ಉಡುಪಿಯಲ್ಲಿ ಬಾಬಾ ರಾಮದೇವ್‌ ಯೋಗ ಮಂತ್ರ!

Team Udayavani, Nov 16, 2019, 10:07 PM IST

161119Astro01-BabaYoga34

ಉಡುಪಿ: ಮುಂಜಾನೆಯ ಬೆಳಕು ಮೂಡುವ ಮುನ್ಸೂಚನೆಯಾಗಿ ಗಾಢ ಕತ್ತಲು, ವಿಶ್ವ ವಿಖ್ಯಾತ ಯೋಗಗುರು ಬಾಬಾ ರಾಮದೇವರನ್ನು ನೋಡಬೇಕು ಎನ್ನುವ ಉತ್ಸಾಹದಲ್ಲಿ ಬೈಕ್‌, ಕಾರು, ಬಸ್‌, ಸೈಕಲ್‌, ಆಟೋಗಳಲ್ಲಿ ಜನರು ತಂಡೋಪತಂಡವಾಗಿ ರಾಜಾಂಗಣದ ವಾಹನ ಪಾರ್ಕಿಂಗ್‌ ಏರಿಯಾದತ್ತ ಹೆಜ್ಜೆ ಹಾಕಿದರು. ಎಲ್ಲರದ್ದೂ ಒಂದೇ ಗುರಿ ಬಾಬಾ ಹೇಳಿಕೊಡುವ ಯೋಗಾಸನವನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಿ ತಿಳಿದುಕೊಳ್ಳಬೇಕು ಎನ್ನುವ ಮಹದಾಸೆ.

ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠದ ಸಹಯೋಗದಲ್ಲಿ ಉಡುಪಿಯ ರಾಜಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಬೃಹತ್‌ ಯೋಗಾಸನ ಶಿಬಿರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದರು. 4 ವರ್ಷದವರಿಂದ 80ರ ಮಹಿಳೆಯರು, ಮಕ್ಕಳು, ಪುರುಷರು ಭಾಗವಹಿಸಿ ಮುಂಜಾನೆ 5ರಿಂದ 7.30ರ ವರೆಗೆ ದೇಹವನ್ನು ದಂಡನೆಗೆ ಒಳಪಡಿಸಿದರು.

ಉಡುಪಿಗೆ ಹತ್ತಿರವಾದ ಬಾಬಾ
ಸೂರ್ಯ ನಮಸ್ಕಾರ, ಕಪಾಲಭಾತಿ, ಅನಂತಾಸನ ಸೇರಿದಂತೆ ಒಟ್ಟು 50 ಆಸನಗಳನ್ನು ಪ್ರದರ್ಶಿಸಿದರು. ನೆರೆದ ಜನತೆ ಕೂಡ ಆಸಕ್ತಿಯಿಂದ ಬಾಬಾ ಹೇಳಿಕೊಟ್ಟ ಆಸನಗಳನ್ನು ಮಾಡಿದರು. ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತ, ಮಧ್ಯ-ಮಧ್ಯ ಕನ್ನಡದಲ್ಲಿ ಕೆಲವೊಂದು ನುಡಿಗಳನ್ನು ಹೇಳಿ ಜನಮಾನಸಕ್ಕೆ ಹತ್ತಿರವಾದರು. “ಸಮಸ್ತ ಸಹೋದರ ಸಹೊದರಿಯರಿಗೆ ನನ್ನ ಪ್ರೀತಿ ಪೂರ್ವಕ ನಮಸ್ಕಾರ.

ಕರ್ನಾಟಕದ ಜನತೆ ಸ್ವಭಾವದಿಂದ ಯೋಗಿಗಳು, ಆಧ್ಯಾತ್ಮಿಕರು ಮತ್ತು ದೇಶ ಭಕ್ತರಾಗಿದ್ದಾರೆ’ ಎಂದು ಕನ್ನಡದಲ್ಲಿ ಹೇಳಿದ ಬಾಬಾ ರಾಮದೇವ್‌ ಬೆಲ್ಲ, ಅಮೃತಬಳ್ಳಿ ಎಂಬಿತ್ಯಾದಿ ಶಬ್ದಗಳನ್ನು ಕನ್ನಡದಲ್ಲಿ ಕೇಳಿ ಉಚ್ಚರಿಸಿದರು. ಕ್ಲಿಷ್ಟ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಾ ಎರಡೂವರೆ ಗಂಟೆಗಳ ಕಾಲ ಇಡೀ ಜನಸ್ತೋಮವನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಂಡರು.

ಪೊಲೀಸ್‌ ಭದ್ರತೆ
ಶಿಬಿರಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಒಬ್ಬರು ಡಿವೈಎಸ್‌ಪಿ. , 1 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 1 ರಾಜ್ಯ ಸಶಸ್ತ್ರ ಪೊಲೀಸ್‌ ಮೀಸಲು ಪಡೆ ತುಕಡಿ ಸೇರಿದಂತೆ 50ಕ್ಕೂ ಅಧಿಕ ಮಂದಿ ಸಿಬಂದಿ ನಿಯೋಜಿಸಲಾಗಿದೆ. ಬಾಬಾರಾಮ ದೇವ್‌ ಅವರಿಗೆ ಸಿಆರ್‌ಪಿಎಫ್ ಯೋಧರು ಭದ್ರತೆ ನೀಡಿದರು. ಶಿಬಿರಕ್ಕೆ ವಾಹನ ಮೂಲಕ ಬರುವ ಶಿಬಿರಾರ್ಥಿಗಳಿಗೆ ತೊಂದರೆಯಾಗದೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹರಿದ್ವಾರದಿಂದ ಸಿದ್ಧತೆ
ಹರಿದ್ವಾರದ ಪತಂಜಲಿ ಸಮಿತಿಯ ಸದಸ್ಯರು ಪಾರ್ಕಿಂಗ್‌ ಏರಿಯಾದಲ್ಲಿ ಬೃಹತ್‌ ಯೋಗ ಶಿಬಿರದ ವೇದಿಕೆಯನ್ನು ನಿರ್ಮಿಸಿದ್ದಾರೆ. ದೀಪಾಲಂಕಾರ, ಧ್ವನಿವರ್ಧಕ, ಯೋಗ ಮ್ಯಾಟ್‌ಗಳನ್ನು ಅಚ್ಚುಕಟ್ಟಿನಿಂದ ಅಳವಡಿಸಿದ್ದಾರೆ. ಹರಿದ್ವಾರದಿಂದ 60 ಮಂದಿ ಕಾರ್ಯಕರ್ತರು ಹಾಗೂ ಉಡುಪಿಯಿಂದ ಸುಮಾರು 300 ಸ್ವಯಂ ಸೇವಕರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ತುರ್ತು ಚಿಕಿತ್ಸೆಗೆ ವೈದ್ಯರ ತಂಡವೊಂದು ಶಿಬಿರದಲ್ಲಿ ಭಾಗವಹಿಸಿದೆ.

ಮೊಬೈಲ್‌ ಸೆಲ್ಫಿ ಲೈವ್‌
ಮುಂಜಾ ವ 3ರಿಂದ 6ರ ವರೆಗೆ ಜನರು ರಾಜಾಂಗಣ ದತ್ತ ಹೆಜ್ಜೆ ಹಾಕಿದರು. ಬೆಳಕು ಹರಿಯುತ್ತಿದ್ದಂತೆ ಯೋಗ ಶಿಬಿರಕ್ಕೆ ಆಗಮಿಸಿ ದವರು ಮೊಬೈಲ್‌ಗ‌ಳಲ್ಲಿ ವೀಡಿಯೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಫೇಸ್‌ಬುಕ್‌ ಲೈವ್‌ ನೀಡಿದ್ದಾರೆ. ಉಡುಪಿ ಯೋಗ ಶಿಬಿರವನ್ನು ಆಸ್ತಾ ಟಿವಿಯ ಮೂಲಕ ವಿಶ್ವದ 173 ರಾಷ್ಟ್ರ ನೇರ ಪ್ರಸಾರವಾಗಿದೆ. ಮಲ್ಪೆ, ಕಾರ್ಕಳ, ಸಂತೆಕಟ್ಟೆ ಭಾಗಗಳಲ್ಲಿ ಮುಂಜಾವ 4 ಗಂಟೆಗೆ ಸಿಟಿ ಬಸ್‌ ಸೇವೆ ಪ್ರಾರಂಭಿಸಿದರು.

ಟಾಪ್ ನ್ಯೂಸ್

Maharashtra, Jharkhand assembly election today

Election: ಮಹಾರಾಷ್ಟ್ರ, ಜಾರ್ಖಂಡ್‌ ಅಸೆಂಬ್ಲಿಗೆ ಇಂದು ಚುನಾವಣೆ

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

Russian President Putin likely to visit India next year

Putin: ರಷ್ಯಾ ಅಧ್ಯಕ್ಷ ಪುಟಿನ್‌ ಮುಂದಿನ ವರ್ಷ ಭಾರತಕ್ಕೆ ಭೇಟಿ ಸಾಧ್ಯತೆ

Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್‌ ಶಾಸಕರ ಪಟ್ಟು

Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್‌ ಶಾಸಕರ ಪಟ್ಟು

IPL 2025: Rishabh Pant refutes Gavaskar’s statement

IPL 2025: ಗಾವಸ್ಕರ್‌ ಹೇಳಿಕೆಯನ್ನು ಅಲ್ಲಗಳೆದ ರಿಷಭ್‌ ಪಂತ್‌

Mountain collapse in Congo: Thousands of tons of copper revealed!

Copper: ಕಾಂಗೋದಲ್ಲಿ ಕುಸಿದ ಪರ್ವತ: ಸಾವಿರಾರು ಟನ್‌ ತಾಮ್ರ ಪ್ರತ್ಯಕ್ಷ!

Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ

Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Gangolli

Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Maharashtra, Jharkhand assembly election today

Election: ಮಹಾರಾಷ್ಟ್ರ, ಜಾರ್ಖಂಡ್‌ ಅಸೆಂಬ್ಲಿಗೆ ಇಂದು ಚುನಾವಣೆ

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

Russian President Putin likely to visit India next year

Putin: ರಷ್ಯಾ ಅಧ್ಯಕ್ಷ ಪುಟಿನ್‌ ಮುಂದಿನ ವರ್ಷ ಭಾರತಕ್ಕೆ ಭೇಟಿ ಸಾಧ್ಯತೆ

Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್‌ ಶಾಸಕರ ಪಟ್ಟು

Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್‌ ಶಾಸಕರ ಪಟ್ಟು

IPL 2025: Rishabh Pant refutes Gavaskar’s statement

IPL 2025: ಗಾವಸ್ಕರ್‌ ಹೇಳಿಕೆಯನ್ನು ಅಲ್ಲಗಳೆದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.