ಮನೆ ಮಾರಾಟಕ್ಕಿಟ್ಟು ಮತ್ತೆ ಸದ್ದು ಮಾಡಿದ ಶ್ರುತಿ ಹರಿಹರನ್!
Team Udayavani, Nov 13, 2019, 7:21 PM IST
ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕೆಲ ಕಾಲಗಳಿಂದ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದ ಶ್ರುತಿ ಮತ್ತೆ ಬಣ್ಣದ ಗುಂಗಿಗೆ ಬೀಳೋದು ಕಷ್ಟವೇನೋ ಎಂಬಂತೆ ಸಾಂಸಾರಿಕ ಬದುಕಿನಲ್ಲಿ ಕಳೆದು ಹೋಗಿದ್ದರು. ಅಂಥಾ ಶ್ರುತಿ ಹರಿಹರನ್ ಇದೀಗ ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ವಿಭಿನ್ನವಾದ ಕಥಾ ಹಂದರ ಮತ್ತು ಅದಕ್ಕೆ ತಕ್ಕುದಾದ ಪಾತ್ರದೊಂದಿಗೆ ಅವರು ಬಹು ಕಾಲದ ನಂತರ ಕನ್ನಡ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ.
ಎಸ್. ವಿ ಬಾಬು ನಿರ್ಮಾಣದ ಈ ಚಿತ್ರದಲ್ಲಿ ಸಾಧು ಕೋಕಿಲಾ, ಕುರಿ ಪ್ರತಾಪ್, ಚಿಕ್ಕಣ್ಣ ಮತ್ತು ರವಿ ಶಂಕರ್ ಗೌಡ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಹಾರರ್ ಕಂ ಕಾಮಿಡಿ ಜಾನರಿನ ಚಿತ್ರವೆಂಬ ಬಗ್ಗೆ ಈಗಾಗಲೇ ಟ್ರೇಲರ್ ಮೂಲಕ ಸುಳಿವು ಜಾಹೀರಾಗಿದೆ. ಇದುವರೆಗೂ ಶೇಶಿರ ಸೇರಿದಂತೆ ಒಂದಷ್ಟು ಭಿನ್ನ ಕಥಾ ಹಂದರದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಂಜು ಸ್ವರಾಜ್ ಪಾಲಿಗಿದು ಅತ್ಯಂತ ಮಹತ್ವದ ಚಿತ್ರ. ಅವರೀ ಬಾರಿ ಸಂಪೂರ್ಣವಾಗಿ ಕಾಮಿಡಿ ಕಥನವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ನಾಯಕಿಯಾಗಿರೋ ಶ್ರುತಿ ಇಲ್ಲಿ ಯಾವ ಥರದ ಪಾತ್ರದಲ್ಲಿ ನಟಿಸಿದ್ದಾರೆಂಬ ಕುತೂಹಲ ಎಲ್ಲರಲ್ಲಿಯೂ ಇದೆ.
ಆದರೆ ಮಂಜು ಸ್ವರಾಜ್ ಈ ಸಿನಿಮಾದ ಪಾತ್ರಗಳ ಚಹರೆಯ ವಿಚಾರದಲ್ಲಿ ತುಂಬಾ ಗೌಪ್ಯತೆ ಕಾಪಾಡಿಕೊಳ್ಳುತ್ತಾ ಬಂದಿದ್ದಾರೆ. ಟ್ರೇಲರ್‌ನಲ್ಲಿ ಎಲ್ಲ ಪಾತ್ರಗಳು ಕಾಣಿಸಿದರೂ ಕೂಡಾ ಅದರ ಗುಣ ಲಕ್ಷಣಗಳು ಹೀಗೆ ಇರುತ್ತದೆಂಬ ಅಂದಾಜು ಯಾರಿಗೂ ಸಿಗದಂಥಾ ಜಾಣ್ಮೆಯನ್ನು ಅವರು ಅನುಸರಿಸುತ್ತಿದ್ದಾರೆ. ಶ್ರುತಿ ಹರಿಹರನ್ ಕೂಡಾ ಇಲ್ಲಿ ನಾನಾ ಶೇಡುಗಳಿರೋ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಅವರಿಲ್ಲಿ ಮಾರಾಟಕ್ಕಿರೋ ಮನೆ ಓನರ್ ಆಗಿ ನಟಿಸಿದ್ದಾರೆಂಬುದರ ಹೊರತಾಗಿ ಬರ‍್ಯಾವ ಸಂಗತಿಗಳನ್ನೂ ಕೂಡಾ ಈವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇದೆಲ್ಲ ರಹಸ್ಯಗಳು ಈ ವಾರವೇ ಬಯಲಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.