ಗೂಗಲ್ ಕ್ರೋಮ್ ಲೇಬಲ್
Team Udayavani, Nov 18, 2019, 5:30 AM IST
ಅಂತರ್ಜಾಲವನ್ನು ಜಾಲಾಡಲು ಬ್ರೌಸರ್‌ಗಳು ಬೇಕೇ ಬೇಕು. “ಗೂಗಲ್‌ನ ಕ್ರೋಮ್’ ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಬ್ರೌಸರ್. ಅತಿ ವೇಗವಾಗಿ ಕಾರ್ಯಾಚರಿಸುತ್ತದೆ ಎನ್ನುವ ಹೆಗ್ಗಳಿಕೆ ಅದರದ್ದು. ಗೂಗಲ್ ಈಗ ಕ್ರೋಮ್ ಬಳಕೆದಾರರಿಗೆ ಹೊಸದೊಂದು ಫೀಚರ್‌ಅನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆದಷ್ಟು ಬೇಗನೆ ಈ ಸವಲತ್ತು ಕ್ರೋಮ್‌ನ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಹೊಸ ಸವಲತ್ತು ಏನೆಂದರೆ- ಅದರ ಸರ್ಚ್ ಬಾಕ್ಸ್‌ನಲ್ಲಿ ಯಾವುದೇ ಕೀ ವರ್ಡ್ ಟೈಪಿಸಿ ಶೋಧ ನಡೆಸುವಾಗ ಅದಕ್ಕೆ ಸಂಬಂಧಿಸಿದ ಜಾಲತಾಣಗಳ ಪೇಜುಗಟ್ಟಲೆ ಕೊಂಡಿಗಳು ಪರದೆ ಮೇಲೆ ಮೂಡುತ್ತವೆ. ಇನ್ನು ಮುಂದೆ ಈ ಕೊಂಡಿಗಳ ಸನಿಹದಲ್ಲೇ ಆಯಾ ಜಾಲತಾಣಗಳು ಬೇಗನೆ ತೆರೆದುಕೊಳ್ಳುತ್ತವೆಯೋ, ಇಲ್ಲವೇ ತುಂಬಾ ಸಮಯ ತೆಗೆದುಕೊಳ್ಳುವುದೋ ಎಂಬ ಮಾಹಿತಿಯೂ ದೊರೆಯಲಿದೆ. ವೇಗ ಮತ್ತು ನಿಧಾನ ಎನ್ನುವುದನ್ನು ಸೂಚಿಸುವ ಸಲುವಾಗಿ ಎರಡು ರೀತಿಯ ಬ್ಯಾಡ್ಜ್ಗಳನ್ನು ರೂಪಿಸಲಾಗುತ್ತಿದೆ. ಇದೊಂದು ರೀತಿಯಲ್ಲಿ ಪುಸ್ತಕಕ್ಕೆ ಲೇಬಲ್ ಹಚ್ಚಿದ ಹಾಗೆ. ಲೇಬಲ್ ನೋಡುತ್ತಲೇ ಅದು ಯಾವ ಪುಸ್ತಕ, ಯಾರದು ಮುಂತಾದ ಮಾಹಿತಿ ದೊರೆಯುವ ಹಾಗೆಯೇ, ಬ್ಯಾಡ್ಜ್ ನೋಡುತ್ತಲೇ ಜಾಲತಾಣ ವೇಗವಾಗಿ ತೆರೆದುಕೊಳ್ಳುವುದೋ, ನಿಧಾನವಾಗಿ ತೆರೆದುಕೊಳ್ಳುವುದೋ ಎನ್ನುವುದನ್ನು ತಿಳಿಯಬಹುದು.
ಜಾಲತಾಣಗಳು ಬಳಕೆದಾರನ ಎದುರು ತೆರೆದುಕೊಳ್ಳಲು ಈ ಹಿಂದೆ ಎಷ್ಟು ಸಮಯ ತೆಗೆದುಕೊಳ್ಳುತ್ತಿತ್ತು ಎಂಬುದನ್ನು ಪತ್ತೆ ಹಚ್ಚಿ ಆ ಮಾಹಿತಿಯ ಸಹಾಯದಿಂದ ಬ್ಯಾಡ್ಜ್ಅನ್ನು ದಯಪಾಲಿಸಲಾಗುವುದು. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗೂಗಲ್, ಬಳಕೆದಾರ ಯಾವ ಉಪಕರಣದಿಂದ ಅಂತರ್ಜಾಲವನ್ನು ಶೋಧಿಸುತ್ತಿದ್ದಾನೋ ಆ ಉಪಕರಣದ ಹಾರ್ಡ್‌ವೇರ್, ಮೆಮೋರಿ ಸಾಮರ್ಥ್ಯ, ಕಾರ್ಯಕ್ಷಮತೆಯನ್ನು ಪತ್ತೆ ಹಚ್ಚಿ, ಆ ವಿವರಗಳನ್ನು ಆಧರಿಸಿಯೂ ಬ್ಯಾಡ್ಜ್ ನೀಡಲಾಗುವುದು. ಇಂಟರ್ನೆಟ್ ಬಳಕೆಯ ಅನುಭವವನ್ನು ಸುಸೂತ್ರವಾಗಿಸುವುದು ಈ ಹೊಸ ಸವಲತ್ತಿನ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.