ಇನ್ನು ದೇಶಾದ್ಯಂತ ತಿಂಗಳಲ್ಲಿ ಒಂದೇ ದಿನ ವೇತನ ನೀಡಿಕೆ?
ಹೊಸ ಕಾಯ್ದೆ ಜಾರಿಗೆ ಮೋದಿ ಸರಕಾರದ ಪ್ಲ್ಯಾನ್ ; ಒಂದು ದೇಶ, ಒಂದೇ ದಿನ ವೇತನ ಕಾಯ್ದೆಗೆ ಚಿಂತನೆ
Team Udayavani, Nov 15, 2019, 8:10 PM IST
ಹೊಸದಿಲ್ಲಿ: ಹಲವು ಕಾನೂನು ಕಟ್ಟಳೆಗಳು, ಯೋಜನೆಗಳಲ್ಲಿ ಬದಲಾವಣೆಗಳನ್ನು ತರುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಇನ್ನೊಂದು ಮಹತ್ವದ ಬದಲಾವಣೆಗೆ ಉದ್ದೇಶಿಸಿದೆ. ಒಂದು ವೇಳೆ ಈ ನಿಯಮ ಜಾರಿ ಯಾಗಿದ್ದೇ ಆದಲ್ಲಿ ದೇಶಾದ್ಯಂತ ಸಂಘಟಿತ ವಲಯದ ಎಲ್ಲ ಕಾರ್ಮಿಕರು ಒಂದೇ ದಿನ ವೇತನ ಪಡೆದುಕೊಳ್ಳಲಿದ್ದಾರೆ. ಹೀಗೆ ತಿಂಗಳ ನಿರ್ದಿಷ್ಟ ದಿನದಂದು ದೇಶಾದ್ಯಂತ ವೇತನ ನೀಡುವ “ಒಂದು ದೇಶ ಒಂದೇ ದಿನ ವೇತನ’ ಕಾಯ್ದೆಯನ್ನು ಜಾರಿಗೆ ತರಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಕಾಮಿರ್ಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ, ಎಲ್ಲಾ ವಲಯಗಳು ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುವಂತೆ ಮಾಡುವುದು ಇದರ ಉದ್ದೇಶ. ಶೀಘ್ರ ಈ ಕಾಯ್ದೆ ಜಾರಿಗೊಳಿಸಲು ಪ್ರಧಾನಿ ಉತ್ಸುಕರಾಗಿದ್ದಾರೆ. ಇದೇ ರೀತಿ ಎಲ್ಲ ಕಾರ್ಮಿಕರಿಗೆ ಅನ್ವಯವಾಗುವಂತೆ ಎಲ್ಲ ವಲಯಗಳು ಅಡಕಗೊಳ್ಳುವಂತೆ ಕನಿಷ್ಠ ವೇತನವನ್ನೂ ಜಾರಿಗೊಳಿಸಲಾಗುವುದು ಎಂದವರು ಹೇಳಿದರು.
ಇದರೊಂದಿಗೆ ಔದ್ಯೋಗಿಕ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಕುರಿತ ಕಾಯ್ದೆ, ವೇತನ ಕಾಯ್ದೆ ಕೂಡ ಜಾರಿಗೊಳಿಸಲಾಗುವುದು ಎಂದರು. ವೇತನ ಬಗ್ಗೆ ಕಾಯ್ದೆ ಈಗಾಗಲೇ ಸಂಸತ್ತಿನಲ್ಲಿ ಪಾಸು ಮಾಡಲಾಗಿದೆ. ಇದನ್ನು ಜಾರಿಗೊಳಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.