ಚಳಿಗಾಲದಲ್ಲಿ ಹುಷಾರು…ಯಾವುದು ಉತ್ತಮ…ಯಾವುದನ್ನು ಸೇವಿಸಬಾರದು?

ಅಸ್ತಮಾದಿಂದ ಆರಾಮ ಪಡೆಯಲು...

Team Udayavani, Oct 24, 2020, 5:00 PM IST

qq-2

ಅಸ್ತಮಾ-ಉಸಿರಾಟ ಪ್ರಕ್ರಿಯೆಗೆ ತೊಂದರೆಯುಂಟು ಮಾಡುವ ಸಾಮಾನ್ಯ ಕಾಯಿಲೆ. ಶ್ವಾಸಕೋಶಕ್ಕೆ ಸರಿಯಾಗಿ ಗಾಳಿ ತಲುಪದಂತೆ ಕಫ‌ ಅಡ್ಡಗಟ್ಟಿದ್ದರೆ ಸರಾಗ ಉಸಿರಾಟಕ್ಕೆ ಕಷ್ಟವಾಗುವುದು, ಉಸಿರಾಡುವಾಗ ಸುಯ್‌ ಎಂಬ ಶಬ್ದ ಬರುವುದು, ಮೂಗು ಕಟ್ಟುವುದು, ಕೆಮ್ಮು, ಎದೆಬಿಗಿತ ಮತ್ತು ಆಯಾಸ; ಇವು ಅಸ್ತಮಾದ ಲಕ್ಷಣಗಳು. ಚಳಿಗಾಲದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಅಸ್ತಮಾಕ್ಕೆ, ಆರೋಗ್ಯಕಾರಿ ಜೀವನಶೈಲಿಯೇ ಉತ್ತಮ ಪರಿಹಾರ. ಹೆಚ್ಚುತ್ತಿರುವ ಧೂಳು, ಹೊಗೆ ಮಾಲಿನ್ಯದಿಂದಾಗಿ, ಯಾವ ವಯಸ್ಸಿನವರಲ್ಲಿ ಬೇಕಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಇನ್ನಿತರ ಶ್ವಾಸಕೋಶ ಸಂಬಂಧಿ ರೋಗಗಳೂ ಜೊತೆಯಾಗಬಹುದು.

ಜೀವನಶೈಲಿ: ಅಸ್ತಮಾ ರೋಗಿಗಳು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ, ಯೋಗಾಭ್ಯಾಸ, ದೀರ್ಘ‌ ಉಸಿರಾಟ ಕ್ರಿಯೆ, ಪ್ರಾಣಾಯಾಮ ಮಾಡಿದರೆ ಒಳ್ಳೆಯದು. ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲುವುದರಿಂದ ಶೀತ,ಅಲರ್ಜಿ,ಉಸಿರಾಟದ ತೊಂದರೆಗಳಿಗೆ ವಿರಾಮ ಸಿಗುವುದು.

ಚಳಿಗಾಲದ ಆರೈಕೆ
ಅಸ್ತಮಾದಿಂದ ಬಳಲುವವರು ಚಳಿಗಾಲದಲ್ಲಿ ಬಹಳಷ್ಟು ಎಚ್ಚರ ವಹಿಸಬೇಕು. ದಪ್ಪನೆಯ ಉಣ್ಣೆ ಬಟ್ಟೆಗಳನ್ನು ಧರಿಸಬೇಕು. ಯಾವಾಗಲೂ ಸಾಕÕ… ಹಾಕಿಕೊಂಡು ಪಾದಗಳನ್ನು ಬೆಚ್ಚಗಿರಿಸಬೇಕು. ಹೆಚ್ಚು ಶೀತಗಾಳಿಯಲ್ಲಿ ಸಂಚರಿಸಬಾರದು. ಶೀತ, ಅಲರ್ಜಿಕಾರಕ ಆಹಾರಗಳಿಂದ ಆದಷ್ಟೂ ದೂರವಿರಿ.

ಯಾವುದನ್ನು ಸೇವಿಸಬಾರದು?
ಅತಿ ತಂಪಾದ ಪಾನೀಯ, ಐಸ್‌ಕ್ರೀಮ್, ಚಾಕೊಲೇಟ್‌ಗಳಿಂದ ದೂರವಿದ್ದರೆ ಒಳಿತು. ಇಂಥದ್ದೇ ಆಹಾರ ತಿನ್ನಬೇಕು ಎಂದೇನೂ ಇಲ್ಲ. ವಾರದಲ್ಲಿ ಒಂದು ದಿನವಾದರೂ ಉಪವಾಸ ಮಾಡಿದರೆ ಒಳ್ಳೆಯದು. ಚಯಾಪಚಯ ಕ್ರಿಯೆ ಸರಿ ಇರುವಂತೆ, ಮಲಬದ್ಧತೆ ಆಗದಂತೆ ನೋಡಿಕೊಳ್ಳಬೇಕು.ವಿಟಮಿನ್‌ ಡಿ ಹಾಗೂ ವಿಟಮಿನ್‌ ಸಿ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು.

ಯಾವುದು ಉತ್ತಮ?
-ಜೇನು- ರಾತ್ರಿ ಮಲಗುವ ಮುನ್ನ 1-2 ಚಮಚ ಜೇನು ಸೇವಿಸುವುದು ಅಸ್ತಮಾಕ್ಕೆ ರಾಮಬಾಣ.
-ತುಳಸಿ- ತುಳಸಿ ರಸದೊಂದಿಗೆ ಜೇನು ಮಿಶ್ರಣ ಮಾಡಿ ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಉಸಿರಾಡಲು ಆರಾಮವಾಗುತ್ತದೆ.
-ಶುಂಠಿ- ಒಂದು ಲೋಟ ನೀರಿಗೆ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ ಕುಡಿದರೆ ಎದೆ ಬಿಗಿತ ಕಡಿಮೆಯಾಗುತ್ತದೆ. ತುಳಸಿ ರಸ, ಜೇನು, ಶುಂಠಿ ರಸ ಮಿಶ್ರಣ ಮಾಡಿ ಕುಡಿಯುವುದರಿಂದಲೂ ಕಫ‌ ನಿವಾರಣೆಯಾಗುತ್ತದೆ.
-ಅರಿಶಿನ- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕುದಿಸಿದ ನೀರಿಗೆ ಚಿಟಿಕೆ ಅರಿಶಿನ ಹಾಕಿ ಕುಡಿದರೆ, ರಾತ್ರಿ ಅರಿಶಿನ ಹಾಕಿದ ಹಾಲು ಕುಡಿದರೆ ಶ್ವಾಸ ಸಂಬಂಧಿ ರೋಗಗಳು ಗುಣವಾಗುತ್ತವೆ.
-ಬೆಳ್ಳುಳ್ಳಿ- ಕಾಲು ಗ್ಲಾಸ್‌ ಹಾಲಿಗೆ 4-5 ಬೆಳ್ಳುಳ್ಳಿ ಎಸಳು, ಸ್ವಲ್ಪ ಸಕ್ಕರೆ ಹಾಕಿ ಕುದಿಸಿ ಕುಡಿದರೆ ಶ್ವಾಸಕೋಶದ ಸ್ವತ್ಛ ಕಾರ್ಯ ನಡೆಯುತ್ತದೆ.
-ವೀಳ್ಯದೆಲೆ- ಸಮ ಪ್ರಮಾಣದಲ್ಲಿ ಶುಂಠಿ ರಸ, ಬೆಳ್ಳುಳ್ಳಿ ರಸ ಹಾಗೂ ವೀಳ್ಯದೆಲೆ ರಸವನ್ನು ಮಿಶ್ರಣ ಮಾಡಿ ಸೇವಿಸಿದರೆ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.
– ಮೋಸಂಬಿ, ಲಿಂಬೆ, ಪಪ್ಪಾಯ, ಬಸಳೆ, ಟೊಮೆಟೋ,ಕ್ಯಾರೆಟ…, ಕಿತ್ತಳೆ, ಕಿವಿ, ದ್ರಾಕ್ಷಿ, ಸೀಬೆ ಹಣ್ಣುಗಳು ಸಹ ಶ್ವಾಸಕೋಶದ ಚಟುವಟಿಕೆಗಳನ್ನು ಉತ್ತಮಗೊಳಿಸಿ ಅಸ್ತಮಾವನ್ನು ನಿಯಂತ್ರಿಸುವಲ್ಲಿ ಸಹಕಾರಿ.

-ಡಾ. ಶ್ರೀಲತಾ ಪದ್ಯಾಣ

ಟಾಪ್ ನ್ಯೂಸ್

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

voter

RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್‌: ವಸಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.