ಅವಧಿಪೂರ್ವ ಜನಿಸಿದ ಶಿಶು

ಸೂಕ್ತ ಸಮಯದಲ್ಲಿ ಸರಿಯಾದ ಜಾಗದಲ್ಲಿ ಅತ್ಯುತ್ತಮ ಚಿಕಿತ್ಸೆ

Team Udayavani, Nov 17, 2019, 5:50 AM IST

nn-12

ವಿಶ್ವಾದ್ಯಂತ ಪ್ರತೀ ವರ್ಷ 15 ಮಿಲಿಯನ್‌ ಅವಧಿಪೂರ್ವ ಶಿಶುಗಳ ಜನನವಾಗುತ್ತಿದೆ. ಅಂದರೆ ಜನಿಸುವ ಪ್ರತೀ ಹತ್ತು ಶಿಶುಗಳಲ್ಲಿ ಒಂದು ಅವಧಿಪೂರ್ವ ಜನಿಸಿದ್ದಾಗಿರುತ್ತದೆ. ಅಧಿಕ ಸಂಖ್ಯೆಯ ಮರಣ, ಬುದ್ಧಿಮಾಂದ್ಯ, ನೋವು ಮತ್ತು ಅಸೌಖ್ಯಗಳಿಗೆ ಮುಖ್ಯ ಕಾರಣವಾದ ಈ ಅವಧಿಪೂರ್ವ ಶಿಶು ಜನನವು ಬಹಳ ಮುಖ್ಯವಾದ ಸಮಸ್ಯೆ. ಇದನ್ನು ಎದುರಿಸುವ ಸಲುವಾಗಿ ವಿಶ್ವಾದ್ಯಂತ ಆರೋಗ್ಯ ಸಂಸ್ಥೆಗಳು ಪ್ರತೀ ವರ್ಷ ನವೆಂಬರ್‌ 17ನ್ನು ಅವಧಿಪೂರ್ವ ಶಿಶು ದಿನ ಎಂಬುದಾಗಿ ಘೋಷಿಸುತ್ತವೆ. ಈ ವರ್ಷ ಈ ದಿನವನ್ನು “ಬಹುಬೇಗ ಜನಿಸಿದ ಶಿಶುವಿಗೆ ಸೂಕ್ತ ಸಮಯದಲ್ಲಿ ಸರಿಯಾದ ಜಾಗದಲ್ಲಿ ಅತ್ಯುತ್ತಮ ಚಿಕಿತ್ಸೆ’ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ವಿವಿಧ ದೇಶ, ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ನಾನಾ ಕಾರ್ಯಕಲಾಪಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅವಧಿಪೂರ್ವ/ ಕಡಿಮೆ  ತೂಕದ ಶಿಶುಗಳು ಜನಿಸಲು ಕಾರಣಗಳೇನು?
 ಗರ್ಭಿಣಿಯರಲ್ಲಿ ಸೋಂಕು.
 ಅಧಿಕ ರಕ್ತದ ಒತ್ತಡ
 ಗರ್ಭಧಾರಣೆಯ ಸಮಯದ ಮಧುಮೇಹ.
 ಆರಂಭಿಕ ಸಮಯದಲ್ಲಿ ಗರ್ಭದಿಂದ ನೀರು ಹೋಗುವುದು.
ಗರ್ಭಕಂಠದ ತೊಂದರೆಗಳು.
 ಗರ್ಭ ಸಂಬಂಧಿತ ತೊಂದರೆಗಳು.
ಒಂದಕ್ಕಿಂತ ಹೆಚ್ಚು ಗರ್ಭಧಾರಣೆ (ಅವಳಿ, ತ್ರಿವಳಿ ಇತ್ಯಾದಿ).
 ಮಗುವಿನ ಬೆಳವಣಿಗೆ, ಅಕಾಲಿಕ ಜನನದ ತೊಂದರೆಗಳು.
 ಜೀವನಶೈಲಿ ಮತ್ತು ಅಕಾಲಿಕ ಜನನ.

ಅವಧಿಪೂರ್ವ ಶಿಶುವಿನ ಆರೈಕೆ
ಗರ್ಭಾಶಯದಲ್ಲಿ ಇರುವ ಶಿಶುವು ಮೂವತ್ತೇಳು ವಾರಗಳಿಗೆ ಮೊದಲು ಅಥವಾ 259 ದಿನಗಳ ಮೊದಲು ಜನಿಸಿದರೆ, ಆ ಶಿಶುವಿಗೆ ಅವಧಿ ಪೂರ್ವ ಶಿಶು ಎಂದೂ, ಹುಟ್ಟುವಾಗ 2.5 ಕಿಲೋಗ್ರಾಂಗಿಂತ ಕಡಿಮೆ ತೂಕವಿರುವ ಶಿಶು ಕಡಿಮೆ ತೂಕದ ಶಿಶು ಎಂದೂ ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.
 ಶಿಶುಗಳನ್ನು ನೋಡಿಕೊಳ್ಳಲು ಅಗತ್ಯವಾದ ಮಾರ್ಗಸೂಚಿಗಳು, ಸಲಕರಣೆಗಳು, ಸರಬರಾಜುಗಳು ಮತ್ತು ಮೂಲ ಸೌಕರ್ಯಗಳನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳುವುದು.
ನವಜಾತ ಶಿಶು ಘಟಕದಲ್ಲಿ ಶುಶ್ರೂಷೆಯ ಅವಧಿಯಲ್ಲಿ ತಾಯಿ ಮತ್ತು ಮಗುವನ್ನು ಸಾಧ್ಯವಾದಷ್ಟು ಬೇರ್ಪಡಿಸದಂತೆ ನೋಡಿಕೊಳ್ಳವುದು.
ಮಗು ಮತ್ತು ತಾಯಿ ನಡುವಿನ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹಾಗೂ ಬಾಂಧವ್ಯ ಜಾಸ್ತಿ ಆದ ಹಾಗೆ ದೈಹಿಕ ಆರೋಗ್ಯ ಉತ್ತೇಜನಗೊಳ್ಳುತ್ತದೆ. ಮಗುವಿಗೆ ತಾಯಿಯ ಹಾಲು ಸಿಗುತ್ತದೆ.
ಅವಧಿಪೂರ್ವ ಶಿಶುಗಳ ವಿಶೇಷ ಅಗತ್ಯಗಳ ಕುರಿತು ಆರೋಗ್ಯ ಸಿಬಂದಿ ಮತ್ತು ಶಿಶುವಿನ ಕುಟುಂಬಸ್ಥರ ನಡುವೆ ಉತ್ತಮ ಸಂಪರ್ಕ ನಡೆಸಿ ಉತ್ತಮ ಭಾವನಾತ್ಮಕ ಬೆಂಬಲ ನೀಡುವುದು.
ಸರಿಯಾದ ವೈದ್ಯಕೀಯ ಸೌಲಭ್ಯ ಮತ್ತು ಶುಶ್ರೂಷೆ ದೊರೆತರೆ ನವಜಾತ ಶಿಶುಗಳು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಖಚಿತವಾಗಿ ಬದುಕುಳಿಯುತ್ತವೆ ಮತ್ತು ಅಭಿವೃದ್ಧಿ ಹೊಂದುತ್ತವೆ ಎಂದು ಎಲ್ಲರಿಗೂ ತಿಳಿವಳಿಕೆ ನೀಡುವುದು.

ವಿವಿಧ ಕಾರ್ಯಕ್ರಮ
1. ಪ್ರತಿ ಹಂತದಲ್ಲೂ ಅತ್ಯುತ್ತಮ ಗುಣಮಟ್ಟದ ಸಂಶೋಧನೆ ಆಧಾರಿತ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಿ ಮತ್ತು ಪರಿವರ್ತಿಸಿ ಶುಶ್ರೂಷಕ ನೇತೃತ್ವದ ಆರೈಕೆಯಿಂದ ಅಕಾಲಿಕ ಜನನವನ್ನು ಶೇ.24ರಷ್ಟು ಕಡಿಮೆಗೊಳಿಸುವುದು.
2. ಎಲ್ಲ ಮಹಿಳೆಯರು ಮತ್ತು ಶಿಶುಗಳಿಗೆ ಹೆರಿಗೆಯ ಮೊದಲು ಮತ್ತು ಅನಂತರ ಉತ್ತಮ ಗುಣಮಟ್ಟದ ಆರೈಕೆ ಒದಗಿಸುವುದು.
3. ನವಜಾತ ಶಿಶುವಿನ ಆರೈಕೆಯಲ್ಲಿ ಕೌಶಲ ಹೊಂದಿರುವ ಆರೋಗ್ಯ ಕಾರ್ಯಪಡೆ, ವಿಶೇಷವಾಗಿ ವೈದ್ಯಕೀಯ ಮತ್ತು ಶುಶ್ರೂಷಕಿಯರ ಶೈಕ್ಷಣಿಕ ಹಾಗೂ ಶುಶ್ರೂಷಕ ಕ್ರಮವನ್ನು ಬಲಪಡಿಸುವತ್ತ ಗಮನ.
ತೀವ್ರ ಕಡಿಮೆ ತೂಕದ ಮತ್ತು ಅನಾರೋಗ್ಯವುಳ್ಳ ನವಜಾತ ಶಿಶುಗಳು ಆರಂಭಿಕ, ಅಗತ್ಯವಾದ ನವಜಾತ ಆರೈಕೆ ಸೇರಿದಂತೆ ಪೋಷಣೆಯ ಮತ್ತು ಸುರಕ್ಷತೆ, ಸ್ಪಂದಿಸುವ ಆರೈಕೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು.
ಅಭಿವೃದ್ಧಿಯ ಬೆಂಬಲ ಆರೈಕೆಯನ್ನು ಉತ್ತೇಜಿಸಲು ಸರಳ, ವೆಚ್ಚ- ಪರಿಣಾಮಕಾರಿ ಮಾರ್ಗಗಳನ್ನು ಕಾರ್ಯಗತಗೊಳಿಸಿ, ಉದಾ. ಸೌಮ್ಯ ಸ್ಪರ್ಶ, ಚರ್ಮದಿಂದ ಚರ್ಮ ಆರೈಕೆ, ಕಾಂಗರೂ ಆರೈಕೆ, ವಯಸ್ಸಿಗೆ ಸೂಕ್ತವಾದ ಪ್ರಚೋದನೆ ಮತ್ತು ಪರಸ್ಪರ ಕ್ರಿಯೆ, ಶಬ್ದ ಮತ್ತು ಪ್ರಕಾಶಮಾನವಾದ ಬೆಳಕಿನಿಂದ ರಕ್ಷಣೆ ಅಥವಾ ತಾಯಿಯ ಗರ್ಭ ಕೋಶದಲ್ಲಿ ಇಟ್ಟ ಭಂಗಿಯಲ್ಲಿಯೇ ಶಿಶುವನ್ನು ಮಲಗಿಸುವುದು.

ಅವಧಿ ಪೂರ್ವ ಶಿಶುಗಳ ಲಾಲನೆ ಪಾಲನೆ ಅವಧಿ ಪೂರ್ವ/ ಕಡಿಮೆ ತೂಕವಿರುವ ಶಿಶುಗಳು ಎದುರಿಸುವ ತೊಂದರೆಗಳೇನು?
1. ಉಸಿರಾಟದ ತೊಂದರೆ
2. ದೇಹದ ಶಾಖ ಕಾಪಾಡುವಲ್ಲಿ ಕೊರತೆ
3. ಪೌಷ್ಟಿಕತೆಯನ್ನು ಕಾಪಾಡುವ ತೊಂದರೆ
4. ಪಿತ್ತ ಕಾಮಾಲೆಯ ತೊಂದರೆ
5. ಸೋಂಕು ತಗಲುವ ಭೀತಿ
6. ತಾಯಿ- ಮಗುವನ್ನು ಬೇರ್ಪಡಿಸಬೇಕಾದ ಪರಿಸ್ಥಿತಿ
7. ಇತರ ತೊಂದರೆಗಳು

1. ಉಸಿರಾಟದ ತೊಂದರೆ
ಶ್ವಾಸಕೋಶದಲ್ಲಿ ಸಫ‌ಕ್ಟಾಂಟ್‌ ಎಂಬ ಅಂಶದ ಕೊರತೆಯಿಂದ ಉಸಿರಾಟದ ತೊಂದರೆಯು ಉಂಟಾಗುವುದರಿಂದ, ಇದನ್ನು ನೀಗಿಸಲು ಸಫ‌ìಕ್ಟಾಂಟನ್ನು ಶ್ವಾಸಕೋಶಕ್ಕೆ ನಾಳದ ಮೂಲಕ ನೀಡಬೇಕಾಗಬಹುದು. ಅಲ್ಲದೆ ಸ್ವಲ್ಪ ಸಮಯ ಕೃತಕ ಉಸಿರಾಟದ ಅಗತ್ಯವೂ ಬರಬಹುದು.

2. ದೇಹದ ಶಾಖ ಕಾಪಾಡುವ ಕೊರತೆ
ಈ ಶಿಶುಗಳಲ್ಲಿ ದೇಹದ ಶಾಖವನ್ನು ಕಾಪಾಡಿಕೊಳ್ಳುವಂತಹ ಕೊಬ್ಬಿನಂಶವು ಕಡಿಮೆ ಇರುತ್ತದೆ. ತಾಯಿಯ ಗರ್ಭದಲ್ಲಿ 37 ಡಿಗ್ರಿ ಸೆ. ತಾಪದಲ್ಲಿ ಬೆಚ್ಚಗಿದ್ದ ಭ್ರೂಣವು ಹೊರಬಂದ ಬಳಿಕ 25ರಿಂದ 27 ಡಿಗ್ರಿ ಸೆ. ತಾಪಮಾನಕ್ಕೊಳಗಾಗುವುದು. ಈ ಸಮಯದಲ್ಲಿ ಶಿಶುವಿನ ಶಾಖ ಕಾಪಾಡುವ ಕೊರತೆಯನ್ನು ನೀಗಿಸಲು ಶಾಖ ಕಾಪಾಡುವ ಯಂತ್ರಗಳಾದ ಇನ್‌ಕುÂಬೇಟರ್‌ ಹಾಗೂ ಶಾಖಸಾಧನಗಳನ್ನು ಉಪಯೋಗಿಸಬೇಕಾಗುತ್ತದೆ. ಇದರೊಂದಿಗೆ ಅತ್ಯುತ್ತಮ ಕ್ರಮವಾದ ಕಾಂಗರೂ ಆರೈಕೆಯನ್ನು ನೀಡುವುದು ಅಲ್ಲದೆ ಬೆಚ್ಚಗಿನ ಬಟ್ಟೆಯಿಂದ ಸುತ್ತುವುದು ಮೊದಲಾದ ವಿಧಾನಗಳಿಂದ ಶಿಶುವಿನ ಶರೀರದ ಶಾಖವನ್ನು ಕಾಪಾಡಿಕೊಳ್ಳಬಹುದು.

ಕಾಂಗರೂ ಆರೈಕೆ ಅಂದರೆ ತಾಯಿ ಅಥವಾ ತಂದೆ, ಅಜ್ಜ, ಅಜ್ಜಿ, ಇನ್ಯಾರಾದರೂ ತಯಾರಿದ್ದಲ್ಲಿ ಅವರ ಎದೆಯ ಮೇಲೆ ಶಿಶುವನ್ನು ಇಟ್ಟು ಚೆನ್ನಾಗಿ ಬಟ್ಟೆಯಿಂದ ಸುತ್ತಿಕೊಂಡು ಕನಿಷ್ಠ ಒಂದು ಗಂಟೆ ಅಥವಾ ಇಪ್ಪತ್ನಾಲ್ಕು ಗಂಟೆಯವರೆಗೆ ಅದೇ ಭಂಗಿಯಲ್ಲಿ ಬೆಚ್ಚಗಾಗಿ ಇರಿಸಿಕೊಳ್ಳುವುದು. ಇದು ದೇಹದ ಶಾಖವನ್ನು ಕಾಪಾಡಲು ಸಹಕಾರಿಯಲ್ಲದೆ, ಉಸಿರಾಟವನ್ನು ನಿಯಂತ್ರಿಸಿಕೊಳ್ಳಲು, ಸೋಂಕಿನಿಂದ ರಕ್ಷಿಸಲು, ಮೆದುಳಿನ ಬೆಳವಣಿಗೆಗೆ ಹಾಗೂ ದೈಹಿಕ ಬೆಳವಣಿಗೆಯೊಂದಿಗೆ ಆಸ್ಪತ್ರೆಯಿಂದ ಶಿಶುವನ್ನು ಬೇಗನೆ ಡಿಸಾcರ್ಜ್‌ ಮಾಡಲೂ ಅನುಕೂಲವಾಗುವುದೆಂದು ವೈದ್ಯಕೀಯ ಸಂಶೋಧನೆಯಿಂದ ತಿಳಿದು ಬಂದಿದೆ.

3. ಪೌಷ್ಟಿಕತೆಯನ್ನು ಕಾಪಾಡುವ ತೊಂದರೆ
ಈ ಶಿಶುಗಳ ಚೀಪುವ ಹಾಗೂ ನುಂಗುವ ಕ್ರಿಯೆಯು ಸಮರ್ಪಕವಾಗಿರುವುದಿಲ್ಲ ಹಾಗೂ ಕರುಳು ಬೆಳವಣಿಗೆ ಹೊಂದಿರುವುದಿಲ್ಲ. ಮುಖ್ಯವಾಗಿ ಮೂವತ್ತರೆಡರಿಂದ ಮೂವತ್ನನಾಲ್ಕು ವಾರಗಳ ಮೊದಲು ಜನನವಾದ ಶಿಶುಗಳಿಗೆ, ನಳಿಕೆಯ ಮೂಲಕ ಎದೆ ಹಾಲು ನೀಡಬೇಕಾಗುವುದು.
ಇಲ್ಲವೇ ಇನ್ನೂ ಎಳೆವಯಸ್ಸಿನ ಶಿಶುಗಳಿಗೆ ರಕ್ತನಾಳದ ಮೂಲಕ ಗ್ಲೂಕೋಸ್‌ ಹಾಗೂ ಇತರ ಪೋಷಕಾಂಶಗಳನ್ನು ನೀಡಬೇಕಾಗಬಹುದು. ಅಲ್ಲದೆ ಈ ಸಮಯದಲ್ಲಿ ಎದೆಹಾಲನ್ನು ಸಣ್ಣ ಪ್ರಮಾಣದಲ್ಲಿ ಶಿಶುವಿಗೆ ನೀಡುತ್ತಿದ್ದು, ಶಿಶುವು ಜೀರ್ಣಿಸಿಕೊಂಡ ಹಾಗೆ ಕ್ರಮೇಣ ಜಾಸ್ತಿ ಮಾಡುತ್ತಾ ಶಿಶುವು ಪೂರ್ತಿ ಹಾಲನ್ನು (ಸಾಮಾನ್ಯವಾಗಿ ಪ್ರತೀ ಕಿಲೋ ಗ್ರಾಂ ತೂಕಕ್ಕೆ 150 ಮಿಲಿ ಲೀಟರಿನಷ್ಟು) ಜೀರ್ಣಿಸಿಕೊಳ್ಳಲು ತಯಾರಾಗುವಾಗ ರಕ್ತನಾಳದ ಮುಖಾಂತರ ನೀಡುವ ಪೌಷ್ಟಿಕ ಆಹಾರವನ್ನು ನಿಲ್ಲಿಸಿ, ಒಂದು ಸಲ ಶಿಶುವಿನ ನುಂಗುವ ಹಾಗೂ ಚೀಪುವ ಕ್ರಿಯೆಯು ಉಸಿರಾಟದೊಂದಿಗೆ ಸಮರ್ಪಕವಾಗಿ ಏರ್ಪಟ್ಟಲ್ಲಿ (ಸಾಧಾರಣವಾಗಿ ಮೂವತ್ತನಾಲ್ಕನೇ ವಾರದ ಸಮಯದಲ್ಲಿ) ಎದೆ ಹಾಲು ನೀಡಲು ಪ್ರಯತ್ನಿಸಲಾಗುವುದು.

4. ಪಿತ್ತ ಕಾಮಾಲೆಯ ತೊಂದರೆ
ಈ ಶಿಶುಗಳ ಯಕೃತ್‌ ಬೆಳವಣಿಗೆ ಹೊಂದಿರದ ಕಾರಣ ಹಾಗೂ ಸಮರ್ಪಕ ರಕ್ತ ಕಣಗಳ ಜೀವಾವಧಿಯು ಕಡಿಮೆಯಿದ್ದು, ಜನನವಾದ 48ರಿಂದ 72 ಗಂಟೆಗಳ ಅವಧಿಯಲ್ಲಿ ಪಿತ್ತ ಕಾಮಾಲೆಯ ಅಂಶವು ರಕ್ತದಲ್ಲಿ ಹೆಚ್ಚಾಗುತ್ತಾ ಹೋಗುವುದು. ಇದು ದೇಹದಲ್ಲಿ ಹೆಚ್ಚಾಗುತ್ತಾ ಹೋದಲ್ಲಿ ಬಹಳ ಅಪಾಯಕಾರಿ. ಇದಕ್ಕೆ ಫೊಟೋತೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆ ನೀಡುವಾಗ ಮಗುವಿನ ಕಣ್ಣನ್ನು ಮುಚ್ಚಿಡಬೇಕಾಗುವುದು. ಯಾಕೆಂದರೆ ಆ ಫೋಟೋತೆರಪಿಯ ಕಿರಣ ಕಣ್ಣಿಗೆ ಒಳ್ಳೆಯದಲ್ಲ. ಇದಲ್ಲದೆ ಫೋಟೋತೆರಪಿಯ ಬೆಳಕಿನಡಿ ಇಟ್ಟ ಮಗುವಿನ ತಾಪಮಾನ ಏರುಪೇರಾಗದಂತೆ ನೋಡಿಕೊಳ್ಳುತ್ತಾರೆ ಹಾಗೂ ಶಿಶುವಿಗೆ ನಿರ್ಜಲತೆಗೆ ಆಗದ ಹಾಗೆ ಶಿಶುವಿನ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು, ಸಮಯಕ್ಕೆ ಸರಿಯಾಗಿ ಶಿಶುವಿನ ರಕ್ತನಾಳಗಳ ಮೂಲಕ ಅಥವಾ ಬಾಯಿಯ ಮುಖಾಂತರ ಪೌಷ್ಟಿಕಾಂಶವನ್ನು ನೀಡಿ ಶಿಶುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲಾಗುವುದು. ಇದರೊಂದಿಗೆ ರಕ್ತದಲ್ಲಿ ಪಿತ್ತ ಕಾಮಾಲೆಯ ಅಂಶವನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಲಾಗುವುದು.

5. ಸೋಂಕು ತಗಲುವ ಭೀತಿ
ಅವಧಿಪೂರ್ವ ಜನಿಸಿದ ಶಿಶುವಿನಲ್ಲಿ ರೋಗ ನಿರೋಧಕ ಅಂಶವೂ ಕಡಿಮೆಯಿದ್ದು, ಸೋಂಕು ತಗಲುವ ಸಂಭವ ಜಾಸ್ತಿ. ಇದರಿಂದ ಹೆರಿಗೆ ಕೋಣೆ, ನವಜಾತ ಶಿಶು ಘಟಕ ಹಾಗೂ ಶಿಶುವನ್ನು ಆರೈಕೆ ನೀಡುವ ಜಾಗದಲ್ಲಿ ಅತ್ಯಂತ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯ ಅಂಶವಾಗಿದೆ. ಈ ಕಾರಣಕ್ಕೆ ಹೆರಿಗೆ ಕೋಣೆ, ನವಜಾತ ಶಿಶು ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂದರ್ಶಿಸುವುದನ್ನು ನಿಷೇಧಿಸಿರುತ್ತಾರೆ. ಎಲ್ಲ ಜಾಗದಲ್ಲಿ ಕೈತೊಳೆಯಲು ಬೇಕಾದ ವ್ಯವಸ್ಥೆ ಮಾಡಲಾಗಿರುತ್ತದೆ. ಶುಚಿತ್ವವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಗಿರುತ್ತದೆ. ಅಲ್ಲದೆ ಗರ್ಭಕೋಶದಲ್ಲಿರುವಾಗ ತಾಯಿಗೆ ಸೋಂಕಿದ್ದರೆ ತಾಯಿಯಿಂದ ಮಗುವಿಗೆ ಸೋಂಕು ಬರುವ ಸಾಧ್ಯತೆಯೂ ಇರುತ್ತದೆ.

6. ತಾಯಿ ಮತ್ತು ಮಗುವನ್ನು ಬೇರ್ಪಡಿಸಬೇಕಾದ ಪರಿಸ್ಥಿತಿ
ಶಿಶುವಿಗೆ ಮೇಲೆ ತಿಳಿಸಿದ ಎಲ್ಲ ತೊಂದರೆಗಳಿರುವುದರಿಂದ ಶಿಶುವನ್ನು ತಾಯಿಯಿಂದ ಬೇರ್ಪಡಿಸಿ ನವಜಾತ ಶಿಶುಘಟಕದಲ್ಲಿಡಬೇಕಾಗುವುದು. ಹೀಗೆ ತಾಯಿ ಹಾಗೂ ಮಗುವನ್ನು ಬೇರ್ಪಡಿಸುವುದರಿಂದ, ಶಿಶುವಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸ್ವಲ್ಪ$ಧಕ್ಕೆಯಾಗುವುದಲ್ಲದೆ ಮಗುವಿನ ಮುಂದಿನ ಬೆಳವಣಿಗೆಗೂ ಅಡಚಣೆಯಾಗುವುದೆಂದು ವೈದ್ಯಕೀಯ ಸಂಶೋಧನೆಯ ಮೂಲಕ ತಿಳಿದು ಬಂದಿದೆ. ಈ ಸಮಯದಲ್ಲಿ ಇತ್ತೀಚೆಗೆ ಶಿಶುವಿಗೆ ಗರ್ಭಕೋಶದಲ್ಲಿರುವಂತೆ ಬೆಚ್ಚಗೆ ಹಾಗೂ ಕೈಕಾಲನ್ನು ಗರ್ಭ ಕೋಶದಲ್ಲಿರುವಂತೆಯೇ ಮಡಚಿಡಲು ಸ್ನಗ್ಲ್ಅಪ್‌ ಎಂಬ ಭಂಗಿಯಲ್ಲಿ ಶಿಶುವನ್ನು ಇಡಲಾಗುವುದು. ಅದಲ್ಲದೆ ಹೆರಿಗೆಯ ಅನಂತರ ಚೇತರಿಸಿಕೊಂಡ ಕೂಡಲೇ ತಾಯಿಯಂದಿರನ್ನು ಶಿಶು  ಘಟಕಕ್ಕೆ ಕರೆದು ಶಿಶುವನ್ನು ಸ್ಪರ್ಶಿಸಲು ಹಾಗೂ ಸಾಧ್ಯವಾದಲ್ಲಿ ಕಾಂಗರೂ ಆರೈಕೆ ನೀಡಲು ನವಜಾತ ಶಿಶು ಘಟಕದ ಸಿಬಂದಿಯವರು ಪ್ರೋತ್ಸಾಹಿಸುವರು. ಈ ಎಲ್ಲ ಚಟುವಟಿಕೆಯಿಂದ ಶಿಶುವಿಗೆ ಮುಂದಿನ ಬೆಳವಣಿಗೆಗೆ ಅನುಕೂಲವಾಗುವುದೆಂದು ವೈದ್ಯಕೀಯ ಸಂಶೋಧನೆಗಳು ತೋರಿಸಿಕೊಟ್ಟಿವೆ

7. ಇತರ ತೊಂದರೆ
ದೇಹದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುವುದು ಈ ಶಿಶುಗಳ ಯಕೃತ್ತು ಬೆಳವಣಿಗೆ ಹೊಂದಿರದ ಕಾರಣ, ಯಕೃತ್ತುನಲ್ಲಿ ಸಕ್ಕರೆಯ ಅಂಶ ಸಂಗ್ರಹಿಸಿಡಲಾಗುವುದಿಲ್ಲ. ಇದರ ಪರಿಣಾಮವಾಗಿ ಶಿಶುವಿಗೆ ದೇಹಕ್ಕೆ ಬೇಕಾದಷ್ಟು ಗುÉಕೋಸ್‌ ದೊರೆಯದೆ ಈ ತೊಂದರೆ ಉಂಟಾಗುವ ಸಂಭವವಿರುತ್ತದೆ. ಮೂವತ್ತೆರಡು ವಾರಗಳ ಮೊದಲು ಜನಿಸಿದಲ್ಲಿ ರಕ್ತನಾಳದ ಮೂಲಕ ಸಕ್ಕರೆಯ ಅಂಶವನ್ನು ನೀಡಬೇಕಾಗಬಹುದು. ಅಲ್ಲದೆ ದಿನಕ್ಕೆರಡು ಬಾರಿಯಾದರೂ ರಕ್ತದಲ್ಲಿ ಗ್ಲುಕೋಸ್‌ ಅಂಶ ಎಷ್ಟಿದೆಯೆಂದು ಪರೀಕ್ಷಿಸಲಾಗುವುದು. ಶಿಶುವಿನ ದೇಹದಲ್ಲಿ ತೀರಾ ಸಕ್ಕರೆ ಅಂಶವು ಕಡಿಮೆಯಾಗುವುದರಿಂದ ಶಿಶುವಿನ ಮೆದುಳಿನ ಬೆಳವಣಿಗೆಗೆ ಅಡಚಣೆಯಾಗುವ ಸಂಭವ ಇರುತ್ತದೆ.

ಮೆದುಳಿನ ಒಳಭಾಗದಲ್ಲಿ ರಕ್ತಸ್ರಾವ
ಅವಧಿ ಪೂರ್ವ ಜನಿಸಿದ ಶಿಶುಗಳ ಮೆದುಳು ತುಂಬಾ ಸೂಕ್ಷ್ಮವಾಗಿದ್ದು, ಕೆಲವು ಭಾಗಗಳಲ್ಲಿ ಬೇಗನೇ ರಕ್ತ ಸ್ರಾವ ವಾಗುವ ಸಂಭವ ಜಾಸ್ತಿ. ಇದನ್ನು ಪರೀಕ್ಷಿಸಲು ತಲೆಯ ಆಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಮಾಡಬೇಕಾಗಬಹುದು. ಇದನ್ನು ತಡೆಗಟ್ಟಲು ಆರೈಕೆ ಮಾಡು
ವಾಗ, ಡಯಾಪರ್‌ ಬದಲಾಯಿಸು ವಾಗ ಅಥವಾ ಮಗ್ಗುಲು ತಿರುಗಿಸು ವಾಗ ತೀರಾ ಸಣ್ಣ ಗಾತ್ರದ ಶಿಶು ಗಳನ್ನು ಬಹಳ ನಾಜೂಕಾಗಿ ನೋಡಿ ಕೊಳ್ಳಬೇಕಾಗುವುದು. ಈ ಸಮಯದಲ್ಲಿ ಸ್ವಲ್ಪ ಏರು ಪೇರಾದರೂ ಮೆದುಳಿನಲ್ಲಿ ರಕ್ತ ಸ್ರಾವವಾಗುವ ಸಂಭವ ಇರುತ್ತದೆ.

ಕಣ್ಣಿನ ದೃಷ್ಟಿ ಪಟಲದ ತೊಂದರೆ
ಅವಧಿಪೂರ್ವ ಜನಿಸಿದ ಶಿಶುಗಳ ಕಣ್ಣಿನ ಒಳಭಾಗವು ತುಂಬಾ ಸೂಕ್ಷ್ಮವಾಗಿದ್ದು ಈ ಶಿಶುಗಳಿಗೆ ಆಮ್ಲಜನಕ ನೀಡುವಾಗ ಬಹಳ ಜಾಗರೂಕತೆಯಿಂದ ನೀಡಬೇಕಾಗುತ್ತದೆ. ಅಲ್ಲದೆ ಹೆಚ್ಚಿನ ಬೆಳಕಿನ ಪ್ರಕಾಶಕ್ಕೆ ಮಗು ಕಣ್ಣು ತೆರೆಯದಂತೆ ನೋಡಿಕೊಳ್ಳಬೇಕಾಗುತ್ತದೆ. ದೃಷ್ಟಿ ಪಟಲದ ತೊಂದರೆಯನ್ನು ನಿವಾರಿಸಲು ಬೆಳವಣಿಗೆಯ ಪ್ರತೀ ಹಂತದಲ್ಲಿ ವೈದ್ಯರ ಸಲಹೆಯಂತೆ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗುವುದು. ಇದನ್ನು ನಿರ್ಲಕ್ಷಿಸಿದಲ್ಲಿ ಮಗುವು ಅಂಧತ್ವಕ್ಕೆ ಒಳಗಾಗುವ ಸಂಭವ ಇರುತ್ತದೆ.

ಅವಧಿ ಪೂರ್ವ/ಕಡಿಮೆ ತೂಕದ ಶಿಶುವನ್ನು ಮನೆಯಲ್ಲಿ ಆರೈಕೆ ಮಾಡುವುದು ಹೇಗೆ?
ದೇಹದ ಶಾಖ ಕಾಪಾಡುವುದು ಮೊದಲನೆಯದಾಗಿ ಮಗುವು ಮನೆಗೆ ತಲುಪುವ ಮೊದಲು ಮಗುವನ್ನು ಮಲಗಿಸುವ ಕೊಠಡಿಯನ್ನು ಚೆನ್ನಾಗಿ ಧೂಳು ತೆಗೆದು ಕ್ರಿಮಿನಾಶಕವನ್ನು ಉಪಯೋಗಿಸಿ ಸ್ವತ್ಛ ಮಾಡಿಟ್ಟುಕೊಳ್ಳಬೇಕು. ಮಗುವಿಗೆ ಬೇಕಾಗುವ ಎಲ್ಲ ಬಟ್ಟೆ ಬರೆಗಳನ್ನು ಒಗೆದು ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು. ಮಗುವನ್ನು ಮಲಗಿಸುವಾಗ ಹೊದಿಕೆಯನ್ನು ಸಡಿಲವಾಗಿ ಸುತ್ತಿ ಬೆಚ್ಚಗಿಡಬೇಕು, ಟೋಪಿ ಹಾಗೂ ಸಾಕ್ಸ್‌ಗಳನ್ನು ಬಳಸಿ, ಕಾಂಗರೂ ಆರೈಕೆಯನ್ನು ಮುಂದುವರಿಸಿ. ಚಳಿಗಾಲದಲ್ಲಿ ಅಗತ್ಯವಿದ್ದಲ್ಲಿ ರೂಮ್‌ ಹೀಟರ್‌ ಬಳಸಿ.

ಪೌಷ್ಟಿಕತೆಯನ್ನು ಕಾಪಾಡುವುದು
ಮಗುವು ಎದೆ ಹಾಲು ಸರಿಯಾಗಿ ಚೀಪುತ್ತಿದ್ದಲ್ಲಿ ಅದನ್ನೇ ಮುಂದುವರಿಸಿ. ಸರಿಯಾಗಿ ಹಾಲು ಚೀಪದಿದ್ದಲ್ಲಿ, ಒಳಲೆ ಅಥವಾ ಚಮಚೆಯಿಂದಲೂ ಹಿಂಡಿದ ಹಾಲನ್ನು ಕುಡಿಸಬಹುದು. ಹಾಲು ನೀಡುವಾಗ ಪ್ರತೀ ಸಲ ಒಂದು ಸ್ತನವನ್ನು ಪೂರ್ತಿ ಖಾಲಿ ಮಾಡಿ, ಇನ್ನೊಮ್ಮೆ ಇನ್ನೊಂದನ್ನು ನೀಡಿ. ಹೀಗೆಯೇ ಪುನರಾವರ್ತಿಸಿ, ಹಾಲು ಜಾಸ್ತಿಯಿದ್ದಲ್ಲಿ ಹಿಂಡಿಟ್ಟು ಶೇಖರಿಸಿಡಿ. ಹೀಗೆ ಶೇಖರಿಸಿಟ್ಟ ಹಾಲನ್ನು ಆರು ತಾಸಿನವರೆಗೆ ಕೊಠಡಿಯ ತಾಪಮಾನದಲ್ಲಿ ಇಡಬಹುದು.

ಸೋಂಕಿನಿಂದ ತಡೆಗಟ್ಟುವಿಕೆ
ಮಗುವನ್ನು ಎತ್ತಿಕೊಳ್ಳುವುದಕ್ಕೆ ಮೊದಲು ಸಾಬೂನು ಬಳಸಿ ಚೆನ್ನಾಗಿ ಕೈ ತೊಳೆದುಕ್ಕೊಳ್ಳಿ.
ಮಗು ಹಾಗೂ ತಾಯಿ ಮಲಗುವ ಕೋಣೆಗೆ ಸೋಂಕು ಹೊಂದಿರುವವರು ಸಂದರ್ಶಿಸದಂತೆ ನೋಡಿಕೊಳ್ಳಿ ಮಗುವಿಗೆ 2.5 ಕಿಲೊಗ್ರಾಮ್ಸ್‌ ತೂಕ ಬರುವವರೆಗೆ ಎಣ್ಣೆ ಸ್ನಾನ ಬೇಡ,
ಸ್ವತ್ಛವಾದ ಬಟ್ಟೆಯಿಂದ ಒರಸಿಕೊಳ್ಳಿ. ಸ್ನಾನ ಮಾಡಿದ ಅನಂತರ ಪೌಡರ್‌ ಪಫ್ ಬಳಸದಿರಿ. ಇದರಿಂದ ಪೌಡರ್‌ ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಇರಬಹುದು. ಡಯಾಪರ್‌ ಉಪಯೋಗಿಸುವ ಬದಲು ತೆಳ್ಳಗಿನ ಕಾಟನ್‌ ಬಟ್ಟೆಯನ್ನು ನ್ಯಾಪ್‌ ಕಿನ್‌ ಒಳಗೆಯಿಟ್ಟು ಎರಡು ಗಂಟೆಗೊಮ್ಮೆ ಬದಲಾಯಿಸಿ. ನ್ಯಾಪ್ಕಿನ್‌ ಬದಲಾಯಿಸಿದ ಅನಂತರ, ಮಗುವಿನ ತೊಡೆಯ ಬಾಗಕ್ಕೆ ವ್ಯಾಸ್ಲಿನ್‌ ಹಚ್ಚಬೇಕು.
ಸ್ವತ್ಛ ಮಾಡುವಾಗ ಮುಂಭಾಗದಿಂದ ಹಿಂಭಾಗಕ್ಕೆ ತೊಳೆಯಿರಿ.ಇದರಿಂದ ಮೂತ್ರ ಕೋಶದ ಸೋಂಕನ್ನು ತಡೆಗಟ್ಟಬಹುದು.

ನಿದ್ದೆ ಮತ್ತು ಅದರ ಆವಶ್ಯಕತೆ
ಬೆಳೆಯುವ ಮಕ್ಕಳಿಗೆ ನಿದ್ದೆ ಅತ್ಯವಶ್ಯಕ. ಅವಧಿ ಪೂರ್ವ ಜನಿಸಿದ ಮಕ್ಕಳಿಗೆ 20-22 ಗಂಟೆಗಳ ಕಾಲ ನಿದ್ದೆಯ ಆವಶ್ಯಕತೆಯಿದೆ. ಸರಿಯಾಗಿ ನಿದ್ರಿಸಿದ ಶಿಶುಗಳು ಆರೋಗ್ಯವಂತರಾಗುವುದಲ್ಲದೆ, ಇದು ಮಗುವಿನ ಮಾನಸಿಕ ಹಾಗೂ ಗ್ರಹಿಕೆಯ ಶಕ್ತಿಗೂ ಉತ್ತೇಜನ ನೀಡುವುದು. ಮಗುವಿಗೆ ಹೆಚ್ಚಿನ ಸಮಯ ನಿದ್ದೆ ಮಾಡಬೇಕಾದರೆ, ಮಗುವನ್ನು ಮಲಗಿಸುವ ಕೋಣೆಯು ಸ್ವತ್ಛವಾಗಿ ಹಾಗೂ ಬೆಳಕು ಹಿತ-ಮಿತವಾಗಿರಬೇಕು, ನಿಶ್ಶಬ್ದವಿರಬೇಕು.

ಮಗುವು ಎಚ್ಚರವಿರುವ ಸಮಯ ಅದನ್ನು ಮುದ್ದಿಸಿ, ಚಲನ ವಲನಗಳನ್ನು ಗಮನಿಸಿ. ಮಗುವಿನ ಕಣ್ಣಿಗೆ ಹಾಗೂ ಮನಸ್ಸಿಗೆ ಹಿತವಾಗುವಂತಹ ವಿವಿಧ ಬಣ್ಣದ ಆಟಿಕೆಗಳನ್ನು ಮಗುವಿನ ತೊಟ್ಟಿಲಿಗೆ ಪೋಣಿಸಿಕೊಳ್ಳಿ. ಇದರೊಂದಿಗೆ ಲಘು ಸಂಗೀತವನ್ನು ಉಪಯೋಗಿಸಬಹುದು. ಹೀಗೆ ಮಗುವಿನ ವಿವಿಧ ಇಂದ್ರಿಯಗಳನ್ನು ಉತ್ತೇಜಿಸುವುದರಿಂದ ಮಗುವಿನ ಗ್ರಹಿಕೆಯ ಶಕ್ತಿ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅನುಕೂಲವಾಗುವುದು.

ನಿಯಮಿತ ಮಕ್ಕಳ ತಜ್ಞರಿಂದ ತಪಾಸಣೆ ಹಾಗೂ ಚುಚ್ಚು ಮದ್ದು ಸಮಯಕ್ಕೆ ಸರಿಯಾಗಿ ಮಗುವಿನ ಬೆಳವಣಿಗೆಯನ್ನು ಗಮನಿಸುವುದು, ಕಣ್ಣುಪರೀಕ್ಷೆ, ಶ್ರವಣ ಪರೀಕ್ಷೆ, ಶಿರದ ಆಲ್ಟ್ರಾ ಸೌಂಡ್‌, ಏನಾದರೂ ನ್ಯೂನತೆ ಇದ್ದಲ್ಲಿ ಸರಿಪಡಿಸಿಕೊಳ್ಳುವುದು, ಇದಲ್ಲದೆ ಫಿಸಿಯೋತೆರಪಿಯ ಆವಶ್ಯಕತೆಯಿದ್ದಲ್ಲಿ ಅದನ್ನು ಸರಿಯಾಗಿ ಕಲಿತು ಮನೆಯಲ್ಲಿ ಪಾಲಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ಚುಚುಮದ್ದನ್ನು ನೀಡುವುದು. ಈ ಎಲ್ಲ ಕ್ರಮಗಳನ್ನು ಅನುಸರಿಸುವುದರಿಂದ ಅವಧಿ ಪೂರ್ವ ಮಕ್ಕಳ ಬೆಳವಣಿಗೆಗೆ ಅನುಕೂಲವಾಗುವುದು. ವೈದ್ಯರ ಸಲಹೆಯಂತೆ ಸ್ತನದ ಹಾಲನ್ನು ಕಡ್ಡಾಯವಾಗಿ ಪೂರ್ತಿ ಆರು ತಿಂಗಳವರೆಗೆ ನೀಡಿ ಹಾಗೂ ಬಾಟಲಿ ಹಾಲನ್ನು ನೀಡದಿರಿ. ವೈದ್ಯಕೀಯ ಇತರ ಸಲಹೆಯನ್ನು ಪಾಲಿಸಿ.

ನವಜಾತ ಶಿಶು ಘಟಕದಿಂದ ತಾಯಿಯ ವಾರ್ಡಿಗೆ ವರ್ಗಾವಣೆ ಯಾವಾಗ?
ನವಜಾತ ಶಿಶುಘಟಕದಲ್ಲಿ ದಾಖಲಾತಿಯಾದ ಶಿಶುವಿನಲ್ಲಿ ಕಾಲಕ್ರಮೇಣ ಉಸಿರಾಟ, ದೇಹದ ಉಷ್ಣತೆ ಕಾಪಾಡಿಕೊಳ್ಳುವಿಕೆ, ಸೋಂಕಿನ ತೊಂದರೆ ಕಡಿಮೆಯಾಗುತ್ತ ಬರುತ್ತದೆ. ಅಲ್ಲದೆ ತೂಕ ಜಾಸ್ತಿಯಾಗಲೂ ಪ್ರಾರಂಭವಾಗುವುದು. ಶಿಶುವು 33 -34 ವಾರಗಳಿಗೆ ತಲುಪುವಾಗ ಬಾಯಿಯಲ್ಲಿ ಹಾಲನ್ನು ಚೀಪಲು ಆರಂಭಿಸುವುದು. ಒಂದು ಸಲ ಶಿಶುವು ಒಳಲೆಯಲ್ಲಿ ಧಾರಾಳವಾಗಿ ಚೀಪಲು ಹಾಗೂ ನುಂಗಲು ಪ್ರಾರಂಭಿಸಿದ ಅನಂತರ, ಸ್ತನವನ್ನು ಚೀಪಲು ನೀಡಲಾಗುವುದು. ಹೀಗೆ ಶಿಶುವು ಧಾರಾಳವಾಗಿ ಸ್ತನ ಚೀಪುತ್ತಾ ತೂಕವು 15-20 ಗ್ರಾಮ್ಸ್‌ ಜಾಸ್ತಿಯಾಗಿ, 1500-1600 ಗ್ರಾಮ್ಸ್‌ ತಲುಪಿ, ಶಿಶುವು ಚಟುವಟಿಕೆಯಿಂದಿದ್ದು, ತಾಯಿಯು ಶಿಶುವನ್ನು ನೋಡಿಕೊಳ್ಳಲು ಸಮರ್ಥಳಾದಲ್ಲಿ ಶಿಶುವನ್ನು ತಾಯಿಯ ಬಳಿ ವರ್ಗಾಯಿಸಲಾಗುವುದು.

ಆಸ್ಪತ್ರೆಯಿಂದ ಅವಧಿ ಪೂರ್ವ/ ಕಡಿಮೆ ತೂಕದ ಶಿಶುವಿನ ಡಿಸ್ಚಾರ್ಜ್‌ ಯಾವಾಗ?
ಮಗುವು ತಾಯಿಯ ಬಳಿ ವರ್ಗಾಯಿಸಿದ ಅನಂತರ ಒಂದೆರಡು ದಿನಗಳಲ್ಲಿ, ಶಿಶು ಹಾಗೂ ತಾಯಿಯು ಆರೋಗ್ಯವಂತರಾಗಿದ್ದು ಚೆನ್ನಾಗಿ ಹೊಂದಿಕೊಂಡು, ಶಿಶುವು ಚಟುವಟಿಕೆಯಿಂದಿದ್ದು, ತಾಯಿಯು ಶಿಶುವನ್ನು ನೋಡಿಕೊಳ್ಳುವ ಭರವಸೆ ವ್ಯಕ್ತ ಪಡಿಸಿದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗುವುದು.

ಮಗುವಿಗೆ ಹಾಲು ಸಾಕಾಗುತ್ತದೆಂದು ಹೇಗೆ ತಿಳಿಯುತ್ತದೆ?
1. ಹಾಲು ಕುಡಿದ ಅನಂತರ ಮಗುವು ಎರಡರಿಂದ ಮೂರು ತಾಸು ಚೆನ್ನಾಗಿ ಮಲಗುವುದು.
2. ಎರಡರಿಂದ ಮೂರು ಬಾರಿ ಅಥವಾ ಜಾಸ್ತಿ ಸಲ ಮಲ ವಿಸರ್ಜನೆ ಹಾಗೂ ಆರರಿಂದ ಎಂಟು ಬಾರಿ ಮೂತ್ರ ಮಾಡುವುದು.
3. ಪ್ರತೀ ದಿನಕ್ಕೆ 15 -20 ಗ್ರಾಮ್ಸ್‌ ತೂಕ ಜಾಸ್ತಿಯಾಗುವುದು.
4. ಮಗುವು ಚಟುವಟಿಕೆಯಿಂದ ಇರುವುದು

ಶಿಶುವಿನಲ್ಲಿ ಈ ಕೆಳಗಿನ ಯಾವುದೇ ಸೂಚನೆಗಳನ್ನು
ಕಂಡ ಕೂಡಲೇ ಮಕ್ಕಳ ತಜ್ಞರನ್ನು ಸಂಪರ್ಕಿಸಿ:
 ದೇಹದ ತಾಪಮಾನದಲ್ಲಿ ಏರುಪೇರು: (ಶಿಶುವಿನ ಶರೀರವು ತೀರಾ ತಣ್ಣಗಾಗಿರುವುದು, ಅಥವಾ ಬಿಸಿಯೇರಿರುವುದು) .
 ಚಟುವಟಿಕೆಯಲ್ಲಿ ವ್ಯತ್ಯಾಸ: ಲವಲವಿಕೆಯಿಲ್ಲದಿರುವುದು ಅಥವಾ ಅತಿಯಾಗಿ ಕೂಗುವುದು.
 ಉಸಿರಾಟದಲ್ಲಿ ವ್ಯತ್ಯಾಸ: (ವೇಗದ ಉಸಿರಾಟ- ಪ್ರತಿ ನಿಮಿಷಕ್ಕೆ 60ಕ್ಕಿಂತ ಅಧಿಕ ಅಥವಾ 15 ಸೆಕೆಂಡುಗಳ ನಂತರವೂ ಉಸಿರಾಟ ಸ್ಥಗಿತವಾಗುವುದು ಪದೇ ಪದೇ ಕಾಣಿಸಿಕೊಳ್ಳುವುದು).
 ಎದೆ ಹಾಲು ಚೀಪದೇ ಇರುವುದು: 2-4 ತಾಸು ಹಾಲು ನೀಡದಿದ್ದರೂ ಹಾಲು ಕುಡಿಯುವುದನ್ನು ನಿರಾಕರಿಸುವುದು.
 ಹೊಟ್ಟೆ ಉಬ್ಬರಿಸುವುದು, ವಾಂತಿ, ಅತಿಯಾದ ಭೇದಿ.
 ಹೊಕ್ಕಳಿನ ಸುತ್ತ ಕೆಂಪಾಗಿರುವುದು.
 ಪಿತ್ತ ಕಾಮಾಲೆ ಜಾಸ್ತಿಯಾದಂತೆ ಕಾಣುವುದು: (ಮುಖ, ಕೈ ಹಾಗೂ ಕಾಲಿನ ಭಾಗದಲ್ಲಿಯೂ ಹಳದಿ ತ್ವಚೆ ಕಾಣಿಸಿಕೊಳ್ಳುವುದು).
 ಕೈ ಅಥವಾ ಕಾಲು ಅಲ್ಲಾಡಿಸುವಾಗ ತೀವ್ರ ನೋವಿನಿಂದ ಕಿರುಚುವುದು.

ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈ ಅವಧಿ ಪೂರ್ವ ಜನಿಸಿದ ಶಿಶು (ಗರ್ಭಾವಸ್ಥೆಯ 27 ವಾರಕ್ಕಿಂತಲೂ ಮೊದಲು) ಜನಿಸಿದ ಮಕ್ಕಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ನವಜಾತ ಶಿಶುಘಟಕವಿದ್ದು ನುರಿತ ವೈದ್ಯ ಹಾಗೂ ಶುಶ್ರೂಷಕಿಯರು ಶಿಶುಗಳ ಪಾಲಕರೊಂದಿಗೆ 24 ಘಂಟೆಯೂ ಈ ಶಿಶುಗಳ ಸೇವೆಯಲ್ಲಿ ಸತತ ನಿರತರಾಗಿದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಗರ್ಭಾವಸ್ಥೆಯಾ 28 ವಾರದಲ್ಲಿ ಜನಿಸಿದ ಶಿಶುಗಳು ಸರಿಯಾದ ಸಮಯಕ್ಕೆ ನವಜಾತ ಶಿಶು ಘಟಕದಲ್ಲಿ ಆರೈಕೆಗೆ ಒಳಪಟ್ಟ ಹೆಚ್ಚಿನ ಸಂಖ್ಯೆಯ ಮಕ್ಕಳು ಇತರ ಸಾಮನ್ಯ ಮಕ್ಕಳಂತೆ ಉತ್ತಮ ದೆೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಹೊಂದಿರುತ್ತಾರೆ. ಅಲ್ಲದೆ ಗರ್ಭಾವಸ್ಥೆಯ 25ನೇ ವಾರದಲ್ಲಿ 510 ಗ್ರಾಮ್‌ ತೂಕದ ಜನಿಸಿದ 2016ನೇ ಇಸವಿ ಜೂನ್‌ ತಿಂಗಳಲ್ಲಿ ದಾಖಲಾದ ಶಿಶುವು ಕೂಡ ಎಲ್ಲಾ ಇತರ ಮಕ್ಕಳಂತೆ ದೆೈಹಿಕ ಹಾಗೂ ಮಾನಸಿಕ ಬೆಳವಣಿಗೆ ಹೊಂದಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ.

ಅನುಭವದ ಮಾತು.
ನಾನು 6 ತಿಂಗಳ ಗರ್ಭಿಣಿ ಇರುವಾಗ ಟೆಸ್ಟ್‌ಗೆ ಹೋದಾಗ ಡಾಕ್ಟರ್‌ ವಿಪರೀತ ಬಿಪಿ ಇರುವುದಾಗಿ ತಿಳಿಸಿದರು. ನೀವು ತತ್‌ಕ್ಷಣವೇ ಅಡ್ಮಿಟ್‌ ಆಗಬೇಕೆಂದು ತಿಳಿಸಿದರು. 2 ದಿನಗಳ ಮಟ್ಟಿಗೆ ಮಾತ್ರೆಗಳನ್ನು ಕೊಟ್ಟು ನೋಡಿದರು ಆದರೂ ಬಿಪಿ ಕಡಿಮೆಯಾಗಲಿಲ್ಲ.

ಆಗ ಬೇರೆ ಉಪಾಯವಿಲ್ಲ ಮಗು ಮತ್ತು ನೀವು ಚೆನ್ನಾಗಿ ಇರಬೇಕಾದರೆ ಸಿಸೇರಿನ್‌ ಮಾಡಬೇಕಾಗುತ್ತದೆ ಎಂದಾಗ ನನಗೆ ಮತ್ತು ನನ್ನ ಗಂಡನಿಗೆ ತುಂಬಾ ಚಿಂತೆಯಾಯಿತು. ಏನು ಮಾಡುವುದೆಂದು ತಿಳಿಯದೇ ಸಿಸೇರಿಯನ್‌ಗೆ ಒಪ್ಪಿಕೊಂಡೆವು. ಆ ದಿನವೇ ಸಿಸೇರಿಯನ್‌ ಮಾಡಿದರು. ಮಗು ಹೆಣ್ಣು ಎಂದು ಹೇಳಿದರು. ಆದರೆ ಅದರ ತೂಕ ಮಾತ್ರ 500 ಗ್ರಾಂ ಆಗಿತ್ತು. ಅದನ್ನು ಕೇಳಿ ನಾನು ತುಂಬಾ ಅತ್ತು ಬಿಟ್ಟೆ. ಮಗುವನ್ನು ಎನ್‌.ಐ.ಸಿ.ಯು.ನಲ್ಲಿ ಇಟ್ಟಿದರು. ಆದರೆ ಮಗುವು ಬೆಳೆಯಲು ತುಂಬಾ ಕಷ್ಟವೆಂದು ತಿಳಿದು. ನಾನು ದಿನ ದಿನವೂ ಸೋತು ಹೋಗಿದ್ದೆ. ಡಾಕ್ಟರ್‌ ದೇವರಂತೆ ನಮಗೆ ತುಂಬಾ ರೀತಿಯಲ್ಲಿ ಸಮಾಧಾನಿಸಿ ಮಗುವನ್ನು ಚೆನ್ನಾಗಿ ಆರೈಕೆ ಮಾಡಿದರು. ಅದರ ನಂತರ ನಮ್ಮ ಮಗುವು 6 ತಿಂಗಳವರೆಗೂ ಎನ್‌ಐಸಿಯುವಿನಲ್ಲೇ ಅವರ ಆರೈಕೆಯಲ್ಲೇ ಇತ್ತು. ಅವರ ಅರೈಕೆಯಲ್ಲಿ ಇದ್ದ 6 ತಿಂಗಳ ನಂತರ ನಮ್ಮ ಮಗುವನ್ನು ನಮ್ಮ ಕೈಗೆ ಕೊಟ್ಟಾಗ 2 ಕೆ.ಜಿ. 200 ಗ್ರಾಂ. ಇದ್ದಳು. ಆದರ ನಂತರ ಅವಳನ್ನು ನಾವು ಮನೆಗೆ ಕರೆದುಕೊಂಡು ಬಂದು ಡಾಕ್ಟರ್‌ ಲೆಸ್ಲಿ ಸಾರ್‌ ಹೇಳಿದಂತೆ ಚೆನ್ನಾಗಿ ಆರೈಕೆ ಮಾಡಿದೆವು. ಈಗ ಅವಳಿಗೆ 4 ವರ್ಷ 4 ತಿಂಗಳಾಗಿದೆ. ಈಗ ಪ್ಲೇ ಸ್ಕೂಲ್‌ಗೆ ಹೋಗುತ್ತಿದ್ದಾಳೆ. ಎಲ್ಲಾ ಮಕ್ಕಳಿಗಿಂತ ಚುರುಕಾಗಿದ್ದಾಳೆ.

ಈ ರೀತಿ ಹುಟ್ಟಿದ ಮಗುವಿನ ಬಗ್ಗೆ ನಾವು ಹೇಳುವುದೇನೆಂದರೆ ಡಾಕ್ಟರ್‌ ಅವರ ಮೇಲೆ ವಿಶ್ವಾಸವಿಟ್ಟು ದೇವರ ಮೇಲೆ ಭಾರ ಹಾಕಿ ನಿಮ್ಮ ಮನಸ್ಸನ್ನು ಗಟ್ಟಿಯಾಗಿಸಿಕೊಂಡು ಮಗುವನ್ನು ಆರೈಕೆ ಮಾಡಿದರೆ ಆ ಮಗುವು ಕೂಡಾ ಎಲ್ಲ ಮಗುವಿನಂತೆ ಚೆನ್ನಾಗಿ ಬೆಳೆಯುತ್ತದೆ. ಪ್ಲೀಸ್‌ ಆ ಮಗು ಒಂದು ಭಾರ ಎಂದುಕೊಳ್ಳದೇ ದೇವರು ನಮಗೆ ಕೊಟ್ಟ ಒಂದು ಅಮೂಲ್ಯವಾದ ಉಡುಗೊರೆ ಎಂದು ಭಾವಿಸಿ ಪ್ರೀತಿಸಿ ಮುಂದೆ ಆ ಮಗುವು ಕೂಡ ನಿಮ್ಮನ್ನು ಅದಕ್ಕಿಂತ ಮೇಲಾಗಿ ಪ್ರೀತಿಸುತ್ತದೆ. ಇದು ನಮ್ಮಿಬ್ಬರ ಅನುಭವದ ಮಾತು.

ಯಶೋದಾ ಸತೀಶ್‌
ಅಸಿಸ್ಟೆಂಟ್‌ ಪ್ರೊಫೆಸರ್‌, ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌, ಮಣಿಪಾಲ

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.