![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 18, 2019, 5:48 AM IST
ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ರವಿವಾರ ಮತ್ತೆ ಕುಸಿದಿದೆ. ಕಳೆದೊಂದು ವರ್ಷದಲ್ಲಿ ಸ್ಲ್ಯಾಬ್ ಮೂರನೇ ಬಾರಿಗೆ ಕುಸಿದಿದೆ. ಕುಸಿದು ಇಷ್ಟು ಸಮಯವಾದರೂ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಈಗ ಮೀನುಗಾರರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದುರಸ್ತಿ ಮಾಡಲು ಸಾಧ್ಯವಾಗದಿದ್ದರೆ ಇಡೀ ಬಂದರನ್ನೇ ಬಂದ್ ಮಾಡಿ ಎನ್ನುವ ಮಾತುಗಳು ಮೀನುಗಾರರಿಂದ ಕೇಳಿ ಬಂದಿದೆ.
ಜೆಟ್ಟಿಯ ಸ್ಲ್ಯಾಬ್ ಮತ್ತೆ ಕುಸಿದಿರುವುದು ಮಾತ್ರವಲ್ಲದೆ ಎರಡನೇ ಹರಾಜು ಪ್ರಾಂಗಣ ಅಪಾಯಕಾರಿ, ಕುಸಿಯುವ ಭೀತಿಯಿಂದ ಇಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ನಾಲ್ಕು ಸುತ್ತಲೂ ಇಟ್ಟಿಗೆಯಿಂದ ತಡೆಗೋಡೆ ಕಟ್ಟಲಾಗಿತ್ತು. ಅದು ಕೂಡ ಒಂದು ಬದಿ ಕುಸಿದಿದ್ದು, ಮತ್ತೂಂದು ಬದಿ ಬಿರುಕುಬಿಟ್ಟಿದೆ.
ಮೀನುಗಾರರಿಗೆ ಸಮಸ್ಯೆ
ಈಗ ಈ ಎರಡನೇ ಹರಾಜು ಪ್ರಾಂಗಣದಲ್ಲಿ ಮೀನುಗಾರರಿಗೆ ಅಪಾಯ ಎದುರಾಗಬಹುದು ಎನ್ನುವ ಕಾರಣಕ್ಕೆ ಇಲ್ಲಿ ಎಲ್ಲ ರೀತಿಯ ಮೀನುಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸ್ಲ್ಯಾಬ್ ದುರಸ್ತಿಯಾಗುವವರೆಗೆ ಬಂದರಿನ ಬೇರೆ ಕಡೆ ಬದಲಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮೀನುಗಾರಿಕಾ ಋತು ಆರಂಭಕ್ಕೂ ಮುನ್ನ ಅಧಿಕಾರಿಗಳು ಹೇಳಿದ್ದರೂ ಇನ್ನೂ ಪರ್ಯಾಯ ವ್ಯವಸ್ಥೆಯನ್ನೇ ಮಾಡಿಕೊಟ್ಟಿಲ್ಲ. ಇಲ್ಲಿ ಸುಮಾರು 300ಕ್ಕೂ ಮಿಕ್ಕಿ ಪರ್ಸಿನ್, 600ಕ್ಕೂ ಹೆಚ್ಚು ಫಿಶಿಂಗ್ ಬೋಟ್‌ಗಳಿವೆ. 500ಕ್ಕೂ ಅಧಿಕ ನಾಡದೋಣಿಗಳಿವೆ. ಇದರಿಂದ ಬಂದರಿನಲ್ಲಿ ಬೋಟುಗಳಿಂದ ಮೀನು ಇಳಿಸಲು, ಬೋಟು ನಿಲುಗಡೆಗೆ ಜಾಗದ ಸಮಸ್ಯೆಯಾಗುತ್ತಿದೆ.
3ನೇ ಬಾರಿಗೆ ಕುಸಿತ
2018ರ ಸೆ. 14ರಂದು ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬಿದ್ದಿತ್ತು. ಆ ಬಳಿಕ ಡಿಸೆಂಬರ್‌ನಲ್ಲಿ ಮತ್ತೂಂದು ಕಡೆ ಕೂಡ ಸ್ಲ್ಯಾಬ್ ಕುಸಿದಿತ್ತು. ಈಗ ಮತ್ತೆ ಕುಸಿದಿದೆ. ಜೆಟ್ಟಿ ಒಟ್ಟು ಅಂದಾಜು 400 ಮೀ. ಉದ್ದವಿದ್ದು, ಅದರಲ್ಲಿ 100 ಮೀ. ಉದ್ದದ ಜೆಟ್ಟಿ ಈವರೆಗೆ ಕುಸಿದಿದೆ. ಇನ್ನು ಸಮುದ್ರದ ನೀರು ಒಳಗೆ ನುಗ್ಗುತ್ತಿರುವುದರಿಂದ ಜೆಟ್ಟಿಯ ಅಡಿಪಾಯಕ್ಕೆ ಕುತ್ತು ತರುವ ಭೀತಿಯೂ ಎದುರಾಗಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಹರಾಜು ಪ್ರಾಂಗಣದ ಗೋಡೆ, ಜೆಟ್ಟಿ ಎಲ್ಲವೂ ಕುಸಿಯುವ ಸಂಭವ ಇದೆ ಎನ್ನುವ ಆತಂಕ ಮೀನುಗಾರರದ್ದು.
ಪ್ರಾಣಹಾನಿಗೆ ಕಾಯುತ್ತಿದ್ದಾರೆಯೇ?
ಈಗ 3 ನೇ ಬಾರಿಗೆ ಜೆಟ್ಟಿಯ ಸ್ಲ್ಯಾಬ್ ಕುಸಿದಿದೆ. ಇಷ್ಟು ಸಮಯವಾದರೂ ಇನ್ನೂ ಒಂಚೂರು ಕೂಡ ಕಾಮಗಾರಿಯೇ ಆಗಿಲ್ಲ. ಇವರು ಮೀನುಗಾರರ ಪ್ರಾಣ ಹೋಗಲಿ ಅನ್ನುವುದನ್ನು ಕಾಯುತ್ತಿ ದ್ದಾರೆಯೇ? ಇಷ್ಟು ದಿನ ಬರೀ ಭರವಸೆಗಳೇ ಆಯಿತು. ಎಲ್ಲ ಬಂದರುಗಳಂತೆಯೇ ನಾವು ಅರ್ಹರಲ್ಲವೇ? ಇವರಿಂದ ಆಗದಿದ್ದರೆ ಜೀವಹಾನಿ ಸಂಭವಿಸುವ ಮುನ್ನ ಇಡೀ ಬಂದರನ್ನೇ ಮೀನುಗಾರಿಕೆಗೆ ಯೋಗ್ಯವಲ್ಲ ಎಂದು ಬಂದ್ ಮಾಡಲಿ.
-ರಮೇಶ್ ಕುಂದರ್,
ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸಹಕಾರ ಸಂಘ, ಗಂಗೊಳ್ಳಿ
ಹೆಚ್ಚುವರಿ ಅನುದಾನಕ್ಕೆ ವಿಳಂಬ
ಗಂಗೊಳ್ಳಿ ಬಂದರಿನ ಪೂರ್ಣ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಎಂಜಿನಿಯರ್‌ಗಳು ಸಿದ್ಧಪಡಿಸಿದ್ದು, ಈಗಾಗಲೇ ಸರಕಾರ 1.98 ಕೋ.ರೂ. ಮಂಜೂರಾತಿ ನೀಡಿದ್ದರೂ ಹೆಚ್ಚಿನ ಅನುದಾನಕ್ಕಾಗಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಮೀನುಗಾರಿಕಾ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ, ಜೆಟ್ಟಿಯ ಮರು ನಿರ್ಮಾಣಕ್ಕಾಗಿ 12.5 ಕೋ.ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಹೆಚ್ಚುವರಿ ಅನುದಾನದ ಅಗತ್ಯವಿದ್ದುದರಿಂದ ವಿಳಂಬವಾಗುತ್ತಿದೆ ಎನ್ನುವುದಾಗಿ ಅಧಿಕಾರಿಗಳು ಸಮಜಾಯಿಷಿ ಕೊಡುತ್ತಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.