ಜನಪದ ಕಲಾಪ್ರಕಾರಗಳ ಉಳಿಸಿ
Team Udayavani, Nov 12, 2019, 4:29 PM IST
ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಹಾಗೂ ಜೈ ಕರ್ನಾಟಕ ಮಾತೆ ಸಾಂಸ್ಕೃತಿಕ ಮತ್ತು ಕಲಾ ಭಜನೆ ಸಂಘ ತಾಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಜಾನಪದ, ತತ್ವಪದ ಗಾಯನ, ಸುಗಮ ಸಂಗೀತ, ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಲಾವಿದ ಮದ್ದೇರಿ ಮುನಿರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಶಿಸುತ್ತಿರುವ ಜಾನಪದ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಬೇಕಾದಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಕಲಾವಿದರು ಇಂತಹ ಕಾರ್ಯ ಕ್ರಮಗಳನ್ನು ಮಾಡುತ್ತಾ ಕಲೆಯನ್ನು ಉಳಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಗ್ರಾಪಂ ಸದಸ್ಯ ಭೂಪತಿಗೌಡ ಅಧ್ಯಕ್ಷತೆ ವಹಿಸಿದ್ದದರು. ಗ್ರಾಪಂ ಸದಸ್ಯ ಬಿ.ಚಿಕ್ಕಮುನೇಗೌಡ, ಮಾಜಿ ಸದಸ್ಯ ಎಂ.ಗೋಪಾಲ್, ಹನುಮೇಗೌಡ, ವೆಲಗಲಬುರ್ರೆ ನಾಗೇಶ್‌ಮೂರ್ತಿ, ಉಪಾಧ್ಯಾಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಮುಳ್ಳಹಳ್ಳಿ ಯೋಗಿ ನಾರೇಯಣ ತಂಡ, ತೊಟಿ ಮಾರುತಿ ತಂಡ, ಚಿಟ್ನಹಳ್ಳಿ ಅಭಯಾಂಜನೇಯ ಸ್ವಾಮಿ ತಂಡ, ವೆಲಗಲಬುರ್ರೆ ಶ್ರೀವೇಣು ಗೋಪಾಲಸ್ವಾಮಿ ತಂಡ, ಚಿಟ್ನಹಳ್ಳಿ ಅಷ್ಟಮೂರ್ತಮ್ಮ ತಂಡ, ಗದ್ದೆಕಣ್ಣೂರು ತಂಡ, ಅಂಕತಟ್ಟಿ ವೇಣುಗೋಪಾಲ ಸ್ವಾಮಿ ತಂಡ, ಎಸ್.ಅಗ್ರಹಾರ ತಂಡ, ಕದರೀಪುರ ತಂಡ, ಆಲೇರಿ ಕೋದಂಡ ರಾಮಸ್ವಾಮಿ ತಂಡ, ಉರಟಿಅಗ್ರಹಾರ ವೇಣುಗೋಪಾಲ ಸ್ವಾಮಿ ತಂಡ, ಜೈಕರ್ನಾಟಕ ಮಾತೆ ಸಾಂಸ್ಕೃತಿಕ ಮತ್ತು ಭಜನೆ ಕಲಾ ಸಂಘ ಅಂಕತಟ್ಟಿ, ಅಂಕತಟ್ಟಿ ಎಂ.ವೆಂಕಟೇಶಪ್ಪ, ತಬಲ ಎನ್. ಗೋಪಾಲಪ್ಪ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.