ಕೆಂದೂಳಿನಿಂದ ಹದಗೆಟ್ಟ ನಗರದ ಜನರ ಪರಿಸ್ಥಿತಿ

ತಿಪಟೂರಿನಲ್ಲಿ ಯುಜಿಡಿ, ಕುಡಿಯುವ ನೀರು ಸರಬರಾಜು ಯೋಜನೆ ಅವೈಜ್ಞಾನಿಕ ಅನುಷ್ಠಾನ 

Team Udayavani, Nov 14, 2019, 6:24 PM IST

14-November-29

ಬಿ. ರಂಗಸ್ವಾಮಿ
ತಿಪಟೂರು: ಯುಜಿಡಿ ಕಾಮಗಾರಿ, 24×7 ಕುಡಿಯುವ ನೀರು ಸರಬರಾಜು ಯೋಜನೆಗಳ ಅವೈಜ್ಞಾ ನಿಕ ಅನುಷ್ಠಾನದಿಂದ ನಗರದ ಗೋವಿನಪುರ ರಸ್ತೆ ಸೇರಿ ಸಾಕಷ್ಟು ರಸ್ತೆಗಳ ಸುತ್ತಲಿನ ಪ್ರದೇಶ ದೂಳು ಮಯವಾಗಿದೆ. ಕೆಂದೂಳಿನಿಂದ ನಿವಾಸಿಗಳು, ವ್ಯಾಪಾರಿಗಳು ಕೆಮ್ಮು, ಗಂಟಲು ನೋವು ಮತ್ತಿತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಪಿಡಬ್ಲ್ಯೂ ಡಿ ಇಲಾಖೆ ಸೇರಿ ನಗರಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಡಾಂಬರು ರಸ್ತೆಗಳನ್ನೆಲ್ಲಾ ಅಗೆದು ಹಾಳು ಮಾಡಿರುವುದರಿಂದ ವಾಹನಗಳು ಓಡಾಡುವಾಗ ಮುಗಿಲೆತ್ತರಕ್ಕೆ ದೂಳು ಮೇಲೇಳುತ್ತದೆ. ಸವಾರರಂತೂ ವಾಹನ ಚಲಾಯಿಸಲು ಸುಸ್ತೆದ್ದು ಹೋಗುವಂತ ಪರಿಸ್ಥಿತಿ ಇದೆ. ಜೊತೆಗೆ ರಸ್ತೆ ಎಲ್ಲಾ ಗುಂಡಿ ಗೊಟರು ಗಳಾಗಿದ್ದು, ವಾಹನ ಸವಾರರಂತೂ ಶಾಪ ಹಾಕಿ ಕೊಂಡೇ ಓಡಾಡುವಂತಾಗಿದೆ.

ದೂಳಿನಿಂದ ಓಡಾಡುವ ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತಗಳಾಗುತ್ತಿವೆ. ಜನರಂತೂ ಮೂಗು, ಕಣ್ಣು ಅರೆಬರೆ ಮುಚ್ಚಿ ಓಡಾಡಬೇಕಾದ ಹಿಂಸೆಗೆ ಗುರಿಯಾಗಿದ್ದಾರೆ. ಹಾಕಿರುವ ಬಟ್ಟೆಗಳು, ಮಕ್ಕಳ ಯೂನಿಫಾರಂಗಳಿಗೂ ದೂಳು ಮೆತ್ತಿಕೊಳ್ಳುತ್ತದೆ. ಇದೇ ಸ್ಥಿತಿ ಬಹುತೇಕ ಬಡವಾಣೆಗಳ ಸ್ಥಿತಿಯಾಗಿದ್ದು, ಎಲ್ಲಿ ನೋಡಿದರೂ ದೂಳು ಕಾಣುತ್ತದೆ.

ಕೆಮ್ಮಿದರು, ಉಗಿದರೂ ಕೆಂದೂಳು!: ಕೆಂದೂಳಿಗೆ ಗುರಿಯಾಗಿರುವ ಯಾರೇ ಆಗಲಿ ಕೆಮ್ಮಿ ಉಗುಳಿದರೆ ಸಾಕು ಗಂಟಲು ತುಂಬಾ ಕೆಂಪು ಬಣ್ಣದ ದೂಳು ಮಿಶ್ರಿತ ಉಗುಳೇ ಬರುತ್ತಿದ್ದು, ಉಗಿದರೂ, ಕೆಮ್ಮಿದರೂ ಇದೇ ಗೋಳಾಗಿದೆ. ನಾನಾ ರೋಗಗಳಿಗೆ ಅಮಾಯಕರು ತುತ್ತಾಗಿ ಆಸ್ಪತ್ರೆ ಸಾವಿರಾರು ರೂ. ವ್ಯಯ ಮಾಡುವಂತಾಗಿದೆ. ರಸ್ತೆಗಳ ಸ್ಥಿತಿ ಹೇಗಿದೆ ಎಂದರೆ ದ್ವಿಚಕ್ರ ವಾಹನ ಹೋದರೆ ಸಾಕು ಮೈಮೇಲೆ ಹಾರುವಷ್ಟು ದೂಳಿನ ರಾಶಿ ಏಳುತ್ತದೆ. ನಾಗರಿಕರು ಮನೆಯಿಂದ ಹೊರಗೆ ಬರಲು ಯೋಚಿಸುವಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಕೆಂದೂಳು ಏಳುವ ರಸ್ತೆಗಳಿಗೆ ನಗರಸಭೆ ಅಥವಾ ಸಂಬಂಧಿದ ಲೋಕೋಪಯೋಗಿ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಲಾದರೂ ದಿನಕ್ಕೆ 3ಬಾರಿಯಾದರೂ ಟ್ಯಾಂಕರ್‌ಗಳ ಮೂಲಕ ರಸ್ತೆಗೆ ನೀರು ಹಾಕಿಸಿದರೂ ದೂಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಆದರೆ ಕನಿಷ್ಠ ಪ್ರಜ್ಞೆಯೂ ಇಲ್ಲದ ಅಧಿಕಾರಿಗಳು ಅಮಾಯಕ ಮಕ್ಕಳ, ಜನರ ಕಾಳಜಿ ಇಲ್ಲದಂತೆ ವರ್ತಿಸುತಿದ್ದು, ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ನಾಗರಿಕರು ನಗರ ಸಭೆ ಸೇರಿ ತಾಲೂಕು ಆಡಳಿತದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿ ನಿಧಿಗಳು ಸಮಸ್ಯೆಗೂ ನಮಗೂ ಯಾವುದೆ ಸಂಬಂಧವಿಲ್ಲ ಎಂದು ಕೈಕಟ್ಟಿ ಕುಳಿತಿದ್ದಾರೆ. ಇದರಿಂದ ರೋಸಿ ಹೋಗಿ ರುವ ನಿವಾಸಿಗಳು ನಗರಸಭೆ ಮತ್ತು ಯುಜಿಡಿ ಅಧಿಕಾರಿಗಳ ವಿರುದ್ದ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.

ಟಾಪ್ ನ್ಯೂಸ್

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.