![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 15, 2019, 5:06 PM IST
ಪೇಶಾವರ: ಅಚ್ಚರಿಯ ವಿದ್ಯಮಾನವೊಂದರಲ್ಲಿ ಇಟಲಿ ಮತ್ತು ಪಾಕಿಸ್ಥಾನದ ಉತ್ಖನನಕಾರರು 3 ಸಾವಿರ ವರ್ಷ ಹಳೆಯ ನಗರವೊಂದನ್ನು ಪತ್ತೆ ಹಚ್ಚಿದ್ದಾರೆ.
ಪಾಕ್‌ನ ವಾಯವ್ಯ ಪ್ರಾಂತ್ಯದಲ್ಲಿ ಈ ಪ್ರಾಚೀನ ನಗರ ಪತ್ತೆಯಾಗಿದ್ದು, ಅದರಲ್ಲಿ ಹಳೆಯ ಹಿಂದೂ ದೇಗುಲದ ಅವಶೇಷಗಳು, ಅಲೆಕ್ಸಾಂಡರ್‌ನ ಕಾಲದ ಅವಶೇಷಗಳು ಪತ್ತೆಯಾಗಿವೆ.
ಖೈಬರ್ ಪಕ್ತುಂಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯ ಬಾರಿಕೋಟ್ ತಾಲೂಕಿನಲ್ಲಿ ಅವಶೇಷಗಳು ಪತ್ತೆಯಾಗಿವೆ. ಈ ಪ್ರಾಂತ್ಯದಲ್ಲಿ ಈ ಮೊದಲು 5 ಸಾವಿರ ವರ್ಷ ಹಳೆಯ ನಾಗರಿಕತೆಯ ಅವಶೇಷಗಳು ಸಿಕ್ಕಿದ್ದು, ಪ್ರಾಚೀನ ನಾಗರಿಕತೆ ಅಧ್ಯಯನದ ಪ್ರಮುಖ ಸ್ಥಳವಾಗಿದೆ.
ಅಲೆಕ್ಸಾಂಡರ್ ಕ್ರಿ.ಶ.326ರಲ್ಲಿ ಇಲ್ಲಿಗೆ ಬಂದಿದ್ದಾಗ ಸ್ಥಳೀಯರನ್ನು ಸೋಲಿಸಿ ಭಾಝೀರಾ ಎಂಬ ನಗರವನ್ನು ಕಟ್ಟಿದ್ದ ಜತೆಗೆ ಕೋಟೆಯನ್ನೂ ಕಟ್ಟಿದ್ದ ಎಂದು ತಿಳಿದುಬಂದಿದೆ.
ಅದಕ್ಕೂ ಮೊದಲು ಇಲ್ಲಿ ಮಾನವರು ವಾಸಿಸುತ್ತಿದ್ದಕ್ಕೆ ಹಲವು ಅವಶೇಷಗಳು ಪತ್ತೆಯಾಗಿವೆ. ಇಂಡೋ-ಗ್ರೀಕ್, ಹಿಂದೂ, ಬೌದ್ಧ, ಮುಸ್ಲಿಂ ಜನಾಂಗದವರು ಇಲ್ಲಿ ವಾಸಿಸಿದ್ದರು ಎಂದು ಹೇಳಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.