ಕಾಯಕಲ್ಪಕ್ಕೆ ಕಾಯುತ್ತಿದೆ ಸಹಕಾರಿ ರಂಗ
ಜಿಲ್ಲೆಯ ಸಹಕಾರಿ ಸಂಘಗಳ ಸ್ಥಿತಿ ಅಷ್ಟಕ್ಕಷ್ಟೇಶೇ.60 ಸಂಘಗಳು ಮಾತ್ರ ಲಾಭದಾಯಕ
Team Udayavani, Nov 14, 2019, 5:20 PM IST
ಎಚ್.ಕೆ. ನಟರಾಜ
ಹಾವೇರಿ: ಜಿಲ್ಲೆಯ ಸಹಕಾರಿ ರಂಗ ಅತ್ತ ಉತ್ತುಂಗಕ್ಕೂ ಏರದೆ, ಇತ್ತ ಪಾತಾಳಕ್ಕೂ ಕುಸಿಯದೇ ಮಧ್ಯಮ ಸ್ಥಿತಿಯಲ್ಲಿ ನಡೆದುಕೊಂಡು ಬರುತ್ತಿದೆ. ಪ್ರಸ್ತುತ “ಸಮಾಧಾನಕರ’ ಎಂಬಂತಹ ಸ್ಥಿತಿಯಲ್ಲಿರುವ ಸಹಕಾರಿ ರಂಗ ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಜಿಲ್ಲೆಯಲ್ಲಿರುವ ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿ ಅಷ್ಟಾಗಿ ಚೆನ್ನಾಗಿಲ್ಲ. ಶೇ.60 ಸಂಘಗಳು ಮಾತ್ರ ಒಂದಿಷ್ಟು ಲಾಭದಲ್ಲಿದ್ದು, ಶೇ.40 ಸಂಘಗಳು ನಷ್ಟದ ಹಾದಿಯಲ್ಲಿವೆ. ಜಿಲ್ಲೆಯಲ್ಲಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ, ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಂಖ್ಯೆಯೇ ಅಧಿ ಕವಾಗಿದ್ದು,ಇವು ಜಿಲ್ಲೆಯ ಸಹಕಾರಿ ರಂಗದ ಜೀವಾಳವಾಗಿವೆ.
ಹಾವೇರಿ ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದ ಬಳಿಕ ಜಿಲ್ಲೆಯ ಸಹಕಾರಿ ರಂಗದ ಅಭಿವೃದ್ಧಿಗೆ ಅಗತ್ಯ ಕಾರ್ಯಗಳು ನಡೆದಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ ಎನ್ನದೇ ವಿಧಿಯಿಲ್ಲ. ಜಿಲ್ಲೆ ರೂಪುಗೊಂಡ ಆರಂಭದಲ್ಲಿಯೇ ಸಹಕಾರಿ ರಂಗಕ್ಕೆ ಜೀವ ತುಂಬಬಹುದಾದ ಪ್ರತ್ಯೇಕ ಹಾಲು ಒಕ್ಕೂಟ, ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಬೇಕಿತ್ತು. ಆದರೆ ಜಿಲ್ಲೆಯಾಗಿ 22 ವರ್ಷಗಳಾದರೂ ಬೇಡಿಕೆ ಈಡೇರದೇ ಇರುವುದು ದುರ್ದೈವ ಸಂಗತಿ.
ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಆಗಿದ್ದರೆ ಸಹಕಾರಿ ಸಂಘಗಳಿಗೆ ಹೆಚ್ಚು ಆರ್ಥಿಕ ಬಲ ಸಿಗುತ್ತಿತ್ತು. ಇನ್ನು ಪ್ರತ್ಯೇಕ ಹಾಲು ಒಕ್ಕೂಟ ಆಗಿದ್ದರೆ ಹಾಲು ಉತ್ಪನ್ನ ಸಹಕಾರಿ ಸಂಘಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಾಧ್ಯವಾಗುತ್ತಿತ್ತು. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸುತ್ತ ಬಂದಿವೆ. ಆದರೆ ಈಡೇರಿಸುವ ಗೋಜಿಗೆ ಯಾರೂ ಹೋಗಿಲ್ಲ.
ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಒಟ್ಟು 1237 ಸಹಕಾರಿ ಸಂಘಗಳಿದ್ದು, ಇವುಗಳಲ್ಲಿ 1120 ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 84 ಸಂಘಗಳು ಮುಚ್ಚಿದ್ದು 33 ಸಂಘಗಳು ತಾತ್ಕಾಲಿಕವಾಗಿ ತಮ್ಮ ಕಾರ್ಯ ಸ್ಥಗಿತಗೊಳಿಸಿವೆ. ಇವುಗಳಲ್ಲಿ 234 ಸೌಹಾರ್ದ ಸಹಕಾರ ಸಂಘಗಳು ಇವೆ. ಹಾವೇರಿ ತಾಲೂಕಿನಲ್ಲಿ 175, ಬ್ಯಾಡಗಿ ತಾಲೂಕಿನಲ್ಲಿ 85, ಹಿರೇಕೆರೂರು ತಾಲೂಕಿನಲ್ಲಿ 116, ರಾಣಿಬೆನ್ನೂರು ತಾಲೂಕಿನಲ್ಲಿ 274, ರಟ್ಟಿಹಳ್ಳಿ ತಾಲೂಕಿನಲ್ಲಿ 86, ಸವಣೂರು ತಾಲೂಕಿನಲ್ಲಿ 97, ಶಿಗ್ಗಾವಿ ತಾಲೂಕಿನಲ್ಲಿ 114, ಹಾನಗಲ್ಲ ತಾಲೂಕಿನಲ್ಲಿ 173 ಹೀಗೆ ಜಿಲ್ಲೆಯಲ್ಲಿ ಒಟ್ಟು 1120 ಸಹಕಾರ ಸಂಘಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ.
ಇವುಗಳಲ್ಲಿ ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ನಡೆಸುವ 24 ಸಂಘಗಳು, ಮಹಿಳೆಯರು ನಡೆಸುವ 134 ಸಂಘಗಳು ಇವೆ. ರಾಜ್ಯ ಹಾಗೂ ಜಿಲ್ಲಾ ವ್ಯಾಪ್ತಿಯ ಸಂಘಗಳು ತಲಾ ಒಂದೊಂದು ಇದ್ದರೆ, ತಾಲೂಕು ಮಟ್ಟಕ್ಕಿಂತ ಕೆಳಗಿನ ವ್ಯಾಪ್ತಿಯ ಸಂಘಗಳ ಸಂಖ್ಯೆಯೇ ಅಧಿಕವಾಗಿವೆ. ಅವು 1118 ಇವೆ.
272 ಸಂಘಗಳು ನಷ್ಟದಲ್ಲಿ: ಜಿಲ್ಲೆಯ ಏಕೈಕ ಹಾಗೂ ದೊಡ್ಡ ಸಹಕಾರಿ ಸಂಘವಾದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಅದು ಈಗ ಸಹಕಾರಿಗಳ ಕೈ ತಪ್ಪಿ ಗುತ್ತಿಗೆದಾರರಿಂದ ನಿರ್ವಹಿಸಲ್ಪಡುತ್ತಿದೆ. ಜಿಲ್ಲೆಯ ಒಟ್ಟು 1237 ಸಹಕಾರಿ ಸಂಘಗಳಲ್ಲಿ 836 ಸಂಘಗಳು ಲಾಭದಲ್ಲಿದ್ದು, 272 ಸಂಘಗಳು ನಷ್ಟದಲ್ಲಿವೆ. ಇನ್ನು 89ಸಹಕಾರ ಸಂಘಗಳು ಲಾಭ-ನಷ್ಟವಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ. ಲೆಕ್ಕಪರಿಶೋಧನಾ ವರ್ಗೀಕರಣ ಪ್ರಕಾರ ನೋಡುವುದಾದರೆ “ಎ’ ವರ್ಗೀಕರಣದಲ್ಲಿ 61 ಸಂಘಗಳು, “ಬಿ’ ವರ್ಗೀಕರಣದಲ್ಲಿ 150 ಸಂಘಗಳು, “ಸಿ’ ವರ್ಗೀಕರಣದಲ್ಲಿ 836 ಸಂಘಗಳು, “ಡಿ’ ವರ್ಗೀಕರಣದಲ್ಲಿ 101 ಸಂಘಗಳು, “ಇ’ ವರ್ಗೀಕರಣದಲ್ಲಿ 89 ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಜಿಲ್ಲೆಯ ಸಹಕಾರ ರಂಗ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೇ ಇದ್ದರೂ ಕೊಂಚ ಸಮಾಧಾನ ಮೂಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.