ಶೇಷವನ: ಸಂಭ್ರಮದ ಮಹಾದೀಪೋತ್ಸವ
Team Udayavani, Nov 15, 2019, 5:12 AM IST
ಶೇಷವನ: ದೀಪ ಬೆಳಗಿಸುವುದರ ಮೂಲಕ ಕತ್ತಲು ದೂರವಾಗಿ ಬೆಳಕು ಬರುತ್ತದೆ, ಮಾನವನ ಅಜ್ಞಾನ ತೊಲಗಿ ಜ್ಞಾನದತ್ತ ಮರಳುತ್ತಾನೆ. ಅದಕ್ಕಾಗಿ ಬೆಳಕು ಜ್ಞಾನದ ಸಂಕೇತ ಎಂಬುದಾಗಿ ಹೇಳಿದ್ದಾರೆ. ಇಂತಹ ದೀಪ ಬೆಳಗಿಸುವುಕ್ಕೆ ಸೂಕ್ತವಾದ ಮಾಸ ಕಾರ್ತಿಕಮಾಸ. ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ನಕ್ಷತ್ರ ದಿನ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಹಾದೀಪೋತ್ಸವ ಆಚರಿಸಲಾಯಿತು.
ಸೂರ್ಯೋದಯದಿಂದ ಸೂರ್ಯಾಸ್ತ ಮಾನದವರೆಗೆ ಶೇಷವನ ಮಹಿಳಾ ಭಕ್ತ ವೃಂದ, ಚಿನ್ಮಯ ಮಹಿಳಾ ಭಕ್ತ ವೃಂದ, ಲಕ್ಷ¾ಣಾನಂದ ಸರಸ್ವತಿ ಮಹಿಳಾ ಭಜನಾ ಮಂಡಳಿ ಅಣಂಗೂರು, ಮಹಾಗಣಪತಿ ಮಹಿಳಾ ಭಜನಾ ಸಂಘ ಮಧೂರು, ಮಹಾದೇವಿ ಮಹಿಳಾ ಭಜನಾ ಮಂಡಳಿ ಕಳತ್ತೂರು, ಕೊರತಿ ಬಂಟ್ಸ್ ಮಹಿಳಾ ಭಜನಾ ಸಂಘ ಬದಿಯಡ್ಕ, ರಾಜರಾಜೇಶ್ವರಿ ಮಾತೃ ಮಂಡಳಿ ಪೆರುವಾಯಿ, ಸಪ್ತಗಿರಿ ಮಹಿಳಾ ಭಜನಾ ಸಂಘ ಕಾಸರಗೋಡು, ವಿಷ್ಣುವಿನಾಯಕ ಭಜಕವೃಂದ ಕಾವುಗೋಳಿ, ಚಾಮುಂಡೇಶ್ವರಿ ಮಹಿಳಾ ಭಜನಾ ಸಂಘ ಕೂಡ್ಲು ಇವರಿಂದ ವಿಶೇಷ ಸಂಕೀರ್ತನಾರ್ಚನೆ ನಡೆಯಿತು.
ಸಂಜೆ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟ ಮತ್ತು ಶಿಷ್ಯ ವೃಂದ, ಹವ್ಯಕ ಪರಿಷತ್ತು ಮುಳ್ಳೇರಿಯ ಮಂಡಲ ಇವರಿಂದ ವೇದ ಪಾರಾಯಣ ಜರಗಿತು. ರಾತ್ರಿ ವಿಶೇಷ ಅಲಂಕಾರ ಸಹಿತ ದೀಪೋತ್ಸವದೊಂದಿಗೆ ಕಾರ್ತಿಕ ಪೂಜೆ ನಡೆಯಿತು. ನವೆಂಬರ್ 26 ರಂದು ಕಾರ್ತಿಕಮಾಸ ದೀಪೋತ್ಸವ ಸಂಪನ್ನ ಗೊಳ್ಳಲಿದೆ. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಸಮಿತಿ ಯುವಕ ಸಂಘ, ಮಹಿಳಾ ಸಂಘ ಕಾರ್ಯಕ್ರಮದ ನೇತೃತ್ವ ವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.