ಕಾಯಕಲ್ಪಕ್ಕೆ ಕಾದಿದೆ ಪುಲಿಗೆರೆ ಗ್ರಂಥಾಲಯ
Team Udayavani, Nov 12, 2019, 12:52 PM IST
ಲಕ್ಷ್ಮೇಶ್ವರ: ಕನ್ನಡ ಸಾರಸ್ವತ ಲೋಕಕ್ಕೆ ತಿರುಳ್ಗನ್ನಡ ಭಾಷೆ ನೀಡಿದ ಆದಿಕವಿ ಪಂಪನ ಸಾಹಿತ್ಯ ಕ್ಷೇತ್ರವಾದ ಪುಲಿಗೆರೆ(ಲಕ್ಷೇಶ್ವರ)ಯಲ್ಲಿ ಆದಿಕವಿ ಪಂಪನ ಹೆಸರಿನಲ್ಲಿ ಸ್ಥಾಪಿಸಿದ ಗ್ರಂಥಾಲಯ ಅವ್ಯವಸ್ಥೆಯ ತಾಣವಾಗಿದ್ದು, ಕಾಯಕಲ್ಪಕ್ಕೆ ಕಾದಿದೆ.
ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣದ ಕೇಂದ್ರ ಭಾಗದಲ್ಲಿರುವ ಈ ವಾಚನಾಲಯಕ್ಕೆ ಪಟ್ಟಣ ಮತ್ತು ಗ್ರಾಮೀಣ ಭಾಗದ 500ಕ್ಕೂ ಹೆಚ್ಚು ಓದುಗರು ಬರುತ್ತಾರೆ. 1350 ಜನರು ಸದಸ್ಯತ್ವ ಹೊಂದಿದ್ದಾರೆ. ಇಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಸಾಮಾನ್ಯ ಜ್ಞಾನ, ಮಾಹಿತಿ, ಸಾಹಿತ್ಯ, ಕಾವ್ಯ, ಕಾದಂಬರಿ, ಗ್ರಂಥಗಳು ಸೇರಿ ಸುಮಾರು 25 ಸಾವಿರ ಪುಸ್ತಕಗಳು ಇದ್ದವು. ಆದರೆ ಇವುಗಳನ್ನು ಸಂರಕ್ಷಿಸಿಡಲು ಸೂಕ್ತ ವ್ಯವಸ್ಥೆ ಮತ್ತು ಕಟ್ಟಡದ ಭಾಗ ಸೋರುತ್ತಿರುವುದರಿಂದ ಬಹಳಷ್ಟು ಹಾಳಾಗಿವೆ.
ಈಗ ಕೇವಲ 13,500 ಪುಸ್ತಕಗಳು ಮಾತ್ರ ಇಲ್ಲಿವೆ. ಮಳೆಗಾಲದಲ್ಲಿ ನೀರು ಜಿನುಗುತ್ತದೆ. ಸುತ್ತಲಿನ ಕಾಂಪೌಂಡ್ ಕುಸಿದಿದೆಯಲ್ಲದೇ ಇಲ್ಲಿ ಗಿಡಗಂಟೆಗಳು ಬೆಳೆದಿದ್ದರಿಂದ ಹಂದಿ ನಾಯಿಗಳ ತಾಣವಾಗಿದೆ. ಸಾರ್ವಜನಿಕರು ಶೌಚ, ಮೂತ್ರ ಮಾಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಕಟ್ಟಡದಮುಖ್ಯದ್ವಾರಕ್ಕೆ ಗೇಟ್ ಇಲ್ಲದೇ ಇರುವುದರಿಂದ ರಾತ್ರಿ ವೇಳೆ ಮತ್ತು ರಜಾ ದಿನಗಳಲ್ಲಿ ಮುಂಬಾಗಿಲಿನಲ್ಲಿ ಕುಳಿತುಕೊಳ್ಳುವವರು ಎಲೆ ಅಡಿಕೆ, ಗುಟಕಾ ತಿಂದು ಅಲ್ಲಿಯೇ ಉಗುಳಿ ಗಲೀಜು ಮಾಡುತ್ತಾರೆ ಇದು ಓದುಗರಿಗೆ ಇರುಸು ಮುರುಸಾಗಿದೆ. ಇದಕ್ಕೆ ಬಣ್ಣ ಹಚ್ಚಿ ಅನೇಕ ವರ್ಷಗಳು ಗತಿಸಿದ್ದು ಮತ್ತೇ ಸುಣ್ಣ ಬಣ್ಣ ಕಂಡಿಲ್ಲ ಒಟ್ಟಿನಲ್ಲಿ ಈ ವಾಚನಾಲಯ ಕಾಯಲಕ³ಕ್ಕೆ ಕಾದಿದೆ.
ಆದಿಕವಿ ಪಂಪ ಸ್ಮಾರಕದ ಮೂಲ ಕಟ್ಟಡ ಉತ್ತಮ ಸ್ಥಿತಿಯಲ್ಲಿದ್ದರೂ ಓದುಗರ ಸಂಖ್ಯೆಗೆ ಅನುಗುಣವಾಗಿ ಚಿಕ್ಕದಾಗಿದೆ. ಅಲ್ಲದೇ ಹಿಂಭಾಗದ ಕಟ್ಟಡ ಶಿಥಿಲಗೊಂಡಿದ್ದು ಇದ್ದೂ ಇಲ್ಲದಂತಾಗಿದೆ. ಮೂಲ ಕಟ್ಟಡ ಪಂಪನ ಸ್ಮಾರಕವಾಗಿದ್ದು ಇದಕ್ಕೆ ಧಕ್ಕೆಯಾಗದಂತೆ ಮರು ವಿನ್ಯಾಸಗೊಳಿಸಿ ಕಟ್ಟಡಕ್ಕೆ ಕಾಯಕಲ್ಪ ನೀಡಬೇಕಿದೆ.
ಗ್ರಂಥಾಲಯಕ್ಕೆ ನಿತ್ಯ ನೂರಾರು ಓದುಗರು ಬರುತ್ತಾರೆ. ಗ್ರಂಥಾಲಯದ ಸುತ್ತಲಿನ ಪ್ರದೇಶವನ್ನು ಸ್ವತ್ಛಗೊಳಿಸುವಂತೆ ಪುರಸಭೆಗೆ ಮನವಿ ಮಾಡಲಾಗಿದೆ. ಗ್ರಂಥಾಲಯದ ಅಭಿವೃದ್ಧಿಗಾಗಿ ಗ್ರಂಥಾಲಯ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಿ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. – ಎಂ.ಎನ್.ಸುಟಮನಿ, ಗ್ರಂಥಪಾಲಕ
-ಮುಕ್ತಾ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.