‘ದಿ ರೈಸ್ ಆಫ್ ಫೈನಾನ್ಸ್’ ಬುಕ್ ಅನಾವರಣ ; ಆರ್ಥಿಕ ಕುಸಿತಕ್ಕೆ ಉತ್ತರ ನೀಡುವ ಪ್ರಯತ್ನ
Team Udayavani, Nov 11, 2019, 11:06 PM IST
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾಗತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ‘ದಿ ರೈಸ್ ಆಫ್ ಫೈನಾನ್ಸ್’ ಆರ್ಥಿಕ ಕ್ಷೇತ್ರದ ಕುಸಿತಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರಗಳು’ ಎಂಬ ಪುಸ್ತಕವೊಂದನ್ನು ಇಂದು ಬಿಡುಗಡೆಗೊಳಿಸಿದ್ದಾರೆ. ಪ್ರಸ್ತುತ ದೇಶದ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ಪುಸ್ತಕದಲ್ಲಿ ಸೂಕ್ತ ಪರಿಹಾರಗಳನ್ನು ಸೂಚಿಸಲಾಗಿದೆ.
ಈ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಚಿವೆ ಸೀತಾರಾಮನ್ ಅವರು, ಆರ್ಥಿಕ ಕ್ಷೇತ್ರದಲ್ಲಾಗುತ್ತಿರುವ ಏರಿಳಿತವನ್ನು ಪ್ರಶ್ನೆ ಮಾಡುವವರಿಗೆ ಈ ಪುಸ್ತಕ ಉತ್ತರ ರೂಪದಲ್ಲಿ ಮೂಡಿಬಂದಿದೆ ಎಂದು ತಿಳಿಸಿದರು.
ಜಗತ್ತಿನ ಆರ್ಥಿಕತೆಯ ಮೇಲೆ ಯಾವೆಲ್ಲಾ ಅಂಶಗಳು ಪರಿಣಾಮ ಬೀರುತ್ತಿವೆ ಹಾಗೂ ನಮ್ಮ ದೇಶದ ಆರ್ಥಿಕತೆ ಯಾಕೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬೆಲ್ಲಾ ಹಲವಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಪರಿಹಾರವನ್ನು ಸೂಚಿಸಲಾಗಿದೆ ಎಂದು ಸಚಿವೆ ನಿರ್ಮಲಾ ಅವರು ಪುಸ್ತಕದ ಕುರಿತಾಗಿ ಮಾತನಾಡುತ್ತಾ ವಿವರಿಸಿದರು.
ಈ ಪುಸ್ತಕ ಉಲ್ಲೇಖ ಮಾಡಿರುವ ಹಲವಾರು ಪರಿಹಾರ ಮಾರ್ಗಗಳು ವಿಶ್ವ ಮತ್ತು ದೇಶೀಯ ಆರ್ಥಿಕತೆಯು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮಾರ್ಗಸೂಚಿಯಾಗಿದೆ ಎಂದು ಅವರು ಪುಸ್ತಕದ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.