ಶಿರಸಿ-ಸಿದ್ದಾಪುರದಲ್ಲಿ ಆನೆ ಕಾಟ
Team Udayavani, Nov 18, 2019, 3:23 PM IST
ಶಿರಸಿ: ಆನೆ ಸಾಕೋದೂ ಕಷ್ಟ, ಊರಿಗೆ ಬಂದರೆ ಓಡಿಸೋದೂ ಕಷ್ಟ ಹೀಗೊಂದು ಹೊಸ ಗಾದೆ ಸೃಷ್ಟಿಸುವ ಮಟ್ಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಶಿರಸಿ ತಾಲೂಕಿನ ವಿವಿಧೆಡೆ, ಸಿದ್ದಾಪುರ ತಾಲೂಕಿನ ತ್ಯಾಗಲಿ ಭಾಗದಲ್ಲಿ ಆನೆಗಳ ಹಿಂಡು ಓಡಾಡುತ್ತಿರುವುದು ಉಪ ಅರಣ್ಯ ವಿಭಾಗದ ಅಧಿಕಾರಿಗಳಿಗೆ, ಸಿಬ್ಬಂದಿಗೆ ತಲೆನೋವಾಗಿದೆ.
ಇದೇ ಪ್ರಥಮ ಬಾರಿಗೆ ಮೂರು ದೊಡ್ಡ ಹಾಗೂ ಒಂದು ಮರಿ ಆನೆಯ ಜೊತೆಗೆ ನಾಲ್ಕು ಗಜಗಳ ಹಿಂಡು ದಿಕ್ಕು ತಪ್ಪಿ ಶಿರಸಿ ಭಾಗದ ಉಂಚಳ್ಳಿ, ಕುಳವೆ, ಉಗ್ರೇಮನೆ, ಸಿದ್ದಾಪುರದ ತ್ಯಾಗಲಿ ಪ್ರಾಂತದಲ್ಲಿ ಓಡಾಡುತ್ತಿದ್ದು, ಬನವಾಸಿ ವಲಯರಣ್ಯ ಪ್ರದೇಶದಿಂದ ಶಿರಸಿ ವಲಯಾರಣ್ಯದ ವ್ಯಾಪ್ತಿಗೆ ಸಂಚಾರ ವಿಸ್ತರಿಸಿಕೊಂಡಿದ್ದು ಹೊಸ ಕಾರಿಡಾರ್ ಆಗುತ್ತದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಹತ್ತು ದಿನಗಳಲ್ಲಿ 15ಕ್ಕೂ ಅಧಿಕ ರೈತರ ಹೊಲಗಳಿಗೆ ಧಾಂಗುಡಿ ಇಟ್ಟಿದ್ದು, ಸುಮಾರು 20 ಎಕರೆಗೂ ಹೆಚ್ಚು ಭತ್ತದ ಗದ್ದೆಗಳು ನಾಶವಾಗಿದೆ. ಇವುಗಳ ಸರ್ವೇ ಕಾರ್ಯವನ್ನುಉಭಯ ವಲಯಗಳಲ್ಲೂ ನಡೆಸಲಾಗುತ್ತಿದ್ದರೂ ಒಂದೆಡೆಯಿಂದ ಇನ್ನೊಂದೆಡೆಗೆ ಓಡುವ ಆನೆಗಳನ್ನು ಊರಿಗೆ ಬಾರದಂತೆ, ಏನೂ ತೊಂದರೆ ಆಗದಂತೆ ನೋಡಿಕೊಳ್ಳುವುದೇ ಇಲಾಖೆಗೆ ಸವಾಲಾಗಿದೆ.
ದೀಪಾವಳಿ ಮುಗಿದರೂ ಪಟಾಕ್ಷಿ ಸದ್ದು ಹಳ್ಳಿಗಳಲ್ಲಿ ನಿಂತಿಲ್ಲ. ಅರಣ್ಯ ಇಲಾಖೆ ಆನೆ ಬೀಡು ಬಿಟ್ಟ ಕಾಡಿನ ಅಂಚಿನಲ್ಲಿ ನಾಲ್ಕು ಜೀಪುಗಳ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಮರಳಿ ಅವುಗಳನ್ನು ಕಾಡಿಗೆ ಬಿಡುವುದು ಧ್ಯೇಯವಾಗಿದೆ. ಪ್ರತೀ ದಿನ ರಾತ್ರಿಯಿಂದ ಬೆಳಗಿನ ತನಕವೂ ಪಟಾಕ್ಷಿ ಹೊಡೆದು ಓಡಿಸವುದೂ ಇಲಾಖೆಯ ಕಾರ್ಯವಾಗಿದೆ.
ಕಳೆದ ಹತ್ತು ದಿನಗಳಲ್ಲಿ ಸುಮಾರು 20 ಸಾವಿರ ರೂ.ಗಳಷ್ಟು ಪಟಾಕ್ಷಿ ಹೊಡೆದು ಆನೆ ಓಡಿಸುತ್ತಿದ್ದು, ಯಾವಾಗ ಮೂಲ ಕಾಡು ಸೇರುತ್ತದೆ ಎಂದೂ ನೋಡುವಂತಾಗಿದೆ. ಆನೆಗಳ ಹಿಂಡು ಉತ್ತರ ಕನ್ನಡದಲ್ಲಿ 18-21 ಇವೆ. ಅಸಲಿಗೆ ಇನ್ನಷ್ಟು ಆನೆಗಳಿವೆ ಎಂಬುದೂ ಹಾಗೂ ಅವುಗಳ ಮೂಲ ಎಲ್ಲಿ ಎಂಬುದೂ ತಿಳಿದಿಲ್ಲ.
ಸಾಮಾನ್ಯವಾಗಿ ಬನವಾಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಆನೆಗಳು ಬರುವುದುಂಟು. ಆದರೆ ಶಿರಸಿ ವಲಯ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದಿದ್ದಿಲ್ಲ. ಹೀಗೆ ದಿಕ್ಕು ತಪ್ಪಿ ಬಂದಿರುವ ಆನೆಗಳ ಹಿಂಡು ಬಂದ ಮಾರ್ಗದಲ್ಲಿ ವಾಪಸ್ ಸಾಗುವ ಸಾಧ್ಯತೆಗಳಿವೆ. ಹೀಗಾಗಿ ಸೊರಬದ ಕಡೆ ಸಾಗಿದ ಆನೆಗಳು ಪುನಃ ವಾಪಸ್ ಬರುತ್ತಿವೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಅಮಿತ್ ಚವ್ಹಾಣ. ಆನೆಗಳು ಬಂದಿರುವ ಮಾಹಿತಿ ಆಧರಿಸಿ ಆ ಪ್ರದೇಶಗಳಿಗೆ ಜನರು ಓಡಾಡದಂತೆ ಅರಣ್ಯ ಇಲಾಖೆ ಮಾಹಿತಿ ನೀಡುತ್ತಿದೆ. ಅದರಲ್ಲೂ ಅವು ರೈತರ ಜಮಿನುಗಳಿಗೆ ನುಗ್ಗದೇ, ಜನರಿಗೆ ತೊಂದರೆ ಮಾಡದೇ ಅರಣ್ಯಗಳಲ್ಲೇ ತೆರಳುವಂತಾಗಲು ಪಟಾಕಿ ಸಿಡಿಸಲಾಗುತ್ತಿದೆ.
ಅವುಗಳ ಚಲನವಲನಗಮನಿಸಿದರೆ ಪುನಃ ತೆರಳುವ ಸಾಧ್ಯತೆ ಕಂಡುಬರುತ್ತಿದೆ ಎಂಬುದು ಅರಣ್ಯಾಧಿಕಾರಿಗಳ ಲೆಕ್ಕಾಚಾರ.ಈ ಮಧ್ಯೆ ಆನೆಗಳ ಹಿಂಡು ಯಾವುದೇ ಮದದಿಂದ ಇರದೇ ಇರುವುದು ಸಮಾಧಾನದ ಸಂಗತಿ. ಅವು ಮದ ಏರದಂತೆ ನೋಡಿಕೊಳ್ಳಬೇಕಾದ್ದೂ ಜನರ, ಅರಣ್ಯಾಧಿಕಾರಿಗಳ ಕರ್ತವ್ಯ. ಹಾಗಂತ ಮದ ಏರಿದ ಆನೆಗಳನ್ನು ಹಿಡಿದು, ಅರವಳಿಕೆ ನೀಡಿ ತಜ್ಞರ, ಉನ್ನತಾಧಿಕಾರಿಗಳ ಅನುಮತಿ ಪಡೆದು ಸಾಗಾಟ ಮಾಡಬಹುದು. ಆದರೆ, ಸಾಮಾನ್ಯ ಓಡಾಟ ಮಾಡುವ ಆನೆಗಳಿಗೆ ಇಂಥ ಕಾರ್ಯಾಚರಣೆಗೆ ಅವಕಾಶ ಇಲ್ಲ. ಇವುಗಳನ್ನು ಬಂದಲ್ಲಿ ಜಾಗಟೆ, ಪಟಾಕಿ ಹೊಡೆದು ಓಡಿಸುವದೇ ಕೆಲಸವಾಗಿದೆ!
-ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.