ಸರ್ಕಾರಿ ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಜಾಗವಿಲ್ಲ!
Team Udayavani, Nov 17, 2019, 4:23 PM IST
ಕೊರಟಗೆರೆ: ಗ್ರಾಮೀಣ ವಿದ್ಯಾರ್ಥಿಗಳಿಂದಸಾರಿಗೆ ಸಂಸ್ಥೆ 10ಲಕ್ಷಕ್ಕೂ ಅಧಿಕ ಹಣ ಪಡೆದು ತುಮಕೂರು ಮತ್ತು ಕೊರಟಗೆರೆ ಡಿಪೋದಿಂದ 2ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್‌ಪಾಸ್ ವಿತರಣೆ ಮಾಡಿದ್ದಾರೆ. ಪ್ರತಿನಿತ್ಯ 87ಬಸ್‌ಗಳ ಸಂಚಾರದ ವ್ಯವಸ್ಥೆ ಇದ್ದರೂ ವಿದ್ಯಾರ್ಥಿಗಳಿಗೆ ಪ್ರಯೋಜನವಿಲ್ಲದೇ ಸಮಸ್ಯೆ ಎದುರಾಗಿದೆ.
ಸಾರಿಗೆ ಸಂಸ್ಥೆಯ ನಿರ್ವಹಣೆ ವೈಫಲ್ಯದಿಂದ ಬಸ್ ಪಾಸ್ ಇರುವ ವಿದ್ಯಾರ್ಥಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಕೊರಟಗೆರೆ ಮತ್ತು ತುಮಕೂರು ವಿದ್ಯಾರ್ಥಿಗಳಿಗೆ ನೀಡಿರುವ ಬಸ್ ಪಾಸಿನ ಅಂಕಿ ಅಂಶದ ಪ್ರಕಾರ ಸರ್ಕಾರಿ ಬಸ್‌ನ ನಿರ್ವಹಣೆಗೆ ಸಮಯ ಇಲ್ಲದಾಗಿದೆ. ಪಾವಗಡ- ಮಧುಗಿರಿ ಘಟಕದಿಂದ ಹೊರಡುವ ಬಸ್‌ಗಳು ಕೊರಟಗೆರೆ ನಿಲ್ದಾಣಕ್ಕೆ ಬಾರದೇ ಕೆಲ ಬಸ್‌ಗಳು
ಬೈಪಾಸ್ ಮೂಲಕ ನೇರವಾಗಿ ತುಮಕೂರು ನಗರಕ್ಕೆ ಸಂಚರಿಸುತ್ತವೆ. ಪರಿಶೀಲನೆ, ತಪಾಸಣೆ ನಡೆ ಸುವಮಧುಗಿರಿ ಸಂಚಾರಿ ವ್ಯವಸ್ಥಾಪಕರ ನಿರ್ಲ ಕ್ಷ್ಯದಿಂದ ವಿದ್ಯಾರ್ಥಿಗಳ ಸಮಸ್ಯೆ ಹೆಚ್ಚಾಗುತ್ತಿದೆ.
ಬಸ್‌ಗಳ ಸಂಖ್ಯೆ ಹೆಚ್ಚಿಸಿ: ತುಮಕೂರು-ಕೊರಟಗೆರೆ ಪಟ್ಟಣದ ಬಹುತೇಕ ಶಾಲಾಕಾಲೇಜು ಪ್ರಾರಂಭ ಆಗೋದು ಬೆಳಗ್ಗೆ 9ರಿಂದ 10. ಗ್ರಾಮೀಣ ಪ್ರದೇಶ ಗಳಿಂದ ಪಟ್ಟಣಕ್ಕೆ ವಿದ್ಯಾರ್ಥಿಗಳು ಸಂಚರಿಸುವುದು ಬೆಳಗ್ಗೆ 7ಗಂಟೆಯಿಂದ 9ರವರೆಗೆ ಮಾತ್ರ. ಆದರೆ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಬರುವ 10 ಬಸ್‌ಗಳಲ್ಲಿ 2ಸಾವಿರ ವಿದ್ಯಾರ್ಥಿಗಳು ಸಂಚಾರ ಮಾಡುವುದಾದರೂ ಹೇಗೆ ಎಂಬುದೇ ಯಕ್ಷಪಶ್ನೆಯಾಗಿದೆ.
ಕೊರಟಗೆರೆ ನಿಲ್ದಾಣಕ್ಕೆ ಬರುವಾಗ ಬಸ್ ಪ್ರಯಾಣಿಕರಿಂದ ತುಂಬಿರುತ್ತದೆ. ಸರ್ಕಾರಿ ಮತ್ತು ಖಾಸಗಿ ಬಸ್‌ನಲ್ಲಿ ಹಿರಿಯ ನಾಗರಿಕ, ಮಾಜಿ ಸೈನಿಕ, ಮಹಿಳೆ, ವಿಶೇಷ ಚೇತನರಿಗೆ ಪ್ರತ್ಯೇಕ ಸ್ಥಾನ ನಿಗದಿ ಮಾಡಲಾಗಿದೆ. ಆದೇಶದ ಪ್ರತಿ ಸಾರಿಗೆ ಕಚೇರಿಗೆ ಮಾತ್ರ ಸಿಮೀತವಾಗಿದೆ. ಪರಿಶೀಲನೆ ನಡೆಸಬೇಕಾದ ಅಧಿಕಾರಿ ವರ್ಗ ತುರ್ತಾಗಿ ತುಮಕೂರು ಕಚೇರಿಯಿಂದ ಹೊರಗೆ ಬರಬೇಕಿದೆ.
ನಿಲ್ದಾಣಕ್ಕೆ ಸರ್ಕಾರಿ ಬಸ್ ಬರೋಲ್ಲ: ಭಾನುವಾರ ನಿಲ್ದಾಣದ ಸಂಚಾರ ನಿಯಂತ್ರಕರು ರಜೆ ಇರುತ್ತಾರೆ. ಹೀಗಾಗಿ ನಿಯಂತ್ರಕನಿಲ್ಲದ ಕೊರಟಗೆರೆ ನಿಲ್ದಾಣಕ್ಕೆ ಬಸ್ ಬರೋಲ್ಲ. ಪಾವಗಡ ಮತ್ತು ಮಧುಗಿರಿ ಡಿಪೋದಿಂದ ತುಮಕೂರು ಮತ್ತು ಬೆಂಗಳೂರಿಗೆ ಸಂಚರಿಸುವ ನೂರಾರು ವಾಹನಗಳಿಗೆ ತಪಾಸಣೆ ನಡೆಸುವ ಅಧಿಕಾರಿಗಳೇ ಕಾಣುತ್ತಿಲ್ಲ.
ಸರ್ಕಾರಿ ಬಸ್ ಪಾಸಿನ ಸಮಸ್ಯೆ: ಸರ್ಕಾರಿ ಬಸ್‌ನಲ್ಲಿ ಹಣ ಪಾವತಿಸುವ ಪ್ರಯಾಣಿಕರಿಗೆ ಮೊದಲ ಅವಕಾಶ. ಲಕ್ಷಾಂತರ ರೂ ಹಣ ಮೊದಲೇ ಪಾವತಿಸಿ ಸರ್ಕಾರಿ ಬಸ್ಸಿನ ಪಾಸು ಪಡೆದಿರುವ ವಿದ್ಯಾರ್ಥಿಗಳಿಗೆ ಬಸ್ಸಿನ ಕಿಟಕಿ ಮತ್ತು ಬಾಗಿಲೇ ಗತಿ. ಪ್ರಶ್ನಿಸಿದರೇ ಬಸ್ಸಿನ ಪಾಸಿನ ಜೊತೆ ಕಾಲೇಜಿನ ಗುರುತಿನ ಚೀಟಿ ಮತ್ತು ಶುಲ್ಕದ ರಸೀದಿ ಕಡ್ಡಾಯ. ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.
ಸಾರಿಗೆ-ಪೊಲೀಸರ ಮೌನ: ಆಟೋ, ಟೆಂಪೋ,ಕಾರು ಮತ್ತು ದ್ವೀಚಕ್ರ ವಾಹನ ಸವಾರರಿಗೆ ಮಾತ್ರ ಸಾರಿಗೆ ನಿಯಮ ಸೀಮಿತವಾದಂತಿದೆ. ಸರ್ಕಾರಿ ಬಸ್‌ನಲ್ಲಿ ಪ್ರತಿನಿತ್ಯ 80 ರಿಂದ 90ಜನ ಪ್ರಯಾಣಿಕರನ್ನು ಕುರಿಗಳ ಹಾಗೇ ತುಂಬುತ್ತಾರೆ. ಆದರೆ. ಸರ್ಕಾರಿ ಬಸ್ ಗಳ ಪರಿಶೀಲನೆಗೆ ಅಧಿಕಾರಿಗಳು ಮೀನಮೇಷ ಏಕೆ ಮಾಡಬೇಕೆಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಕೊರಟಗೆರೆ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳ ಆಗಮನ ಮತ್ತು ನಿರ್ಗಮನದ ನಾಮಫಲಕದ ಜೊತೆ ಪಾಸಿನ ದರಪಟ್ಟಿ ಅಳವಡಿಸಲು ಸೂಚಿಸಿದ್ದೇನೆ. ಇಲಾಖೆಯಿಂದ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಲು ನಿರ್ವಾಹಕರು ಕಡ್ಡಾಯವಾಗಿ ಅನುಮತಿ ನೀಡಬೇಕು. –ಸಂತೋಷ್, ಕೊರಟಗೆರೆ ಘಟಕದ ವ್ಯವಸ್ಥಾಪಕ
-ಎನ್.ಪದ್ಮನಾಭ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.