ಮೆಣಸು ಸಂಸ್ಕರಿಸುವ ಯಂತ್ರ
Team Udayavani, Nov 18, 2019, 5:00 AM IST
ಕರಿಮೆಣಸಿಗಿಂತಲೂ ಬಿಳಿಮೆಣಸಿಗೆ ಅಧಿಕ ಬೇಡಿಕೆ, ಬೆಲೆ. ಬಿಳಿಮೆಣಸು ಮಾಡುವ ಕಾರ್ಯ ಶ್ರಮದಾಯಕ. ಆದ್ದರಿಂದ ಅದನ್ನು ಹೆಚ್ಚು ಮಂದಿ ಸಂಸ್ಕರಿಸಲು ಮುಂದಾಗುವುದಿಲ್ಲ. ಇದನ್ನು ಮನಗಂಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಮೆಣಸು ಸಂಸ್ಕರಣಾ ಯಂತ್ರ ಅಭಿವೃದ್ಧಿಪಡಿಸಿದೆ. ಮುಖ್ಯವಾಗಿ ಇದನ್ನು ಸಣ್ಣ, ಮಧ್ಯಮ ಪ್ರಮಾಣದ ಬೆಳೆಗಾರರ ಅವಶ್ಯಕತೆಗಳನ್ನು ಗುರಿಯಾಗಿರಿಸಿಕೊಂಡು ವಿನ್ಯಾಸ ಮಾಡಲಾಗಿದೆ.
ಈ ಯಂತ್ರ, ಒಂದು ತಾಸಿಗೆ ಗರಿಷ್ಠ 120 ಕೆ.ಜಿ ಕರಿ ಮೆಣಸನ್ನು ಸಂಸ್ಕರಿಸಿ ಬಿಳಿಯಾಗಿ ಮಾರ್ಪಡಿಸುತ್ತದೆ. ಇದಕ್ಕಾಗಿ ಮೊದಲಿಗೆ, ಚೆನ್ನಾಗಿ ಬಲಿತ, ಹಣ್ಣಾದ ಮೆಣಸು ಕಾಳುಗಳನ್ನು ನೀರಿನಲ್ಲಿ ನೆನಸಬೇಕು. ಹೀಗೆ ನೀರಲ್ಲಿ ಹದಗೊಂಡ ಮೆಣಸನ್ನು ನಂತರ ಯಂತ್ರದೊಳಕ್ಕೆ ಹಾಕಬೇಕು. ನೀರಲ್ಲಿ ನೆದ ಮೆಣಸಿನ ಹೊರಮೈ ತೆಳುವಾಗಿರುತ್ತದೆ. ಇದರಿಂದ ಅದನ್ನು ತಿರುಳಿಂದ ಬೇರ್ಪಡಿಸುವುದು ಸುಲಭ. ನಂತರ, ಅದನ್ನು ನೆರಳಿನಲ್ಲಿ ಒಣಗಿಸಿ ಬಳಸಬೇಕು. ಮೆಣಸು ಸಂಸ್ಕರಿಸುವ ಯಂತ್ರದ ಅಂದಾಜು ಮೌಲ್ಯ 35,000 ರೂ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗ ಸಂಪರ್ಕಿಸಬಹುದು: 080- 23545640
– ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.