ಲಕ್ ಜತೆಗೆ ಮನೆಯ ಲುಕ್ ಬದಲಿಸುವ ಗಿಡಗಳು
Team Udayavani, Nov 16, 2019, 4:38 AM IST
ಗಿಡ ಬೆಳೆಸುವುದು ನಿಮ್ಮ ನೆಚ್ಚಿನ ಹವ್ಯಾಸವಾಗಿದ್ದು, ಸ್ಥಳವಿಲ್ಲ ಚಿಂತೆ ಕಾಡುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಮನೆಯೊಳಗೆ ಬೆಳೆಯುವ ಕೆಲವೊಂದು ಗಿಡಗಳು, ಬಳ್ಳಿಗಳು ನಿಮ್ಮ ಸಮಸ್ಯೆಗೆ ಪರಿಹಾರವಾಗಬಲ್ಲದು. ಈ ಸಸ್ಯಗಳು ಮನೆಯ, ಕೋಣೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ತಣ್ಣನೆಯ ವಾತಾವರಣಕ್ಕೆ ಕಾರಣವಾಗುತ್ತವೆ. ಇನ್ನೊಂದು ಮುಖ್ಯ ಅಂಶವೆಂದರೆ ಗಿಡಗಳನ್ನು ಪಾಟ್‌ಗಳಲ್ಲಿ ಬೆಳೆಸುವುದಾದರೆ ಸಿಮೆಂಟ್ ಮತ್ತು ಪ್ಲಾಸ್ಟಿಕ್ ಪಾಟ್‌ಗಳ ಬದಲು ಮಣ್ಣಿನ ಪಾಟ್‌ಗಳಿಗೆ ಆದ್ಯತೆ ನೀಡಿ. ಜತೆಗೆ ಪ್ಲಾಸ್ಟಿಕ್ ಬಾಟಲ್ ಬದಲು ಗಾಜಿನ ಬಾಟಲ್‌ಗಳನ್ನು ಬಳಸಿದರೆ ನಿಜ ಅರ್ಥದಲ್ಲಿ ಪರಿಸರ ಸ್ನೇಹಿಯಾಗುತ್ತದೆ. ಅಂತಹ ಕೆಲವು ಗಿಡಗಳ ಪರಿಚಯ ಇಲ್ಲಿದೆ.
ಲೋಳೆರಸ
ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಅದ್ಭುತ ಸಸ್ಯ. ಇದು ಅನೇಕ ಚರ್ಮ ಮತ್ತು ಕೂದಲ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಕೋಣೆಯ ಅಂದ ಹೆಚ್ಚಿಸುವ ಜತೆಗೆ ಔಷಧ ಭಂಡಾರವೇ ಆಗಿರುವ ಲೋಳೆರಸ ಬೆಳೆಸುವುದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿರಲಿ.
ಬಿದಿರು
ಸದ್ಯ ಬಾಟಲಿಯಲ್ಲಿ ಇರಿಸುವ ಸಣ್ಣ ಬಿದಿರಿನ ಗಿಡ ಟ್ರೆಂಡ್. ಇದು ಸಮೃದ್ಧಿ, ಆರೋಗ್ಯ, ಸಂತೋಷದ ಸಂಕೇತ. ಇದು ಅನೇಕ ವರ್ಷಗಳವರೆಗೆ ಬಾಳುತ್ತದೆ ಎನ್ನುವುದು ವಿಶೇಷ. ಜತೆಗೆ ಇದನ್ನು ಬೆಳೆಸಲು ಅಧಿಕ ಖರ್ಚು ಬೇಕಾಗಿಲ್ಲ. ಕೋಣೆಯಲ್ಲಿ ಅಂದವಾಗಿ ಜೋಡಿಸುವ ಮೂಲಕ ನಿಮ್ಮ ಲಕ್ ಜತೆಗೆ ಲುಕ್ ಅನ್ನೇ ಬದಲಾಯಿಸಬಹುದು.
ಸ್ನೇಕ್ ಪ್ಲಾಂಟ್
ಅತ್ಯಂತ ಸುಂದರ ಹಾಗೂ ಅಲಂಕಾರ ಯೋಗ್ಯ ಗಿಡ ಸ್ನೇಕ್ ಪ್ಲಾಂಟ್. ಇದರ ದಪ್ಪ ಹಾಗೂ ಗಾಢ ಹಸುರು ಬಣ್ಣದ ಎಲೆ ಬೇಗನೆ ಬಾಡುವುದಿಲ್ಲ. ಕಡಿಮೆ ಸೂರ್ಯ ಪ್ರಕಾಶದಲ್ಲೂ ಹುಲುಸಾಗಿ ಬೆಳೆಯುವ ಇದು ಚಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆಕರ್ಷಕ ಪಾಟ್‌ಗಳಲ್ಲಿ ಇರಿಸಿದರೆ ಇದರ ಚೆಲುವು ಇಮ್ಮಡಿಗೊಳ್ಳುತ್ತದೆ.
ಚೈನೀಸ್ ಮನಿ ಪ್ಲಾಂಟ್
ಚೈನೀಸ್ ಮನಿ ಪ್ಲಾಂಟ್ ಸಸ್ಯಗಳು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿ ಕಾಣ ಸಿಗುತ್ತವೆ. ಈ ಸಸ್ಯ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸಮೃದ್ಧಿ ತುಂಬಿರುತ್ತದೆ ಎನ್ನುವ ಸಂಬಿಕೆ ಇದೆ. ಈ ಗಿಡದ ನಿರ್ವಹಣೆ ಸುಲಭ. ಇನ್ನೊಂದು ಮುಖ್ಯ ಅಂಶವೆಂದರೆ ಇದು ಅಪಾರ ಪ್ರಮಾಣದಲ್ಲಿ ವಾಯುವನ್ನು ಶುದ್ಧೀಕರಿಸುತ್ತದೆ.
ಪೋನಿಟೈಲ್ ಪಾಮ್
ಇದು ಆನೆಯ ಪಾದವನ್ನು ಹೋಲುವ ಕಾರಣ ಆನೆ ಪಾದ ಗಿಡ ಎಂದೂ ಕರೆಯುತ್ತಾರೆ. ಇದು ತೆಳುವಾಗಿ ಉದ್ದವಿರುವ ಎಲೆ ಹೊಂದಿದ್ದು ಕೋಣೆಯನ್ನು ಪಂಪಾಗಿರಿಸುತ್ತದೆ.
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.