ಆ್ಯಡು ಹುಟ್ಟಿದ ಸಮಯ; ಜನ ಮೆಚ್ಚಿದ ಜಾಹೀರಾತುಗಳು!
Team Udayavani, Nov 18, 2019, 5:45 AM IST
ರೇಡಿಯೊಗಳಲ್ಲಿ, ಟಿ.ವಿ.ಗಳಲ್ಲಿ, ಪ್ರಸಾರಗೊಳ್ಳುವ ಜಾಹೀರಾತುಗಳು ಕೆಲವೇ ಸೆಕೆಂಡುಗಳ ಅವಧಿಯದ್ದಾಗಿರಬಹುದು. ಆದರೆ, ಅದು ತಂದು ಕೊಡುವ ಲಾಭ ಮಾತ್ರ ಕೋಟ್ಯಂತರ ರುಪಾಯಿ ಬೆಲೆಯದ್ದು. ಅಷ್ಟು ಚಿಕ್ಕ ಅವಧಿಯ ವಿಡಿಯೋ- ಆಡಿಯೋ ಕ್ಲಿಪ್ ಒಂದು ಇಡೀ ಸಮುದಾಯದ, ಒಂದಿಡೀ ತಲೆಮಾರಿನ ಜನರ ಜೀವನದ ಪ್ರಮುಖ ಘಟ್ಟವನ್ನೇ ನೆನಪಿಸುವುದು ಅಚ್ಚರಿಯೇ ಸರಿ. ಸಂಸ್ಥೆಗಳಿಗೆ ಲಾಭ ತಂದುಕೊಟ್ಟಿದ್ದೇ ಅಲ್ಲದೆ, ಜನರ ಮನದಲ್ಲಿ ಉತ್ಪನ್ನಗಳನ್ನು ಬೇರೂರುವಂತೆ ಮಾಡಿದ ಆ್ಯಡ್‌ಗಳು ಹಲವಾರಿವೆ. ಅವುಗಳಲ್ಲಿ ಕೆಲವನ್ನು ಆರಿಸಿ ನಿಮ್ಮ ಮುಂದಿಡುತ್ತಿದ್ದೇವೆ. ಇವು ಓದುಗರನ್ನು ದಶಕಗಳ ಹಿಂದಿನ ಕಾಲಕ್ಕೆ ಕೊಂಡೊಯ್ಯಲಿವೆ.
ಲೈಫ್ ಬಾಯ್
ಲೈಫ್ಬಾಯ್ ಎಲ್ಲಿದೆಯೋ,ಅಲ್ಲಿದೆ ಆರೋಗ್ಯ
ಕೆಂಪು ಬಣ್ಣದ ಸಾಬೂನನ್ನು ಹಳ್ಳಿ ಹಳ್ಳಿಗಳಲ್ಲೂ, ನಗರ ಪ್ರದೇಶಗಳ ಮನೆಗಳ ಬಾತ್‌ರೂಮುಗಳಲ್ಲೂ ಕಾಣುವಂತೆ ಮಾಡಿದ ಶ್ರೇಯ “ಲೈಫ್ಬಾಯ್ ಎಲ್ಲಿದೆಯೋ, ಅಲ್ಲಿದೆ ಆರೋಗ್ಯ’ ಜಾಹೀರಾತಿನದ್ದು. ರೇಡಿಯೊಗಳಲ್ಲಿ, ದೂರದರ್ಶನ ಚಾನೆಲ್‌ನಲ್ಲಿ ಲೈಫ್ಬಾಯ್ ಜಾಹೀರಾತು ಸರ್ವೇಸಾಮಾನ್ಯವಾಗಿತ್ತು.
ಏಜೆನ್ಸಿ- ಲೋವೆ ಲಿಂಟಾಸ್ 1964
ಲಕ್ಸ್
ಫಿಲಿ¾ ಸಿತಾರೋಂ ಕಾ ಸೌಂದರ್ಯ ಸಾಬೂನ್ (ಸಿನಿಮಾ ತಾರೆಯರ ಸೌಂದರ್ಯ ಸಾಬೂನು)
ಹಾಲಿನ ಬಾತ್ ಟಬ್‌ನಲ್ಲಿ ಸ್ನಾನ ಮಾಡುವ ಬಾಲಿವುಡ್ ನಟಿಯರ ಜಾಹೀರಾತು ಲಕ್ಸ್ ಬ್ರ್ಯಾಂಡನ್ನು ಭಾರತೀಯರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲಿಸಿಬಿಟ್ಟಿತು. 1941ರಲ್ಲಿ ಬಾಲಿವುಡ್ ನಟಿ ಲೀಲಾ ಚಿಟ್ನಿಸ್‌ರಿಂದ ಆ ಪರಿಪಾಠ ಶುರುವಾಯಿತು. ನಂತರ, ಆಯಾ ಕಾಲಘಟ್ಟದ ಪ್ರಖ್ಯಾತ ಸಿನಿಮಾ ನಟಿಯರನ್ನೇ ತನ್ನ ಜಾಹೀರಾತಿನಲ್ಲಿ ಬಳಸಿಕೊಳ್ಳುವುದು ಲಕ್ಸ್‌ನ ಟ್ರೇಡ್ ಮಾರ್ಕ್ ಆಗಿಬಿಟ್ಟಿತು. ಡ್ರೀಮ್ ಗರ್ಲ್ ಹೇಮಾ ಮಾಲಿನಿಯೂ ಲಕ್ಸ್ ಗರ್ಲ್ ಆಗಿ ಕಾಣಿಸಿಕೊಂಡಿದ್ದರು.
ಏಜೆನ್ಸಿ- ಜೆ.ಡಬ್ಲ್ಯು.ಟಿ 1941
ಅಮುಲ್ ಬಟರ್
ಬೆಣ್ಣೆಗೆ ಪರ್ಯಾಯ ಚಿತ್ರವೊಂದಿದ್ದರೆ ಅದು ಅಮುಲ್ ಜಾಹೀರಾತಿನಲ್ಲಿ ಬರುವ ಹುಡುಗಿಯದ್ದು. ಅಮುಲ್ ಗರ್ಲ್ ಎಂದೇ ಹೆಸರಾಗಿರುವ ಕಾಟೂìನ್ ಚಿತ್ರವನ್ನು ರಚಿಸಿದ್ದು, ಕಲಾವಿದರಾದ ಸಿಲ್ವೆಸ್ಟರ್ ಡ ಕುನ್ಹಾ ಮತ್ತು ಯುಸ್ಟೇಸ್ ಫೆರ್ನಾಂಡಿಸ್. ರಾಷ್ಟ್ರೀ ಯ, ಜಾಗತಿಕ ವಿದ್ಯಮಾನಗಳಿಗೆ ತಕ್ಕಂತೆ ಛಡಿಯೇಟಿನಂಥ ಜಾಹೀರಾತುಗಳನ್ನು ರೂಪಿಸುವುದು ಅಮುಲ್ ಜಾಹೀರಾತು ಸರಣಿಯ ವೈಶಿಷ್ಟé. ಸಿನಿಮಾಗಳಲ್ಲಿ, ನಾಟಕಗಳಲ್ಲಿ ಅಷ್ಟೇ ಯಾಕೆ; ಜನರ ಬಾಯಿಮಾತಿನಲ್ಲಿಯೂ “ಅಮುಲ್ ಗರ್ಲ್’ ಎಂಬ ನುಡಿಗಟ್ಟೇ ಸೃಷ್ಟಿಯಾಗಿರುವುದು ಈ ಜಾಹೀರಾತುಗಳ ಯಶಸ್ಸಿಗೆ ಸಾಕ್ಷಿ.
ಎಜೆನ್ಸಿ- ಎಎಸ್‌ಪಿ 1966
ನಿರ್ಮಾ
ಹೇಮಾ, ರೇಖಾ, ಜಯಾ ಔರ್ ಸುಷ್ಮಾ, ಸಬ್ ಕೀ ಪಸಂದ್ ನಿರ್ಮಾ ಶ್ವೇತ ವರ್ಣದ ಫ್ರಾಕನ್ನು ಉಟ್ಟ ಪುಟ್ಟ ಹುಡುಗಿಯ ಚಿತ್ರವಿದ್ದ ನಿರ್ಮಾ ಬಟ್ಟೆ ಸಾಬೂನಿನ ಜಾಹೀರಾತು, ಪ್ರತಿನಿತ್ಯ ರೇಡಿಯೊಗಳಲ್ಲಿ ಪ್ರಸಾರಗೊಳ್ಳುತ್ತಿತ್ತು. ಒಂದು ಬರವಣಿಗೆಯ ಸಾಲು ಜನರನ್ನು ಅದೆಷ್ಟು ಮೋಡಿ ಮಾಡಬಲ್ಲದು ಎನ್ನುವುದಕ್ಕೆ ನಿರ್ಮಾದ ಟ್ಯಾಗ್ ಲೈನ್ ಅತ್ಯುತ್ತಮ ಉದಾಹರಣೆ. ಸಾಲು ಮಾತ್ರವಲ್ಲ, ಅದರ ಹಿನ್ನೆಲೆ ಸಂಗೀತವೂ ಅದಕ್ಕೆ ಪೂರಕವಾಗಿದೆ. ಈ ಜಾಹೀರಾತು, ಅಹಮದಾಬಾದ್ ಮೂಲದ ನಿರ್ಮಾ ಉತ್ಪನ್ನವನ್ನು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಗೊಳಿಸಿತು. ನಿರ್ಮಾ ಸಂಸ್ಥೆಯ ಮಾಲೀಕರ ಮಗಳೇ ನಿರ್ಮಾ ಚಿತ್ರಕ್ಕೆ ರೂಪದರ್ಶಿ ಎಂಬುದು ಮತ್ತೂಂದು ವಿಶೇಷ.
ಏಜೆನ್ಸಿ- ಪೂರ್ಣಿಮಾ 1980ರ ದಶಕ
ರಸ್ನಾ
ಐ ಲವ್ ಯೂ ರಸ್ನಾ
ಹಿಂದೆಲ್ಲಾ ಯಾರದೇ ಮನೆಗೆ ಹೋದರೂ ಗಾಜಿನ ಲೋಟಗಳಲ್ಲಿ ಕೆಂಪು, ಹಳದಿ ಬಣ್ಣದ ತಂಪು ಪಾನೀಯಗಳನ್ನು ಟ್ರೇನಲ್ಲಿ ಇಟ್ಟು ಕೊಡುತ್ತಿದ್ದರು. ಅದು ನೂರಕ್ಕೆ ನೂರು ಪ್ರತಿಶತ ರಸ್ನಾ ಆಗಿರುತ್ತಿತ್ತು. ಆಗಿನ್ನೂ ಬಾಟಲಿ ಪಾನೀಯಗಳು ಮನೆಗಳಲ್ಲಿ ಸ್ಥಾನ ಪಡೆದಿದರಲಿಲ್ಲ. ಆ ಸಮಯದಲ್ಲಿ ರಸ್ನಾವನ್ನು ಮನೆ ಮನೆಗಳಲ್ಲೂ ಕಾಣಬಹುದಿತ್ತು. ಅದರ ಜಾಹೀರಾತಿನಲ್ಲಿ ಮುದ್ದಾದ ಪುಟ್ಟ ಹುಡುಗಿಯೊಬ್ಬಳು “ಐ ಲವ್ ಯೂ ರಸ್ನಾ’ ಎಂದು ಹೇಳುತ್ತಾ,ಅದನ್ನು ಭಾರತೀಯರ ಪ್ರೀತಿಯ ಪೇಯವಾಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಳು.
ಏಜೆನ್ಸಿ- ಮುದ್ರಾ ಕಮ್ಯುನಿಕೇಷನ್ಸ್ 1980ರ ದಶಕ
ಮ್ಯಾಗಿ
ಟೂ ಮಿನಿಟ್ ಪ್ರಾಮಿಸ್(ಎರಡು ನಿಮಿಷದ ವಾಗ್ಧಾನ)
ನೆಸ್ಲೆ ಸಂಸ್ಥೆಯ ಮ್ಯಾಗಿಯ ಹಳದಿ ಪ್ಯಾಕೆಟ್ಟುಗಳು ಇಂದು ಬಾರತೀಯರ ಅಡುಗೆಮನೆಯನ್ನು ಆಕ್ರಮಿಸಿರಬಹುದು. ಅದಕ್ಕೆ ಕಾರಣವಾದುದು “ಟೂ ಮಿನಿಟ್ ಪ್ರಾಮಿಸ್’ ಜಾಹೀರಾತು ಸರಣಿ. ಕೇವಲ ಎರಡೇ ನಿಮಿಷಗಳಲ್ಲಿ ಬ್ರೇಕ್‌ಫಾಸ್ಟ್ ತಯಾರು ಮಾಡುವುದಾಗಿ ಮಕ್ಕಳಿಗೆ ಮಾತು ಕೊಡುವ ಅಮ್ಮ, ಆ ಮಾತನ್ನು ಉಳಿಸಿಕೊಳ್ಳುವ ಕಥೆ ಜಾಹೀರಾತಿನದ್ದು.
ಏಜೆನ್ಸಿ- ಜೆ.ಡಬ್ಲ್ಯು.ಟಿ 1980 ದಶಕ
ಕೈನೆಟಿಕ್ ಲೂನಾ
ಚಲ್ ಮೇರಿ ಲೂನಾ
ನಮ್ಮಲ್ಲಿ ಇಂದಿಗೂ ಮೊಪೆಡ್ ದ್ವಿಚಕ್ರ ವಾಹನಗಳನ್ನು ಕೈನೆಟಿಕ್ ಎಂದೇ ಕರೆಯುವವರಿದ್ದಾರೆ. ಅಂದರೆ ಮೊಪೆಡ್ ಎನ್ನುವುದಕ್ಕೆ ಪರ್ಯಾಯ ಅರ್ಥವಾಗಿ ಹೋಗಿಬಿಟ್ಟಿದೆ ಕೈನೆಟಿಕ್. ದಶಕಗಳ ಹಿಂದೆ 50 ಸಿ.ಸಿ.ಯ ಕೈನೆಟಿಕ್ ಲೂನಾ ಮೊಪೆಡ್‌ಅನ್ನು ಮನೆ ಮಾತಾಗಿಸಿದ್ದು “ಚಲ್ ಮೇರಿ ಲೂನಾ’ ಜಾಹೀರಾತು ಸರಣಿ. ಅದುವರೆಗೂ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯರನ್ನು ಲೂನಾ ಕೊಳ್ಳುವಂತೆ ಪ್ರಚೋದಿಸಿದ್ದು ಇದರ ಹೆಗ್ಗಳಿಕೆ.
ಏಜೆನ್ಸಿ- ಒಗಿಲ್ವಿ ಅಂಡ್ ಮ್ಯಾಥರ್1984
ಬಜಾಜ್
ಹಮಾರಾ ಬಜಾಜ್
ಬಜಾಜ್‌ನ “ಹಮಾರಾ ಬಜಾಜ್’ ಜಾಹೀರಾತು ಸರಣಿಯನ್ನು ದೇಶವನ್ನು ಒಗ್ಗೂಡಿಸುವ ಮಟ್ಟಿಗೆ ಯಶಸ್ಸು ಪಡೆದ ಜಾಹೀರಾತು ಎಂದರೆ ಅತಿಶಯೋಕ್ತಿಯಿಲ್ಲ. ಈ ಸರಣಿಯಲ್ಲಿ ವಿವಿಧ ಧರ್ಮಗಳ, ವಿವಿಧ ಉದ್ಯೋಗಸ್ಥರ, ವಿವಿಧ ಪ್ರದೇಶಗಳ ಜನರು ಬಜಾಜ್‌ಅನ್ನು ಚಲಾಯಿಸುತ್ತಿರುವಂತೆ ತೋರಿಸಲಾಗಿತ್ತು.
ಏಜೆನ್ಸಿ- ಲೋವೆ ಲಿಂಟಾಸ್ 1989
ರೇಮಂಡ್
ದಿ ಕಂಪ್ಲೀಟ್ ಮ್ಯಾನ್
ಒಬ್ಬ ಜೆಂಟಲ್‌ಮ್ಯಾನ್ ಹೇಗಿರುತ್ತಾನೆ ಎನ್ನುವುದನ್ನು ಮನ ಮುಟ್ಟುವಂತೆ ತೆರೆ ಮೇಲೆ ತೋರಿಸುತ್ತಲೇ ವಸ್ತ್ರ ತಯಾರಿಕಾ ಸಂಸ್ಥೆಯೊಂದನ್ನು ಭಾರತದಾದ್ಯಂತ ಪ್ರಚುರ ಪಡಿಸಿದ್ದು “ದಿ ಕಂಪ್ಲೀಟ್ ಮ್ಯಾನ್’ ಜಾಹೀರಾತು ಸರಣಿ. ಕೌಟುಂಬಿಕ ಸುಖ ಸಂತೋಷಗಳಲ್ಲಿ, ಕಷ್ಟದಲ್ಲಿ ಭಾಗಿಯಾಗುತ್ತಾ, ಹೆಣ್ಮಕ್ಕಳನ್ನು ಗೌರವದಿಂದ ಕಾಣುವವನೇ ನಿಜವಾದ ಜೆಂಟಲ್‌ವುನ್ ಎನ್ನುವುದನ್ನು ಸೂಚ್ಯವಾಗಿ ತಿಳಿಸಿತ್ತು ಈ ಜಾಹೀರಾತು.
ಏಜೆನ್ಸಿ- ನೆಕ್ಸಸ್ 1992
ಫೆವಿಕಾಲ್
ಅಂಟು ತಯಾರಕ ಸಂಸ್ಥೆ ಫೆವಿಕಾಲ್ ಅಂಟನ್ನು ಮನುಷ್ಯ ಸಂಬಂಧಗಳಿಗೆ ಹೋಲಿಸುತ್ತಲೇ ಭಾವಪೂರ್ಣ ಜಾಹೀರಾತುಗಳನ್ನು ಪ್ರಸಾರಗೊಳಿಸಿ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿತು. ಇಂದಿಗೂ ಅಂಗಡಿಗಳಲ್ಲಿ ಅಂಟು ಕೊಡಿ ಎನ್ನುವುದಕ್ಕೆ ಬದಲಾಗಿ “ಫೆವಿಕಾಲ್ ಕೊಡಿ’ ಎಂದೇ ಹೇಳುವುದು ರೂಢಿಯಲ್ಲಿದೆ. ಅದರ ಶ್ರೇಯ ಜಾಹೀರಾತುಗಳಿಗೂ ಸಲ್ಲಬೇಕು. ಪೆವಿಕಾಲ್ ಜಾಹೀರಾತುಗಳಲ್ಲಿ ಬಾಂಧವ್ಯ ಮಾತ್ರವಲ್ಲದೆ, ವ್ಯಂಗ್ಯವನ್ನೂ ವಸ್ತುವನ್ನಾಗಿಸಿರುವುದನ್ನು ಕಾಣಬಹುದು. ಫೆವಿಕ್ವಿಕ್ ಬಳಸಿ ಕ್ಷಣ ಮಾತ್ರದಲ್ಲಿ ಮೀನು ಹಿಡಿಯುವ ಜಾಹೀರಾತು ಅದಕ್ಕೆ ಉತ್ತಮ ಉದಾಹರಣೆ.
ಏಜೆನ್ಸಿ- ಒಗಿಲ್ವಿ ಅಂಡ್ ಮ್ಯಾಥರ್1998
ಕೋಕಾ ಕೋಲಾ
ಥಂಡಾ ಮತ್ಲಬ್ ಕೋಕಾ ಕೋಲಾ
ಮೊತ್ತ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಪೇಯ ತಯಾರಕ ಸಂಸ್ಥೆ ಕೋಕಾ ಕೋಲಾ ಭಾರತದ ಯುವಪೀಳಿಗೆಯನ್ನು ತಲುಪಲು ಸಾಧ್ಯವಾಗಿದ್ದು ಈ ಜಾಹೀರಾತಿನ ಮೂಲಕ. ಆ ಜಾಹೀರಾತಿನಲ್ಲಿ ನಟ ಆಮೀರ್ ಖಾನನ ಬಾಯಲ್ಲಿ ಹೇಳಿಸಿದ ಟ್ಯಾಗ್ ಲೈನ್ “ಥಂಡಾ ಮತ್ಲಬ್ ಕೋಕಾ ಕೋಲಾ’. ತಂಪು ಪಾನೀಯ ಎಂದರೆ ಕೋಕಾ ಕೋಲ ಎನ್ನುವುದು ಅದರ ಅರ್ಥ. ಅರ್ಥ ಸರಳವಾಗಿದ್ದರೂ ಹೇಳುವ ಧಾಟಿ ಮತ್ತು ಅದರ ಹಿಂದಿದ್ದ ಲಯ ಅದನ್ನು ಭಾರತದಲ್ಲಿ ಪ್ರಖ್ಯಾತವಾಗಿಸಿತು. ಕೋಲಾ ಕೈಯಲ್ಲಿ ಹಿಡಿದು ಟ್ಯಾಗ್ ಲೈನ್ ಹೇಳುವ ಪರಿಪಾಠ, ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಿತ್ತು.
ಏಜೆನ್ಸಿ- ಮೆಕ್‌ಕ್ಯಾನ್- ಎರಿಕ್‌ಸನ್ 2002
-ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.