ದೇವರ ಹೆಸರಲ್ಲಿ ಬಲಿ ಸಲ್ಲ
Team Udayavani, Nov 13, 2019, 4:43 PM IST
ಗೊರೇಬಾಳ: ದೇವರ ಹೆಸರಿನಲ್ಲಿ ಬಲಿ ಕೊಡುವ ಅನಿಷ್ಠ ಪದ್ಧತಿ ಹಿಂದೂ ಧರ್ಮದ ಕೆಳ ಜಾತಿಗಳಲ್ಲಿ ಮಾತ್ರ ಕಾಣುತ್ತಿದ್ದೇವೆ. ಹಿಂದುಳಿದ ವರ್ಗದವರು ಇಂತಹ ಅನಿಷ್ಠ ಪದ್ಧತಿ ಕೈಬಿಡಬೇಕು ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.
ಗೊರೇಬಾಳ ಗ್ರಾಮದಲ್ಲಿ ನಡೆದ ಕೆಂಚಮ್ಮ, ದುರುಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ಜೀವಿಯಲ್ಲಿ ದೈವದ ಗುಣಗಳಿರುತ್ತವೆ. ಹೀಗಾಗಿ ದೇವರ ಹೆಸರಿನಲ್ಲಿ ಬಲಿ ಕೊಡುವುದು ತರವಲ್ಲ. ತಲೆ-ತಲಾಂತರಗಳಿಂದಲೂ ನಮ್ಮಲ್ಲಿ ಅಂಧಾಚರಣೆಗಳು ನಡೆದುಕೊಂಡು ಬಂದಿವೆ. ಮುಂದುವರಿದ ಸಮಾಜಗಳಲ್ಲಿ ಬಲಿ ಕೊಡುವ ಪದ್ಧತಿಗಳಿಲ್ಲ. ಆದರೆ ಹಿಂದುಳಿದ ಜಾತಿಗಳಲ್ಲಿ ಪ್ರಾಣಿ ಬಲಿ ಕೊಡುವುದನ್ನು ಕಾಣುತ್ತೇವೆ. ಇದು ಬದಲಾಗಬೇಕಾಗಿದೆ. ಇನ್ನೊಂದು ಜೀವಕ್ಕೆ ನೋವು ಕೊಡುವುದು ಅಧರ್ಮವಾಗುತ್ತದೆ. ಯಾವ ದೇವರೂ ಪ್ರಾಣಿ ಬಲಿ ಕೇಳುವುದಿಲ್ಲ. ಇನ್ನೊಬ್ಬರಿಗೆ ನೋವು ಕೊಡದಿರುವುದು ದೇವರಿಗೆ ಸಲ್ಲಿಸುವ ನಿಜವಾದ ಭಕ್ತಿಯಾಗಿದೆ ಎಂದರು.
ಬಂಗಾರಿ ಕ್ಯಾಂಪ್‌ನ ಸಿದ್ದರಾಮ ಶರಣರು ಮಾತನಾಡಿ, ಜಗತ್ತಿನಲ್ಲಿ ದೇವರಿದ್ದಾನೆ. ದೇಹಕ್ಕೆ ಅಳಿವು ಖಚಿತ ಎನ್ನುವುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು. ಜೊತೆಗೆ ನಾವು ಬೇರೆಯವರಿಗೆ ಉಪಕಾರ ಮಾಡಿದ್ದನ್ನು, ನಮಗೆ ಬೇರೆಯವರು ಅಪಕಾರ ಮಾಡಿದ್ದನ್ನು ಮರೆಯಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಕ್ರಿಸ್ತನ ಕರುಣೆ, ಬುದ್ದನ ತ್ಯಾಗ, ಇಸ್ಲಾಂನ ಶಾಂತಿ, ಸಿಖ್‌ರ ಶೌರ್ಯ, ಜೈನರ ಅಹಿಂಸೆ, ಹಿಂದೂಗಳ ಸಹನೆ ಇದೆಲ್ಲವನ್ನು ಹೊಂದಿರುವ ಭಾರತ ಸಹಿಷ್ಣುತೆ ಹೊಂದಿದ ದೇಶವಾಗಿದೆ ಎಂದರು.
ನಾಗಲಿಂಗ ಸ್ವಾಮೀಜಿ, ಎಂ. ರಂಗನಗೌಡ, ಎನ್. ಸಣ್ಣ ಶಿವನಗೌಡ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಮುಖಂಡರಾದ ಎಂ.ರಂಗನಗೌಡ, ಹೊನ್ನೂರಪ್ಪ, ಭವಾನಿ ವೀರೇಶ, ರಂಗನಾಥ ಗೌಡನಬಾವಿ, ಎಚ್.ಎನ್.ಬಡಿಗೇರ, ಅಶೋಕ, ರಮೇಶ, ಹುಲುಗಪ್ಪ, ಅಂಬಣ್ಣ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.