ಕ್ರೈಸ್ತ ಮಿಷನರಿಗಳಿಂದ ಸ್ಥಾಪಿತ ಶಾಲೆಗೆ ಈಗ 116 ವರ್ಷದ ಸಂಭ್ರಮ

ಪರ್ಕಳ ಬಾಸೆಲ್‌ ಮಿಷನ್‌ ಹಿ.ಪ್ರಾಥಮಿಕ ಕನ್ನಡ ಶಾಲೆ

Team Udayavani, Nov 17, 2019, 5:35 AM IST

Parkala

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಉಡುಪಿ: ಪರ್ಕಳ ಪರಿಸರದ ಅಗ್ರಹಾರದ ದೇವಸ್ಥಾನದ ಚಾವಡಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗಾಗಿ ಜರ್ಮನಿ ಮಿಷನರಿಗಳಿಂದ ಸ್ಥಾಪಿತ ಪರ್ಕಳ ಬಾಸೆಲ್‌ ಮಿಶನ್‌ ಹಿ.ಪ್ರಾಥಮಿಕ ಕನ್ನಡ ಶಾಲೆಗೆ 116 ವರ್ಷದ ಸಂಭ್ರಮ.

ಅದು ವಿದ್ಯಾಸಂಸ್ಥೆಗಳಿಲ್ಲದ ಕಾಲ. ಜರ್ಮನಿಯಿಂದ ಧರ್ಮ ಪ್ರಚಾರ ಬಂದ ಕ್ರೈಸ್ತ ಮಿಷನರಿಗಳು ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿದರು. 1903ರಲ್ಲಿ ಪರ್ಕಳಕ್ಕೆ ಧರ್ಮ ಪ್ರಚಾರಕರಾಗಿ ಬಂದ ರೆ| ಜೆ. ಬೇಕ್ಲೆ ಅವರು “ಬಾಸೆಲ್‌ ಇವಾಂಜಿಲಿಕಲ್‌ ಮಿಶನ್‌ ಕಿ.ಪ್ರಾ. ಶಾಲೆ’ ಎಂಬ ಹೆಸರಿನೊಂದಿಗೆ ಮಡಲು ಹೊದೆಸಿದ ಕಟ್ಟಡದಲ್ಲಿ ಶಾಲೆ ಪ್ರಾರಂಭಿಸಿದ್ದರು. 1905ರಲ್ಲಿ ಈ ಶಾಲೆಗೆ ಸರಕಾರದಿಂದ ಮಂಜೂರಾತಿ ಸಿಕ್ಕಿತ್ತು.

ಅಕ್ಷರದ ಬೆಳಕು ಹಬ್ಬಿಸಿದ ಶಾಲೆ
ಬೆಳ್ಳಂಪಳ್ಳಿ, ಪರ್ಕಳ, ಕಬ್ಯಾಡಿ, ಸಣ್ಣಕ್ಕಿಬೆಟ್ಟು, ಶೆಟ್ಟಿಬೆಟ್ಟು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಶೇ. 98ರಷ್ಟು ಮಂದಿ ಈ ಶಾಲೆಯ ಹಳೆ ವಿದ್ಯಾರ್ಥಿಗಳೇ ಆಗಿದ್ದಾರೆ. 1925ರ ಸಂದರ್ಭದಲ್ಲಿ ಸುಮಾರು 1,000 ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಈ ಶಾಲೆಯ ಹಳೆ ವಿದ್ಯಾರ್ಥಿಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಪ್ರೊ| ವೈಸ್‌ ಚಾನ್ಸಲರ್‌ ಮಾಹೆ ಯೂನಿವರ್ಸಿಟಿ ಮಣಿಪಾಲ ಹಾಗೂ ಡಾ| ಜಗದೀಶ್‌ ಶೆಟ್ಟಿಗಾರ್‌ ಅಟಲ್‌ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಕೇಂದ್ರ ಆರ್ಥಿಕ ತಜ್ಞರಾಗಿ ಸೇವೆಸಲ್ಲಿಸಿದ್ದರು.

ದಶಕಗಳಿಂದ ಶ್ರಮಿಸುತ್ತಿದೆ ಕೋಟ್ಯಾನ್‌ ಕುಟುಂಬ
ಜರ್ಮನಿ ಮಿಷನರಿಗಳು ಆರ್ಥಿಕ ಕಾರಣದಿಂದ 1952ರಲ್ಲಿ ಪರ್ಕಳದ ಶಾಲೆಯನ್ನು ಮುಚ್ಚಲು ಮುಂದಾಗಿದ್ದರು. ಈ ಸಂದರ್ಭ ಮಿಷನರಿ ರೆ| ರೊಸೆಲ್‌ ಜಾಕೋಬ್‌ ಅವರು ಅಂದಿನ ಮುಖ್ಯ ಶಿಕ್ಷಕರಾಗಿದ್ದ ರಾಜೀವ ಕೋಟ್ಯಾನ್‌ ಅವರಿಗೆ ಶಾಲೆಯನ್ನು ಹಸ್ತಾಂತರಿಸಿದರು. 1965ರಲ್ಲಿ ಶಾಲೆಯ ಆಡಳಿತ ಮಂಡಳಿ , ಊರಿನವರ ಸಹಕಾರದಿಂದ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಶಾಲೆಗೆ ಬಾಸೆಲ್‌ ಮಿಶನ್‌ ಹಿ.ಪ್ರಾ. ಶಾಲೆಯೆಂದು ಮರುನಾಮಕರಣ ಮಾಡಲಾಯಿತು. ಕಳೆದ 67 ವರ್ಷದಿಂದ ರಾಜೀವ ಕೋಟ್ಯಾನ್‌ ಅವರ ಕುಟುಂಬ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಸ್ತುತ ಶಾಲೆಯಲ್ಲಿ ಸುಮಾರು 120 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸರಕಾರದ 2 ಶಿಕ್ಷಕರು ಹಾಗೂ ಗೌರವ ಶಿಕ್ಷಕರಾಗಿ 5 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.

ಮಣಿಪಾಲದ ಹೃದಯ ಭಾಗದಲ್ಲಿರುವ ಪರ್ಕಳ ಬಿಎಂ ಹಿ.ಪ್ರಾ.ಶಾಲೆ ನಾನು ಸೇರಿದಂತೆ ಸುತ್ತಮುತ್ತಲ್ಲಿನ ಪ್ರದೇಶ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ನನ್ನ ತಂದೆ ರಾಜೀವ ಕೋಟ್ಯಾನ್‌ ಅವರ “ಎಲ್ಲರಿಗೂ ಶಿಕ್ಷಣ’ ನೀಡಬೇಕು ಎನ್ನುವ ಕನಸು ನನಸು ಮಾಡುವ ಪ್ರಯತ್ನದಲ್ಲಿ ಇದ್ದೇನೆ. ಇದಕ್ಕೆ ಪೂರಕವಾಗಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಹಾಯ ಮಾಡುತ್ತಿದ್ದಾರೆ.
-ವಿನಯ ಸರೋಜ ಕುಮಾರಿ,
ಹಳೆವಿದ್ಯಾರ್ಥಿ ಹಾಗೂ ಬಿಎಂಶಾಲೆ ಆಡಳಿತ ಮಂಡಳಿ ಅಧ್ಯಕ್ಷೆ

ಪರ್ಕಳ ಬಿಎಂ ಹಿ.ಪ್ರಾ.ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದೆ. ಅವರೆಲ್ಲರೂ ಇಂದು ಸಮಾಜದ ವಿವಿಧ ಸ್ತರಗಳಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ.
-ಹರೀಶ್‌ ಶೇರಿಗಾರ್‌, ಮುಖ್ಯೋಪಾಧ್ಯಾಯ ಬಿಎಂಶಾಲೆ, ಪರ್ಕಳ

-ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.