ದುಬೈನಲ್ಲಿ ಮಲೆನಾಡ ಹುಡುಗನ ವಿಜಯ ಪತಾಕೆ!

ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಇಂಡಿಯಾ ಚಾಂಪಿಯನ್‌ ಇಂದು ಬಿದನೂರಿನಲ್ಲಿ ಅದ್ಧೂರಿ ಸ್ವಾಗತ

Team Udayavani, Nov 16, 2019, 12:26 PM IST

16-November-10

ಕುಮುದಾ ನಗರ

ಹೊಸನಗರ: ದುಬೈನಲ್ಲಿ ನ. 10ರಂದು ನಡೆದ 17 ವರ್ಷ ವಯೋಮಾನದೊಳಗಿನ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಇಂಡಿಯಾ ವಿಜಯ ಪತಾಕೆ ಹಾರಿಸಿದೆ. ಮಲೆನಾಡ ಹುಡುಗ ಸನತ್‌ ಎಸ್‌. ಸತೀಶ ಗೌಡ, ಬೆಸ್ಟ್‌ ರೈಡರ್‌ ಆಗುವ ಮೂಲಕ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿ ಗಮನ ಸೆಳೆದಿದ್ದಾನೆ.

ಸಂಯುಕ್ತ ಭಾರತ ಖೇಲ್‌ ಫೌಂಡೇಶ್‌ ಆಯೋಜಿಸಿದ್ದ ರಾಷ್ಟ್ರೀಯ ಕಬಡ್ಡಿಯಲ್ಲಿ ಆಯ್ಕೆಯಾಗುವ ಮೂಲಕ ಶಿವಮೊಗ್ಗ ಜಿಲ್ಲೆ ನಗರದ ಸನತ್‌ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ದುಬೈಗೆ ತೆರಳಿದ್ದರು.

ಆರು ದೇಶಗಳು ಭಾಗಿ: ದುಬೈನ ಜಾಮ್‌ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ 17 ವರ್ಷದೊಳಗಿನ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಸಿಂಗಾಪುರ್‌, ಅಬುದಾಬಿ, ಮಲೇಶಿಯಾ ಮತ್ತು ಇಂಡಿಯಾ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.

ಅಬುದಾಬಿ ಮತ್ತು ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಇಂಡಿಯಾ ಫೈನಲ್‌ ಗೆ ಏರಿತ್ತು. ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಇಂಡಿಯಾ 20-16 ಅಂತರದಲ್ಲಿ ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಸನತ್‌ ಬೆಸ್ಟ್‌ ರೈಡರ್‌: ಮಲೆನಾಡ ಹುಡುಗ ಸನತ್‌ ಗೌಡ ಆಲ್‌ರೌಂಡರ್‌ ಆಗಿದ್ದು ಉತ್ತಮ ರೈಡ್‌ ಮೂಲಕ ಬೆಸ್ಟ್‌ ರೈಡರ್‌ ಪಟ್ಟವನ್ನು ಅಲಂಕರಿಸಿರುವುದು ಮಾತ್ರವಲ್ಲದೆ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಗಮನ ಸೆಳೆದಿದ್ದಾನೆ.

ಇಂಡಿಯಾ ತಂಡದಲ್ಲಿ ಕರ್ನಾಟಕದ ನಾಲ್ವರು: ಇಂಡಿಯಾ ತಂಡದಲ್ಲಿ ಹೊಸನಗರದ ಸನತ್‌, ತೀರ್ಥಹಳ್ಳಿಯ ಕಾರ್ತಿಕ್‌ ಮತ್ತು ಶಿರಸಿಯ ಪವನ್‌, ಬೆಂಗಳೂರಿನ ವಿಜಯ್‌, ಬೆಂಗಳೂರು ಗ್ರಾಮಾಂತರದ ಪ್ರಭು ಪ್ರತಿನಿಧಿಸಿದ್ದರು. ಉಳಿದಂತೆ ತಮಿಳುನಾಡಿನ ವಿಜಯ್‌, ಮಹಾರಾಷ್ಟ್ರದ ಕನಿಷ್‌R, ಉತ್ತರ ಪ್ರದೇಶದ ವಿನೋದ್‌ ಕೂಡ ತಂಡದಲ್ಲಿದ್ದರು. ಕೋಚ್‌ ಉಮಾಪತಿ ಮಾರ್ಗದರ್ಶನದಲ್ಲಿ ಆಟವಾಡಿದ ಹುಡುಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ
ದೇಶದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಹೊಸನಗರದ ಸನತ್‌: ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಸನತ್‌ ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿ. ತಾಲೂಕಿನ ನಗರ ಹೆಂಡೆಗದ್ದೆಯ ಸತೀಶ್‌ ಗೌಡ ಮತ್ತು ಸರೋಜ ದಂಪತಿಯ ಪುತ್ರ. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಚಾಂಪಿಯನ್‌ ಆಗಿರುವುದು ಓದಿದ ಶಾಲೆ ಮತ್ತು ಗ್ರಾಮಸ್ಥರಲ್ಲಿ ಸಂತಸ ಉಂಟು ಮಾಡಿದೆ.

ಇಂದು ಬಿದನೂರಿನಲ್ಲಿ ಸ್ವಾಗತಕ್ಕೆ ಸಿದ್ಧತೆ: ದುಬೈನಲ್ಲಿ ಕಬಡ್ಡಿ ಚಾಂಪಿಯನ್‌ ಆಗುವ ಮೂಲಕ ದೇಶಕ್ಕೆ, ನಾಡಿಗೆ, ಜೊತೆಗೆ ಊರಿನ ಕೀರ್ತಿಯನ್ನು ಹೆಚ್ಚಿಸಿದ ಸನತ್‌ ಶನಿವಾರ ತಾಲೂಕಿನ ಬಿದನೂರು ನಗರಕ್ಕೆ ಬರಲಿದ್ದು ಅದ್ಧೂರಿಯಾಗಿ ಬರಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜನಸೇವಕ ಸಂಸ್ಥೆಯ ವಿಶ್ವನಾಥ ಎಂ. ತಿಳಿಸಿದ್ದಾರೆ.

ಬಿದನೂರು ಕೋಟೆ ಹೆಬ್ಟಾಗಿಲ ಬಳಿ ಸ್ವಾಗತ ಕೋರಿ ಅಲ್ಲಿಂದ ಮೆರವಣಿಗೆ ಮೂಲಕ ಚಿಕ್ಕಪೇಟೆಗೆ ಕರೆತರಲಾಗುವುದು. ಬಳಿಕ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.