ಆರ್ಥಿಕತೆಯ ಬಲವರ್ಧನೆಗೆ, ಗ್ರಾಹಕರ ಅಭಿವೃದ್ಧಿಗೆ ಒತ್ತು ನೀಡಿದ ಸಿಂಡಿಕೇಟ್‌ ಬ್ಯಾಂಕ್‌


Team Udayavani, Nov 12, 2019, 5:53 AM IST

synadicate

ಸಿಂಡಿಕೇಟ್‌ ಬ್ಯಾಂಕ್‌ ವಿಶಿಷ್ಟ ಆವಿಷ್ಕಾರಗಳ ಬಳಕೆಯ ಮೂಲಕ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ದೇಶದ ಆರ್ಥಿಕತೆಗೆ ನಿರಂತರವಾಗಿ ಪುಷ್ಟಿ ನೀಡುತ್ತಾ ಬಂದಿದೆ. ಗ್ರಾಹಕರನ್ನು ಆರ್ಥಿಕವಾಗಿ ಬೆಳೆಸುತ್ತಾ ಮತ್ತು ಈ ಪ್ರಕ್ರಿಯೆಯ ಮೂಲಕ ತನ್ನನ್ನು ಬೆಳೆಸಿಕೊಳ್ಳುತ್ತಾ ಬಂದಿರುವ ಸಿಂಡಿಕೇಟ್‌ ಬ್ಯಾಂಕ್‌ನ ವಿಲೀನದ ನಿರ್ಧಾರ ಬ್ಯಾಂಕಿಗೆ ಆರಂಭದ ದಿನಗಳಿಂದಲೂ ಅಚಲ ನಿಷ್ಠೆ ಹೊಂದಿರುವ ಲಕ್ಷಗಟ್ಟಲೆ ಗ್ರಾಹಕರಿಗೆ ಸಾವಿರಗಟ್ಟಲೆ ಮಾಜಿ ನೌಕರರಿಗೆ ಮತ್ತು ಬ್ಯಾಂಕಿನ ಸ್ಥಾಪಕ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ ಮತ್ತು ತೀವ್ರವಾದ ನೋವನ್ನು ನೀಡಿದೆ.

1925ರ ಅಕ್ಟೋಬರ್‌ 20ರಂದು ಉಡುಪಿಯಲ್ಲಿ ಕೆನರಾ ಇಂಡಸ್ಟ್ರಿಯಲ್‌ ಮತ್ತು ಬ್ಯಾಂಕಿಂಗ್‌ ಸಿಂಡಿಕೇಟ್‌ ಎಂಬ ಹೆಸರಲ್ಲಿ ಜನಿಸಿದ ಸಿಂಡಿಕೇಟ್‌ ಬ್ಯಾಂಕ್‌ ಅದೇ ವರ್ಷದ ನವೆಂಬರ್‌ 10ರಂದು ರೂ. 8,000 ಬಂಡವಾಳದೊಂದಿಗೆ ಬ್ಯಾಂಕಿಂಗ್‌ ವ್ಯವಹಾರ ಆರಂಭಿಸಿದ ದಿನದಿಂದ ಈವರೆಗೂ ತನ್ನದೇ ಆದ ಸಂಸ್ಥಾ ಸಂಸ್ಕೃತಿಯೊಂದಿಗೆ ಗ್ರಾಮೀಣ ಪಕ್ಷಪಾತಿಯಾಗಿ, ವಿಶಿಷ್ಟ ಬ್ಯಾಂಕಿಂಗ್‌ ಆವಿಷ್ಕಾರಗಳ ಬಳಕೆಯ ಮೂಲಕ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ದೇಶದ ಆರ್ಥಿಕತೆಗೆ ನಿರಂತರವಾಗಿ ಪುಷ್ಟಿ ನೀಡುತ್ತಾ ಬಂದಿದೆ. ಗ್ರಾಹಕರನ್ನು ಆರ್ಥಿಕವಾಗಿ ಬೆಳೆಸುತ್ತಾ ಮತ್ತು ಈ ಪ್ರಕ್ರಿಯೆಯ ಮೂಲಕ ತನ್ನನ್ನು ಬೆಳೆಸಿಕೊಳ್ಳುತ್ತಾ ಬಂದಿರುವ ಸಿಂಡಿಕೇಟ್‌ ಬ್ಯಾಂಕ್‌ನ ವಿಲೀನದ ನಿರ್ಧಾರ ಬ್ಯಾಂಕಿಗೆ ಆರಂಭದ ದಿನಗಳಿಂದಲೂ ಅಚಲ ನಿಷ್ಠೆ ಹೊಂದಿರುವ ಲಕ್ಷಗಟ್ಟಲೆ ಗ್ರಾಹಕರಿಗೆ ಸಾವಿರಗಟ್ಟಲೆ ಮಾಜಿ ನೌಕರರಿಗೆ ಮತ್ತು ಬ್ಯಾಂಕಿನ ಸ್ಥಾಪಕ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ ಮತ್ತು ತೀವ್ರವಾದ ನೋವನ್ನು ನೀಡಿದೆ.

ಉದಾತ್ತ ತತ್ವ : ಬ್ಯಾಂಕು ತನ್ನ ಆರಂಭದ ದಿನಗಳಿಂದಲೂ ಅಭಿವೃದ್ಧಿಯನ್ನು ಅನುಸರಿಸುವ ಬದಲು ಅಭಿವೃದ್ಧಿ ಪ್ರಕ್ರಿಯೆ ಯನ್ನು ಮುನ್ನಡೆಸುವ ಮತ್ತು ಪ್ರಗತಿಯನ್ನು ಪ್ರಚೋದಿಸುವ ಮತ್ತು ಮಾರ್ಗದರ್ಶನ ನೀಡುವ ವಿಶಿಷ್ಟವಾದ ಮತ್ತು ಉದಾತ್ತ ಅಭಿವೃದ್ಧಿ ತತ್ವಕ್ಕೆ ಬಲವಾಗಿ ಅಂಟಿಕೊಂಡಿದೆ.

ಉಡುಪಿ ನಗರದಲ್ಲಿ ಜನಿಸಿದ ಬ್ಯಾಂಕು 1964ರ ಏಪ್ರಿಲ್‌ 19ರಂದು ತನ್ನ ಪ್ರಧಾನ ಕಚೇರಿಯನ್ನು ಆಗ ಸಣ್ಣ ಗ್ರಾಮೀಣ ಕೇಂದ್ರವಾಗಿದ್ದ ಮಣಿಪಾಲಕ್ಕೆ ಸ್ಥಳಾಂತರಗೊಳಿಸಿತು. 1946ರಲ್ಲಿ ಒಂದೇ ದಿನ 29 ಗ್ರಾಮೀಣ ಶಾಖೆಗಳನ್ನು ತೆರೆದ ಹೆಗ್ಗಳಿಕೆ ಸಿಂಡಿಕೇಟ್‌ ಬ್ಯಾಂಕಿಗಿದೆ. ಈ 29 ಗ್ರಾಮೀಣ ಕೇಂದ್ರಗಳಲ್ಲಿ ಬ್ಯಾಂಕ್‌ ಶಾಖೆಗಳ ಅಸ್ತಿತ್ವ ಮತ್ತು ಸಫ‌ಲತೆಗೆ ಬೇಕಾದ ಆರ್ಥಿಕ ಚಟುವಟಿಕೆಗಳಿರಲಿಲ್ಲ. ಇದನ್ನು ಗಮನಿಸಿದ ಡಾ| ಟಿ.ಎಂ. ಪೈ “Let us create economic activities ourselves” ಎಂದು ಹೇಳಿದರಲ್ಲದೆ ಅದರಂತೆ ಕಾರ್ಯ ಪ್ರವೃತ್ತರಾದರು. ಈ ಎಲ್ಲ ಶಾಖೆಗಳಲ್ಲಿ ಪಿಗ್ಮಿ ಯೋಜನೆಯನ್ನು ಆರಂಭಿಸಿದರು. ಈ ಯೋಜನೆಯನ್ವಯ ಎರಡಾಣೆ (ಈಗಿನ 12 ಪೈಸೆ)ಯಂತೆ ಹೊಸ ಗ್ರಾಹಕರಿಂದ ಪಿಗ್ಮಿ ಠೇವಣಿ ಸಂಗ್ರಹಿಸಿದರು ಮತ್ತು ಅವರೆಲ್ಲರೂ ನಿರಂತರವಾಗಿ ಪಿಗ್ಮಿಗೆ ಇದ್ದಷ್ಟು ಹಣ ತುಂಬುವಂತೆ ಪ್ರೋತ್ಸಾಹಿಸುತ್ತಾ ಬಂದರು. ಪಿಗ್ಮಿ ಖಾತೆಯಲ್ಲಿ ಶಿಲ್ಕು ದೊಡ್ಡ ಮೊತ್ತವಾಗಿ ಬೆಳೆದಾಗ ಹಣವನ್ನು ಐ.ಎಫ್.ಡಿ.ಗೆ ವರ್ಗಾಯಿಸಿ ಗ್ರಾಹಕರಿಗೆ ಹೆಚ್ಚು ಬಡ್ಡಿ ದೊರೆಯುವಂತೆ ಮಾಡಲಾಯಿತು ಮತ್ತು ಪಿಗ್ಮಿ ಖಾತೆಗೆ ಗ್ರಾಹಕರೆಲ್ಲರೂ ತಮ್ಮ ಕಾಣಿಕೆ (Contribution) ಮುಂದುವರಿಸುವಂತೆಯೂ ಪ್ರಚೋದಿ ಸಿದರು. ಎಲ್ಲ ಪಿಗ್ಮಿ ಖಾತೆದಾರರಿಗೆ ಅವರ ವ್ಯವಹಾರ ವಿಸ್ತರಣೆಗೆ ಮತ್ತು ವ್ಯವಹಾರದ ಅಭಿವೃದ್ಧಿಗೆ ಉದಾರವಾಗಿ ಸಾಲ ನೀಡಲಾಯಿತು. ಅವರೆಲ್ಲರ ವ್ಯಾಪಾರ ವ್ಯವಹಾರಗಳೂ ವೃದ್ಧಿಸಿದವು. ಹಳ್ಳಿಗಳ ಬಡಗಿಗಳಿಗೆ, ಕಮ್ಮಾರರಿಗೆ, ನೇಕಾರರಿಗೆ, ಮೀನುಗಾರರಿಗೆ ಅವಲಕ್ಕಿ ಕುಟ್ಟುವ ಸಣ್ಣ ಉದ್ಯಮಿಗಳಿಗೆ, ಸಣ್ಣ ರೈತರಿಗೆ-ಹೀಗೆ ಎಲ್ಲರಿಗೂ ಸಾಲ ನೀಡಿ ಅವರೆಲ್ಲರ ಅಭಿವೃದ್ಧಿ ಯಾಯಿತು. ಇದರ ಫ‌ಲವಾಗಿ ಈ ಎಲ್ಲಾ ಕೇಂದ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ವೃದ್ಧಿಸಿದವು. ವಿಸ್ತರಣೆ ಹೊಂದಿದವು. ಇದರಿಂದಾಗಿ ಬ್ಯಾಂಕಿನ ಈ ಎಲ್ಲಾ ಶಾಖೆಗಳಿಗೆ ಬೇಕಾದ ಪ್ರಮಾಣದ ವ್ಯವಹಾರ ದೊರೆಯಿತು. ವ್ಯವಹಾರ ಗಾತ್ರ ಹೆಚ್ಚಿತು.

ಬ್ಯಾಂಕು 1928ರಲ್ಲಿ ತೆರೆದ ಗ್ರಾಮೀಣ ಕೇಂದ್ರವಾಗಿದ್ದ ಬ್ರಹ್ಮಾವರ ಶಾಖೆ ಈಗ ಪಟ್ಟಣವಾಗಿದೆ ಮತ್ತು ತಾಲೂಕು ಕೇಂದ್ರವಾಗಿ ಇನ್ನಷ್ಟು ಬೆಳೆಯಲಿದೆ. ಹಾಗೆಯೇ ಎರಡನೆಯ ಶಾಖೆ ತೆರೆದ ಕುಮಟಾ ಆಗ ಹಳ್ಳಿಯಾಗಿತ್ತು. ಈಗ ಬೆಳೆದು ಪಟ್ಟಣವಾಗಿದೆ. ಈ ರೀತಿ ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸಿ ಆ ಮೂಲಕ ಗ್ರಾಹಕರನ್ನು ಬೆಳೆಸಿ, ಸ್ಥಳೀಯ ಆರ್ಥಿಕತೆಗೆ ಪುಷ್ಟಿ ನೀಡಿ ಆ ಪ್ರಕ್ರಿಯೆಯ ಮೂಲಕ ತನ್ನ ಶಾಖೆಗಳಲ್ಲಿನ ವ್ಯವಹಾರ ಗಾತ್ರ ಹೆಚ್ಚಿಸಿಕೊಂಡಿತು. ತನ್ನ ಪ್ರಗತಿಯನ್ನು ಸಾಧಿಸಿಕೊಳ್ಳುವ ಉದಾತ್ತ ಅಭಿವೃದ್ಧಿ ತತ್ವವನ್ನು ಸಿಂಡಿಕೇಟ್‌ ಬ್ಯಾಂಕ್‌ ಅನುಸರಿಸುತ್ತಾ ಬಂದಿದೆ. ಇದೇ ಅಭಿವೃದ್ಧಿಯನ್ನು ಹಿಂಬಾಲಿಸುವ ಬದಲು ಪ್ರಗತಿಗೆ ಮಾರ್ಗದರ್ಶನ ನೀಡುವ ಅಭಿವೃದ್ಧಿ ತಂತ್ರ. ಇತರ ಬ್ಯಾಂಕುಗಳು ಪಟ್ಟಣ ಮತ್ತು ನಗರಗಳಲ್ಲಿ ಶಾಖೆಗಳನ್ನು ತೆರೆದು ಅಭಿವೃದ್ಧಿಯನ್ನು ಹಿಂಬಾಲಿಸುವ ತಂತ್ರವನ್ನು ಅಳವಡಿಸಿಕೊಂಡವು. ಸಿಂಡಿಕೇಟ್‌ ಬ್ಯಾಂಕ್‌ ಮಾತ್ರ ಭಿನ್ನವಾದ ಈ ತಂತ್ರವನ್ನು ಆಯ್ದುಕೊಂಡಿತು.

ಹಣಕಾಸಿನ ಸೇರ್ಪಡೆ: ಪಿಗ್ಮಿ ಯೋಜನೆ ಹಣಕಾಸಿನ ಸೇರ್ಪಡೆಯ ಪರಿಣಾಮಕಾರಿ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ . 1928ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಪಿಗ್ಮಿ ಯೋಜನೆಯ ಆವಿಷ್ಕಾರ ನಡೆಸಿದಲ್ಲಿಂದ ಆ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಅರ್ಥಪೂರ್ಣ ಹಣಕಾಸಿನ ಸೇರ್ಪಡೆಗಾಗಿ ಬಳಸಲಾಗುತ್ತಿತ್ತು. ಡಾ| ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದ ಯು.ಪಿ.ಎ. 1ರ ಅವಧಿಯಲ್ಲಿ ಭಾರತ ಸರ್ಕಾರ ಹಣಕಾಸಿನ ಸೇರ್ಪಡೆ ಯೋಜನೆಯನ್ನು ಜಾರಿಗೆ ತಂದಿತು. ತರುವಾಯ ಮೋದಿ ಸರಕಾರ ಅದಕ್ಕೆ ಜನಧನ ಯೋಜನೆ ಎಂಬ ಹೆಸರು ನೀಡಿ ಅದರಲ್ಲಿ ತುಸು ಬದಲಾವಣೆ ಮಾಡಿತು. ಆದರೆ ಸಿಂಡಿಕೇಟ್‌ ಬ್ಯಾಂಕ್‌ “ಬ್ಯಾಂಕಿನ ಪರಿಧಿ’ಯಿಂದ ಹೊರಗಿರುವ ಮಂದಿಯನ್ನು ಬ್ಯಾಂಕಿನ ಪರಿಧಿಗೆ ತಂದು ಗ್ರಾಹಕರನ್ನಾಗಿ ಮಾಡಿ ಅವರೆಲ್ಲ ಪಿಗ್ಮಿ ಯೋಜನೆಯ ಮೂಲಕ ಆರ್ಥಿಕ ಬಲವರ್ಧನೆ ಸಾಧಿಸಿ ಕೊಳ್ಳುವಂತೆ ಆರಂಭದ ವರ್ಷಗಳಿಂದಲೇ ಶ್ರಮಿಸುತ್ತಿತ್ತು. ಆದರೆ ಈ ಪ್ರಕ್ರಿಯೆಗೆ ಹಣಕಾಸಿನ ಸೇರ್ಪಡೆಯೆಂಬ ಹೆಸರನ್ನು ಮಾತ್ರ ನೀಡಿರಲಿಲ್ಲ ಅಷ್ಟೆ . ಪಿಗ್ಮಿ ಯೋಜನೆ ಒಂದು ಕ್ರಾಂತಿಕಾರಿ “ಉತ್ಪನ್ನ ಆವಿಷ್ಕಾರ’. ಸಿಂಡಿಕೇಟ್‌ ಬ್ಯಾಂಕಿನ ಒಟ್ಟು ಠೇವಣಿಗಳಲ್ಲಿ ಶೇ. 10ರಷ್ಟು ಯಾವಾಗಲೂ ಪಿಗ್ಮಿ ಠೇವಣಿಗಳಿಂದ ಇರುತ್ತಿದ್ದವು.

1957ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ತನ್ನ ನೂರನೆಯ ಶಾಖೆಯನ್ನು ಕರ್ನಾಟಕದ ಇಳ್ಕಲ್‌ನಲ್ಲಿ ತೆರೆಯಿತು. 1963ರಲ್ಲಿ ಬ್ಯಾಂಕಿನ ಹೆಸರನ್ನು ಸಿಂಡಿಕೇಟ್‌ ಬ್ಯಾಂಕ್‌ ಎಂದು ಬದಲಿಸಲಾಯಿತು. ರಾಷ್ಟ್ರೀಕರಣದ ವೇಳೆ ಬ್ಯಾಂಕಿಗೆ 306 ಶಾಖೆಗಳಿದ್ದವು. ಅವುಗಳಲ್ಲಿ ಶೇ. 66ರಷ್ಟು ಶಾಖೆಗಳು ಗ್ರಾಮೀಣ ಮತ್ತು ಅರೆ ಪಟ್ಟಣ ಕೇಂದ್ರಗಳಲ್ಲಿದ್ದವು.

ಸಾಲ ನೀಡಿಕೆಯಲ್ಲಿ ಹೊಸತನ: ಸಿಂಡಿಕೇಟ್‌ ಬ್ಯಾಂಕ್‌ ತನ್ನ ಆರಂಭದ ವರ್ಷಗಳಿಂದಲೇ ಸಾಲ ನೀಡಿಕೆಯಲ್ಲಿ ಹೊಸತನ ತೋರಿಸಿತು. ಇತರ ಬ್ಯಾಂಕುಗಳಿಗಿಂತ ಭಿನ್ನವಾದ ಸಾಲ ನೀಡಿಕೆ ನೀತಿಯನ್ನು ಸಿಂಡಿಕೇಟ್‌ ಬ್ಯಾಂಕ್‌ ಅಳವಡಿಸಿಕೊಂಡಿತು. ಇತರ ಬ್ಯಾಂಕುಗಳು ಸಾಲ ವಸೂಲಿ ಸುಲಭವಾಗುವಂತೆ ಮಾಡಿಕೊಳ್ಳಲು ತುಂಬಾ ಹಣವಿದ್ದವರಿಗೆ ಮತ್ತು ಅತಿ ಶ್ರೀಮಂತರಿಗೆ ಸಾಲ ನೀಡುತ್ತಿದ್ದವು. ಸಿಂಡಿಕೇಟ್‌ ಬ್ಯಾಂಕ್‌ ಸಣ್ಣ ಪುಟ್ಟ ಕಸುಬುದಾರರಿಗೆ, ಮೀನುಗಾರರಿಗೆ, ನೇಕಾರರಿಗೆ, ಹಳ್ಳಿಯ ವೃತ್ತಿ ನಿರತರಿಗೆ, ರೈತರಿಗೆ, ಹೊಟೇಲ್‌ಗ‌ಳಿಗೆ, ವ್ಯಾಪಾರಿಗಳಿಗೆ, ಗೂಡಂಗಡಿ ನಡೆಸುವವರಿಗೆ ಸಾಲ ನೀಡಿತು. ಉನ್ನತ ಶಿಕ್ಷಣಕ್ಕೆ ಸಾಲ ನೀಡುವ ಯೋಜನೆಯನ್ನು ಸಿಂಡಿಕೇಟ್‌ ಬ್ಯಾಂಕ್‌ ರೂಪಿಸಿ ಜಾರಿಗೆ ತಂದಿತು. ಕಿರು ಹಣಕಾಸು ಯೋಜನೆಯನ್ನು ಡಾ| ಪೈ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಆರಂಭಿ ಸಿದರು. ಡಾ| ಪೈ ಹಣಕಾಸು ಪರಿಕಲ್ಪನೆಯ ಮೂಲಶಿಲ್ಪಿ ಹಾಗೂ ಇದರ ಪೇಟೆಂಟ್‌ ಸಿಂಡಿಕೇಟ್‌ ಬ್ಯಾಂಕ್‌ಗೆ ಸಲ್ಲಬೇಕು.

ಆರಂಭದಿಂದಲೇ ಜನಸಾಮಾನ್ಯರ ಬ್ಯಾಂಕ್‌ ಆಗಿ ಬೆಳೆಯುತ್ತಾ ಬಂದ ಸಿಂಡಿಕೇಟ್‌ ಬ್ಯಾಂಕ್‌ ಪ್ರಥಮ ಮೆಮೋರಂಡಮ್‌ನಲ್ಲಿ ಗುಡಿ ಕೈಗಾರಿಕೆ, ಕೃಷಿ, ಸಣ್ಣ ಉದ್ದಿಮೆ, ಕೈಮಗ್ಗದ ಉದ್ದಿಮೆ, ಮೀನುಗಾರಿಕೆ ಇತ್ಯಾದಿಗಳಿಗೆ ನೆರವು ನೀಡುವ ಧ್ಯೇಯವನ್ನು ಅಳವಡಿಸಿಕೊಳ್ಳಲಾಗಿತ್ತು. ಹಾಗಾಗಿ ಸಿಂಡಿಕೇಟ್‌ ಬ್ಯಾಂಕಿನ ಧ್ಯೇಯಗಳಿಗೂ ರಾಷ್ಟ್ರೀಕರಣದ ಧ್ಯೇಯಗಳಿಗೂ ವ್ಯತ್ಯಾಸ ವಿರಲಿಲ್ಲ. ರಾಷ್ಟ್ರೀಕರಣೋತ್ತರ ಅವಧಿಯಲ್ಲಿ ಆದ್ಯತಾ ರಂಗಗಳೆಂದು ಗುರುತಿಸಲ್ಪಟ್ಟ ಕ್ಷೇತ್ರಗಳೇ 1925ರಿಂದಲೇ ಸಾಲ ನೀಡಿಕೆಯಲ್ಲಿ ಬ್ಯಾಂಕಿನ ಒತ್ತಿನ ಕ್ಷೇತ್ರಗಳಾಗಿದ್ದವು. ಹಾಗಾಗಿ ರಾಷ್ಟ್ರೀಕರಣದ ನಂತರದ ಬ್ಯಾಂಕಿಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸುವ ಅಥವಾ ತನ್ನ ಕಾರ್ಯತಂತ್ರಕ್ಕೆ ಹೊಸ ರೂಪ ನೀಡುವ ಅವಶ್ಯಕತೆಯೇ ಬರಲಿಲ್ಲ. ರಾಷ್ಟ್ರೀಕರಣದ ಧ್ಯೇಯೋದ್ದೇಶಗಳೇ ರಾಷ್ಟ್ರೀಕರಣದ ಮುಂಚೆಯೇ ಸಿಂಡಿಕೇಟ್‌ ಬ್ಯಾಂಕಿನ ಧ್ಯೇಯೋದ್ದೇಶಗಳಾಗಿದ್ದವು. ಅದಕ್ಕಾಗಿಯೇ ರಾಷ್ಟ್ರೀಕರಣದ ನಂತರ ಬ್ಯಾಂಕಿನ ಅನುಭವದ ಮಾಹಿತಿ ಪಡೆಯಲು ಇತರ ಬ್ಯಾಂಕುಗಳು ಸಿಂಡಿಕೇಟ್‌ ಬ್ಯಾಂಕಿನತ್ತ ನೋಡುವಂತಾಯಿತು. ರಾಷ್ಟ್ರೀಕರಣ ಸಿಂಡಿಕೇಟ್‌ ಬ್ಯಾಂಕಿನ ಪಾಲಿಗೆ ಹಿಂದಿನ ನೀತಿ ಮತ್ತು ಕಾರ್ಯತಂತ್ರಗಳ ಮುಂದುವರಿಕೆಯಷ್ಟೇ ಆಯಿತು.

ಕೃಷಿ ಸಾಲ : ಕೃಷಿ ಸಾಲವನ್ನು ಮೊತ್ತ ಮೊದಲಾಗಿ ಆರಂಭಿಸಿದ ಬ್ಯಾಂಕ್‌ ಸಿಂಡಿಕೇಟ್‌ ಬ್ಯಾಂಕ್‌. ಕೃಷಿ ಸಾಲ ನೀಡಿಕೆ ತನ್ನ ಮಾರ್ಗದರ್ಶಿ ನಿಯಮಗಳಿಗೆ ವಿರುದ್ಧವಾಗಿದ್ದು ಅದನ್ನು ಕೂಡಲೇ ನಿಲ್ಲಿಸಬೇಕೆಂದು ಆರ್‌.ಬಿ.ಐ. ಆದೇಶಿಸಿತ್ತು. ಕೃಷಿ ಸಾಲ ಆರಂಭಿಸಿದ್ದನ್ನು ಪ್ರಶ್ನಿಸಿದ ರಿಸರ್ವ್‌ ಬ್ಯಾಂಕ್‌ ಡಾ| ಪೈಯವರಿಂದ ವಿವರಣೆ ಕೇಳಿ ಪತ್ರ ಬರೆದಿತ್ತು.

ಅದೇ ರೀತಿ ಸಿಂಡಿಕೇಟ್‌ ಬ್ಯಾಂಕ್‌ ನೀಡುತ್ತಿದ್ದ ರೂ. 50 ರೂ. 75 ಇತ್ಯಾದಿ ಸಣ್ಣ ಸಾಲಗಳನ್ನು ರಿಸರ್ವ್‌ ಬ್ಯಾಂಕ್‌ ವಿರೋಧಿಸಿತ್ತು. ಈ ಸಣ್ಣ ಸಾಲಗಳಿಂದ ಆಗಿನ ಕಾಲದಲ್ಲಿ ನಿಜವಾದ ಅರ್ಥಪೂರ್ಣ ಹಣಕಾಸಿನ ಸೇರ್ಪಡೆ ಸಾಧ್ಯವಾಗುತ್ತಿತ್ತು. ಅತಿ ಬಡವರೂ, ವಂಚಿತರೂ ಸಾಲ ಪಡೆಯಲು ಸಾಧ್ಯವಾಗುವಂತಾಗಲೂ ಈ ಸಣ್ಣ ಸಾಲಗಳನ್ನು ಬ್ಯಾಂಕು ನೀಡುತ್ತಿತ್ತು. ಈ ಸಣ್ಣ ಸಾಲಗಳಿಂದ ಬ್ಯಾಂಕಿನ ಹೆಸರಿಗೆ ಧಕ್ಕೆಯುಂಟಾಗುತ್ತದೆ. ಅಂತಹ ಸಾಲಗಳನ್ನು ನಿಲ್ಲಿಸಿ ಎಂದು ರಿಸರ್ವ್‌ ಬ್ಯಾಂಕ್‌ ಆದೇಶಿಸಿತ್ತು.

ಕೃಷಿ ಕ್ಷೇತ್ರಕ್ಕೆ ಬೆಂಬಲ ರೂಪದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಸಿಂಡಿಕೇಟ್‌ ಬ್ಯಾಂಕಿಗಿತ್ತು. ಆದರೆ ರಿಸರ್ವ್‌ ಬ್ಯಾಂಕಿನ ಮಾರ್ಗದರ್ಶಿ ನಿಯಮಗಳಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಅದಕ್ಕಾಗಿ ಬ್ಯಾಂಕ್‌ 1966ರಲ್ಲಿ ಸಿಂಡಿಕೇಟ್‌ ಕೃಷಿ ಪ್ರತಿಷ್ಠಾನವೆಂಬ ಬಾಹ್ಯ ಸಂಸ್ಥೆಯನ್ನು ಸ್ಥಾಪಿಸಿತು.

ಪ್ರಾದೇಶಿಕ ಬ್ಯಾಂಕುಗಳು: ಪ್ರಾದೇಶಿಕ ಬ್ಯಾಂಕುಗಳ ಮೂಲ ಶಿಲ್ಪಿ ಕೂಡ ಡಾ| ಟಿ.ಎಂ.ಎ. ಪೈ. ಮಹಾರಾಷ್ಟ್ರ ಅಪೆಕ್ಸ್‌ ಬ್ಯಾಂಕ್‌ ಮತ್ತು ಸದರ್ನ್ ಇಂಡಿಯಾ ಎಪೆಕ್ಸ್‌ ಬ್ಯಾಂಕ್‌ ಎಂಬ ಎರಡು ಪ್ರಾದೇಶಿಕ ಬ್ಯಾಂಕುಗಳನ್ನು ಅವರು ಸ್ಥಾಪಿಸಿದರು. 1953ರಲ್ಲಿ ಈ ಬ್ಯಾಂಕುಗಳನ್ನು ಸಿಂಡಿಕೇಟ್‌ ಬ್ಯಾಂಕಿನೊಂದಿಗೆ ವಿಲೀನ ಗೊಳಿಸಲಾಯಿತು. ಪ್ರಾದೇಶಿಕ ಗ್ರಾಮೀಣ ಬ್ಯಾಂಕೊಂದನ್ನು ಪ್ರಪ್ರಥಮವಾಗಿ ಆರಂಭಿಸಿದ ಕೀರ್ತಿ ಸಿಂಡಿಕೇಟ್‌ ಬ್ಯಾಂಕಿಗೆ ಸಲ್ಲಿಸಬೇಕು. 1975ರ ಅಕ್ಟೋಬರ್‌ 2ರಂದು ಪ್ರಥಮ ಬ್ಯಾಂಕನ್ನು ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಿಸಿತು. ಆ ತರುವಾಯ ಇತರ 9 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಬ್ಯಾಂಕ್‌ ಆರಂಭಿಸಿತು. ಅವೆಲ್ಲವೂ ಲಾಭ ಗಳಿಸುವ ಬ್ಯಾಂಕುಗಳಾಗಿದ್ದವು. ಈಗ ವಿಲೀನದ ಫ‌ಲವಾಗಿ 5 ರಾಜ್ಯಗಳಲ್ಲಿ 5 ಗ್ರಾಮೀಣ ಬ್ಯಾಂಕುಗಳಿದು,ª ಅವು 30 ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿವೆ.

ಈಗ ಹೆಚ್ಚಿನ ಬ್ಯಾಂಕುಗಳು ನೇರವಾಗಿ ಅಥವಾ ಉಪಸಂಸ್ಥೆಗಳ ಮೂಲಕ ಶೇರ್‌ ಬ್ರೋಕಿಂಗ್‌ ವ್ಯವಹಾರ ನಡೆಸುತ್ತಿವೆ. ಸಿಂಡಿಕೇಟ್‌ ಬ್ಯಾಂಕ್‌ 1966ರಲ್ಲಿ ಶೇರ್‌ ಬ್ರೋಕಿಂಗ್‌ ವ್ಯವಹಾರ ಆರಂಭಿಸಿತು. ಶೇರು ಬ್ರೋಕಿಂಗ್‌ ವ್ಯವಹಾರಕ್ಕಾಗಿ ಇನ್ವೆಸ್ಟರ್ ಏಜನ್ಸಿ ವಿಭಾಗವನ್ನು ಡಾ| ಪೈ ಆರಂಭಿಸಿದರು. ಡಾ. ಪೈಯವರಿಗೆ ಸರ್ವವ್ಯಾಪಿ ಬ್ಯಾಂಕಿಂಗ್‌ನತ್ತ ದೃಷ್ಟಿ ಆಗಲೇ ಇತ್ತು.

ಬ್ಯಾಂಕಿಂಗ್‌ ಪ್ರತಿನಿಧಿಗಳ ಬಳಕೆ: 10-12 ವರ್ಷಗಳ ಹಿಂದೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸಿನ ಸೇರ್ಪಡೆಯ ವಿಸ್ತರಣೆಗಾಗಿ ಶಾಖಾರಹಿತ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಲು ಬ್ಯಾಂಕಿಂಗ್‌ ಪ್ರತಿನಿಧಿಗಳನ್ನು (Banking correspondents) ನೇಮಿಸುವ ಅವಕಾಶವನ್ನು ಬ್ಯಾಂಕ್‌ಗಳಿಗೆ ನೀಡಿತು. ಆದರೆ ಸಿಂಡಿಕೇಟ್‌ ಬ್ಯಾಂಕ್‌ 1946ರಲ್ಲೇ ಇಂತಹ ಬ್ಯಾಂಕಿಂಗ್‌ ಪ್ರತಿನಿಧಿಗಳನ್ನು ನೇಮಿಸಿತು. 22-4-1946ರಂದು ತೆರೆದ 29 ಗ್ರಾಮೀಣ ಶಾಖೆಗಳಿಗೆ ಪೂರ್ಣಾವಧಿ ಅಧಿಕಾರಿಗಳನ್ನು ಮೇನೇಜರುಗಳಾಗಿ ನೇಮಿಸುವ ಬದಲು ಆಯಾ ಶಾಖೆಗಳಿರುವ ಪ್ರದೇಶಗಳ ವಾಸಿಸುತ್ತಿದ್ದ ಪ್ರಭಾವಶಾಲಿ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳನ್ನು ಬ್ಯಾಂಕಿನ ಏಜೆಂಟರುಗಳನ್ನಾಗಿ ನೇಮಿಸಿತು. ಅವರು ಠೇವಣಿ ಸಂಗ್ರಹ, ನಿಶ್ಚಿತ ಮೊತ್ತದ ವರೆಗೆ ಸಾಲ ನೀಡಿಕೆ, ಡಿಮಾಂಡ್‌ ಡ್ರಾಫ್ಟ್ ವಿತರಣೆ, ಇತ್ಯಾದಿಗಳನ್ನು ಗ್ರಾಮೀಣ ಶಾಖೆಗಳಲ್ಲಿ ಮಾಡುತ್ತಿದ್ದರು. ಇದು ಹಣಕಾಸಿನ ಸೇರ್ಪಡೆಯ ವಿಸ್ತರಣೆಗೆ 1946ರಲ್ಲೇ ಬ್ಯಾಂಕ್‌ ತೆಗೆದುಕೊಂಡ ಮಹತ್ವದ ಹೆಜ್ಜೆಯಾಗಿತ್ತು.

ದ್ವೀಪಗಳಿಗೆ ಬ್ಯಾಂಕಿಂಗ್‌: ಸಿಂಡಿಕೇಟ್‌ ಬ್ಯಾಂಕ್‌ ಲಕ್ಷದ್ವೀಪ ಮತ್ತು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ಬ್ಯಾಂಕಿಂಗ್‌ ಸಂದೇಶ ಒಯ್ದ ಪ್ರಪ್ರಥಮ ಬ್ಯಾಂಕ್‌ 5-2-1971ರಂದು ಕವರಟ್ಟಿಯಲ್ಲಿ ಬ್ಯಾಂಕ್‌ ಮೊದಲನೆಯ ಶಾಖೆ ತೆರೆಯಿತು. ಎರಡನೆಯ ಶಾಖೆಯನ್ನು 1971ರ ಏಪ್ರಿಲ್‌ 21ರಂದು ಮಿನಿಕಾಯಿಯಲ್ಲಿ ತೆರೆಯಿತು. ಅನಂತರ ಇನ್ನೂ ಎರಡು ಶಾಖೆಗಳನ್ನು ಅಮಿನಿ ಮತ್ತು ಅಂಡ್ರೋತ್‌(Androth) ಗಳಲ್ಲಿ ತೆರೆಯಲಾಯಿತು. 1976ರಲ್ಲಿ ಈ ದ್ವೀಪದಲ್ಲಿ ಮತ್ತೂಂದು ಶಾಖೆಯನ್ನು ತೆರೆಯಿತು. ಅಂಡಮಾನ್‌ ನಿಕೋಬಾರ್‌ ದ್ವೀಪಗಳ ಪ್ರಥಮ ಶಾಖೆಯನ್ನು 1969ರಲ್ಲಿ ಪೋರ್ಟ್‌ಬ್ಲೇರ್‌ನಲ್ಲಿ ತೆರೆಯಲಾಯಿತು. ಎರಡನೆಯ ಶಾಖೆಯನ್ನು ಕ್ಯಾಂಪ್‌ಬೆಲ್‌ ಬೇಯಲ್ಲಿ ತೆರೆಯಲಾಯಿತು. 17-8-1976ರಂದು ಬ್ಯಾಂಕ್‌ ಲಂಡನ್‌ ಶಾಖೆ ತೆರೆಯಿತು.

(ಮುಂದುವರಿಯುವುದು)

– ಡಾ| ಕೆ.ಕೆ. ಅಮ್ಮಣ್ಣಾಯ

ಟಾಪ್ ನ್ಯೂಸ್

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.