ರೈತರ ನಿದ್ದೆ ಗೆಡಿಸಿದ ಹರಕೆ ಗೂಳಿಗಳು

ಸಾಮೂಹಿಕವಾಗಿ ದಾಳಿ ಮಾಡುವ ಗೂಳಿಗಳು ಫಸಲನ್ನೇ ಕಿತ್ತು ಬೀಸಾಡುತ್ತಿವೆ ಕಂಗೆಟ್ಟು ಹೋಗಿದ್ದಾರೆ ರೈತರು

Team Udayavani, Nov 18, 2019, 10:55 AM IST

18-November-1

ಮಡಿವಾಳಪ್ಪ ಹೇರೂರ
ವಾಡಿ:
ಮಂಗ, ಕಾಡು ಹಂದಿ, ಹೆಗ್ಗಣ ಹೀಗೆ ಪ್ರಾಣಿಗಳು ಮತ್ತು ಕಾಳು ಕಡಿಯುವ ಕೀಟಗಳಿಂದ ಬಿತ್ತಿದ ಬೆಳೆ ರಕ್ಷಣೆ ಮಾಡುವುದು ಎಂದರೆ ರೈತರ ಪಾಲಿಗೆ ದೊಡ್ಡ ಸವಾಲೇ ಸರಿ. ಇಂತಹದ್ದರಲ್ಲಿ ಹರಕೆ ಗೂಳಿಗಳಿಂದ ಬೆಳೆ ರಕ್ಷಿಸುವುದೇ ಇನ್ನೊಂದು ಸವಾಲಾಗಿದ್ದು, ಇದರಿಂದ ನಾಲವಾರ ವಲಯದ ವಿವಿಧ ಗ್ರಾಮಗಳ ರೈತರು ಕಂಗೆಟ್ಟಿದ್ದಾರೆ.

ಸುಗೂರು (ಎನ್‌), ಮಾರಡಗಿ, ತುನ್ನೂರ, ಮಳಗ ಹೀಗೆ ಕೆಲ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲೀಗ ಹರಕೆ ಗೂಳಿಗಳ ಉಪಟಳ ಹೆಚ್ಚಾಗಿ ಕಂಡು ಬರುತ್ತಿದ್ದು, ಬೆಳೆ ರಕ್ಷಿಸಲು ರೈತರು ಹಗಲು ರಾತ್ರಿ ನಿದ್ದೆಗೆಟ್ಟು ಕಾವಲು ಕಾಯುವಂತಾಗಿದೆ. ಸಾಮೂಹಿಕವಾಗಿ ದಾಳಿಯಿಡುವ ಈ ಗೂಳಿಗಳ ಹಿಂಡು ಫಸಲನ್ನೇ ಕಿತ್ತು ಬೀಸಾಡುತ್ತಿವೆ. ಬೆಳೆಗಳ ಪೈರು ಕಿತ್ತು ಹೊಲ ನಾಶಗೊಳಿಸುತ್ತಿವೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಎರಡ್ಮೂರು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿರುವ ನೂರಾರು ಗೂಳಿಗಳು, ಮೇವು ಅರಸಿ ಅಡವಿಗೆ ಹೋಗುತ್ತವೆ ಮರಳಿ ಇಲ್ಲಿಯೇ ಠಿಕಾಣಿ ಹೂಡುತ್ತವೆ. ಬೆಳೆ ರಕ್ಷಿಸಲೆಂದು ಬೆದರಿಸಲು ಮುಂದಾದರೆ ದುರುಗುಟ್ಟಿ ನೋಡುತ್ತವೆ. ಕಲ್ಲು ಕಟ್ಟಿಗೆಯಿಂದ ತಿವಿಯಲು ಹೋದರೆ ಮಣ್ಣು ಕೆದರಿ ಇರಿಯಲು ಬರುತ್ತವೆ.

ಹೊಲಗಳಲ್ಲಿನ ತೊಗರಿ, ಹತ್ತಿ, ಜೋಳ, ಕಡಲೆ, ಶೇಂಗಾ ಬೆಳೆಗಳನ್ನು ತಿಂದು ಕಲ್ಲು ಗಣಿಗಳಲ್ಲಿ ನೀರು ಕುಡಿದು ಡುರ್ಕಿ ಹೊಡೆಯುತ್ತಿವೆ. ಹೊಲ ಬಿಟ್ಟು ಕಾಲು ಕಿತ್ತದ ಗೂಳಿಗಳಿಂದ ನೆಮ್ಮದಿ ಕದಡಿದೆ. ಇದರಿಂದ ಕೃಷಿ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆರ್ಥಿಕ ನಷ್ಟದಿಂದ ಸಾಲದ ಶೂಲಕ್ಕೆ ಸಿಲುಕುವಂತಾಗಿದೆ ಎಂದು ರೈತರು “ಉದಯವಾಣಿ’ ಎದುರು ಕಷ್ಟ ಹೇಳಿಕೊಂಡಿದ್ದಾರೆ.

ಜೋಳ ಬಿತ್ತನೆ ಕೈಬಿಟ್ಟ ರೈತರು: ಜೋಳ ಬೆಳೆಯುವಲ್ಲಿ ಮುಂದಿದ್ದ ನಾಲವಾರ ವಲಯದ ಭೂಮಿಗಳು ಜೋಳದ ಬೆಳೆಯಿಂದ ವಂಚಿತಗೊಂಡಿವೆ. ಈ ಹಿಂದೆ ತಾಂಡಾ ಜನರು ತಾವು ಬೆಳೆದ ಗೆಣಸು ಕೊಟ್ಟು ನಾಲವಾರ ರೈತರಿಂದ ಜೋಳ ಪಡೆಯುತ್ತಿದ್ದರು. ಆದರೀಗ ನಾಲವಾರದ ರೈತರೇ ತಾಂಡಾಗಳಿಗೆ ಹೋಗಿ ಜೋಳ ತರಬೇಕಾದ ದುಸ್ಥಿತಿ ನಿಮಾರ್ಣವಾಗಿದೆ.

ಗೂಳಿಗಳಿಗೆ ಹೆದರಿ ನಾಲವಾರ, ಸುಗೂರು (ಎನ್‌), ಮಾರಡಗಿ ಗ್ರಾಮದ ರೈತರು ಜೋಳ ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಯಾವುದೇ ಬೆಳೆ ಬೆಳೆದರೂ ಹೊಲಕ್ಕೆ ತಂತಿ ಬೇಲಿ ಹಾಕುವುದು ಕಡ್ಡಾಯವಾಗಿದೆ. ರಾತ್ರಿ ಹಗಲು ಹೊಲದ ಸುತ್ತ ಗಸ್ತು ತಿರುಗದಿದ್ದರೆ ಗೂಳಿ ದಾಳಿಗೆ ಇಡೀ ಹೊಲ ಸರ್ವನಾಶ ಹೊಂದುವ ಆತಂಕ ರೈತರಲ್ಲಿ ಮನೆಮಾಡಿದೆ. ಬಿತ್ತನೆ ಮಾಡಿದ ದಿನದಿಂದ ರಾಶಿಯಾಗಿ ದವಸಧಾನ್ಯ ಮನೆ ಸೇರುವವರೆಗೂ ಗೂಳಿಗಳಿಂದ ಬೆಳೆ ರಕ್ಷಣೆ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ರೈತರ ನೋವಿಗೆ ಕಾರಣವಾಗಿದೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.