ವಸತಿ ಶಾಲೆಯಲ್ಲಿ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕ ಸಾವು
ಆಂಧ್ರ ಪ್ರದೇಶದಲ್ಲೊಂದು ದಾರುಣ ಘಟನೆ
Team Udayavani, Nov 15, 2019, 6:09 PM IST
ಸಾಂದರ್ಭಿಕ ಚಿತ್ರ.
ಕರ್ನೂಲ್: ವಸತಿ ಶಾಲೆಯ ಸಾಂಬಾರ್ ಪಾತ್ರೆಗೆ ಬಿದ್ದು, 6 ವರ್ಷ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಇಲ್ಲಿನ ಖಾಸಗಿ ವಸತಿ ಶಾಲೆಯೊಂದರಲ್ಲಿ ನಡೆದಿದೆ.
ಸಾಂಬಾರ್ ಪಾತ್ರೆಗೆ ಬಾಲಕ ಬಿದ್ದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರವಾದ ಸುಟ್ಟಗಾಯಗಳಾಗಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸಂಚಾಲಕ ನಾಗ ಮಲ್ಲೇಶ್ವರ ರೆಡ್ಡಿ, ಆಡಳಿತ ನಿರ್ದೇಶಕ ವಿಜಯ್ ಕುಮಾರ್ ರೆಡ್ಡಿ ಎಂಬವರನ್ನು ಬಂಧಿಸಲಾಗಿದೆ.
ಘಟನೆ ವಿವರ
ಮಧ್ಯಾಹ್ನ ಊಟದ ಹೊತ್ತಿಗೆ ಮಕ್ಕಳು ತಾಮುಂದು ತಾಮುಂದು ಎಂದು ಓಡುವುದು ಸಾಮಾನ್ಯ. ಯುಕೆಜಿ ವಿದ್ಯಾರ್ಥಿ ಬಾಲಕ ಪುರುಷೋತ್ತಮ ಕೂಡ ಊಟದ ಹಾಲ್‌ಗೆ ಓಡಿದ್ದ. ಅಲ್ಲಿ ದೊಡ್ಡ ಸಾಂಬಾರ್ ಪಾತ್ರೆ ನೆಲದಲ್ಲಿ ಇಡಲಾಗಿದ್ದು ಆಯ ತಪ್ಪಿ ಅದಕ್ಕೆ ಬಿದ್ದಿದ್ದಾನೆ. ಈ ವೇಳೆ ಊಟದ ಹಾಲಿನಲ್ಲಿ ಯಾರೂ ನಿರ್ವಾಹರು ಇಲ್ಲದ್ದರಿಂದ ಪುರುಷೋತ್ತಮನ ಜೀವಕ್ಕೆ ಕುತ್ತು ತಂದಿದೆ. ಬಾಲಕ ಬಿದ್ದ ಕೂಡಲೇ ಮಕ್ಕಳು ಬೊಬ್ಬೆ ಹಾಕಿದ್ದು, ಬಳಿಕ ಬಂದ ಶಾಲೆಯ ಮಂದಿ ಆತನನ್ನು ಪಾತ್ರೆಯಿಂದ ಹೊರತೆಗೆದಿದ್ದಾರೆ. ಆಸ್ಪತ್ರೆಗೆ ಸಾಗಿಸಿದರೂ ಬಳಿಕ ಪ್ರಯೋಜನವಾಗಲಿಲ್ಲ. ಶಾಲೆಯಲ್ಲಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ತೀವ್ರ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಸ್ಥಳೀಯರು, ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಹೆತ್ತವರು ದೂರು ನೀಡಿದ್ದರಿಂದ ಶಾಲೆಯ ಆಡಳಿತ ಮಂಡಳಿ ಪ್ರಮುಖರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.