“ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಒಂದಾಗಿ’


Team Udayavani, Nov 16, 2019, 3:40 AM IST

tt-1

ಕಾಸರಗೋಡು: ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮನಸಾಕ್ಷಿ ಹೊಂದಿರುವ ಎಲ್ಲರೂ ಭೇದಭಾವ ಮರೆತು ಒಂದಾಗಬೇಕೆಂದು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಆಗ್ರಹಿಸಿದ್ದಾರೆ.

ಜಿಲ್ಲಾ ಶಿಶುಕಲ್ಯಾಣ ಸಮಿತಿ ವತಿಯಿಂದ ಜಿಲ್ಲಾಡಳಿತೆ, ಜಿಲ್ಲಾ ಶಿಶು ಸಂರಕ್ಷಣೆ ಘಟಕ, ಮಹಿಳಾ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ನಾಯಮ್ಮಾರಮೂಲೆ ತನ್‌ಬೀಹುಲ್‌ ಇಸ್ಲಾಮಿಕ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಕ್ಕಳಿಗಾಗಿ ರಕ್ಷಣಾ ವಲಯ ನಿರ್ಮಿಸಿ ಚಟುವಟಿಕೆ ನಡೆಸುವ ಪ್ರತಿಜ್ಞೆ ನಾವು ಕೈಗೊಳ್ಳಬೇಕು. ಜಾಡ್ಯದಿಂದ ಮಲಗಿ ನಿದ್ರಿಸಿರುವ ಜನತೆಯನ್ನು ಬಡಿದೆಬ್ಬಿಸುವ ಉದ್ದೇಶ ದಿಂದ ರಾಷ್ಟ್ರಶಿಲ್ಪಿ ಜವಾಹರ್‌ ಲಾಲ್‌ ನೆಹರೂ ಅವರ ಜನ್ಮದಿನವನ್ನು ಶಿಶುದಿನವಾಗಿ ಆಚರಿಸಲಾಗುತ್ತಿದೆ. ಕೃಷಿ- ಉದ್ದಿಮೆ-ವಿಜ್ಞಾನ-ತಂತ್ರಜ್ಞಾನ ವಲಯ ದಲ್ಲಿ ಅವರು ತಂದ ಪುನಶ್ಚೇತನದಿಂದ ರಾಷ್ಟ್ರಶಿಲ್ಪಿ ಎಂಬ ಖ್ಯಾತಿಗೆ ಅವರು ಅರ್ಹ ರಾಗಿದ್ದಾರೆ. ಯೋಜನೆ ಆಯೋಗ, ಐ.ಐ.ಟಿ., ದೇಶದ ಅಣೆಕಟ್ಟುಗಳು, ಯು.ಜಿ.ಸಿ., ಅಟೋಮೆಟಿಕ್‌ ಎನರ್ಜಿ ಇತ್ಯಾದಿ ವಲಯದ ಹರಿಕಾರ ನೆಹರೂ ಅವರಾಗಿದ್ದಾರೆ ಎಂದು ಸಂಸದ ನುಡಿದರು.

ಬದುಕಿನ ಕೊನೆಯ ವರೆಗೂ ಪ್ರಜಾ ಪ್ರಭುತ್ವದಲ್ಲಿ ನಂಬುಗೆ ಹೊಂದಿದ್ದ ನೆಹರೂ ಮಕ್ಕಳ ಪಾಲಿಗೆ ನೆಚ್ಚಿನ ಚಾಚಾಜಿ ಆಗಿ ದ್ದರು. ಮಕ್ಕಳನ್ನು ಅವರು ಸದಾ ಹೂವಿಗೆ ಹೋಲಿಸುತ್ತಿದ್ದರು ಎಂದು ಹೇಳಿದರು.

ಮಕ್ಕಳ ರಾಷ್ಟ್ರಪತಿ ಪ್ರಜ್ಞಾ ಸಮಾ ರಂಭವನ್ನು ಉದ್ಘಾಟಿಸಿದರು. ಮಕ್ಕಳ ಸಭಾಪತಿ ಕೆ. ಸ್ವರೂಪ ಅಧ್ಯಕ್ಷತೆ ವಹಿಸಿ ದ್ದರು. ಮಕ್ಕಳ ನೇತಾರರಾಗಿ ಆಯ್ಕೆ ಗೊಂಡವರನ್ನು ಚೆಂಗಳ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಷಾಹಿನಾ ಸಲೀಂ ಅಭಿನಂದಿಸಿದರು. ಜಿಲ್ಲಾ ಶಿಕ್ಷಣ ನಿರ್ದೇಶಕಿ ಕೆ.ವಿ.ಪುಷ್ಪಾ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಮೆರವಣಿಗೆಯಲ್ಲಿ ಅತ್ಯುತ್ತಮ ತಂಡವಾಗಿ ಆಯ್ಕೆಗೊಂಡ ಚೆಮ್ನಾಡ್‌ ಸೆರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ತಂಡಕ್ಕೆ ಚೆಂಗಳ ಗ್ರಾಮ ಪಂಚಾಯತ್‌ ಸದಸ್ಯ ತಾಹಿರ್‌ ಬಹುಮಾನ ನೀಡಿದರು.

ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ. ಬಿಂದು, ಕಾಸರಗೋಡು ಎ.ಡಿ.ಸಿ. (ಜನರಲ್‌) ಬೆವಿನ್‌ ಜಾನ್‌, ಶಿಶು ಕಲ್ಯಾಣ ಸಮಿತಿ ಉಪಾಧ್ಯಕ್ಷೆ ಎಂ.ಪಿ.ವಿ. ಜಾನಕಿ, ಕಾರ್ಯದರ್ಶಿ ಮಧು ಮುದಿಯಕ್ಕಾಲ್‌, ಜಿಲ್ಲಾ ಶಿಕ್ಷಣಾಧಿ ಕಾರಿ ನಂದಿಕೇಶನ್‌, ಶಾಲೆಯ ಪ್ರಾಂಶುಪಾಲ ಟಿ.ಪಿ.ಮಹಮ್ಮದಾಲಿ, ಮುಖ್ಯ ಶಿಕ್ಷಕಿ ಕುಸುಮಂ ಜಾನ್‌, ರಕ್ಷಕ-ಶಿಕ್ಷಕ ಅಧ್ಯಕ್ಷ ಸಿ.ಎಚ್‌. ಹಸೈನಾರ್‌ ಉಪಸ್ಥಿತರಿದ್ದರು. ಮಕ್ಕಳ ಪ್ರಧಾನ ಮಂತ್ರಿ ಅಂಜಿತಾ ಬಿನಾಯ್‌ ಸ್ವಾಗತಿಸಿದರು. ಮಕ್ಕಳ ಉಪರಾಷ್ಟ್ರಪತಿ ಎ.ಎಸ್‌. ಅಬಾನ್‌ ವಂದಿಸಿದರು.

ಅಂಚೆ ಚೀಟಿ ಬಿಡುಗಡೆ
ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರು ಮಕ್ಕಳ ದಿನಾಚ ರಣೆಯ ಅಂಚೆ ಚೀಟಿ ಬಿಡುಗಡೆ ಗೊಳಿಸಿದರು. ತಿರುವನಂತಪುರಂನ ಕಾರ್ಮಲ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅಲೀನಾ ಅವರು ನೀಡಿದ ರೂಪು ಕಲ್ಪನೆಯಲ್ಲಿ ಈ ಬಾರಿಯ ಅಂಚೆ ಚೀಟಿ ಸಿದ್ಧವಾಗಿದೆ.

ಟಾಪ್ ನ್ಯೂಸ್

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.