ಗ್ರಾಪಂ ಚುನಾವಣೆಗೆ ಹಕ್ಕು ಚಲಾವಣೆ
ಕುಂಟೋಜಿಯಲ್ಲಿ ಶೇ. 58.6, ಕವಡಿಮಟ್ಟಿಯಲ್ಲಿ ಶೇ.73.33 ಮತದಾನನಾಳೆ ಮತ ಎಣಿಕೆ
Team Udayavani, Nov 13, 2019, 12:03 PM IST
ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಮತ್ತು ಕವಡಿಮಟ್ಟಿ ಗ್ರಾಪಂಗೆ ವಿವಿಧ ಕಾರಣಗಳಿಂದ ತೆರವಾಗಿದ್ದ ತಲಾ 1 ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಿಸಿದ್ದ ಹಿನ್ನೆಲೆ ಮಂಗಳವಾರ ನಡೆದ ಮತದಾನ ಶಾಂತಿಯುತವಾಗಿತ್ತು.
ಸಿಪಿಐ ಆನಂದ ವಾಗ್ಮೋಡೆ, ಪಿಎಸೈ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಶೀಲ್ದಾರ್ ಜಿ.ಎಸ್. ಮಳಗಿ ಉಸ್ತುವಾರಿಯಲ್ಲಿ ಕುಂಟೋಜಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕ ಬಿ.ಎಸ್. ಲಮಾಣಿ, ಕವಡಿಮಟ್ಟಿಗೆ ತೋಟಗಾರಿಕೆ ಅಧಿಕಾರಿ ವಿನೋದ ನಾಯಕ ಚುನಾವಣಾ ಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ಕುಂಟೋಜಿ ಗ್ರಾಪಂ: ಈ ಗ್ರಾಪಂನ ಕುಂಟೋಜಿ ಗ್ರಾಮದ ವಾರ್ಡ್ 1ರಲ್ಲಿ ಹಿಂದಿನ ಸದಸ್ಯರು ನಿಧನರಾಗಿದ್ದರಿಂದ ಅವರು ಪ್ರತಿನಿಧಿಸುತ್ತಿದ್ದ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಈ ಸ್ಥಾನಕ್ಕೆ ಚಂದ್ರಶೇಖರ ಮಲ್ಲಪ್ಪ ಒಣರೊಟ್ಟಿ ಮತ್ತು ಮಹಾದೇವಿ ಹನುಮಂತ ಹೊಸಮನಿ ಕಣದಲ್ಲಿದ್ದರು. 592 ಗಂಡು, 554 ಹೆಣ್ಣು ಸೇರಿ ಒಟ್ಟು 1146 ಮತದಾರರು ಇದ್ದರು. ಈ ಪೈಕಿ 351 ಗಂಡು, 310 ಹೆಣ್ಣು ಸೇರಿ ಒಟ್ಟು 661 ಮತದಾರರು ಮತ ಚಲಾಯಿಸಿದ್ದಾರೆ. ಮತದಾನ ಪ್ರಮಾಣ ಶೇ. 58.6 ಆಗಿದೆ.
ಕವಡಿಮಟ್ಟಿ ಗ್ರಾಪಂ: ಈ ಗ್ರಾಪಂನ 3ನೇ ವಾರ್ಡ್ ಆಗಿರುವ ಸರೂರ ಗ್ರಾಮದಲ್ಲಿ ಹಿಂದಿನ ಸದಸ್ಯರು ಸರ್ಕಾರಿ ನೌಕರಿ ಹಿನ್ನೆಲೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿತ್ತು.
ಹಿಂದುಳಿದ ವರ್ಗದ ಬ ಪುರುಷ ಮೀಸಲಾತಿಯ ಈ ಸ್ಥಾನಕ್ಕೆ ಪ್ರಕಾಶ ದೊಡ್ಡಪ್ಪ ಹೊಳಿ ಮತ್ತು ಶ್ರೀಶೈಲ ಬಸಪ್ಪ ಹೂಗಾರ ಕಣದಲ್ಲಿದ್ದರು. 313 ಗಂಡು, 279 ಹೆಣ್ಣು ಸೇರಿ ಒಟ್ಟು 592 ಮತದಾರರು ಇದ್ದರು. ಈ ಪೈಕಿ 223 ಗಂಡು, 210 ಹೆಣ್ಣು ಸೇರಿ ಒಟ್ಟು 433 ಮತದಾರರು ಮತ ಚಲಾಯಿಸಿದ್ದಾರೆ. ಮತದಾನ ಪ್ರಮಾಣ ಶೇ.73.31 ಆಗಿದೆ.
ನಾಳೆ ಎಣಿಕೆ: ನ. 14ರಂದು ಬೆಳಗ್ಗೆ 8ರಿಂದ ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಹೊರ ಬೀಳಲಿದೆ ಎಂದು ತಹಶೀಲ್ದಾರ್ ಜಿ.ಎಸ್.ಮಳಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.