ಯುವತಿ ಮೇಲೆ ರೇಪ್ ಗೆ ಯತ್ನ; ರಕ್ಷಿಸಲು ಬಂದವರಿಂದಲೇ ಸಾಮೂಹಿಕ ಅತ್ಯಾಚಾರ!
Team Udayavani, Nov 16, 2019, 2:51 PM IST
ನವದೆಹಲಿ:ಪರಿಚಯದ ವ್ಯಕ್ತಿಯೊಬ್ಬನ ಆಹ್ವಾನದ ಮೇರೆಗೆ ಉದ್ಯೋಗ ಹುಡುಕುತ್ತ ಬಂದಿದ್ದ 21 ವರ್ಷದ ಯುವತಿಯೊಬ್ಬಳ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನೋಯ್ಡಾದ 63ನೇ ಸೆಕ್ಟರ್ ನ ಪಾರ್ಕ್ ನಲ್ಲಿ ನಡೆದಿದೆ.
ಯುವತಿಯು ತನ್ನ ಕುಟುಂಬದವರ ಜತೆ ನೋಯ್ಡಾದಲ್ಲಿ ವಾಸವಾಗಿದ್ದು, ಸೆಕ್ಟರ್ 63ರಲ್ಲಿ ಪರಿಚಯದ ರವಿ ಎಂಬಾತನನ್ನು ಭೇಟಿಯಾಗಲು ಬಂದಿದ್ದಳು. ಈತ ರಫ್ತು ಕಂಪನಿಯೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಉದ್ಯೋಗದ ಅವಕಾಶದ ಬಗ್ಗೆ ಕುಶಲೋಪರಿ ಮಾತುಕತೆ ನಂತರ ರವಿ ಆಕೆಯನ್ನು ಸಮೀಪದ ಪಾರ್ಕ್ ಗೆ ಕರೆದೊಯ್ದಿದ್ದ. ಈ ಸಂದರ್ಭದಲ್ಲಿ ರವಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಯುವತಿ ಸಹಾಯಕ್ಕಾಗಿ ಕೂಗಿಕೊಂಡಾಗ, ಸಮೀಪದಲ್ಲಿ ಇದ್ದ ಇಬ್ಬರು ಓಡಿ ಬಂದಿದ್ದರು. ನಂತರ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಹೊಡೆತ ತಿಂದ ರವಿ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ ಆತ ಓಡಿಹೋದ ನಂತರ ಗುಡ್ಡು, ಶಾಮು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ನಂತರ ಗೆಳೆಯರಾದ ಬ್ರಿಜಿಕಿಶೋರ್, ಪಿತಾಂಬರ್ ಮತ್ತು ಉಮೇಶ್ ಗೆ ಸ್ಥಳಕ್ಕೆ ಬರುವಂತೆ ಹೇಳಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಜಿಕಿಶೋರ್, ಪಿತಾಂಬರ್ ಮತ್ತು ಉಮೇಶ್ ನೋಯ್ಡಾದ ಬಾಹಲೋಲ್ ಪುರ್ ಗ್ರಾಮದ ಫಾರಂನಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಗುಡ್ಡು ಮತ್ತು ಶಾಮು ತಲೆಮರೆಸಿಕೊಂಡಿರುವುದಾಗಿ ವರದಿ ಹೇಳಿದೆ.
ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಯುವತಿ ಪಾರಾಗಿದ್ದು, ಆರೋಪಿಗಳು ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ತೀವ್ರ ಗಾಯಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.