ಬಿಸಿಲಿಗೆ ಹಿಂದೇಟು: ಮಧ್ಯಾಹ್ನದ ವೇಳೆ ಮತಗಟ್ಟೆ ಖಾಲಿ ಖಾಲಿ

ಬೆಳಗ್ಗಿನಿಂದ ಸಂಜೆವರೆಗಿನ ಮತದಾರರ ನಾಡಿಮಿಡಿತ; ಸುದಿನ ದಿನವಿಡಿ ಸುತ್ತಾಟ

Team Udayavani, Nov 13, 2019, 5:20 AM IST

qq-28

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ 60 ವಾರ್ಡ್‌ಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದಿದೆ. ಪಾಲಿಕೆ ಚುನಾವಣೆ ಬಗ್ಗೆ ಸಮಗ್ರ ವರದಿ ಪ್ರಕಟ ಮಾಡುತ್ತ ಬಂದಿರುವ “ಉದಯವಾಣಿ-ಸುದಿನ’ವು ಮತದಾನದ ದಿನವೂ ಬಹಳಷ್ಟು ವಾರ್ಡ್‌ ಗಳಲ್ಲಿ ಸುತ್ತಾಟ ನಡೆಸಿ ಇಡೀ ದಿನದ ಬೆಳವಣಿಗಳನ್ನು ಓದುಗರ ಮುಂದಿಡುವ ಪ್ರಯತ್ನವೇ “ಸುದಿನ ದಿನವಿಡಿ ಸುತ್ತಾಟ’. ಆ ಮೂಲಕ, ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಹಲವೆಡೆ ಸುತ್ತಾಡಿ ಪಾಲಿಕೆಯಂತಹ ನಗರಾಡಳಿತ ಚುನಾವಣೆಯಲ್ಲಿ ಮತದಾರರು ಎಷ್ಟೊಂದು ಸಕ್ರಿಯ-ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎನ್ನುವುದನ್ನು ತಿಳಿಯುವ ಜತೆಗೆ ಮತದಾರರ ಆ ಹೊತ್ತಿನ ನಾಡಿಮಿಡಿತ ಅರಿಯುವ ಪ್ರಯತ್ನವಿದು.

ಮತದಾನ: ಮಧ್ಯಾಹ್ನ 12.00 – 03.00

ಮಹಾನಗರ: ಒಂದೆಡೆ ಮಧ್ಯಾಹ್ನದ ಉರಿಬಿಸಿಲು… ಇನ್ನೊಂದೆಡೆ ಊಟದ ಸಮಯ.. ಬಿಸಿಲಿನ ಪ್ರಖರತೆಯಿಂದಾಗಿ ಜನರ ಮತದಾನದ ಉತ್ಸಾಹವೂ ಬಹುತೇಕ ವಾರ್ಡ್‌ಗಳಲ್ಲಿ ತೀರಾ ಕಡಿಮೆಯಾಗಿತ್ತು. ಹೀಗಾಗಿಯೇ ಮಧ್ಯಾಹ್ನದ ವೇಳೆ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ತೀರಾ ವಿರಳವಾಗಿತ್ತು.

ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ “ಸುದಿನ’ ತಂಡ ವಿವಿಧ ವಾರ್ಡ್‌ ಗಳ ಮತಗಟ್ಟೆಗಳಿಗೆ ತೆರಳಿದಾಗ ಕಂಡು ಬಂದಿದ್ದು, ಸರತಿ ಸಾಲಿಲ್ಲದ, ಜನ ಜಂಗುಳಿಯಿಲ್ಲದ, ಖಾಲಿ ಖಾಲಿಯಾದ ಮತಗಟ್ಟೆಗಳು. ಮಧ್ಯಾಹ್ನದ ಸಮಯವಾದ್ದರಿಂದ ಜನರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಬರಬಹುದು ಎಂದು ಮತಗಟ್ಟೆ ಸಿಬಂದಿಗಳನ್ನು ಕೇಳಿದಾಗ ಪ್ರತಿಕ್ರಿಯಿಸಿದರು.

ಮಧ್ಯಾಹ್ನ ನೀರಸ
ಮಧ್ಯಾಹ್ನದ ವೇಳೆಗೆ ನಾವು ಮೊದಲು ಹೋದದ್ದು ಬೆಂಗ್ರೆ ಹಿ.ಪ್ರಾ. ಶಾಲೆಯ ಮತಗಟ್ಟೆಗೆ. ಇಲ್ಲಿ ಅಪರಾಹ್ನ 3 ಗಂಟೆಯ ವೇಳೆಗೆ ಸುಮಾರು ಶೇ.60ರಷ್ಟು ಮತದಾನವಾಗಿತ್ತು. ಬೆಳಗ್ಗೆ ಸ್ವಲ್ಪ ಹೆಚ್ಚು ಮತದಾನವಾಗಿದ್ದು, ಮಧ್ಯಾಹ್ನ ನೀರಸವಾಗಿತ್ತು. ಇಲ್ಲಿನ ಹೆಚ್ಚಿನ ಮತದಾರರು ಬೋಟ್‌ನಲ್ಲಿ ತೆರಳಿರುವುದರಿಂದ ಅವರು ಬರುವುದು ಸಂಜೆಯಾಗುತ್ತದೆ. ಹೀಗಾಗಿ ಸಂಜೆ ವೇಳೆಗೆ ಮತದಾನ ಬಿರುಸು ಪಡೆಯಬಹುದು ಎಂದು ಸ್ಥಳೀಯರು ಹೇಳುತ್ತಾರೆ.ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮತದಾನ ಮಾಡಿ ಬಂದ 80 ವರ್ಷದ ವೃದ್ಧೆ ಜಯಂತಿ ಅವರನ್ನು ಮಾತನಾಡಿಸಿದಾಗ, “ಬೆಳಗ್ಗೆ ಮತದಾನಕ್ಕೆ ಹೋಗಲು ಸಮಯ ಸಿಗಲಿಲ್ಲ. ಹಾಗಾಗಿ ಮಧ್ಯಾಹ್ನ ಮತದಾನ ಮಾಡಿ ಬಂದೆ. ಮನೆಯ ಹತ್ತಿರವೇ ಮತಗಟ್ಟೆ ಇರುವುದರಿಂದ ನಡೆದಾಡಲು ಸಮಸ್ಯೆಯಾಗುವುದಿಲ್ಲ’ ಎಂದರು.

ಬಳಿಕ ಕುದ್ರೋಳಿ ಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿನ ಮತಗಟ್ಟೆಗೆ ಹೋದಾಗ, ಅಲ್ಲಿಯೂ ಮಧ್ಯಾಹ್ನದ ವೇಳೆಗೆ ಮತದಾರರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಕಂಡು ಬಂತು. ಸರತಿ ಸಾಲು ಇಲ್ಲಿರಲಿಲ್ಲ. ಆದರೆ ಇಲ್ಲಿ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಿರುವುದರಿಂದ 3 ಗಂಟೆ ವೇಳೆಗೆ ಮತದಾನ ಪ್ರಮಾಣ ಶೇ. 70 ದಾಟಿತ್ತು. ಮಧ್ಯಾಹ್ನದ ವೇಳೆ ಬಿಸಿಲಿರುವುದರಿಂದ ಮತದಾರರು ಬರಲು ಹಿಂದೇಟು ಹಾಕುತ್ತಾರೆ. ಸಂಜೆ ಇನ್ನೂ ಹೆಚ್ಚಾಗಬಹುದು ಎಂದು ಇಲ್ಲಿನ ಸಿಬಂದಿಗಳು ಹೇಳಿದರು.

ಲೇಡಿಹಿಲ್‌ ವಿಕ್ಟೋರಿಯಾ ಶಾಲೆ, ದೇರೆಬೈಲ್‌ ಹೋಲಿ ಫ್ಯಾಮಿಲಿ ಮತ್ತು ಕೊಟ್ಟಾರ ಸೈಂಟ್‌ ಪೀಟರ್ ಶಾಲೆಗೆ ಹೋದಾಗಲೂ ಮಧ್ಯಾಹ್ನದ ವೇಳೆಯಾದ್ದರಿಂದ ಮತದಾರರ ಸಂಖ್ಯೆ ಕಡಿಮೆ ಇತ್ತು. ಉರಿಬಿಸಿಲಿನ ನಡುವೆಯೂ ಆಗೊಮ್ಮೆ, ಈಗೊಮ್ಮೆ ಮತದಾರರು ಬಂದು ಹೋಗುತ್ತಿದ್ದರು. ಪ್ರತಿ ಚುನಾವಣೆಯ ವೇಳೆಯೂ ಮಧ್ಯಾಹ್ನ ಮತದಾನ ಕಡಿಮೆ ಇರುತ್ತದೆ. ಅಂತೆಯೇ ಈ ಬಾರಿಯೂ ಆಗಿದೆ. ಬೆಳಗ್ಗೆ ಬಿರುಸಿನ ಮತದಾನವಾಗಿದ್ದು, ಅಪರಾಹ್ನ 4 ಗಂಟೆಯ ಬಳಿಕ ಇನ್ನಷ್ಟು ಜನ ಆಗಮಿಸ ಬಹುದು ಎಂದು ಸಿಬಂದಿ ಹೇಳಿದರು.

ಬಂದರು ಶಾಲೆಯಲ್ಲಿರುವ ಮತಗಟ್ಟೆಯ ಲ್ಲಿಯೂ ಮತದಾನಕ್ಕೆ ಸರತಿ ಸಾಲು ಇರಲಿಲ್ಲ. ಇಲ್ಲಿ ಬೆಳಗ್ಗಿನ ಹೊತ್ತು ಬೋಳಾರ ನಿಂಫಾ ಸದನ ವೃದ್ಧಾಶ್ರಮದ 15 ಮಂದಿ ನಿವಾಸಿಗಳು ಮತದಾನ ಮಾಡಿದ್ದ ಹಿನ್ನೆಲೆಯಲ್ಲಿ ನಮ್ಮ ತಂಡವು ನಿಂಫಾ ಸದನಕ್ಕೆ ತೆರಳಿ ಹಿರಿಯ ಮತದಾರರೊಂದಿಗೆ ಮಾತನಾಡುವ ಪ್ರಯತ್ನ ಮಾಡಿತು.

ಹಿರಿಯ ನಾಗರಿಕರಾದ 85 ವರ್ಷದ ಎಲಿಜಾ ಪಾಯಸ್‌ ಅವರಲ್ಲಿ ಮಾತನಾಡಿಸಿದಾಗ, “ನಾನು ಮತದಾನ ಮಾಡುವುದನ್ನು ಯಾವುದೇ ಕಾರಣಕ್ಕೆ ತಪ್ಪಿಸುವುದಿಲ್ಲ. ಮತದಾನ ಮಾಡುವುದು ನಮ್ಮ ಕರ್ತವ್ಯ. ಒಳ್ಳೆಯ ವ್ಯಕ್ತಿ ಆರಿಸಿ ಬಂದಲ್ಲಿ ನಮ್ಮ ನಗರಕ್ಕೆ ಒಳ್ಳೆಯದಾಗುತ್ತದೆ’ ಎಂದರು.

ಇನ್ನೋರ್ವ ಹಿರಿಯ ನಾಗರಿಕ 77 ವರ್ಷದ ವಲೇರಿಯನ್‌ ಕುಲಾಸೋ ಅವರನ್ನು ಮಾತನಾಡಿಸಿದಾಗ, “ನಾನು ಮತದಾನ ಹಾಕಲು ಶುರು ಮಾಡಿದಂದಿನಿಂದ ಇಲ್ಲಿಯವರೆಗೆ ಒಮ್ಮೆಯೂ ಮತದಾನವನ್ನು ತಪ್ಪಿಸಿಲ್ಲ. ಈಗಿನ ಮತದಾರರು ಮತದಾನ ಮಾಡಿ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಬೇಕು’ ಎಂದು ಯುವ ಮತದಾರರಿಗೆ ಮತದಾನದ ಮಹತ್ವ ಹೇಳಿದರು. ಮತದಾನ ಮಾಡುವುದಕ್ಕಾಗಿ ಸಂಸ್ಥೆಯಿಂದ ರಿಕ್ಷಾ ಮತ್ತು ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಬಂದರು ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಇಲ್ಲಿನ ಹಿರಿಯ ನಾಗರಿಕರು ಮತದಾನ ಮಾಡಿದರು.

ಅನಾರೋಗ್ಯವಾದರೂ ಮತದಾನ ಬದ್ಧತೆ
ಕಳೆದ ಲೋಕಸಭಾ ಚುನಾವಣೆ ವೇಳೆ ಮತದಾನ ಮಾಡುವ ಉದ್ದೇಶದಿಂದ ರೋಗಿಗಳು ಮತಕೇಂದ್ರಕ್ಕೆ ತೆರಳಿ ಮತದಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ರೋಗಿಗಳು ತೆರಳಿರಬಹುದೇ ಎಂದು ತಿಳಿದುಕೊಳ್ಳಲು ಸುದಿನ ತಂಡವು ಅತ್ತಾವರ ಕೆಎಂಸಿ ಆಸ್ಪತ್ರೆಗೆ ತೆರಳಿತ್ತು. ಬಳಿಕ ಇಲ್ಲಿನ ಉದ್ಯೋಗಿಗಳಲ್ಲಿ ಕೇಳಿ ದಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೋಪಾಲಕೃಷ್ಣ ಅವರು ಪದುವಾ ಶಾಲೆಯ ಮತ ಗಟ್ಟೆಯಲ್ಲಿ ಹಾಗೂ ಫೆಲಿಕ್ಸ್‌ ಅವರು ಕುಲಶೇಖರ ಮತಗಟ್ಟೆಯಲ್ಲಿ ಮತದಾನ ಮಾಡಿದ್ದ ಬಗ್ಗೆ ತಿಳಿಸಿದರು. ಅನಾರೋಗ್ಯವಿದ್ದರೂ ಮತದಾನ ಮಾಡುವ ಮೂಲಕ ಈ ಇಬ್ಬರು ಮತದಾನ ಮಾಡುವ ಮೂಲಕ ಬದ್ಧತೆ ಪ್ರದರ್ಶಿಸಿದ್ದರು. ಇಬ್ಬರನ್ನೂ ಮನೆಯವರೇ ಮತಗಟ್ಟೆಗೆ ಕರೆದೊಯ್ದಿದ್ದರು.

6.30ಕ್ಕೆ ಮತ ಹಾಕಲು ಬಂದಿದ್ದರು!
ಕುದ್ರೋಳಿ ಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ವೃದ್ಧೆಯೋರ್ವರು ಮತದಾನ ಮಾಡಲು ಬೆಳಗ್ಗೆ 6.30ಕ್ಕೇ ಬಂದಿದ್ದರು. ಆದರೆ ಮತದಾನ ಶುರುವಾಗುವುದು 7 ಗಂಟೆಗೆ ಎಂದು ಸಿಬಂದಿ ಹೇಳಿದ್ದರಿಂದ ತಮ್ಮ ನಿತ್ಯ ಕೆಲಸಕ್ಕೆ ವಾಪಸ್ಸಾದರು. ಬಳಿಕ ಅಪರಾಹ್ನ 3ರ ವೇಳೆಗೆ ಬಂದು ಮತ ಚಲಾಯಿಸಿ ಹೋದರು.

- ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Mangaluru: ಅಪರಿಚಿತ ವ್ಯಕ್ತಿ ಸಾವು

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

POlice

Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.