ಗೋವಾ ಚಿತ್ರೋತ್ಸವ :ಐವತ್ತು ವರ್ಷಗಳ ಸಿನಿಮಾ ಕನ್ನಡದ ಉಯ್ಯಾಲೆ ಪ್ರದರ್ಶನಕ್ಕೆ ಅವಕಾಶ
Team Udayavani, Nov 18, 2019, 3:46 PM IST
ಪಣಜಿ, ನ. 18:ಸುವರ್ಣ ಸಂಭ್ರಮದಲ್ಲಿರುವ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [ಇಫಿ] ನಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಐವತ್ತು ವರ್ಷಗಳ ಹಿಂದೆ ಅಂದರೆ 1969ರಲ್ಲಿ ಬಿಡುಗಡೆಯಾದ ಭಾರತೀಯ ಭಾಷೆಯ ಪ್ರಮುಖ ಚಿತ್ರಗಳ ಸಣ್ಣದೊಂದು ಅವಲೋಕನ.
ಇದರ ಭಾಗವಾಗಿ ಒಂಬತ್ತು ದಿನಗಳ ಉತ್ಸವದಲ್ಲಿ ಹನ್ನೊಂದು ಪ್ರಶಸ್ತಿ ಪುರಸ್ಕೃತ ಭಾರತೀಯ ಭಾಷೆಗಳ ಚಲನ ಚಿತ್ರಗಳು ಪ್ರದರ್ಶನವಾಗಲಿವೆ. ಇದು ಇನ್ನೊಂದು ಬಗೆಯಲ್ಲಿ ಭಾರತೀಯ ಭಾಷಾ ಚಿತ್ರರಂಗದ ಹೊಸಅಲೆಯನ್ನು ಗುರುತಿಸುವ ಪ್ರಯತ್ನವೂ ಹೌದು.
ಈ ಗೌರವ ಸಿಕ್ಕಿರುವುದು ಎನ್. ಲಕ್ಷ್ಮೀನಾರಾಯಣರ ಉಯ್ಯಾಲೆ ಚಿತ್ರಕ್ಕೆ. ಉಳಿದಂತೆ ಒಡಿಯಾ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಹಿಂದಿ, ಅಸ್ಸಾಮಿ ಹಾಗೂ ಮಲಯಾಳಂ ಭಾಷೆಯ ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ.
ಚಿತ್ರಗಳ ವಿವರ:
ಎನ್ ಟಿರಾಮರಾವ್ ಅವರ ವರಕ್ತಂ, ಬ್ರಜೇನ್ ಬರುವಾ ಅವರ ಡಾ. ಬೇಜ್ ಬರುವಾ, ಸತ್ಯಜಿತ್ ರೇ ಅವರ ಅರಗೂಪಿ ಗೈನೆ ಬಾಘಾಬೖನೆ, ಕೆ. ಬಾಲಚಂದರ್ ನಿರ್ದೇಶನದ ಕೋಡುಗಲ್, ರಾಮ್ ಮಹೇಶ್ವರಿಯವರ ನಾನಕ್ ನಾಮ್ ಜಹಾಜ್ ಹೈ, ಹೃಷಿಕೇಶ್ ಮುಖರ್ಜಿಯವರ ಸತ್ಯಕಮ್, ಸಿದ್ಧಾರ್ಥರ ಸ್ತ್ರೀ, ಬಲ್ಜಿಪೆಂಡರಕರ್ ರ ತಂಬ್ದಿ, ಶಕ್ತಿಸಮಂತಾ ರ ಆರಾಧನಾ ಹಾಗೂ ಕೆ.ಎಸ್. ಸೇತು ಮಾಧವನ್ ಆವರ ಆದಿಮಕಲ್ ಸೇರಿವೆ.
ಉಯ್ಯಾಲೆ ಚಿತ್ರದ ಕುರಿತು:
ಈ ಚಿತ್ರತೆರೆ ಕಂಡದ್ದು 1969 ರಲ್ಲಿ. ಡಾ.ರಾಜ್‌ಕುಮಾರ್ ಮತ್ತು ಕಲ್ಪನಾ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಕನ್ನಡದ ಖ್ಯಾತ ಕಾದಂಬರಿಕಾರ ಚದುರಂಗ ಅವರ ಕಾದಂಬರಿಯನ್ನು ಆಧರಿಸಿ ರೂಪಿಸಿದ ಸಿನಿಮಾ.
ಚದುರಂಗರು ಬರೀ ಸಿನಿಮಾಕಥೆ ಕೊಟ್ಟಿರಲಿಲ್ಲ, ಜತೆಗೆ ಸಂಭಾಷಣೆಯನ್ನೂಬರೆದಿದ್ದರು. ಇದಕ್ಕೆ ಸಂಗೀತ ಒದಗಿಸಿದವರು ವಿಜಯಭಾಸ್ಕರ್. ಗೋಪಾಲ್ ಮತ್ತು ಲಕ್ಷ್ಮಣ್ ಈ ಚಿತ್ರದ ನಿರ್ಮಾಪಕರು.
ಎನ್. ಲಕ್ಷ್ಮೀನಾರಾಯಣ್ ಅವರು ತಮ್ಮ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳನ್ನು ಶುರು ಮಾಡಿದವರು. ಹಲವಾರು ಸಾಮಾಜಿಕ ಸಂಗತಿಗಳನ್ನು ಅತ್ಯಂತ ಸಮರ್ಪಕವಾಗಿ ಜನಪ್ರಿಯತೆಯ ನೆಲೆಯಲ್ಲೇ ಸಿನಿಮಾ ರೂಪಿಸಿ ಯಶಸ್ವಿಯಾದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.