![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 15, 2019, 5:53 AM IST
ಕೊಲ್ಲೂರು: ಬಹಳಷ್ಟು ವರ್ಷಗಳಿಂದ ಲೋವೊಲ್ಟೆàಜ್ ಬಾಧೆ ಯಿಂದ ಬಳಲುತ್ತಿರುವ ಕೊಲ್ಲೂರು, ಜಡ್ಕಲ್, ಮುದೂರು, ಇಡೂರು ಪರಿಸರದ ನಿವಾಸಿಗಳು ಅಸಮರ್ಪಕ ವಿದ್ಯುತ್ ಸರಬರಾಜು ಕ್ರಮದಿಂದ ಬೇಸತ್ತು ಇಲಾಖೆ ಸಹಿತ ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಿದ ಪರಿಣಾಮ ಮಂಜೂರುಗೊಂಡಿದ್ದ ಎಲ್ಲೂರು ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನ ಖಾಸಗಿ ಕಂಪೆನಿಯೊಂದು ಹಾಲ್ಕಲ್ ಸಮೀಪದ ಎಲ್ಲೂರಿನಲ್ಲಿರುವ ಸರಕಾರಿ ಸ್ವಾಮ್ಯದ 1 ಎಕ್ರೆ ಜಾಗದಲ್ಲಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು ಬಹುತೇಕ ಮುಕ್ತಾಯ ಹಂತದಲ್ಲಿದೆ.
ಅರಣ್ಯ ಇಲಾಖೆಯ
ಅನುಮತಿಯ ನಿರೀಕ್ಷೆ
ಕೊಲ್ಲೂರು, ಜಡ್ಕಲ್, ಮುದೂರು, ಇಡೂರು, ಗೋಳಿಹೊಳೆಯಲ್ಲಿ ಪ್ರತ್ಯೇಕ ಫೀಡರ್ ನಿರ್ಮಿಸಿ ಕೊಲ್ಲೂರಿಗೆ ಎಕ್ಸ್‌ಪ್ರೆಸ್ ಫೀಡರ್ ಬಳಸಿ ವಿದ್ಯುತ್ ಸರಬರಾಜು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಹಂತದಲ್ಲಿರುವ ಮೆಸ್ಕಾಂ ಇಲಾಖೆಗೆ ಅಭಯಾರಣ್ಯದ ಕಾನೂನಿನ ತೊಡಕು ಎದುರಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ.
ಜಂಟಿ ಸರ್ವೆಗೆ ಸೂಚನೆ
ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಒಪ್ಪಂದಕ್ಕೆ ಬರಲಿದ್ದು ಅನಂತರ ಮೆಸ್ಕಾಂ ವಿದ್ಯುತ್ ಕಂಬಗಳ ಜೋಡಣೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗುವುದು. ಎಲ್ಲವೂ ಸಸೂತ್ರವಾಗಿ ನಡೆದಲ್ಲಿ ಶೀಘ್ರ ಕೊಲ್ಲೂರು ಗ್ರಾಮದ ನಿವಾಸಿಗಳ ಲೋವೋಲ್ಟೆಜ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಬೈಂದೂರಿನ 33 ಕೆ.ವಿ. ಸ್ಟೇಷನ್ 5 ಎಂ.ಬಿ.ಎ. ಸಾರ್ಮರ್ಥ್ಯ ಹೊಂದಿದೆ. ನಾವುಂದದ ಹೇರೂರು ಜಂಕ್ಷನ್ ಬಳಿ 33 ಕೆ.ವಿ. ಸಾರ್ಮಥ್ಯದ ಸಬ್ ಸ್ಟೇಷನ್ ಬಳಕೆಯಿಂದಾಗಿ ಆಮಾರ್ಗವಾಗಿ ಏಲ್ಲೂರಿಗೆ 21 ಕಿ.ಮೀ. ದೂರ ವ್ಯಾಪ್ತಿ ನಿಗದಿಪಡಿಸಲಾಗಿದೆ.
ಸಮಸ್ಯೆ
ಶೀಘ್ರ ಪರಿಹಾರ
ಕೊಲ್ಲೂರು, ಜಡ್ಕಲ್, ಮುದೂರು ಸಹಿತ ಈಭಾಗದ ಲೋವೋಲ್ಟೆಜ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಸಲಾಗುವುದು. ಇಲಾಖೆಯ ವರಿಷ್ಠರೊಡನೆ ಈ ಬಗ್ಗೆ ಚರ್ಚಿಸಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು ಬೈಂದೂರು ಕ್ಷೇತ್ರ
ಜಂಟಿ ಸರ್ವೆ
ಅರಣ್ಯ ಹಾಗೂ ಮೆಸ್ಕಾಂ ಇಲಾಖೆ ನಡುವೆ ಜಾಗದ ವಿಚಾರದಲ್ಲಿ ಜಂಟಿ ಸರ್ವೆ ನಡೆಯಲಿದೆ. ಮುಂದಿನ 8ರಿಂದ 10 ತಿಂಗಳೊಳಗೆ ಸಮಸ್ಯೆ ಇತ್ಯರ್ಥವಾಗಿ ಎಲ್ಲೂರು ಸಬ್ ಸ್ಟೇಷನ್ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡಲಿದೆ.
– ಯಶವಂತ್, ಎಇಇ ಮೆಸ್ಕಾಂ ಬೈಂದೂರು ವಿಭಾಗ
ಡಾ| ಸುಧಾಕರ ನಂಬಿಯಾರ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.