ರಾಜ್ಯ ಹೆದ್ಧಾರಿ ನಿರ್ವಹಣೆಗೆ ವಿಫಲ
ಕಿತ್ತು ಹೋದ ರಸ್ತೆ ವಿಭಜಕದ ಕಬ್ಬಿಣದ ರಕ್ಷಣಾ ಗೋಡೆ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರಕ್ಕೆ ಪ್ರಯಾಸ-ಅಪಘಾತಕ್ಕೆ ಆಹ್ವಾನ
Team Udayavani, Nov 15, 2019, 1:19 PM IST
ದೇವದುರ್ಗ: ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ನಿರ್ವಹಣೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿವೆ. ರಸ್ತೆ ವಿಭಜಕಗಳಿಗೆ ಹಾಕಿದ್ದ ಕಬ್ಬಿಣದ ರಕ್ಷಣಾ ಗೋಡೆ ಅಲ್ಲಲ್ಲಿ ಕಿತ್ತೋಗಿವೆ.
ಪಟ್ಟಣದ ಗೌರಂಪೇಟೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವರೆಗೆ ರಾಜ್ಯ ಹೆದ್ದಾರಿ ಮಧ್ಯದ ರಸ್ತೆ ವಿಭಜಕಕ್ಕೆ ಅಳವಡಿಸಿದ್ದ ಕಬ್ಬಿಣದ ರಕ್ಷಣಾ ಗೋಡೆ ಎಲ್ಲೆಂದರಲ್ಲಿ ಕಿತ್ತಿ ಹೋಗಿದೆ. ಇದರಿಂದಾಗಿ ವೇಗವಾಗಿ ಬರುವ ವಾಹನಗಳು ಆಕಸ್ಮಿಕವಾಗಿ ರಸ್ತೆ ಮಧ್ಯದ ವಿಭಜಕ ಹತ್ತಿ ಇನ್ನೊಂದು ಬದಿಯ ರಸ್ತೆಗೆ ಇಳಿಯುವ ಅಪಾಯ ಎದುರಾಗಿದೆ. ಇನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದರಿಂದ ಬೈಕ್, ಕಾರ್ ಸೇರಿ ಭಾರೀ ವಾಹನಗಳ ಚಾಲಕರು ಸರ್ಕಸ್ ಮಾಡುತ್ತ ವಾಹನ ಚಲಾಯಿಸಬೇಕಿದೆ.
ಇಲ್ಲಿನ ಸಮಸ್ಯೆ ಕುರಿತು ಸಂಘ-ಸಂಸ್ಥೆಯವರು ಮೌಖೀಕವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಇಲಾಖೆಯ ಎಇಇ ಬಿ.ಬಿ. ಪಾಟೀಲ ಮತ್ತು ಜೆಇಗಳು ಕಚೇರಿಗೆ ಬರುವುದೇ ಅಪರೂಪವಾಗಿದೆ. ಕೆಲಸ ಕಾರ್ಯ ನಿಮಿತ್ತ ಲೋಕೋಪಯೋಗಿ ಇಲಾಖೆ ಕಚೇರಿಗೆ ಹೋದರೆ ಇರುವ ಸಿಬ್ಬಂದಿ ಸಾಹೇಬರು ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿದ್ದಾರೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಸ್ತೆ ತುಂಬ ಗುಂಡಿ: ಪಟ್ಟಣದ ಜಹಿರುದ್ದೀನ್ ವೃತ್ತದ ಪಕ್ಕದಲ್ಲೇ ಸುಮಾರು 10 ಮೀಟರ್ ಅಗಲದಷ್ಟು ಗುಂಡಿ ಬಿದ್ದು ನಾಲ್ಕೈದು ತಿಂಗಳಾದರೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಡಾಂಬರ್ ಹಾಕಿ ದುರಸ್ತಿ ಮಾಡಲು ಮುಂದಾಗಿಲ್ಲ. ಹೀಗಾಗಿ ಬೈಕ್ ಇತರೆ ವಾಹನ ಸವಾರರು ಎದ್ದು ಬಿದ್ದು ಸಂಚಾರ ಮಾಡಬೇಕಾಗಿದೆ.
ಬೆಳಗದ ವಿದ್ಯುತ್ ದೀಪ: ಇನ್ನು ಹೆದ್ದಾರಿಯುದ್ದಕ್ಕೂ ರಸ್ತೆ ವಿಭಜಕ ಮಧ್ಯದಲ್ಲಿ ಅಳವಡಿಸಿದ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ರಾತ್ರಿ ಸಂಚರಿಸುವ ಪಾದಚಾರಿಗಳಿಗೆ ವಾಹನಗಳ ಲೈಟಿನ್ ಬೆಳಕೇ ಆಧಾರವಾಗಿದೆ. ಕಂಬಗಳಲ್ಲಿನ ವಿದ್ಯುತ್ ದೀಪ ಬೆಳಗದ್ದರಿಂದ ಹಲವು ಬಾರಿ ಅಪಘಾತಗಳು ಕೂಡ ಜರುಗಿವೆ ಎನ್ನುತ್ತಾರೆ ಸಾರ್ವಜನಿಕರು.
ಕೇಬಲ್ ಹಾಕಲು ರಸ್ತೆ ಅಗೆತ: ಬಿಎಸ್‌ಎನ್‌ಎಲ್ ಕೇಬಲ್ ಅಳವಡಿಸಲು ಗುಣಮಟ್ಟದ ರಸ್ತೆ ಅಗೆದು ಕೇಬಲ್ ಹಾಕಲಾಗಿದೆ. ಕೇಬಲ್ ಹಾಕಿದ ನಂತರ ರಸ್ತೆಯಲ್ಲಿ ತೋಡಿದ ಗುಂಡಿಗಳನ್ನು ಅರೆಬರೆಯಾಗಿ ಮುಚ್ಚಲಾಗಿದೆ. ಹೀಗಾಗಿ ಬೈಕ್ ಸವಾರರು ಆಗಾಗ ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ. ಇನ್ನು ಮಸರಕಲ್, ಸುಂಕೇಶ್ವರಹಾಳ, ಕರಡಿಗುಡ್ಡ, ಗಬ್ಬೂರ, ಜಾಲಹಳ್ಳಿ ಸೇರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ರಸ್ತೆ ಬಿರುಕು ಬಿಟ್ಟಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ದುರಸ್ತಿಗೆ ಆಗ್ರಹ: ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಕಿತ್ತಿಹೋದ ರಸ್ತೆ ವಿಭಜಕಕ್ಕೆ ಕಬ್ಬಿಣದ ರಕ್ಷಣಾ ಗೋಡೆಯನ್ನು ಮತ್ತೇ ಅಳವಡಿಸಬೇಕು. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು ಮತ್ತು ಹೆದ್ದಾರಿಯುದ್ದಕ್ಕೂ ರಸ್ತೆ ವಿಭಜಕ ಮಧ್ಯದಲ್ಲಿರುವ ಕಂಬಗಳಿಗೆ ಬಲ್ಬ್ಗಳನ್ನು ಹಾಕಿ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಕರವೇ ಮುಖಂಡ ಶಿವುಕುಮಾರ ಛಲುವಾದಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.