ಡ್ಯಾಂ ನೀರು ಪೂರೈಸುವ ಪೈಪ್‌ಲೈನ್ ಸೋರಿಕೆ
ನಿದ್ರೆಗೆ ಜಾರಿದೆ ಪಪಂ: ಸಾರ್ವಜನಿಕರ ಆಕ್ರೋಶಪಟ್ಟಣಕ್ಕೆ ಬರುವ ನೀರು ಪೋಲು
Team Udayavani, Nov 16, 2019, 12:16 PM IST
ಎಂ.ಸೋಮೇಶ ಉಪ್ಪಾರ
ಮರಿಯಮ್ಮನಹಳ್ಳಿ: ಬೇಸಿಗೆಗೆ ನೀರಿನ ಸಂಗ್ರಹ ಮತ್ತು ಮಿತಬಳಕೆ ಮಂತ್ರ ಜಪಿಸಬೇಕಾದ ಪಟ್ಟಣ ಪಂಚಾಯಿತಿ ಆಡಳಿತವರ್ಗ ತಿಂಗಳುಗಟ್ಟಲೇ ಇಲ್ಲಿ ನಿತ್ಯವೂ ನೀರು ಪೋಲಾಗುತ್ತಿದ್ದರೂ ಸುಮ್ಮನೆ ಕುಳಿತಿದೆ.
ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಟಿ.ಬಿ. ಡ್ಯಾಂನಿಂದ ನೀರು ಸರಬರಾಜು ಮಾಡುವ ಪೈಪ್‌ಲೈನ್ ಸುಮಾರು ಏಳೆಂಟು ಕಡೆ ಸೋರಿಕೆಯಾಗುತ್ತಿದ್ದು ನಿತ್ಯವೂ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ನೀರಿನ ಮಹತ್ವವನ್ನು ಅರಿಯದ ಪಟ್ಟಣ ಪಂಚಾಯಿತಿ ಆಡಳಿತವರ್ಗ ಮಾತ್ರ ಈ ಬಗ್ಗೆ ಜಾಣ ಕುರುಡುತನ ಅನುಸರಿಸುತ್ತಿದೆ. ಪಟ್ಟಣ ಪಂಚಾಯಿತಿಯಿಂದ ಕೂಗಳತೆಯಲ್ಲಿಯೇ ಪಟ್ಟಣದ ಚರಂಡಿನೀರು ಬಂದು ನಿಲ್ಲುತ್ತಿದ್ದು ಇದರಲ್ಲಿಯೇ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿ ಚರಂಡಿ ನೀರು ಸೇರಿಕೊಳ್ಳುತ್ತಿದ್ದು ಇದೇ ನೀರನ್ನು ಪಟ್ಟಣದ ಜನರು ಕುಡಿಯುವುದಕ್ಕೂ ಸ್ನಾನಕ್ಕೂ ಪೂಜೆಗೂ ಎಲ್ಲದಕ್ಕೂ ಬಳಕೆ ಮಾಡಿಕೊಳ್ಳುತ್ತಿದ್ದು ರೋಗರುಜಿನಗಳ ಭಯದಿಂದ ಆತಂಕಕ್ಕೊಳಗಾಗಿದ್ದಾರೆ.
ಒಂದೆಡೆ ಕೆಲ ವಾರ್ಡುಗಳಲ್ಲಿ ಡೆಂಘೀ ಮಲೇರಿಯಾ ರೋಗಗಳಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಸ್ವತ್ಛತೆ ಎಂಬುದು ಪಟ್ಟಣಕ್ಕೆ ಮರೀಚಿಕೆಯಾಗಿಬಿಟ್ಟಿದೆ. ಅಲ್ಲಲ್ಲಿ ಕುಡಿಯುವ ನೀರಿನ ಪೈಪು ಒಡೆದು ಅದರಲ್ಲಿ ಚರಂಡಿನೀರೂ ಮಿಶ್ರಣವಾಗುತ್ತಿರುವುದರಿಂದ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.
ಪಟ್ಟಣದ ಹೊವಲಯದಲ್ಲಿನ ಶನಿ ದೇವಸ್ಥಾನದ ಮುಂಭಾದಲ್ಲಿ ಎರಡು ದೊಡ್ಡ ಪ್ರಮಾಣದ ತೂತುಗಳಾಗಿ ನೀರು ಸೋರಿಕೆಯಾಗಿ ದೇವಸ್ಥಾನದ ಮುಂಭಾಗದಲ್ಲೆಲ್ಲಾ ದೊಡ್ಡದೊಡ್ಡ ಗುಂಡಿಯೋಪಾದಿಯಲ್ಲಿ ನೀರು ನಿಂತಿದೆ. ದೇವಸ್ಥಾನದ ಹಿಂಭಾಗದಲ್ಲಿಯೇ ಜನರು ವಾಸವಿದ್ದು ಡೆಂಘೀ-ಮಲೇರಿಯಾ ರೊಗಗಳು ಬರಬಹುದೆಂಬ ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ.
ಸುಮಾರು ಹದಿನೈದು ವರ್ಷಗಳ ಹಿಂದೆ ಹನುಮನಹಳ್ಳಿಯ ಹೊರವಲಯದಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಿದ ಸಂದರ್ಭದಲ್ಲಿ ಟಿ.ಬಿ. ಡ್ಯಾಂನಿಂದ ಮರಿಯಮ್ಮನಹಳ್ಳಿವರೆಗೆ ಜೋಡಿಸಲಾಗಿದೆ. ಪೈಪ್‌ಲೈನ್ ಕೆಲವೆಡೆ ಭೂಮಿ ಒಳಭಾಗದಲ್ಲಿದ್ದು ಕೆಲವೆಡೆ ಭೂಮಿ ಮೇಲ್ಭಾಗದಲ್ಲಿದ್ದು ಹತ್ತಾರು ಕಡೆ ಸೋರಿಕೆಯಾಗುತ್ತಿದ್ದು ನಿತ್ಯವೂ ಇಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ.
ಸಂಪೂರ್ಣವಾಗಿ ಪೈಪ್‌ಲೈನ್ ತುಕ್ಕು ಹಿಡಿದಿದ್ದು ಒಂದೆಡೆ ತೇಪೆ ಹಾಕಿದರೆ ಮತ್ತೂಂದೆಡೆ ಹೊಡೆದುಕೊಳ್ಳುತ್ತಿದೆ. ನೀರಿನ ಸಮರ್ಪಕ ವಿತರಣೆಗೆ ಯಾವುದೇ ಕುಂದುಕೊರತೆಗಳಾಗಬಾರದೆಂದು ಸರ್ಕಾರಗಳು ಸಾಕಷ್ಟು ಅನುದಾನಗಳನ್ನು ಕೊಟ್ಟರೂ ಆ ಹಣವನ್ನು ಸಮರ್ಪಕವಾಗಿ ಬಳಕೆಮಾಡಿಕೊಳ್ಳದೇ ಸೋರಿಕೆ ಮಾಡುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಜನರ ಅಳಲನ್ನು ಒಂದು ಕಿವಿಯಿಂದ ಕೇಳಿ ಮತ್ತೂಂದು ಕಿವಿಯಿಂದ ಹೊರಹಾಕಿ ತಮಗೂ ಸಾರ್ವಜನಿಕರಿಗೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈಗಿರುವ ಹಳೆ ಪೈಪ್‌ಲೈನ್‌ನ್ನು ತೆಗೆದು ಹೊಸ ಪೈಪ್‌ಲೈನ್ ಅಳವಡಿಸಿದರೆ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ಆದ್ದರಿಂದ ಹೊಸ ಪೈಪ್ ಅಳವಡಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.