ನಾನು ನಿರ್ದೇಶಿಸುತ್ತಿರೋದು ಸ್ವಮೇಕ್ ಸಿನಿಮಾ: ಸುದೀಪ್
ಅಂತೆ-ಕಂತೆಗಳಿಗೆ ತೆರೆಎಳೆದ ಕಿಚ್ಚ
Team Udayavani, Nov 19, 2019, 6:04 AM IST
ಸುದೀಪ್ ನಟನೆ ಜೊತೆಗೆ ನಿರ್ದೇಶನದಲ್ಲೂ ತೊಡಗಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ತಮಗೆ ಇಷ್ಟವಾದ ಕಥೆಗಳನ್ನು ಸಿನಿಮಾ ಮಾಡಿದ್ದಾರೆ. ಆದರೆ, ಇತ್ತೀಚೆಗೆ ನಿರ್ದೇಶನದಿಂದ ಸುದೀಪ್ ಬ್ರೇಕ್ ತೆಗೆದುಕೊಂಡು ನಟನೆಯಲ್ಲಿ ಬಿಝಿಯಾಗಿದ್ದರು. ಸುದೀಪ್ ಯಾವುದೇ ಸಂದರ್ಶನ ಕೊಟ್ಟರೂ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆಯಲ್ಲಿ “ಮತ್ತೆ ಯಾವಾಗ ನಿರ್ದೇಶನ’ ಕೂಡಾ ಒಂದಾಗಿತ್ತು.
ಅದಕ್ಕೆ ಸುದೀಪ್ ಕೂಡಾ “ಇವತ್ತು ನನಗಾಗಿ, ನನ್ನನ್ನು ಬೇರೆ ಬೇರೆ ಗೆಟಪ್‌ಗಳಲ್ಲಿ ಕಲ್ಪಿಸಿಕೊಂಡು ಸಾಕಷ್ಟು ಮಂದಿ ಕಥೆ ಬರೆಯುತ್ತಿದ್ದಾರೆ. ತುಂಬಾ ಪ್ರೀತಿಸಿ, ಕಥೆ ರೆಡಿ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಕೊಡಬೇಕು’ ಎನ್ನುತ್ತಿದ್ದರು. ಅದೇ ಕಾರಣದಿಂದ ಬೇರೆ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ಬಿಝಿಯಾಗಿದ್ದ ಸುದೀಪ್, ಈಗ ಸ್ವತಃ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಹೌದು, ಸುದೀಪ್ ಹೊಸ ಸಿನಿಮಾವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ.
ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಕೂಡಾ. ಆದರೆ, ಸುದೀಪ್ ಸಿನಿಮಾ ನಿರ್ದೇಶನ ಮಾಡುತ್ತಾರೆಂಬ ಸುದ್ದಿಯ ಜೊತೆಗೆ ಇದು ರೀಮೇಕ್ ಸಿನಿಮಾ ಎಂಬ ಸುದ್ದಿಯೂ ಜೋರಾಗಿ ಹರಿದಾಡಿತ್ತು. ಅದಕ್ಕೆ ಕಾರಣ ಸುದೀಪ್ ಈ ಹಿಂದೆ ನಿರ್ದೇಶನ ಮಾಡಿರುವ ಕೆಲವು ರೀಮೇಕ್ ಚಿತ್ರಗಳು. ಹಾಗಾಗಿ, ಈ ಬಾರಿಯೂ ರೀಮೇಕ್ ಸಿನಿಮಾವನ್ನೇ ನಿರ್ದೇಶನ ಮಾಡುತ್ತಾರೆಂದುಕೊಂಡು ಈ ತರಹದ ಸುದ್ದಿ ಓಡಾಡುತ್ತಿತ್ತು.
ಆದರೆ, ಈಗ ಸ್ವತಃ ಸುದೀಪ್ ತಾನು ಈ ಬಾರಿ ನಿರ್ದೇಶನ ಮಾಡುತ್ತಿರೋದು ಸ್ವಮೇಕ್ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, “ರೀಮೇಕ್ ಸಿನಿಮಾ ಮಾಡುತ್ತಿದ್ದೇನೆಂದು ಸುದ್ದಿಯಾಗುತ್ತಿದೆ. ಆದರೆ, ನಾನು ಮಾಡುತ್ತಿರೋದು ಸ್ವಮೇಕ್ ಸಿನಿಮಾ. ಈ ಬಗ್ಗೆ ನಾನು ಹಾಗೂ ನನ್ನ ತಂಡ ಎಕ್ಸೆ„ಟ್ ಆಗಿದ್ದೇವೆ. ಶೀಘ್ರದಲ್ಲೇ ಚಿತ್ರ ಆರಂಭವಾಗಲಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.