ಯಕ್ಷಗಾನದಲ್ಲೂ ಅರೆಭಾಷೆ ಕಂಪು

ಸುಳ್ಯ: ರಂಗವೇದಿಕೆ ಏರಲು ಪ್ರಪ್ರಥಮ ಅರೆಭಾಷೆ ಯಕ್ಷ ತಂಡ ಸಜ್ಜು

Team Udayavani, Nov 18, 2019, 5:24 AM IST

SLKP

ಸುಳ್ಯ: ತುಳು, ಕನ್ನಡ ಭಾಷೆಯಲ್ಲಿ ಯಕ್ಷಗಾನದ ಇಂಪು ಆಸ್ವಾದಿಸಿದವರಿಗೆ ಇನ್ನು ಮುಂದೆ ಅರೆಭಾಷೆಯಲ್ಲೂ ಮಾತುಗಾರಿಕೆ ಆಲಿಸಲು ತಂಡವೊಂದು ಸಿದ್ಧಗೊಳ್ಳುತ್ತಿದೆ.
ಸುಳ್ಯದಲ್ಲಿ ಅರೆಭಾಷೆಯಲ್ಲಿ ಯಕ್ಷ ಗಾನ ತಂಡ ಕಟ್ಟುವ ನೆಲೆಯಲ್ಲಿ ಎರಡು ವರ್ಷ ನಡೆಸಿದ ಪ್ರಯತ್ನದ ಫಲವಾಗಿ ಪ್ರಪ್ರಥಮ ಅರೆಭಾಷೆ ಯಕ್ಷ ತಂಡ ವೊಂದು ಸದ್ದಿಲ್ಲದೆ ರಂಗವೇದಿಕೆಗೆ ಏರಲು ಅಣಿಯಾಗಿದೆ.

ಅರೆಭಾಷೆ ಯಕ್ಷಗಾನ ತಂಡ
ಸುಳ್ಯ, ಕೊಡಗು ಜಿಲ್ಲೆಯಲ್ಲಿ ಅರೆಭಾಷೆ ಪ್ರಧಾನ ಆಡುಭಾಷೆ. ಹಲವು ಸಂಸ್ಕೃತಿ, ಸಾಹಿತ್ಯಗಳ ಹೂರಣ ಇರುವ ಅರೆಭಾಷೆಯ ಸೊಗಡು ಪಸರಿಸುವ ನಿಟ್ಟಿನಲ್ಲಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಅರೆಭಾಷಾ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ರಚಿಸಿದ್ದರು. ಕಳೆದ ಅವಧಿದಲ್ಲಿ ಪಿ.ಸಿ. ಜಯರಾಮ ಅಧ್ಯಕ್ಷರಾಗಿದ್ದ ಸಂದರ್ಭ ಅರೆಭಾಷೆಯಲ್ಲಿ ಸಾಹಿತ್ಯ ರಚಿಸಿ ಯಕ್ಷಗಾನ ತಂಡ ಕಟ್ಟುವ ಹೊಸ ಪ್ರಯತ್ನವೊಂದನ್ನು ರೂಪುಗೊಳಿಸಿ, ಕಾರ್ಯ ರೂಪಕ್ಕೆ ತಂದಿದ್ದರು. ಪ್ರಸ್ತುತ ಆ ಯೋಜನೆ ಕಾರ್ಯಗತಕ್ಕೆ ಸಿದ್ಧತೆ ನಡೆಯುತ್ತಲಿದೆ.

45 ಮಂದಿಗೆ ತರಬೇತಿ
ಎರಡು ವರ್ಷಗಳ ಹಿಂದೆ ಅಕಾಡೆಮಿ ಸಹಯೋಗ ಪಡೆದು ಬೆಳ್ಳಾರೆ ಯಕ್ಷ ಕಲಾಬೋಧಿನಿಯ ಮೂಲಕ ತರಬೇತಿ ಆರಂಭಗೊಂಡಿತು. ಸಂಚಾಲಕ ಲಿಂಗಪ್ಪ ಬೆಳ್ಳಾರೆ ಮತ್ತು ಲಕ್ಷ್ಮೀಶ್‌ ರೈ ಅವರು ತರಬೇತಿ ನೀಡುತ್ತಿದ್ದಾರೆ. ಇಲ್ಲಿ 10 ವರ್ಷದಿಂದ 40 ವರ್ಷ ದೊಳಗಿನ 45 ಮಂದಿಗೆ ತರಬೇತಿ ನೀಡಲಾಗುತ್ತಿದೆ. ವಿಶೇಷ ಅಂದರೆ ಇಲ್ಲಿ ಅರೆಭಾಷೆ ಮಾತನಾಡುವ ಎಲ್ಲ ಜಾತಿ, ಧರ್ಮೀಯರು ಕೂಡ ಇದ್ದಾರೆ. ಜಾತಿ, ಧರ್ಮ ಮೀರಿ ಯಕ್ಷಗಾನ ತಂಡ ಕಟ್ಟುವ ಆಕಾಡೆಮಿ ಪರಿಕಲ್ಪನೆ ಇದಕ್ಕೆ ಮುಖ್ಯ ಕಾರಣ. ಶನಿವಾರ, ರವಿವಾರ ಉಚಿತ ತರಬೇತಿ ನಡೆಯುತ್ತಿದೆ. ಅಕಾಡೆಮಿ ಮೊದಲ ವರ್ಷದಲ್ಲಿ ಪ್ರತಿ ವಿದ್ಯಾರ್ಥಿಗೆ 2 ಸಾವಿರ ರೂ. ಸ್ಕಾಲರ್‌ಶಿಪ್‌ ನೀಡಿದೆ.

ಮೊದಲ ಪ್ರದರ್ಶನ
ಕನ್ನಡ, ತುಳು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸಿ ಅದನ್ನು ಬಳಸಲಾಗುತ್ತಿದೆ. ಲಿಂಗಪ್ಪ ಬೆಳ್ಳಾರೆ, ರಂಗ ಕಲಾವಿದ ಜಯಪ್ರಕಾಶ್‌ ಅನುವಾದಿಸಿ ರಂಗಕ್ಕೆ ಅಳವಡಿಸಿದ್ದಾರೆ. ಈಗಾಗಲೇ ಜಾಲೂÕರಿನಲ್ಲಿ ಅರೆಭಾಷೆ ಯಕ್ಷಗಾನ ಪ್ರದರ್ಶನ ನೀಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಬೇರೆ ಕಡೆಗಳಲ್ಲಿಯೂ ಪ್ರದರ್ಶನಕ್ಕೆ ತಂಡ ಸಿದ್ಧವಾಗಿದೆ.

ಭಾಗವತಿಕೆ ಗುರಿ
ಮೊದಲ ಹಂತದಲ್ಲಿ ಅರೆಭಾಷೆಯಲ್ಲಿ ಸಾಹಿತ್ಯ ರಚಿಸಿ ಮಾತುಗಾರಿಕೆಗೆ ಆದ್ಯತೆ ನೀಡಲಾಗಿದೆ. ಈಗ ಭಾಗವತಿಕೆ ಕನ್ನಡ ಭಾಷೆಯಲ್ಲೇ ಇದೆ. ಮುಂದಿನ ದಿನಗಳಲ್ಲಿ ಪ್ರಾತಧಾರಿಗಳು ಅಭಿನಯಿಸುವ ಕಥಾ ನಕವನ್ನು ಭಾಗವತರು ಅರೆಭಾಷೆಯಲ್ಲೇ ಹಾಡುವ ರೀತಿಯಲ್ಲಿ ಸಾಹಿತ್ಯ ರಚಿಸಲು ಉದ್ದೇಶಿಸ‌ಲಾಗಿದ್ದು, ತಯಾರಿಯೂ ನಡೆ ಯುತ್ತಿದೆ. ವೇಷಭೂಷಣ, ತಾಳ, ಚೆಂಡೆ, ನಾಟ್ಯಗಳಲ್ಲಿ ವ್ಯತ್ಯಾಸ ಇರುವುದಿಲ್ಲ.

ಯಕ್ಷ ಕಲಾಬೋಧಿನಿ ತಂಡ
ಯಕ್ಷಗಾನ ಕಲಾಬೋಧಿನಿ ಮೂಲಕ ಯಕ್ಷಗಾನದ ವಿವಿಧ ಪ್ರಕಾರಗಳನ್ನು ಕಲಿಯಲು ಅವಕಾಶವಿದೆ. ಚೆಂಡೆಮದ್ದಳೆ, ನಾಟ್ಯ, ಭಾಗವತಿಕೆ, ಬಣ್ಣಗಾರಿಕೆ, ಹೀಗೆ ಎಲ್ಲ ಆಯಾಮಗಳಲ್ಲಿಯೂ ಕಲಿಕೆ ನೀಡುವುದು ಇಲ್ಲಿನ ವಿಶೇಷ. ವಾರದ ರಜಾ ದಿನದಲ್ಲಿ ಕಲಿಕೆ ನಡೆಯುತ್ತಿದೆ. ಲಿಂಗಪ್ಪ ಬೆಳ್ಳಾರೆ, ಲಕ್ಷ್ಮೀಶ ರೈ ನೇತೃತ್ವದಲ್ಲಿ ಬೆಳ್ಳಾರೆ ಅಂಬೇಡ್ಕರ್‌ ಭವನದಲ್ಲಿ ನಾಟ್ಯ ಕಲಿಸಲಾಗುತ್ತದೆ. ಭಾಗವತಿಕೆಯಲ್ಲಿ ದಯಾನಂದ ಮಯ್ನಾಳ, ಚೆಂಡೆಮದ್ದಳೆಯಲ್ಲಿ ಕುಮಾರ ಸುಬ್ರಹ್ಮಣ್ಯ ತರಬೇತಿ ನೀಡುತ್ತಿದ್ದಾರೆ. ಇವೆರಡಕ್ಕೂ ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿದೆ.

ತಂಡ ತಯಾರು
ಅಕಾಡೆಮಿಯ ಸಹಕಾರದೊಂದಿಗೆ ಅರೆಭಾಷೆ ಯಲ್ಲಿಯೂ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 45 ಮಂದಿಗೆ ತರಬೇತಿ ನೀಡಲಾಗಿದೆ. ಒಂದು ಪ್ರದರ್ಶನ ನೀಡಲಾಗುತ್ತಿದೆ. ಇದು ಮೊದಲ ತಂಡ. ಮಡಿ ಕೇರಿಯಲ್ಲಿಯೂ ಕೂಡ ತರಬೇತಿ ನೀಡಬೇಕು ಎನ್ನುವ ಪ್ರಸ್ತಾವ ಇದೆ. ಮುಂದಿನ ದಿನಗಳಲ್ಲಿ ಭಾಗವತಿಕೆಗೂ ಅರೆಭಾಷೆ ಬಳಸುವ ಇರಾದೆ ಇದೆ.
– ಲಿಂಗಪ್ಪ ಬೆಳ್ಳಾರೆ, ಸಂಚಾಲಕ, ಯಕ್ಷ ಕಲಾ ಬೋಧಿನಿ ಬೆಳ್ಳಾರೆ

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.