ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹ
Team Udayavani, Nov 18, 2019, 2:54 PM IST
ಕಾರಟಗಿ: ಪಟ್ಟಣದ ರಾಜೀವಗಾಂಧಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆವರಣಗೋಡೆ ಇಲ್ಲದೇ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಲೆಯ ಶಿಕ್ಷಕರುಮತ್ತು ಎಸ್‌ಡಿಎಂಸಿಯವರು ಶಾಸಕರ ಬಸವರಾಜ ದಢೇಸುಗೂರು ಅವರಿಗೆ ಮನವಿ ಸಲ್ಲಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಕೀರು ಪವಾರ ಮಾತನಾಡಿ, ಶಾಲೆಯ ನಿವೇಶನದ ವಿಸ್ತೀರ್ಣಒಂದು ಎಕರೆ ಇದ್ದು, ಶಾಲೆಯ ಅಕ್ಕಪಕ್ಕದಲ್ಲಿ ಗದ್ದೆಗಳಿದ್ದುದರಿಂದ ಗದ್ದೆಗಳಿಗೆ ಕ್ರೀಮಿನಾಶಕ ಸಿಂಪಡಿಸಿದಾಗ ಅದರ ವಾಸನೆ ಬರುತ್ತದೆ.
ಇದರಿಂದ ಮಕ್ಕಳ ಆರೋಗ್ಯದ ಮೇಲೆ ಹಾಗೂ ಬಿಸಿಯೂಟ ತಯಾರಿಕೆ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹಾವು, ಚೇಳು ಸೇರಿದಂತೆ ಇತರೆ ವಿಷಜಂತುಗಳ ಭಯ ಒಂದೆಡೆಯಾದರೆ ಆವರಣದಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಶಾಲೆ ಬಿಟ್ಟ ನಂತರ ಕೆಲ ಪುಂಡ ಯುವಕರು ಆವರಣದಲ್ಲಿ ಶಾಲೆಯ ಕೋಠಡಿ ಮುಂದೆ ಇಸ್ಪೀಟ್ ಆಡುತ್ತಾರೆ. ಮದ್ಯ ಸೇವನೆ ಹೀಗೆ ಹಲವಾರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಯಾರ ಮಾತಿಗೂ ಬೆಲೆ ಕೊಡುತ್ತಿಲ್ಲ. ಮಳೆ ಬಂದರೆ ಆವರಣ ನೀರಿನಿಂದ ತುಂಬಿಕೊಂಡಿರುತ್ತದೆ. ಬಿಸಿಯೂಟದ ಅಡುಗೆ ಕೊಠಡಿಯಲ್ಲೂ ನೀರು ನುಗ್ಗುತ್ತದೆ. ಹೀಗೆ ಹತ್ತು ಸಮಸ್ಯೆಗಳಿವೆ. ಕೂಡಲೇ ಶಾಲೆಯ ಆವರಣಕ್ಕೆ ಮರಮ್ ಹಾಕಿಸಿ ಆವರಣ ಗೋಡೆ ನಿರ್ಮಾಣ ಮಾಡಿಸಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.