ಮಮದಾಪುರ ಕೆರೆಗೆ ಶಾಸಕ ಪಾಟೀಲ ಬಾಗಿನ
ಜನರ ನೀರಿನ ಸಮಸ್ಯೆಗೆ ಮುಕ್ತಿಮತ್ತೆ ಗತವೈಭವ ಪಡೆದ ಕೆರೆಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ
Team Udayavani, Nov 18, 2019, 3:58 PM IST
ವಿಜಯಪುರ: ಆದಿಲ್ ಶಾಹಿ ಅರಸರು ಕೊಂಕಣ ಪ್ರದೇಶಕ್ಕೆ ಹೋಗಿದ್ದಾಗ ಅಲ್ಲಿನ ಭತ್ತದ ಗದ್ದೆಗಳ ಪರಿಸರವನ್ನು ವಿಜಯಪುರ ರಾಜ್ಯದಲ್ಲೂ ಸೃಷ್ಟಿಸಲು ಮುಂದಾಗಿದ್ದರು. ಇದಕ್ಕಾಗಿ ತಮ್ಮ ಮಂತ್ರಿ ಖವಾಸ್ಕ್ ಖಾನ್ ಮೂಲಕ ಮಮದಾಪುರ ಬಳಿ ಗುರುತಿಸಿದ ಸ್ಥಳದಲ್ಲಿ ಎರಡು ಬೃಹತ್ ಕೆರೆ ನಿರ್ಮಿಸಿದ್ದರು.
ನಂತರದ ದಿನಗಳಲ್ಲಿ ಈ ಕೆರೆ ಹಾಳಾಗಿದ್ದು, ಇದೀಗ ಪುನರುಜ್ಜೀವನಗೊಳಿಸಿ ಕೆರೆಗೆ ನೀರು ತುಂಬಿಸುವ ಯೋಜನೆ ಮೂಲಕ ಮಮದಾಪುರ ಕೆರೆ ತುಂಬಿಸಿದ್ದು, ಈ ಭಾಗದ ಜನರಿಗೆ ಅನುಕೂಲವಾಗಿದೆ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ಮಮದಾಪುರ ಕೆರೆಗೆ ಬಾಗಿನ ಅರ್ಪಣೆ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರ ಸರಕಾರಿ ಪ್ರೌಢ ಶಾಲೆಯಿಂದ ಪೂರ್ಣ ಕುಂಭ ಮೆರವಣಿಗೆ ನಡೆಸಿ ಕೆರೆ ಅಂಗಳಕ್ಕೆ ಬಂದು ಬಾಗಿನ ಅರ್ಪಿಸಿ, ಗಂಗಾ ಪೂಜೆ ಸಲ್ಲಿಸಿದರು. ರವಿವಾರ ತಮ್ಮ ಪತ್ನಿ ಆಶಾ ಪಾಟೀಲ ಜೊತೆ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ನೀರಿನ ಸಮಸ್ಯೆಗೆ ಪರಿಹಾರ: ಆದಿಲ್ ಶಾಹಿ ಅರಸರು ಮಮದಾಪುರ ಗ್ರಾಮದಲ್ಲಿ ನಿರ್ಮಿಸಿರುವ ಎರಡು ಕೆರೆಗಳು ಕೃಷ್ಣಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ತುಂಬಿದ್ದು, ಈ ಭಾಗದ ಜನರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.
ಆದಿಲ್ ಶಾಹಿ ಅರಸರು 4 ಶತಮಾನಗಳ ಹಿಂದೆ ಭತ್ತದ ನೀರಾವರಿ ಯೋಜನೆಗಾಗಿ ಮಮದಾಪುರ ಬಳಿ ಅವಳಿ ಕೆರೆಗಳನ್ನು ಈ ಭಾಗದ 7 ಗ್ರಾಮ ಸ್ಥಳಾಂತರಗೊಳಿಸಿದ್ದರು. ಸದರಿ ಯೋಜನೆ ರೂಪಿಸಿದ್ದ ಆದಿಲ್ ಶಾಹಿಗಳ ಮಂತ್ರಿ ಖವಾಸ್ಕ್ ಖಾನ್ ಮುಳುಗಡೆಯಾದ 7 ಗ್ರಾಮಗಳ ಜನರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಗೊಳಿಸಿ, ಪುನರ್ವಸತಿ ಗ್ರಾಮಕ್ಕೆ ತನ್ನ ರಾಜ ಮೊಹಮ್ಮದ್ ಆದಿಲ್ ಶಾಹಿ ಅವರ ನೆನಪಿನಲ್ಲಿ ಮೊಹಮ್ಮದಪುರ (ಮಮದಾಪುರ) ಎಂದು ನಾಮಕರಣ ಮಾಡಲಾಗಿತ್ತು. ಸದರಿ ಮಮದಾಪುರ ಕೆರೆಯಿಂದ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಅತಿ ಸುವಾಸಿತ ಭಾಸುಮತಿ ಭತ್ತ ಬೆಳೆಯುತ್ತಿದ್ದರು ಎಂದರು.
ಕೆರೆಗಳಿಗೆ ಮತ್ತೆ ಗತವೈಭವ: ಸತತ ಹಲವು ವರ್ಷಗಳಲ್ಲಿ ಮಳೆ ಇಲ್ಲದ ಈ ಪರಿಸರದಲ್ಲಿ ಕೆರೆಗಳು ಬರಿದಾಗಿದ್ದು, ಹೂಳು ತುಂಬಿದ್ದರಿಂದ ಹಾಳಾಗಿದ್ದವು. ಪರಿಣಾಮ ಗ್ರಾಮಸ್ಥರು ಇಲ್ಲಿನ ಕೆರೆಗಳಲ್ಲಿ ಮಳೆ ಆಶ್ರಿತವಾಗಿ ಬಿತ್ತನೆ ಮಾಡುತ್ತಿದ್ದರು. ನೂರಾರು ವರ್ಷ ನೀರಿಲ್ಲದೇ ತನ್ನ ಸೌಂದರ್ಯ ಕಳೆದುಕೊಂಡಿದ್ದ ಈ ಕೆರೆಗಳು ಇದೀಗ ನಾನು ಜಲ ಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ 3-4 ವರ್ಷಗಳಿಂದ ಕೃಷ್ಣಾ ನದಿಯಿಂದ ಈ ಕೆರೆಗಳನ್ನು ತುಂಬಿಸುತ್ತಿರುವ ಕಾರಣ ಗತವೈಭವ ಮರಳಿ ಪಡೆದಿವೆ. ನಾನು ಸಚಿವನಾಗಿ ಮಾಡಿದ ಕಾರ್ಯಗಳಲ್ಲಿ ನನಗೆ ಸಂತಸ ತಂದ ಯೋಜನೆ ಎಂದು ಸಂಭ್ರಮ ಹಂಚಿಕೊಂಡರು.
ಮಮದಾಪುರ ವಿರಕ್ತ ಮಠದ ಅಭಿನವ ಮುರುಗೇಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೃಷ್ಣಾ ಕುಲಕರ್ಣಿ, ಮುಖಂಡರಾದ ಲಕ್ಷಣ ತೇಲಿ, ಶಂಕರ ಸಿದರೆಡ್ಡಿ, ಅಪ್ಪುಗೌಡ ಪಾಟೀಲ್ ಶೇಗುಣಶಿ, ವಿ.ವಿ. ಅರಕೇರಿ, ಬಸನಗೌಡ ಪಾಟೀಲ್, ಚಂದ್ರು ನಾಟೀಕಾರ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.