ಜನಮನದ ಬ್ಯಾಂಕ್‌ ಉಳಿಯಲಿ


Team Udayavani, Nov 17, 2019, 5:30 AM IST

tt-30

ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ಸಂಸ್ಥೆಗಳಾಗಿರದೆ ಬದುಕಿನ ಭಾಗವೆಂಬಂತೆ ಪರಿಭಾವಿಸಿದ್ದಾರೆ. ಇದೀಗ ಈ ಬ್ಯಾಂಕ್‌ಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಜನರಿಗೆ ನೋವುಂಟು ಮಾಡಿದೆ. ಕೆಲವರು ಬ್ಯಾಂಕ್‌ ವಿಲೀನದ ಕುರಿತಾದ ಅಭಿಪ್ರಾಯವನ್ನು ಪತ್ರಿಕೆಯ ಜತೆಗೆ ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ನೀಡಲಾಗಿದೆ.


ಬ್ಯಾಂಕ್‌ ಅಸ್ತಿತ್ವಕ್ಕಾಗಿ ಕೇಂದ್ರಕ್ಕೆ ಪತ್ರ

ಸಿಂಡಿಕೇಟ್‌ ಬ್ಯಾಂಕ್‌ ದೇಶದ ಅತಿ ಹಳೆಯ ಮತ್ತು ಸುಭದ್ರವಾಗಿರುವ ಬ್ಯಾಂಕುಗಳಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದೆ. ನಾವು ಸಂಚಾರ ಮಾಡುವಾಗ ದೇಶದ ಯಾವುದೇ ಮೂಲೆಗೆ ಹೋದರೂ, ಹರಿದ್ವಾರ, ಹೃಷಿಕೇಶದಂತಹ ತೀರ್ಥಕ್ಷೇತ್ರಗಳಿಗೆ ಹೋದರೂ ಅಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಕಾಣ ಸಿಗುತ್ತದೆ. ಬ್ಯಾಂಕ್‌ನ ಅಸ್ತಿತ್ವ ಮಾತ್ರವಲ್ಲದೆ ಉತ್ತಮ ಸೇವೆಯನ್ನೂ ಬ್ಯಾಂಕ್‌ನ ಸಿಬಂದಿ ನೀಡುತ್ತಿದ್ದರು.

ವಿದ್ಯೆಗೆ ಸಹಾಯ, ಸಮಾಜಸೇವೆಗೆ ನೆರವು ಹೀಗೆ ವಿವಿಧ ರೀತಿಗಳಲ್ಲಿ ಜನಸಾಮಾನ್ಯರ ಜೀವನದಲ್ಲಿ ಬ್ಯಾಂಕ್‌ ಹಾಸು ಹೊಕ್ಕಾಗಿತ್ತು. ಇದರ ಜತೆಗೆ ನಷ್ಟಗೊಳ್ಳದೆ ಲಾಭದಾಯಕವಾಗಿ ಯೇ ನಡೆಯುತ್ತಿತ್ತು. ನಷ್ಟಗೊಂಡಿದ್ದರೆ, ಸಮಾಜದ ಜತೆ ಸ್ಪಂದಿಸದೆ ಇದ್ದರೆ ವಿಲೀನಗೊಳಿಸಬಹುದಿತ್ತು. ಏಕಾಏಕಿ ಇನ್ನೊಂದು ಬ್ಯಾಂಕ್‌ ಜತೆ ವಿಲೀನ ಮಾಡುವುದು ನಮಗಂತೂ ಸರಿ ಕಾಣುವುದಿಲ್ಲ.

ನಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರ ಕಾಲದಿಂದಲೂ ಬ್ಯಾಂಕ್‌ ಉತ್ತಮ ಸಂಬಂಧವನ್ನು ಹೊಂದಿದೆ. ಅವರು ತಮ್ಮದೇ ಬ್ಯಾಂಕ್‌ ಎಂದು ವ್ಯವಹರಿಸುತ್ತಿದ್ದರು. ಆ ಕಾಲದಲ್ಲಿಯೂ ಬ್ಯಾಂಕ್‌ ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿತ್ತು ಎನ್ನುವುದನ್ನು ಗುರುಗಳಿಂದ ಕೇಳಿಬಲ್ಲೆ.

ಬ್ಯಾಂಕ್‌ ವಿಲೀನ ಸರಿಯಲ್ಲ ಎಂದು ನಮ್ಮಲ್ಲಿಗೆ ಬಂದ ಹಿರಿಯ ಅಧಿಕಾರಿಗಳನ್ನು ನಾನು ಹೇಳುತ್ತಿದ್ದೇವೆ. ಆದರೆ ದೊಡ್ಡ ಬ್ಯಾಂಕ್‌ಗಳಾದಾಗ ಸಾಲ ವಿತರಣೆಗೆ ಅನುಕೂಲವಾಗುತ್ತದೆ, ಸ್ಪರ್ಧೆಗೆ ಉತ್ತಮವಾಗುತ್ತದೆ ಎಂದು ಉತ್ತರಿಸುತ್ತಿದ್ದಾರೆ. ಸಿಂಡಿ ಕೇಟ್‌ ಬ್ಯಾಂಕ್‌ನ ವಿಲೀನ ಮಾಡದೆ ಸ್ವತಂತ್ರ ಅಸ್ತಿತ್ವವನ್ನು ಉಳಿಸ ಬೇಕೆಂದು ಒತ್ತಾಯಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆ ಯುತ್ತೇನೆ. ಆದರೆ ಇದಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಬ್ಯಾಂಕ್‌ನವರು ಒದಗಿಸಿದರೆ ಅನುಕೂಲವಾಗುತ್ತದೆ. ಏನೇ ಆದರೂ ನಮ್ಮ ಊರಿನಲ್ಲಿ ಹುಟ್ಟಿ ಬೆಳೆದು ದೇಶಾದ್ಯಂತ ಸ್ಪಂದನ ಶೀಲ ಸೇವೆಯನ್ನು ನೀಡುತ್ತಿರುವ ಸಿಂಡಿಕೇಟ್‌ ಬ್ಯಾಂಕ್‌ನ ಅಸ್ತಿತ್ವ ಉಳಿಯುವಂತಾಗಲೆಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುತ್ತೇವೆ.

ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪಲಿಮಾರು ಮಠ, ಉಡುಪಿ


ಬ್ಯಾಂಕಿನ ಮೂಲ ವ್ಯಕ್ತಿತ್ವ ಉಳಿಸಿ

ಕರಾವಳಿಯ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸಿಂಡಿಕೇಟ್‌ ಬ್ಯಾಂಕ್‌ ಇಂದು ರಾಷ್ಟ್ರಮಟ್ಟದಲ್ಲಿ ಬೆಳೆದು ನಿಂತಿರುವ ಈ ಸಂದರ್ಭದಲ್ಲಿ ಬೇರೆ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿ ಅದರ ಹೆಸರನ್ನು ಅಳಿಸುವಂತ ವಿಚಾರ ಸರಿಯಾದ ನಿರ್ಧಾರವೆಂದು ಕಾಣುತ್ತಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಕೃಷಿಕರೊಂದಿಗೆ ಬೆಳೆದು ವ್ಯವಹರಿಸಿ ಕೃಷಿಕರಿಗೆ ಅತ್ಯುತ್ತಮವಾದ ಸೇವೆ ಸಲ್ಲಿಸಿದ ಈ ಸಂಸ್ಥೆಯ ಪ್ರಧಾನ ಕಚೇರಿ ಬೆಂಗಳೂರಿಗೆ ವರ್ಗಾವಣೆ ಆಗುವ ಸಂದರ್ಭದಲ್ಲಿಯೂ ಊರಿನ ಜನರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಇಲ್ಲಿ ಗಮನಿಸಬಹುದು.

ಕರಾವಳಿಯ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದ ಈ ಸಂಸ್ಥೆಯ ಹೆಸರು ಹಾಗೂ ತನ್ನ ತವರೂರಿನ ಸಂಬಂಧವನ್ನು ಕಡಿದುಕೊಳ್ಳುವುದು ಸೂಕ್ತವಲ್ಲ. ಬ್ಯಾಂಕಿನ ಮೂಲ ವ್ಯಕ್ತಿತ್ವವನ್ನು ಉಳಿಸಿ ಕಾಪಾಡಬೇಕೆಂದು ಸಂಬಂಧಪಟ್ಟವರಿಗೆ ಮನವಿ ಮಾಡುತ್ತೇನೆ
ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ


ಉಳಿತಾಯಕ್ಕೆ ಪ್ರೇರಕ

ಕರ್ನಾಟಕ ಕರಾವಳಿಯ ಸಹಿತ ಸಮಗ್ರ ಭಾರತ ದೇಶದ ಆರ್ಥಿಕ ಸಹಿತ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಜನಸಾ ಮಾನ್ಯರ ಬ್ಯಾಂಕ್‌ ಎಂದೇ ಜನಜನಿ ತವಾಗಿರುವ ಸಿಂಡಿಕೇಟ್‌ ಬ್ಯಾಂಕ್‌ ಮುಂಚೂಣಿಯ ವಿತ್ತ ಸಂಸ್ಥೆಯಾಗಿ ಜನತೆಯ ಆರ್ಥಿಕ ಸೇವೆ ನಿರ್ವಹಿಸಿದೆ.
ಡಾ| ಟಿಎಂಎ ಪೈ, ಸಹೋದರ ಅನಂತ ಪೈ ಸಹಿತ ಪೈ ಬಂಧುಗಳು ಸ್ಥಾಪಿಸಿ, ಪೋಷಿಸಿ, ಸಾಧನೆಯ ಉತ್ತುಂಗ ತಲುಪಿಸಿದ ಸಿಂಡಿಕೇಟ್‌ ಬ್ಯಾಂಕ್‌ ಈ ನಾಡಿನ ಹೆಮ್ಮೆಯೂ ಹೌದು. ಈ ಕಾರಣಕ್ಕೆ ಕೂಡಾ ಪೈ ಬಂಧುಗಳು ಸದಾ ಸ್ಮರಣೀಯರು. ಪಿಗ್ಮಿ ಮುಂತಾದ ಜನಪರ ಯೋಜನೆಗಳ ಮೂಲಕ ಅವರು ಜನತೆಯಲ್ಲಿ ಉಳಿತಾಯದ ಮನೋ ಭಾವ ಬೆಳೆಸಿದರು. ಈ ಮೂಲಕ ಲಕ್ಷಾಂತರ ಕುಟುಂಬಗಳು ಸ್ವಾವಲಂಬಿಗಳಾಗಲು ಸಾಧ್ಯವಾಯಿತು.

ನಾನು ಕೇಂದ್ರದ ವಿತ್ತ ಖಾತೆಯಲ್ಲಿ ಸಚಿವನಾಗಿದ್ದಾಗ, ದೇಶದ ಬಡ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಯನ್ನು ಅತ್ಯಂತ ಸಮೀಪದಿಂದ ತಿಳಿದುಕೊಳ್ಳಲು ನನಗೆ ಸಾಧ್ಯವಾಗಿತ್ತು. ಸಾಲಮೇಳವನ್ನು ಏರ್ಪಡಿಸಿ, ಲಕ್ಷಾಂತರ ಮಂದಿಗೆ ಸ್ಥಳದಲ್ಲೇ ಆರ್ಥಿಕ ನೆರವನ್ನು ಒದಗಿಸಿದವನು. ಈ ಕಾರ್ಯದಲ್ಲಿ ಕೂಡಾ ಸಿಂಡಿಕೇಟ್‌ ಬ್ಯಾಂಕ್‌ ಮುಂಚೂಣಿಯಲ್ಲಿತ್ತು.ಆದ್ದರಿಂದ, ದೇಶದ ಆರ್ಥಿಕ ಪರಂಪರೆಯಲ್ಲಿ ಸಿಂಡಿಕೇಟ್‌ ಬ್ಯಾಂಕಿಗೆ ಅನನ್ಯವಾದ ಸ್ಥಾನವಿದೆ. ಈಗ ಸಿಂಡಿಕೇಟ್‌ ಸಹಿತ ಇಲ್ಲಿನ ಬ್ಯಾಂಕ್‌ಗಳನ್ನು ಇತರ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುವ ಕಾರ್ಯ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಇದು ಸಮಗ್ರ ವಿತ್ತೀಯ ವ್ಯವಸ್ಥೆಯ ಮೇಲಿನ ಅತಾರ್ಕಿಕ ಪ್ರಹಾರ. ಇದು ಕೇವಲ ಹೆಸರಿನ ಪ್ರಶ್ನೆಯಲ್ಲ; ಇದು ಪರಂಪರೆಯ ಮತ್ತು ಆರ್ಥಿಕ ಸಂಸ್ಕೃತಿಯ ಸಂಗತಿ. ಆರ್ಥಿಕ ಭವಿಷ್ಯದ ಪ್ರಶ್ನೆ.
ಸಿಂಡಿಕೇಟ್‌ ಬ್ಯಾಂಕ್‌ ಈ ಪರಂಪರೆಯಲ್ಲಿ- ಸಂಸ್ಥಾಪಕರ ದೂರದೃಷ್ಟಿಯಿಂದ ಅರಳಿ ಬೆಳೆದಿರುವ ಬ್ಯಾಂಕ್‌. ನಾನು ಈ ಬಗ್ಗೆ ಭಾರತ ಸರಕಾರದ ಗಮನವನ್ನು ಸೆಳೆದಿದ್ದೇನೆ.

ಬಿ. ಜನಾರ್ದನ ಪೂಜಾರಿ, ಕೇಂದ್ರದ ಮಾಜಿ ಹಣಕಾಸು ಸಚಿವರು

ಟಾಪ್ ನ್ಯೂಸ್

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.