ಸಕ್ಕರೆ ಕಾಯಿಲೆ ನಿರ್ಮೂಲನೆಗೆ ಪಣತೊಡೋಣ

ಇಂದು ವಿಶ್ವ ಮಧುಮೇಹ ದಿನ

Team Udayavani, Nov 14, 2019, 4:44 AM IST

vv-3

ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿಗಾಗಿ ನ.14ರಂದು ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತದೆ. ಆನುವಂಶಿಯವಾಗಿ ಹೆಚ್ಚು ಕಾಣಿಸಿಕೊಳ್ಳುವ ಈ ಮಧುಮೇಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಕುಟುಂಬ ಮತ್ತು ಮಧುಮೇಹ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ದಿನಾಚರಣೆಯ ಪ್ರಯುಕ್ತ ವಿವಿಧೆಡೆ ಜಾಗೃತಿ ಜಾಥಾ, ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ ಭಯಾನಕ ರೋಗಗಳಲ್ಲಿ ಒಂದಾಗಿರುವ ಮಧುಮೇಹ (ಡಯಾಬಿ ಟೀಸ್‌)ರೋಗವು ಇಂದು ಯಾವುದೇ ವಯೋಮಾನದವರನ್ನು ಬಿಡದೇ ಕಾಡುತ್ತಿದೆ. ಆನುವಂಶಿಕವಾಗಿ ಈ ರೋಗವು ಹುಟ್ಟೋ ಮಗುವಿನಿಂದ ಹಿಡಿದು ವೃದ್ಧರವರೆಗೆ ಈ ಕಾಯಿಲೆಗೆ ತುತ್ತಾಗಿರುವವರನ್ನು ಕಾಣಬಹುದು.

ದೇಹದಲ್ಲಿ ಗ್ಲುಕೋಸ್‌ ನಿಯಂತ್ರಣ ದೋಷದಿಂದ ಈ ರೋಗ ಕಾಣಿಸಿಕೊಳ್ಳುತ್ತದೆ ಎಂಬುದು ಪ್ರಾಥಮಿಕ ಕಾರಣ. ಇನ್ನು ಒತ್ತಡ ಜೀವನ, ಅಸುರಕ್ಷ ಜೀವನಪದ್ಧತಿಗಳಿಂದ ಡಯಾಬಿಟಿಸ್‌ ಬರುತ್ತದೆ. ಮಧುಮೇಹ ರೋಗವನ್ನು ಸಕ್ಕರೆ ಕಾಯಿಲೆ ಎಂದು ಸರಳವಾಗಿ ಕರೆಯುವುದುಂಟು.

ಮಧುಮೇಹ ರೋಗ ನಿಯಂತ್ರಣ ಮತ್ತು ಜಾಗೃತಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ಎಲ್ಲವೂ ಪ್ರತಿದಿನ ಶ್ರಮಿಸುತ್ತಿವೆ. ವಿಶೇಷ ಜಾಗೃತಿ, ಜಾಥಾ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ವಿಶೇಷ ಕಾಳಜಿ ವಹಿಸಲಾಗುತ್ತದೆ. ಇದಕ್ಕೆ ಪೂರಕವೆಂಬಂತೆ ನ. 14ರಂದು ವಿಶ್ವ ಡಯಾಬಿಟಿಸ್‌ (ವಿಶ್ವ ಮಧುಮೇಹ ದಿನ) ಎಂದು ಆಚರಣೆಯ ಮೂಲಕ ಸಕ್ಕರೆ ಕಾಯಿಲೆ ನಿರ್ಮೂಲನೆಗೆ ಪಣತೊಟ್ಟಿವೆ.

ಸವಿ ನೆನಪಿನ ದಿನ
ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಡಯಾಬಿಟಿಸ್‌ ಫೆಡರೇಶನ್‌ ಸಹಯೋಗದಲ್ಲಿ 1991ರಲ್ಲಿ ಸಕ್ಕರೆ ಕಾಯಿಲೆಯ ನಿವಾರಣೆಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಮಧುಮೇಹ ದಿನವನ್ನು ಆರಂಭಿಸಲಾಯಿತು. ತರುವಾಯ 2006ರಲ್ಲಿ ವಿಶ್ವಸಂಸ್ಥೆಯೂ ಸಕ್ಕರೆ ಕಾಯಿಲೆಗೆ ಮದ್ದಾದ ಇನ್ಸುಲಿನ್‌ನ್ನು ಕಂಡು ಹಿಡಿದ ಸರ್‌ ಫೆಡ್ರಿಕ್‌ ಬ್ಯಾಂಟಿಂಗ್‌ ಅವರ ಜನ್ಮದಿನದ ಸವಿನೆನಪಿಗಾಗಿ ನ. 14ನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲು ಘೋಷಿಸಲಾಯಿತು. ವಿಶ್ವವನ್ನು ಗಾಢವಾಗಿ ಆವರಿಸಿರುವ ಈ ಕಾಯಿಲೆಯ ನಿರ್ಮೂಲನೆಗೆ ಪಣತೊಟ್ಟು ಜಾಗೃತಿ ದಿನವನ್ನಾಗಿ ಆಚರಿಸಲು ಕರೆ ನೀಡಲಾಯಿತು.

ಕುಟುಂಬ ರಕ್ಷಣೆಗೆ ಆದ್ಯತೆ
ವಿಶ್ವ ಮಧುಮೇಹ ದಿನವನ್ನು ವಿಶೇಷ ಲೋಗೋ ಮತ್ತು ಸಂದೇಶದೊಂದಿಗೆ ಪ್ರತಿವರ್ಷ ಆಚರಿಸುತ್ತಿದ್ದು 2019ರ ಈ ದಿನವನ್ನು “ಕುಟುಂಬ ಮತ್ತು ಮಧುಮೇಹ ಕಾಯಿಲೆ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಶೇ. 80ರಷ್ಟು ಆನುವಂಶಿಯವಾಗಿ ಕಾಣಿಸಿಕೊಳ್ಳುವ ಈ ಮಧುಮೇಹ ರೋಗವನ್ನು ಕುಟುಂಬ ಮಟ್ಟದಲ್ಲಿ ಹೇಗೆ ನಿಯಂತ್ರಿಸಬಹುದು ಇದಕ್ಕೆ ಹಾಕಿಕೊಳ್ಳಬಹುದಾದ ಪೂರಕ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಮಧುಮೇಹ ಅನೇಕ ಕಾರಣಗಳಿಂದ ಬರುವಂತಹ ರೋಗ. ಇದು ಆಹಾರ ಪದ್ಧತಿ, ಸರಿಯಾದ ವ್ಯಾಯಾಮದ ಕೊರತೆಗಳಿಂದ ಕಂಡು ಬರುತ್ತವೆ. ಆಧುನಿಕ ಜಗತ್ತಿನ ಒತ್ತಡ, ಮತ್ತು ಅವುಗಳ ನಿಯಂತ್ರಿಸುವಲ್ಲಿ ಆಗುವ ಕೊರತೆಯಿಂದ ಈ ರೋಗ ಇನ್ನು ಉಲ್ಬಣಿಸುತ್ತದೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ಜೀವನ ಶೈಲಿ. ಆದ್ದರಿಂದ ಆದಷ್ಟು ಅದನ್ನು ಮೊದಲು ಸರಿ ಮಾಡಿಕೊಳ್ಳಬೇಕು. ವೈದ್ಯಕೀಯವಾಗಿ ಈ ರೋಗಕ್ಕೆ ಹಲವು ಔಷಧಗಳಿದ್ದರೂ ಕೂಡ ಪ್ರಾಣಾಯಾಮ, ಯೋಗ, ಧ್ಯಾನದ ಅಭ್ಯಾಸಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸೂಕ್ತವಾದ ರೀತಿಯಲ್ಲಿ ಅದನ್ನು ಮರೆಯದರೆ ಮಾಡಬೇಕು ಆಗ ಮಧುಮೇಹ ಎಂಬ ರೋಗ ನಿಮ್ಮಿಂದಲೇ ನಿಯಂತ್ರಿಸಲ್ಪಡುತ್ತದೆ. ಆದರೆ ಇದನ್ನು ನಿರಂತರವಾಗಿ ಮಾಡಬೇಕು. ಇಲ್ಲವಾದಲ್ಲಿ ಇದರ ಫ‌ಲ ನಿಮಗೆ ದೊರಕುವುದು ತುಂಬಾ ಕಷ್ಟ. ಸಾಧ್ಯವಾದಷ್ಟು ಒಂದೇ ಸಮಯದಲ್ಲಿ ಅದನ್ನು ಅಭ್ಯಸಿಸಲು ಪ್ರಯತ್ನಿಸಬೇಕು. ನಿಮ್ಮ ದಿನ ನಿತ್ಯದ ಕೆಲಸಕ್ಕೆ ಅನುಗುಣವಾಗಿ ಬೆಳಗ್ಗೆ ಅಥವಾ ಸಂಜೆ ಒಂದು ಸಮಯವನ್ನು ಅದಕ್ಕೆಂದು ಮೀಸಲಿರಿಸಿರಿ. ಆ ಸಮಯವನ್ನು ನಿಷ್ಠೆಯಿಂದ ಪಾಲಿಸಿರಿ.

ಮಧುಮೇಹ ವಿವಿಧ ದೇಶಗಳಲ್ಲಿ
·  ಚೀನ ದೇಶದಲ್ಲಿ ಅತೀ ಹೆಚ್ಚು ಮಧುಮೇಹ ರೋಗಿಗಳಿದ್ದಾರೆ (114 ಮಿ).
·  ವಿಶ್ವದಲ್ಲಿ ಪ್ರತಿ ವರ್ಷ 1.6 ಮಿಲಿಯನ್‌ ಜನರು ಡಯಾಬಿಟೀಸ್‌ ರೋಗದಿಂದ ಮೃತಪಡುತ್ತಿದ್ದಾರೆ. 422 ಮಿಲಿಯನ್‌ ಜನರು ಡಯಾಬಿಟೀಸ್‌ ರೋಗದಿಂದ ಬಳಲುತ್ತಿದ್ದಾರೆ.
·  ಭಾರತದಲ್ಲಿ 69.2 ಮಿಲೀಯನ್‌ನಷ್ಟು ಜನರಿಗೆ ಡಯಾಬಿಟೀಸ್‌ ರೋಗವಿದೆ.
·  ಕೇರಳದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳಿದ್ದಾರೆ. ಶೇಕಡಾ 19.2 ಜನರಿಗೆ ಈ ರೋಗವಿದೆ.ಚಂಡೀಗಢ್‌ ಹಾಗೂ ತಮಿಳು ನಾಡುಗಳು ಅನಂತರದ ಸ್ಥಾನದಲ್ಲಿವೆ. ಅಲ್ಲಿ ಕ್ರಮವಾಗಿ ಶೇಕಡಾ 13.6 ಹಾಗೂ ಶೇಕಡಾ 10 ಜನರಿಗೆ ಮಧುಮೇಹವಿದೆ.
·  ಡಯಾಬಿಟೀಸ್‌ ರೋಗದಿಂದ ಮೃತಪಡುವವರ ಸಂಖ್ಯೆಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ.

ಮಧುಮೇಹಕ್ಕೆ ಕಾರಣಗಳು
1 ಅಶಿಸ್ತು ಜೀವನ ಕ್ರಮದಿಂದ ಸಕ್ಕರೆ ಕಾಯಿಲೆ ಉಂಟಾಗುತ್ತದೆ.
2 ಜೀವನ ಶೈಲಿಯಲ್ಲಿ ಆಗುವ ಬದಲಾವಣೆ.
3 ನಿಯಮಿತ ವ್ಯಾಯಾಮ ಇಲ್ಲದಿರುವುದು
4 ಮಾನಸಿಕ ಒತ್ತಡ, ಅಧಿಕ ರಕ್ತಡೊತ್ತಡ
5 ದೇಹದಲ್ಲಿರುವ ಇನ್ಸುಲಿನ್‌, ಹಾರ್ಮೋನುನಲ್ಲಿ ಆಗುವ ಬದಲಾವಣೆಯಿಂದಾಗಿಯೂ ಸಕ್ಕರೆ ಕಾಯಿಲೆ ಬರಬಹುದು.
6 ಆನುವಂಶಿಕವಾಗಿ
7 ರಕ್ತದಲ್ಲಿರುವ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚು- ಕಡಿಮೆ ಆದರೂ ಮಧುಮೇಹ ಬರುತ್ತದೆ.
8 ಸ್ಪೀರಾಯ್ಡ, ಅಧಿಕ ರಕ್ತ ದೊತ್ತಡದ ಔಷಧಗಳ ಸೇವನೆ.
9 ಧೂಮಪಾನ, ಮಧ್ಯಪಾನ
10 ಅತಿಯಾದ ತೂಕ, ಶ್ರಮವಿಲ್ಲದ ಜೀವನ
11 ಅಧಿಕ ಕೊಬ್ಬಿನ ಅಂಶವಿರುವ ಪದಾರ್ಥ ಮತ್ತು ಕುರುಕಲು ತಿಂಡಿ ಸೇವನೆ

ರೋಗ ನಿಯಂತ್ರಣ ಸಾಧ್ಯ
ಡಯಾಬಿಟೀಸ್‌ ಇತ್ತೀಚೆಗೆ ಅಧಿಕ ವಾಗುತ್ತಿದೆ. ಅದರಲ್ಲಿ ಎರಡು ವಿಧವಿದೆ ಟೈಪ್‌1 ಮತ್ತು 2. ಟೈಪ್‌ 2 ಡಯಾಬಿಟಿಸ್‌ 40ರ ಅನಂತರ ಕಾಣಿಸಿಕೊಳ್ಳುತ್ತದೆ. ಟೈಪ್‌ 1 ಡಯಾಬಿಟೀಸ್‌ ಅತೀ ಚಿಕ್ಕ ಪ್ರಾಯದಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ಟೈಪ್‌ 1 ಡಯಾಬಿಟಿಸ್‌ ರೋಗ ಅಧಿಕವಾಗುತ್ತಿದೆ. ಶರೀರದಲ್ಲಿ ಇನ್ಸುಲಿನ್‌ ಉತ್ಪಾದನೆ ಇಲ್ಲದಿರುವುದರಿಂದ ಸಣ್ಣ ಪ್ರಾಯದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಮುಖವಾಗಿ ಮಾಡುವ ಸಾಧ್ಯತೆ ಕಡಿಮೆಯಿದ್ದರೂ ನಿಯಂತ್ರಣದಲ್ಲಿಡಬಹುದು. ನಿಯಮಿತ ಆಹಾರ ಸೇವನೆ, ಯೋಗ, ಧ್ಯಾನಗಳನ್ನು ಮಾಡುವುದರ ಮೂಲಕ ನಿಯಂತ್ರಿಸಬಹುದು. ಜೀವನ ಶೈಲಿಯ ಬದಲಾವಣೆ, ಆಹಾರ ಕ್ರಮ, ಬೊಜ್ಜುತನ ಮೊದಲಾದವುಗಳಿಂದ ಮಧುಮೇಹ ಬರುತ್ತದೆ. ವಂಶ ಪಾರಂಪರಿಕವಾಗಿಯೂ ಈ ರೋಗ ಬರುತ್ತದೆ. ರೋಗದ ಬಗ್ಗೆ ಹೆಚ್ಚು ಒತ್ತಡ ತೆಗೆದುಕೊಳ್ಳದೆ ಔಷಧಗಳನ್ನು ಕ್ರಮವಾಗಿ ತೆಗೆದುಕೊಂಡು ಆಹಾರ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ ಮಧುಮೇಹದ ಅಪಾಯದಿಂದ ಪಾರಾಗಬಹುದು.
 - ಡಾ| ಅರುಣ್‌ ಎಸ್‌. ಅಸೋಸಿಯೇಟ್‌ ಪ್ರೊಫೆಸರ್‌ ಮೆಡಿಸಿನ್‌ ವಿಭಾಗ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ

ಆಶ್ಚರ್ಯಕರ ಸಂಗತಿಗಳು
·  2045ರಲ್ಲಿ 134 ಮಿಲಿಯನ್‌ ಮಧುಮೇಹಿಗಳನ್ನು ಭಾರತ ಹೊಂದಲಿದೆ.
·  ಆಗ್ನೇಯ ಏಷ್ಯಾ ದೇಶಗಳಲ್ಲಿ 2017ರಲ್ಲಿ 6 ಲಕ್ಷ ಜನ ಮಧು ಮೇಹದಿಂದ ಸಾವನ್ನಪ್ಪಿದ್ದಾರೆ
·  727 ಬಿ. ಡಾಲರ್‌ ಜಗತ್ತಿನಾದ್ಯಂತ ರೋಗಿಗಳು ವ್ಯಯಿಸಿದ ಹಣ (ವರ್ಷಕ್ಕೆ)
·  ಅಭಿವೃದ್ಧಿಶೀಲ ದೇಶಗಳಲ್ಲಿ ಮಧುಮೇಹಿಗಳ ಪ್ರಮಾಣ ಹೆಚ್ಚು
·  ಕುರುಡುತನ, ಅಂಗ ಛೇದನ, ಕಿಡ್ನಿ ವಿಫ‌ಲತೆಗೆ ಕಾರಣ

ಸೇವಿಸಬಹುದಾದ ಆಹಾರ ಪದಾರ್ಥಗಳು
1. ಸೊಪ್ಪು -ತರಕಾರಿ
2. ದಾಲಿcನ್ನಿ
3. ಮೊಟ್ಟೆ
4. ಚೀಯಾ ಬೀಜಗಳು
5. ಅರಿಶಿನ
6. ಗ್ರೀಕ್‌ ಮೊಸರು
7. ಕೋಸುಗಡ್ಡೆ
8. ಅಗಸೆಬೀಜಗಳು
9. ಸ್ಟ್ರಾಬೆರಿ
10.ಬೆಳ್ಳುಳ್ಳಿ
11.ಗೋಧಿ ಪದಾರ್ಥ
12. ಆಲಿವ್‌ ಎಣ್ಣೆ

ವಿಶೇಷ ಲೋಗೋ
ನೀಲಿ ಬಣ್ಣದ ವೃತ್ತ ಆಕಾರವು (ಬ್ಲೂಜೀರೋ ಸರ್ಕಲ್‌) ಇದು ವಿಶ್ವ ಮಧುಮೇಹಿಗಳನ್ನು ಸೂಚಿಸುವ ಸಂಕೇತವಾಗಿದೆ. ನೀಲಿ ಬಣ್ಣದ ವೃತ್ತ ಆಕಾರವನ್ನು ಲೋಗೋವನ್ನಾಗಿ ಬಳಸಿ ಕೊಂಡು ಈ ದಿನದಂದು ವಿಶ್ವಾದ್ಯಂತ ಜಾಗೃತಿ ಮೂಡಿಸಲಾಗುತ್ತದೆ.

ಯೋಗ ಮದ್ದು
ಮಧುಮೇಹ ಎಂದಾಕ್ಷಣ ಒಂದು ಸಲ ಭಯವಾಗುತ್ತದೆ. ಮಾನವ ಸಂಕುಲದಲ್ಲಿ ಅತಿಯಾಗಿ ಕಾಡುತ್ತಿರುವ ರೋಗಗಳಲ್ಲಿ ಇದು ಒಂದು. ಇದನ್ನು ತಡೆಯಲು ಅನೇಕ ರೀತಿಯ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ ಅದಲ್ಲದೆ ನಾವು ಮನೆಯಲ್ಲಿ ಕುಳಿತು ಈ ರೋಗವನ್ನು ಆದಷ್ಟು ಕಡಿಮೆ ಮಾಡಲು ಹಲವು ವಿಧಾನಗಳಿವೆ ಅದರಲ್ಲಿ ಯೋಗ ಅತ್ಯಂತ ಸಹಕಾರಿಯಾದ ಒಂದು ವಿಧಾನ. ಯೋಗದ ಯಾವ ಆಸನಗಳನ್ನು ಮಾಡಿದರೆ ಈ ರೋಗವನ್ನು ತಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಕಪಾಲಭಾತಿ ಪ್ರಾಣಾಯಾಮ
ಕಪಾಲಭಾತಿ ಉಸಿರಾಟದ ಪ್ರಕ್ರಿಯೆ ನರವ್ಯವಸ್ಥೆಯನ್ನು ಶಕ್ತಿಯುತವಾಗಿಸುತ್ತದೆ. ಮೆದುಳಿನ ಕೋಶಗಳನ್ನು ಪುನರುಜ್ಜೀ ವನಗೊಳಿಸುತ್ತದೆ. ಮಧುಮೇಹಿಗಳಿಗೆ ಇದು ಸಹಕಾರಿ.

ಸುಪ್ತ ಮತ್ಸೆದ್ರಿಯಾಸನ
ಅಂಗಾತವಾಗಿ ಮಲಗಿ ದೇಹವನ್ನು ತಿರುಚಿದಾಗ ಹೊಟ್ಟೆಯ ಭಾಗಕ್ಕೆ ಒತ್ತಡ ನೀಡುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಲಿತವಾಗುತ್ತದೆ.

ಧನುರಾಸನ
ಧನಸ್ಸಿನ ಭಂಗಿಯಲ್ಲಿ ದೇಹ ಮಾಡಿಕೊಳ್ಳಬೇಕು. ಇದು ಮಧುಮೇಹಿಗಳಿಗೆ ಒಳ್ಳೆಯ ಆಸನವಾಗಿದ್ದು ಇದರಿಂದ ಹೊಟ್ಟೆಯ ಸ್ನಾಯುಗಳು ಬಲಿಷ್ಠವಾಗುವುದಲ್ಲದೆ, ದಣಿವು, ಒತ್ತಡವನ್ನು ನಿಭಾಯಿಸುತ್ತದೆ.

ಪಶ್ಚಿಮೋತ್ತಾನಾಸನ
2 ಕಾಲುಗಳನ್ನು ಮುಂದಕ್ಕೆ ಚಾಚಿ ಹೊಟ್ಟೆಯ ಭಾಗ ವನ್ನು ನಿಧಾನಕ್ಕೆ ತಿರುಗಿಸಬೇಕು. ಈ ಯೋಗವು ದೇಹದಲ್ಲಿ ಸಮತೋಲನವನ್ನು ಉಂಟು ಮಾಡುತ್ತದೆ.

ಶವಾಸನ
ಕೊನೆಯ ವಿಶ್ರಾಂತಿ ಭಂಗಿಯೆಂದರೆ ಶವಾಸನ. ಕೈಕಾಲು ಅಂಗಾತ ಚಾಚಿ ಮಲಗಿದ ಭಂಗಿಯಿಂದ ನಿಧಾನವಾಗಿ ಸುದೀರ್ಘ‌ವಾಗಿ ಉಸಿರಾಡಬೇಕು. ಇದು ದೇಹವನ್ನು ಆಳವಾದ ಧಾನ್ಯದ ಸ್ಥಿತಿಗೆ ಕರೆದೊಯ್ಯತ್ತದೆ. ಇದು ದೇಹಕ್ಕೆ ವಿಶ್ರಾಂತಿಯನ್ನು ಉಂಟುಮಾಡುತ್ತದೆ.

-  ಶಿವ ಸ್ಥಾವರಮಠ, ಪ್ರೀತಿ ಭಟ್‌, ಸುಶ್ಮಿತಾ ಶೆಟ್ಟಿ, ಧನ್ಯಾಶ್ರೀ, ಶಿವಾನಂದ ಎಚ್‌.
ನಿರ್ವಹಣೆ: ಮಂಗಳೂರು ಡೆಸ್ಕ್

 

ಟಾಪ್ ನ್ಯೂಸ್

Train

Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ

Covid test

HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ

Kalaburagi-BJP-Protest

Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

1-vit-22

Dakshina Kannada; ಆರು ತಿಂಗಳ ಅಂತರದಲ್ಲಿ ಮತ್ತೊಂದು ದೊಡ್ಡ ದರೋಡೆ

1-nity

Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

HDK

Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ

1-vvv

ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್‌’ನಲ್ಲಿ ಪಲಿಮಾರು ಶ್ರೀ ಅಭಿಮತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

Train

Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ

Covid test

HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.