ಸಿಯಾಚಿನ್: ಹಿಮಪಾತಕ್ಕೆ 4 ಯೋಧರ ಬಲಿ, ಇಬ್ಬರು ನಾಗರಿಕರೂ ಸಾವು
ಹಿಮದಲ್ಲಿ ಹುದುಗಿದ್ದ ಒಟ್ಟು 8 ಯೋಧರು; ಇಬ್ಬರು ನಾಗರಿಕರೂ ಸಾವು
Team Udayavani, Nov 18, 2019, 11:18 PM IST
ನವದೆಹಲಿ: ವಿಶ್ವದ ಅತಿ ಎತ್ತರದ ಸೇನಾ ನೆಲೆಯೆಂದೇ ಪ್ರಸಿದ್ಧಿಯಾದ ಸಿಯಾಚಿನ್‌ನಲ್ಲಿ ಸೋಮವಾರ ಉಂಟಾದ ಹಿಮಪಾತದಲ್ಲಿ ಭಾರತೀಯ ಸೇನೆಗೆ ಸೇರಿದ ನಾಲ್ವರು ಯೋಧರು ಹಾಗೂ ಇಬ್ಬರು ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ. ಸಿಯಾಚಿನ್‌ನ ಉತ್ತರ ಭಾಗದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಈ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಈ ಅವಗಢ ಸಂಭವಿಸಿದೆ.
ಸಮುದ್ರ ಮಟ್ಟಕ್ಕಿಂತ ಸುಮಾರು 22,000 ಅಡಿಗಳಷ್ಟು ಎತ್ತರದಲ್ಲಿರುವ ಸಿಯಾಚಿನ್‌ನಲ್ಲಿ, ಸಾಮಾನ್ಯವಾಗಿ ಪಾಕಿಸ್ತಾನ ಸೈನಿಕರೂ ಅವರ ಗಡಿಯೊಳಗೆ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. 1984ರಿಂದ ಇಲ್ಲಿಯವರೆಗೆ ಅಲ್ಲಿ ಹಲವಾರು ಬಾರಿ ಹಿಮಪಾತ ಸಂಭವಿಸಿದ್ದು, ಭಾರತ ಮತ್ತು ಪಾಕಿಸ್ತಾನಕ್ಕೆ ಸೇರಿದ ನೂರಾರು ಯೋಧರು ಇಲ್ಲಿ ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಸತ್ತಿದ್ದಕ್ಕಿಂತ ಹೆಚ್ಚಾಗಿ ಹಿಮಪಾತದಿಂದಲೇ ಇಲ್ಲಿ ಸೈನಿಕರು ಸಾವನ್ನಪ್ಪಿರುವುದು ಈ ಪ್ರದೇಶದ ಸೂಕ್ಷ್ಮತೆಯನ್ನು ಸಾರಿ ಹೇಳಿದೆ.
ಕಣ್ಮರೆಯಾಗಿದ್ದ ಹನುಮಂತಪ್ಪ
2016ರ ಫೆಬ್ರವರಿ 3ರಂದು, ಸಿಯಾಚಿನ್ ಪ್ರಾಂತ್ಯದಲ್ಲಿರುವ, ಸಮುದ್ರ ಮಟ್ಟಕ್ಕಿಂತ ಸುಮಾರು 20,500 ಅಡಿಗಳಷ್ಟು ಎತ್ತರದಲ್ಲಿರುವ ಸೋನಂ ಚೆಕ್‌ಪೋಸ್ಟ್ ಆಸುಪಾಸಿನಲ್ಲೂ ಇಂಥದ್ದೇ ಹಿಮಪಾತ ಸಂಭವಿಸಿತ್ತು. ಆ ಘಟನೆಯಲ್ಲಿ, ಕರ್ನಾಟಕದ ಯೋಧ ಲ್ಯಾನ್ಸರ್ ಹನುಮಂತಪ್ಪ ಕೊಪ್ಪದ್ ಸೇರಿ 10 ಭಾರತೀಯ ಸೈನಿಕರು 25 ಅಡಿಗಳಷ್ಟು ಹಿಮದ ಅಡಿಯಲ್ಲಿ ಸಿಲುಕಿದ್ದರು. ಕಾರ್ಯಾಚರಣೆ ಮೂಲಕ ಅವರನ್ನು ರಕ್ಷಿಸಲಾಗಿತ್ತು. ಆದರೆ, ದೆಹಲಿಯಲ್ಲಿ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.