ಅಚ್ಲಾಡಿ: ಗಾಯಗೊಂಡ ಬೃಹತ್ ಗಾತ್ರದ ಚಿರತೆ ಸೆರೆ
Team Udayavani, Nov 14, 2019, 5:47 AM IST
ಕೋಟ: ಗಾಯಗೊಂಡ ಬೃಹತ್ ಗಾತ್ರದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳ ಮೂಲಕ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟ ಘಟನೆ ನ.12ರಂದು ಅಚ್ಲಾಡಿಯ ಮಧುವನದಲ್ಲಿ ನಡೆದಿದೆ.
ಇಲ್ಲಿನ ಭೋಜು ಅಮೀನ್ ಅವರ ಸಮೀಪ ಹಾಡಿಯೊಂದರಲ್ಲಿ ಬೆಳಗ್ಗೆ ಚಿರತೆ ಪತ್ತೆಯಾಗಿದ್ದು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಯವರಿಗೆ ಸುದ್ದಿಮಟ್ಟಿಸಿದರು.
ಅನಂತರ ಜನರನ್ನು ನೋಡಿ ಬೆದರಿ ಚಿರತೆ ಹತ್ತಿರದ ರಸ್ತೆಯ ಮೋರಿಯೊಂದರಲ್ಲಿ ಅಡಗಿಕೊಂಡಿತು. ಅರಣ್ಯಾಧಿಕಾರಗಳು ಸ್ಥಳಕ್ಕಾಗಮಿಸಿ ಮೋರಿಯ ಒಂದು ಕಡೆ ಬಂದ್ ಮಾಡಿ ಮತ್ತೂಂದು ಕಡೆಗೆ ಬಲೆ ಹಾಗೂ ಬೋನ್ ಅಳವಡಿಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಸಫಲರಾದರು.
ಈ ಸಂದರ್ಭ ಸ್ಥಳೀಯ ನೂರಾರು ಮಂದಿ ಕುತೂಹಲದಿಂದ ಚಿರತೆ ಆಪರೇಶನ್ ಕಣ್ತುಂಬಿಕೊಂಡರು. ಉಡುಪಿ ಉಪವಲಯಾರಣ್ಯಾಧಿಕಾರಿ ಗುರುರಾಜ್, ಬ್ರಹ್ಮಾವರ ಉಪ ವಲಯಾಧಿಕಾರಿ ಜೀವನ್ ಶೆಟ್ಟಿ, ಸಿಬಂದಿಶಿವಪ್ಪ, ದೇವರಾಜ್ ಪಾಣ, ಸುರೇಶ್, ಪರಶುರಾಮ, ಜೀಪ್ ಚಾಲಕ ಜ್ವಾಯ್, ಸಾೖಬ್ರಕಟ್ಟೆಯ ಪಶು ವೈದ್ಯ ಪ್ರದೀಪ್ ಕುಮಾರ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾದರು.
ಸ್ಥಳೀಯರು ಕೂಡ ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.