ ಪರಿಕಲ್ಪನೆಯನ್ನು ಮಾತ್ರ ಸೂಚಿಸುತ್ತದೆ.
3. ಪ್ರೀತಿಯನ್ನು ಸದ್ಗುಣವೆಂದು ಪರಿಗಣಿಸಲಾಗುತ್ತದೆ; ಮೋಹವು ಕಾಮದ ಅತ್ಯಂತ ಮುಗ್ಧ ರೂಪವಾಗಿರುವುದರಿಂದ ಅದನ್ನು ಕೇವಲ ಮೋಹವೆಂದೇ ಪರಿಗಣಿಸಬಹುದು.
ಓದಿನ ಮೇಲೆ ಪರಿಣಾಮ
ಪ್ರೀತಿಯಷ್ಟು ಗಾಢವಲ್ಲದ, ಈ ಕ್ರಷ್ ಭಾವನೆಗಳ ಆಯಸ್ಸು ನಾಲ್ಕಾರು ತಿಂಗಳು ಎಂದು ಅಧ್ಯಯನಗಳು ದೃಢಪಡಿಸಿವೆ. ಆದರೆ, ಅದರ ಪರಿಣಾಮ ಒಂದು ವರ್ಷದವರೆಗೂ ಇರ ಬಹುದು. ಟೀನೇಜ್ ಎಂಬುದು ವಿದ್ಯಾರ್ಥಿಗಳ ಬದುಕಿನ ಟರ್ನಿಂಗ್ ಪಾಯಿಂಟ್. ಆದ್ದರಿಂದ ಗಮನ ಓದಿನಿಂದ ಬೇರೆ ಕಡೆ ಹೋಗಿ ಓದು ಹಿಂದೆ ಉಳಿಯಬಹುದು. ಹಾಗಾಗಿ, ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದಂತೆ ಗಮನವಹಿಸಬೇಕು ಮತ್ತು ಯಾರ ಮೇಲೆ ಕ್ರಷ್ ಆಗಿರುತ್ತದೋ ಅಂಥವರನ್ನು ಇಂಪ್ರಸ್ ಮಾಡಲು ಮಾಡ ಬಾರದನ್ನೆಲ್ಲಾ ಮಾಡಬಾರದು.
ಹೊರಗೆ ಬರೋದು ಹೇಗೆ?
ಹೆಚ್ಚಾಗಿ ಒಬ್ಬಬ್ಬರೇ ಇರುವುದನ್ನು ಕಡಿಮೆ ಮಾಡಿ ಸಾಧ್ಯವಾದಷ್ಟೂ ಗುಂಪಿನೊಂದಿಗೆ ಸಮಯ ಕಳೆಯಿರಿ. ಮನೆಯಲ್ಲಿ ನೀವೊಬ್ಬೊರೆ ರೂಮಿನಲ್ಲಿ ಬಂಧಿಯಾಗಿ ಕೂತರೆ, ಮನಸ್ಸು ಅದೇ ವಿಷಯದ ಸುತ್ತಾ ಗಿರಕಿ ಹೊಡೆಯುತ್ತದೆ. ವಿರಾಮದ ಸಮಯದಲ್ಲಿ, ದೈಹಿಕ ಕಸರತ್ತು, ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ಇವು ನಿಮ್ಮ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗೆ ಸಹಕಾರಿ. ಓದು ಮತ್ತು ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಾ, ಉತ್ತಮವಾದ ಆಹಾರವನ್ನು ಸೇವಿಸಿ. ಧ್ಯಾನವನ್ನು ತಪ್ಪದೆ ನಿಮ್ಮ ದಿನಚರಿಗಳಲ್ಲಿ ಸೇರಿಸಿಕೊಳ್ಳಿ.
ಇಲ್ಲಿ ಭಾವನೆಗಳೇ ಸುಳ್ಳು ಎಂದು ನಾನು ಹೇಳಲು ಬರುವುದಿಲ್ಲ. ದೇಹದಲ್ಲಾ
ಗುತ್ತಿರುವ ಬದಲಾವಣೆಯಷ್ಟೇ ಸಹಜವಾದದ್ದು ಈ ಭಾವನೆ. ಆ ಭಾವನೆಗಳನ್ನ ಅದರ ಪಾಡಿಗೆ ಅದನ್ನು ಬೆಚ್ಚಗೆ ಹೃದಯದಲ್ಲೇ ಇರಲು ಬಿಟ್ಟು ಬಿಡಿ. ಇಡೀ ಜಗತ್ತೇ ಕಲರಫುಲ್ ಆಗಿ ಕಾಣುವ ಈ ವಯಸ್ಸಲ್ಲಿ ಪ್ರೀತಿಯ ಮೊದಲ ರಂಗನ್ನು ತುಂಬಿ ಕಚಗುಳಿ ಇಡುವ ಈ ಕ್ರಷ್, ನಿಮ್ಮ ಬಾಳಲ್ಲಿ ಕಹಿಯಾಗದೆ ಒಂದು ಸವಿಯಾದ ಮುದ್ದು ನೆನಪಾಗಿ ಉಳಿಯಲಿ.
-ಗಾಯತ್ರಿ ರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.